ಒಬ್ಬಳೇ ಮಗುವನ್ನು ನೋಡಿಕೊಳ್ಳುವ ತಾಯಿಗೆ ಎದುರಾಗುವ ಸವಾಲುಗಳು.
ಹೆಣ್ಣಿಗೆ ಬಾಲ್ಯದಲ್ಲಿ ತಂದೆಯ ಆಸರೆಯಲ್ಲಿ, ಯೌವ್ವನದಲ್ಲಿ ಗಂಡನ ಆಸರೆಯಲ್ಲಿ ಮತ್ತು ಮುಪ್ಪಾವಸ್ಥೆಯಲ್ಲಿ ಮಗನ ಆಸರೆಯಲ್ಲಿ ಇರಬೇಕು. ಏಕೆಂದರೆ , ಅವಳು ಪರಾವಲಂಬಿ ಎಂದು ನೂರಾರು ವರ್ಷಗಳ ಹಿಂದೆಯೇ ಹಿರಿಯರು ಹೇಳಿದ್ದರಂತೆ. ಈಗಲೂ ಇದನ್ನೇ ಅದೆಷ್ಟೋ ಮಂದಿ ನಂಬಿಕೊಂಡಿದ್ದಾರೆ.ಬೆಳೆಯುವ ಮಗುವಿಗೆ ತಾಯಿ ಮಾತ್ರ ಇದ್ದಾರೆ ಆ ತಾಯಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.ಏಕಪೋಷಕವಾಗಿ ಬೆಳೆಯುವ ಮಕ್ಕಳನ್ನು ಬೆಳೆಸುವುದು ಒಂದು ಸವಾಲು ಅದನ್ನು ಮೆಟ್ಟಿನಿಂತು ಅವರು ತಮ್ಮ ಮಕ್ಕಳನ್ನು ಬೆಳಿಸಬೇಕು. ಇಂತಹ ತಾಯಂದಿರು ಎದುರಿಸುವ ಸವಾಲುಗಳು ಮತ್ತು ಅದಕ್ಕೆ ಪರಿಹಾರವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
1.ಬೆಂಬಲದ ಕೊರತೆ: ತಂದೆಯಿಲ್ಲದ ಮಗುವನ್ನು ನೋಡಿಕೊಳ್ಳುವ ತಾಯಿಗೆ ಮಾನಸಿಕವಾಗಿ,ಆರ್ಥಿಕವಾಗಿ ಬೆಂಬಲದ ಕೊರತೆ ಕಡಿಮೆ ಇರುತ್ತದೆ.ತನ್ನ ಉನ್ನತ ಆದ್ಯತೆಯು ಯಾವಾಗಲೂ ತನ್ನ ಮಗುವನ್ನು ಬೆಳೆಸುವುದರ ಕಡೆ ಇರಬೇಕು. ಬೆಂಬಲ ಇಲ್ಲ ಎಂಬುದರ ಕಡೆ ಹೆಚ್ಚು ಗಮನ ಕೊಡದೆ ತನ್ನ ಮಗುವನ್ನು ಬೆಳೆಸುವ ಕಡೆ ಮಾತ್ರ ಗಮನ ಕೊಡಬೇಕು
2.ಕೆಲಸ-ಜೀವನ ಸಮತೋಲನವನ್ನು ಕಾಪಾಡಿಕೊಳ್ಳುವುದು ಕಷ್ಟಕರವಾಗಬಹುದು. ಈ ಸಮಸ್ಯೆಗೆ ಕೆಲಸಕ್ಕೆ ಹೋಗುವಮುನ್ನ ಮಕ್ಕಳನ್ನು ಶಾಲೆಗೇ ಕಳುಹಿಸಿ ಅವರು ಶಾಲೆಯಿಂದ ಬರುವ ಹೊತ್ತಿಗೆ ಅವರಾರೂ ಸಹ ಮನೆಯನ್ನು ಸೇರಿಕೊಳ್ಳುವುದರ ಮೂಲಕ ಬಗೆರೆಸಿಕೊಳ್ಳಬೇಕು.
3. ಅನಿವಾರ್ಯ ತುರ್ತುಸ್ಥಿತಿಗಳೊಂದಿಗೆ(ಮಗುವಿಗೆ ಅರೋಗ್ಯ ಕೆಡುವುದು,ಶಾಲೆಯಲ್ಲಿ ಪೋಷಕರ ಸಭೆ.) ವ್ಯವಹರಿಸುವುದು ತಂದೆಯಿಲ್ಲದ ಮಗುವನ್ನು ಬೆಳೆಸುವ ತಾಯಿಗೆ ಸಮಸ್ಯೆಯಾಗುತ್ತದೆ ಇದರಿಂದ ಹೊರಗೆ ಬರಲು ನೀವು ನಿಮ್ಮ ಮೇಲಾಧಿಖಾರಿಗಳ ಜೊತೆ ಮಾತನಾಡಿ ಅವರ ಒಪ್ಪಿಗೆ ಪಡೆದು ಮಗುವಿಗೆ ಸಂಭಂದಪಟ್ಟ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
4. ತಂದೆಯಿಲ್ಲದ ಮಗುವನ್ನು ಬೆಳೆಸುವ ತಾಯಿಯು ಅವಳು ಮತ್ತು ಅವಳ ಮಗುವಿಗೆ ಸಂಬಂಧಪಟ್ಟ ಎಲ್ಲ ನಿರ್ಧಾರಗಳನ್ನು ಅವಳು ಮಾತ್ರವೇ ಒಂಟಿಯಾಗಿ ತೆಗೆದುಕೊಳ್ಳಬೇಕು.ಹಾಗಾಗಿ ತುಂಬಾ ಯೋಚಿಸಿ ನಿರ್ಧಾರಗಳನ್ನು ಕೈಗೊಳ್ಳಬೇಕು.
5.ಅವರು ಹೊಂದಲು ಯೋಜಿಸಿದ್ದಕ್ಕಿಂತ ವಿಭಿನ್ನ ಕುಟುಂಬವನ್ನು ಸ್ವೀಕರಿಸುವ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.ಇದಕ್ಕೆ ಅವ್ರು ಇದೆ ಕುಂಟುಂಬ ಎಂದು ತಿಳಿದುಕೊಂಡು ನೆಮ್ಮದಿಯಿಂದ ಜೀವನ ಸಾಗಿಸಬೇಕು..
6.ಮಗು ತಂದೆಯನ್ನು ಮಿಸ್ ಮಾಡಿಕೊಂಡೆ ಎಂದು ಹೇಳದಹಾಗೆ ನೋಡಿಕೊಳ್ಳಿವುದು ಅದರ ತಾಯಿಗೆ ಇರುವ ನಿಜವಾದ ಸವಾಲು.ಈ ಸವಾಲನ್ನು ತಾಯಿ ಮಗುವಿಗೆ ಯಾವುದೇ ಕೊರತೆಯು ಬಾರದ ಹಾಗೆ ನೋಡಿಕೊಳ್ಳುವುದರ ಮೂಲಕ ಸಾಧಿಸಬಹುದು.
ಈ ಎಲ್ಲ ಸಮಸ್ಯೆಗಳನ್ನು ಬದಿಗೊತ್ತಿ ನಿಷ್ಚಿಂತೆಯಿಂದ ಮಗುವನ್ನು ಆರೈಕೆ ಮಾಡಿ ಬೆಳೆಸಿದರೆ ಜೀವನಲ್ಲಿ ಅವರು ಯಶಸ್ಸನ್ನು ಕಾಣಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
