fbpx
ದೇವರು

ಈ ಆರು ವಸ್ತುಗಳನ್ನು ಪೂಜೆಯಲ್ಲಿ ಬಳಸದಿದ್ದರೆ ಪೂಜೆಯು ಅಪೂರ್ಣವಾಗುತ್ತದೆ.

ಈ ಆರು ವಸ್ತುಗಳನ್ನು ಪೂಜೆಯಲ್ಲಿ ಬಳಸದಿದ್ದರೆ ಪೂಜೆಯು ಅಪೂರ್ಣವಾಗುತ್ತದೆ.

ಇತರ ಧರ್ಮಗಳಂತೆ, ಹಿಂದೂ ಧರ್ಮದ ನಂಬಿಕೆಯ ಪ್ರಕಾರ ದೇವರ ಅಸ್ತಿತ್ವವನ್ನು ಮೂರ್ತಿರೂಪದಲ್ಲಿ ಕಾಣಲಾಗುತ್ತದೆ.ಈ ಮೂರ್ತಿಗಳನ್ನು ಪೂಜಿಸುವ ಮೂಲಕ ದೇವರನ್ನು ಆರಾಧಿಸಲಾಗುತ್ತದೆ. ಹೀಗಾಗಿ ಈ ಪೂಜೆಯನ್ನು ಹೇಗೆ ಮಾಡಬೇಕು ಯಾವ ವಸ್ತಗಳನ್ನು ಪೂಜೆ ಮಾಡಲು ಬಯಸಿದರೆ ಒಳ್ಳೆಯದು ಎಂದು ತಿಳಿದುಕೊಂಡರೆ ಪ್ರಯೋಜನವಾಗುತ್ತದೆ. ಪೂಜೆ ಮಾಡುವಾಗ ಈ ಆರು ವಸ್ತುಗಳನ್ನು ಕಡ್ಡಾಯವಾಗಿ ಬಳಸಬೇಕು.ಅವುಗಳಲ್ಲಿ ಯಾವುದಾದರೂ ಮಿಸ್ ಆದರೂ ಕೂಡ ಪೂಜೆಯು ಅಪೂರ್ಣವಾಗುತ್ತದೆ. ಅವುಗಳ ಕುರಿತು ಈ ಲೇಖನದಲ್ಲಿ ಓಡಿತಿಳಿದುಕೊಳ್ಳಿ

1.ಪಂಚಾಮೃತ :

ಇದರಲ್ಲಿ ಹಾಲು, ತುಪ್ಪ, ತುಪ್ಪ, ಮೊಸರು, ಜೇನುತುಪ್ಪ ಮತ್ತು ಸಕ್ಕರೆ ಸೇರಿವೆ. ಇದನ್ನು ದೇವತೆಯ ವಿಗ್ರಹ ತೊಳೆಯಲು ಅಥವಾ ಅಭಿಷೇಕಕ್ಕಾಗಿ ಬಳಸಲಾಗುತ್ತದೆ ಉಳಿದದ್ದನ್ನು ಪ್ರಸಾದ ಎಂದು ವಿತರಿಸಲಾಗುತ್ತದೆ. ಪಂಚಮೃತ್ ಸೇವನೆಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.ಪೂಜೆ ಮಾಡುವಾಗ ಪಂಚಾಮೃತವನ್ನು ಬಳಸಬೇಕು

2.ತುಳಸಿ ಎಲೆ:


ತುಲಸಿಯು ಹಲವಾರು ಪ್ರಯೋಜನಗಳನ್ನು ಹೊಂದಿರುವ ಒಂದು ಔಷಧೀಯ ಸಸ್ಯವಾಗಿದೆ. ಇದು ಭಗವಾನ್ ಕೃಷ್ಣನಿಗೆ ಪ್ರಿಯವಾಗಿದೆ. ಇದು ಯಾವುದೇ ಭಗವಾನ್ ವಿಷ್ಣುವಿನ ಪೂಜೆಯಲ್ಲಿ ಸೇರಿರಬೇಕು.ಹಾಗೆಯೇ ಶಿವ ಮತ್ತು ಗಣೇಶ ಪೂಜೆಯಲ್ಲಿ ತುಳಸಿಯನ್ನು ಬಳಸಬಾರದು.

3.ಅಕ್ಷತೆಕಾಳು


ಅಕ್ಷತ ಅಂದರೆ ತುಂಡಾಗದಿರು ಎಂದರ್ಥ. ಹಾಗಾಗಿ ಅಕ್ಷತೆಗಾಗಿ ಕೇವಲ ಇಡಿಯ ಪೂರ್ಣ ಮಾತ್ರ ಬಳಸಬೇಕು. ಈ ಅಕ್ಕಿಯನ್ನು ಪೂಜಾತಟ್ಟೆಯ ನಡುವಲ್ಲಿರಿಸಬೇಕು. ಅಕ್ಷತೆಕಾಳು ಮನೆಯಲ್ಲಿ ಸಮೃದ್ಧಿ, ಫಲವತ್ತತೆ ಹಾಗೂ ಉದಾರತೆಯ ಗುರುತಾಗಿದೆ.

4.ದೀಪ:

ಯಾವುದೇ ಪೂಜೆಯಲ್ಲಿ ಅಗತ್ಯವಾಗಿ ಬಳಸಬೇಕಾದ ಪರಿಕರವೆಂದರೆ ದೀಪ. ದೀವಿಗೆ ಉಪಯೋಗಿಸುವ ಒಂದೇ ಉದ್ದೇಶವೆಂದರೆ ಇದರ ಬೆಳಕು ಸದಾ ಮನೆಯನ್ನು ಬೆಳಗುತ್ತಿರಬೇಕು. ಈ ಬೆಳಕು ಜ್ಞಾನ, ಪ್ರಜ್ಞೆ, ನಿರ್ಮಲತೆ ಹಾಗೂ ದಿವ್ಯತೆಯ ಸಂಕೇತವಾಗಿದು ಪ್ರತಿಯೊಬ್ಬರೂ ಇದನ್ನು ತಪ್ಪದೇ ಅರಿತಿರಬೇಕು.

5.ಅಗರಬತ್ತಿ


ಮನೆಯ ವಾತಾವರಣದಲ್ಲಿರುವ ಋಣಾತ್ಮಕ ಅಂಶಗಳನ್ನು ಮತ್ತು ದುಷ್ಟಶಕ್ತಿಗಳನ್ನುಹೋಗಲಾಡಿಸಲು ಮತ್ತು ಸುವಾಸನೆಯ ಮೂಲಕ ದೇವರಿಗೆ ನಿರ್ಮಲ ವಾತಾವರಣವನ್ನು ನಿರ್ಮಿಸಲು ಅಗರಬತ್ತಿಯ ಸುವಾಸನೆ ನೆರವಾಗುತ್ತದೆ. ನೆರವಾಗುತ್ತದೆ. ಈ ಪರಿಮಳ ಕೇವಲ ಪರಿಸರದಲ್ಲಿ ಸುವಾಸನೆ ಮೂಡಿಸುವುದು ಮಾತ್ರವಲ್ಲ, ಮನಸ್ಸನ್ನು ಶುದ್ಧಗೊಳಿಸಿ ಯಾವುದೇ ಋಣಾತ್ಮಕ ಯೋಚನೆಗಳನ್ನೂ ಬದಲಿಸುತ್ತದೆ.

6.ಕಲ್ಲು ಸಕ್ಕರೆ


ದೇವರ ಅನುಗ್ರಹ ಪಡೆಯಲು ಲಡ್ಡು, ಬರ್ಫಿಗಳಂಥ ಸಿಹಿ ಪದಾರ್ಥಗಳನ್ನು ಪೂಜೆಯಲ್ಲಿ ಬಳಸಬೇಕು.ಒಂದು ವೇಳೆ ಇವು ಲಭ್ಯವಿಲ್ಲದಿದ್ದರೆ ಸಾದಾ ಸಕ್ಕರೆ ಅಥವಾ ಕಲ್ಲು ಸಕ್ಕರೆಯನ್ನು ಬಳಸಬಹುದು. ಈ ಮೂಲಕ ಪೂಜೆಯನ್ನು ಸಂಪನ್ನಗೊಳಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top