ಜಾಸ್ತಿ ದುಡ್ಡು ಖರ್ಚು ಮಾಡಿ ಚಿನ್ನತಗೊಂಡು ಮೈ ಮೇಲೆ ಹಾಕೊಳೋ ಬದಲು ತಾಮ್ರ ಬಳಸಿದ್ರೆ ಈ 5 ಲಾಭ ಪಡ್ಕೊಬಹುದು..
ಚಿನ್ನಕ್ಕಿಂತ ತಾಮ್ರದ ‘ಒಡವೆ’ ಧರಿಸಿ
ಕೆಲವೊಂದು ಲೋಹಗಳಿಂದಲೂ ನಮ್ಮ ದೇಹಕ್ಕೆ ಉಪಯೋಗಗಳಿವೆ ಎಂದು ಹಿಂದಿನಿಂದಲೂ ಭಾರತೀಯರು ತಿಳಿದುಕೊಂಡಿದ್ದಾರೆ. ಔಷಧೀಯ ಪ್ರಯೋಜನಗಳಿಗಾಗಿ ತಾಮ್ರಾದ ಕಡಗಗಳು ಧರಿಸುವುದು ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ತಾಮ್ರದ ಕೈ ಕಡಗವನ್ನು ಪುರುಷರು ಹಾಗೂ ಮಹಿಳೆಯರು ಧರಿಸುವುದರಿಂದ ಹಲವಾರು ಆರೋಗ್ಯ ಲಾಭಗಳು ಸಿಗಲಿದೆ.ಆ ಲಾಭಗಳನ್ನು ಈ ಲೇಖನದಲ್ಲಿ ತಿಳಿಯಿರಿ
ಅಡ್ಡ ಪರಿಣಾಮಗಳಿಲ್ಲ :
ಚಿನ್ನ ಮತ್ತು ಬೆಳ್ಳಿಯ ಉಂಗುರ ಅಥವಾ ಕಡಗಳನ್ನು ಧರಿಸುವುದರಿಂದ ಕೆಲವರಿಗೆ ಉಂಟಾಗುವ ಅಡ್ಡ ಪರಿಣಾಮಗಳಿಂದ ಅಲರ್ಜಿ ಮತ್ತು ಚರ್ಮಕ್ಕೆ ಸಂಬಂದಿಸಿದ ಖಾಯಿಲೆಗಳು ಉಂಟಾಗಬಹುದು.ಅಂತವರು ತಾಮ್ರದ ಒಡವೆಗಳನ್ನು ತೊಡಬಹುದು.
ನೋವು ನಿವಾರಣೆ:
ತಾಮ್ರದಲ್ಲಿ ಮೂಳೆಗಳ ನೋವನ್ನು ನಿವಾರಿಸುವ ಶಕ್ತಿ ಇರುವುದರಿಂದ ಮೂಲೆ ನೋವಿನಿಂದ ಬಳಲುತ್ತಿರುವವರು ತಾಮ್ರದ ಕಡಗ ಮತ್ತು ಉಂಗುರಗಳನ್ನು ಬಳಸಬಹುದು.
ದೇಹಕ್ಕೆ ಖನಿಜ ಅಂಶಗಳ ಪೂರೈಕೆ:
ಸತು ಮತ್ತು ಕಬ್ಬಿಣವನ್ನು ಬಳಸಿ ತಾಮ್ರ ತಯಾರಿಸುವ ಕಾರಣದಿಂದ ಈ ಖನಿಜಾಂಶಗಳನ್ನು ತಾಮ್ರದ ಕೈಕಡಗ ಮತ್ತು ಉಂಗುರಗಳ ಮೂಲಕ ದೇಹವು ಹೀರಿಕೊಳ್ಳುತ್ತದೆ.ಈ ಖನಿಜಾಂಶಗಳ ಕೊರತೆ ಸಮಸ್ಯೆ ಬಗೆಹರಿಸಿಕೊಳ್ಳಬಹುದು.
ಬೊಜ್ಜು ಕರಗಲು:
ದೇಹದಲ್ಲಿರುವ ಅನಾವಶ್ಯಕ ಬೊಜ್ಜನ್ನು ಕರಗಿಸಲು ತಾಮ್ರದ ಡಾಬುಗಳನ್ನು ಸಹ ಬಳಸಬಹುದು
ಸಂದಿವಾತದ ನಿವಾರಣೆ:
ಸಂಧಿವಾತದಂತಹ ಸಮಸ್ಯೆಯನ್ನು ತಾಮ್ರವು ಕಡಿಮೆ ಮಾಡುತ್ತದೆ. ತಾಮ್ರದ ಕೈಕಡಗವನ್ನು ಹಾಕಿಕೊಂಡರೆ ಇದು ಕಡಿಮೆಯಾಗುತ್ತದೆ. ತಾಮ್ರದ ಕೈಕಡಗವು ಮೊಣಕೈಯಲ್ಲಿ ಕುಳಿತುಕೊಳ್ಳುವುದರಿಂದ ದೇಹದ ಇತರ ಭಾಗದಲ್ಲಿ ಇರುವಂತಹ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ.
ಈ ಮೇಲಿನ ಸಮಸ್ಯೆಗಳು ನಿಮಗೂ ಇದ್ರೆ ತಾಮ್ರದ ಕೈಗಡಗ ಮತ್ತು ಉಂಗುರವನ್ನು ಬಳಸಿಕೊಂಡು ಪರಿಹಾರ ಕಂಡುಕೊಳ್ಳಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
