ಕೇವಲ ಹತ್ತು ಸಾವಿರ ರೂಪಾಯಿ ಗಳಿಂದ ಶುರು ಮಾಡಬಹುದಾದ ವ್ಯವಹಾರಗಳು.
ಜೀವನೋಪಾಯಕ್ಕಾಗಿ ಅನೇಕ ಕೆಲಸಗಳನ್ನು ಮಾಡಬೇಕಾಗುತ್ತದೆ. ಒಂದು ವೇಳೆ ಕೆಲಸ ಸಿಗದ್ದಿದ್ದರೆ ಚಿಂತೆ ಪಡುವ ಅವಶ್ಯಕತೆ ಈಗಿಲ್ಲ. ತುಂಬ ಕಡಿಮೆ ಬಂಡಾವಾಳದಲ್ಲಿ ಕೆಲವು ವ್ಯವಹಾರಗಳನ್ನು ಮಾಡಿ ಹಣವನ್ನು ಗಳಿಸಬಹುದು. ಆ ವ್ಯವಹಾರಗಳು ಯಾವುವೆಂದು ಇಲ್ಲಿ ತಿಳಿದುಕೊಳ್ಳಿ .
1.ಟೀ ಅಂಗಡಿ.
ಕೇವಲ ಒಂದು ಪುಟ್ಟ ಅಂಗಡಿ ಮಾಡಿಕೊಂಡರೆ ಟೀ ಅಂಗಡಿಯನ್ನು ಶುರುಮಾಡಬಹುದು. ಇದಕ್ಕೆ ಅತಿಯಾದ ಬಂಡವಾಳ ದ ಅವಶ್ಯಕತೆ ಇರುವುದಿಲ್ಲ. ಕೇವಲ ಒಂದು ಅಡುಗೆ ಒಲೆ,ಹಾಲು,ಟೀ ಮತ್ತು ಕಾಫಿ ಪುಡಿಗಳನ್ನ ಹೊಂಚಿಕೊಂಡು ಲಾಭದಾಯಕವಾಗಿ ವ್ಯವಹಾರವನ್ನು ಮಾಡಬಹುದು.
2.ಮಿನರಲ್ ವಾಟರ್ ಪೂರೈಕೆ ಮಾಡುವ ಬ್ಯುಸಿನೆಸ್:
ಕೇವಲ ಒಂದು ಚಿಕ್ಕ ಟೆಂಪೋ ಅಥವಾ ವಾಹನವನ್ನು ಬಾಡಿಗೆಗೆ ತೆಗೆದುಕೊಂಡು ಮನೆಗಳಿಗೆ,ಕಚೇರಿಗಳಿಗೆ ಮತ್ತು ಶುಭಸಮಾರಂಭಗಳಿಗೆ ಚಿಕ್ಕ ಪ್ರಮಾಣದಲ್ಲಿ ಮಿನರಲ್ ವಾಟರ್ ಅನ್ನು ಸಪ್ಲೈ ಮಾಡುವುದರ ಮೂಲಕ ಉತ್ತಮವಾದ ಲಾಭವನ್ನು ಮಾಡಬಹುದು.
3.ಮೊಬೈಲ್ ರೀಚಾರ್ಜ್ ಮತ್ತು ಸಿಮ್ ಕಾರ್ಡ್ ಅಂಗಡಿ.
ಒಂದು ಚಿಕ್ಕ ಅಂಗಡಿಯಲ್ಲಿ ಈ ವ್ಯವಹಾರವನ್ನ ಸುಲಭವಾಗಿ ಪ್ರಾರಂಭಿಸಬಹುದು.ಮೊಬೈಲ್ ಡೀಲರ್ ಗಳ ಜೊತೆ ಸಹಯೋಗಗಳಿಂದ ಜನರ ಮೊಬೈಲ್ ಗಳಿಗೆ ರೇಚಾರ್ಜ್ ಮಾಡುವ ಮತ್ತು ಅಗತ್ಯ ಇರುವವರಿಗೆ ಸಿಮ್ ಕಾರ್ಡ್ ಗಳನ್ನು ಮಾರಾಟ ಮಾಡುವ ತೊಡಗಿಸಕೊಳ್ಳಬಹುದು.
4.ಸಸಿಗಳ ಮಾರಾಟ
ವಿವಿಧ ರೀತಿಯ ಹೂಗಿಡಗಳು,ಪಾಟ್ ಗಿಡಗಳನ್ನು ಹಾಕಿ ಬೆಳೆಸಿ ಅವನ್ನು ಲಾಭಾಯಕವಾಗಿ ಮಾರಾಟ ಮಾಡಬಹುದು. ಗಿಡ ಹಾಕಲು ಭೂಮಿ ಇದ್ದರೆ ಸಾಕು ಇದಕ್ಕೆ ಮತ್ಯಾವ ಬಂಡವಾಳದ ಅವಶ್ಯಕತೆ ಇರುವುದಿಲ್ಲ.
5.ಹುಟ್ಟು ಹಬ್ಬ ಕಾರ್ಯಕ್ರಮಗಳಿಗೆ ಡೆಕೋರೇಷನ್.
ನಿಮ್ಮಲ್ಲಿ ಡೆಕೋರೇಷನ್ ಮಾಡುವ ಕಲೆ ಇದ್ದರೆ ಸಾಕು ಈ ವ್ಯವಹಾರವನ್ನು ಪ್ರಾರಂಭಿಸಬಹುದು.ಇದಕ್ಕೆ ಹೆಚ್ಚಿನ ಬಂಡವಾಳದ ಅವಶ್ಯಕತೆ ಇರುವುದಿಲ್ಲ.ಹಹೊಗಳು,ಬಲೂನ್ ಗಳನ್ನೂ ಬಳಸಿ ಡೆಕೋರೇಷನ್ ಮಾಡಬಹುದು.
6.ಟ್ಯೂಷನ್ ಮಾಡುವುದು.
ನೀವು ವಿದ್ಯಾವಂಥರಾಗಿದ್ದರೆ ಒಂದು ರೂಮ್ ಅನ್ನು ಬಾಡಿಗೆಗೆ ತೆಗೆದುಕೊಂಡು ಕಪ್ಪುಹಲಗೆ, ಸೀಮೆಸುಣ್ಣ ಗಳಿಗೆ ಮಾತ್ರ ಬಂಡವಾಳವನ್ನು ಹಾಕಿಕೊಂಡು ಮಕ್ಕಳಿಗೆ ಟ್ಯೂಷನ್ ಮಾಡಿಕೊಂಡು ಜೀವನವನ್ನು ಸಾಗಿಸಬಹುದು.
7.ಬಟ್ಟೆಗಳನ್ನು ಹೊಲೆಯುವುದು:
ನೀವು ಟೈಲರಿಂಗ್ ಕೆಲಸ ಕಲಿತಿದ್ದಾರೆ ಕೇವಲ ಒಂದು ಹೋಲಿಗೆಯಂತ್ರ,ಸೂಜಿ ದಾರಗಳಿಗೆ ಮಾತ್ರ ಬಂಡವಾಳ ಹಾಕಿಕೊಂಡು ಮನೆಯಲ್ಲಿಯೇ ಕೆಲ್ಸಮಾಡಿ ಹಣವನ್ನು ಗಳಿಸಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
