fbpx
ಆರೋಗ್ಯ

ನೀವು ಯೋಗ ಮಾಡ್ಬೇಕು ಅಂತಿದ್ದೀರಾ ! ಹಾಗಾದ್ರೆ ಇದನ್ನ ಒಂದ್ಸರಿ ಓದಿ ತಲೆಲಿಟ್ಟ್ಕೊಳ್ಳಿ ಬೇಕಾಗುತ್ತೆ..

ಯೋಗವನ್ನು ಅಭ್ಯಾಸ ಪ್ರಾರಂಭಿಸಿ ಮೊದಲು ನೀವು ತಿಳಿದಿರಬೇಕು ವಿಷಯಗಳು.


ಯೋಗವು ಭಾರತದ. ಅತ್ಯಾಕರ್ಷಕ ಅಭ್ಯಾಸ. ಇದರ ಅರಿವು ಕಾಳ್ಗಿಚ್ಚಿನಂತೆ ಪ್ರಪಂಚದಾದ್ಯಂತ ಹರಡುತ್ತಿದೆ.ಪ್ರತಿಯೊಬ್ಬರೂ ಬಹಳಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯುವುದು ಹೇಗೆ ಎಂಬುದನ್ನು ಒಂದು ವ್ಯಾಯಾಮದ ಮೂಲಕ ತಿಳಿಯುವುದು ಬಹಳ ಕುತೂಹಲಕಾರಿಯಾಗಿದೆ. ನೀವು ಅವರಲ್ಲಿ ಒಬ್ಬರಾಗಿದ್ದರೆ, ನೀವು ಯೋಗ ಮಾಡಲು ಅಥವಾ ಕಲಿಯಲು ಯೋಗ ಕ್ಲಬ್ ಗೆ ಸೇರಿಕೊಳ್ಳುವ ಮುನ್ನ ನೀವು ಕೆಲವು ವಿಷಯಗಳನ್ನು ಮನಸ್ಸನಲ್ಲಿ ಇಟ್ಟುಕೊಳ್ಳಬೇಕು ಅವು ಯಾವುವೆಂದರೆ

1. ಅಗತ್ಯವಾದ ಬಟ್ಟೆ ಮತ್ತು ಉಪಕರಣಗಳು:


ಯೋಗಮಾಡಲು ಅವಶ್ಯಕವಾಗಿ ದೊಗಳೆ ಉಡುಪನ್ನು ಧರಿಸಬೇಕು ಹಾಗು ಒಂದು ಮ್ಯಾಟ್(ಚಾಪೆ)ಬೇಕಾಗುತ್ತದೆ.

 

2. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ:


ನಿಮ್ಮ ಅಭ್ಯಾಸವನ್ನು ಪ್ರಾರಂಭಿಸುವ ಮೊದಲು ನಿಮ್ಮ ಹೊಟ್ಟೆ ಮತ್ತು ಕರುಳುಗಳು ಖಾಲಿಯಾಗಿ ಬಿಡಬೇಡಿ.ನಿಮ್ಮ ಕೊನೆಯ ಊಟ ಮತ್ತು ನಿಮ್ಮ
ತಾಲೀಮುಗಳ ನಡುವೆ ಎರಡರಿಂದ ನಾಲ್ಕು ಗಂಟೆಗಳ ಅಂತರವನ್ನು ಬಿಡಬೇಕು. ಪೂರ್ಣ ಹೊಟ್ಟೆಯಲ್ಲಿ ಅಭ್ಯಾಸ ಮಾಡುವುದು ನಿಮಗೆ
ಅಸಹನೀಯವಾಗುತ್ತದೆ.

3.ನಿಮ್ಮ ಫೋನ್ ಮತ್ತು ಪಾದರಕ್ಷೆಗಳನ್ನೂ ಹೊರಗೆ ಬಿಡಿ:


ನೀವು ಬರಿಗಾಲಿನಲ್ಲಿ ಯೋಗ ಅಭ್ಯಾಸ ಮಾಡಬೇಕು. ಆದ್ದರಿಂದ ಶೂಗಳ ಅಗತ್ಯವಿರುವುದಿಲ್ಲ, ಮತ್ತು ಯೋಗವನ್ನು ಮಾಡಲು ನಿಮಗೆ ಏಕಾಗ್ರತೆಯ ಅವಶ್ಯಕತೆ
ಇರುತ್ತದೆ ಒಂದೇ ವೇಳೆ ನಿಮ್ಮ ಫೋನ್ ರಿಂಗಾದರೆ ನಿಮ್ಮ ಏಕಾಗ್ರತೆಗೆ ಭಂಗವಾಗುತ್ತದೆ ಹಾಗಾಗಿ ನೀವು ನಿಮ್ಮ ಫೋನ್ ಫೋನ್ ಗಳನ್ನೂ ಸ್ವಿಚ್ ಆಫ್ ಮಾಡಿಡಿ.

4. ಯೋಗವನ್ನು ನಿಮ್ಮ ಉಪಯೋಗಕ್ಕೆ ಅಭ್ಯಾಸ ಮಾಡಿಕೊಳ್ಳಿ

ಯೋಗ ನಿಮಗೆ ನಿಮ್ಮ ಅಗತ್ಯವಿರುವ ಬ್ರೇಕ್ ನೀಡುತ್ತದೆ. ಇದು ನಿಮಗಾಗಿ ಇರುವ ಸಮಯಅದನ್ನು ನೀವು ಸದುಪಯೋಗ ಪಡಿಸಿಕೊಳ್ಳಿ.

5. ನಿಮ್ಮ ಉಸಿರಾಟದ ಕಡೆಗೆ ಗಮನ ಕೊಡಿ:


ಉಸಿರಾಟವು ನಿಮ್ಮ ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ನೆನಪಿಡಿ, ನಿಮ್ಮ
ಉಸಿರಾಟದ ಕುರಿತು ನೀವು ತಿಳಿದಿರುವಹಾಗೆ ಉತ್ತಮ ಪ್ರಗತಿಯನ್ನು ಸಾಧಿಸಬಹುದು.
6. ನಿಮ್ಮ ಯೋಗಾಭ್ಯಾಸವನ್ನು ಇತರರೊಂದಿಗೆ ಹೋಲಿಸಬೇಡಿ ಹೀಗೆ ಮಾಡುವುದು ನಿಮ್ಮ ಮನಸಿನಲ್ಲಿ ಋಣಾತ್ಮಕ ಅಂಶಗಳನ್ನು ಹೆಚ್ಚಿಸಿ ಆಸಕ್ತಿಯು
ಕಳೆದುಕೊಳ್ಳುವಂತೆ ಮಾಡುತ್ತದೆ .

7.ಯೋಗ ತರಬೇತುದಾರನಲ್ಲಿ ರಹಸ್ಯ ಮುಚ್ಚಿಡಬೇಡಿ.


ನಿಮಗೆ ಯಾವುದಾದರೂ ಸಮಸ್ಯೆಗಳಿದ್ದರೆ ಅದನ್ನು ನಿಮ್ಮ ಯೋಗ ತರಬೇತುದಾರನ ಬಳಿ ಮೊದಲೇ ಹೇಳಿ ಕೊಳ್ಳಿ.ಇಲ್ಲದಿದ್ದರೆ ಮುಂದೆ ದೊಡ್ಡ ಸಮಸ್ಯೆಯಾಗಿ
ಉಲ್ಬಣಿಸುತ್ತದೆ.

8. ನಿಮ್ಮ ಅಭ್ಯಾಸವನ್ನು ತೀರಾ ಗಂಭೀರವಾಗಿ ತೆಗೆದುಕೊಳ್ಳಬೇಡಿ:


ನಿಮ್ಮ ಯೋಗಾಭ್ಯಾಸವನ್ನು ಅತಿಆಯಾಗಿ ಮಾಡಬೇಡಿ ಹೀಗೆ ಮಾಡುವುದು ನಿಮ್ಮ ಆಸಕ್ತಿಯು ಕುಂದುವಂತೆ ಮಾಡುತ್ತದೆ .

9.ಗರ್ಭಧಾರಣೆಯ ಸಮಯದಲ್ಲಿ ಯೋಗ


ನೀವು ಯೋಗವನ್ನು ಆರಂಭಿಸುವಾಗ ಗರ್ಭವತಿಯಾಗಿದ್ದರೆ ನಿಮ್ಮ ವೈದ್ಯರ ಸಲಹೆಯ ಆಧಾರಕ್ಕನುಗುಣವಾಗಿ ಯೋಗಾಭ್ಯಾಸವನ್ನು ಮಾಡಿ. ಇಲ್ಲದಿದ್ದರೆ ತಾಯಿ ಮಗು ಇಬ್ಬರಿಗೂ ಆಪಾಯವಾಗಬಹುದು

ಇವಿಷ್ಟು ನೀವು ಯೋಗವನ್ನು ಆರಂಭಿಸುವುದಕ್ಕೆ ಮುಂಚೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚಿರಿಕೆಗಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top