fbpx
ದೇವರು

1500 ವರ್ಷಗಳ ಹಳೆಯ ಆಂಜನೇಯನ ದೇವಸ್ಥಾನ ಪಾಕಿಸ್ತಾನದಲ್ಲಿ ಇನ್ನು ಇದೆ ! ಯಾಕೆ ಅಂತ ಗೊತ್ತಾದ್ರೆ ಆಶ್ಚರ್ಯ ಆಗುತ್ತೆ..

ಪಾಕಿಸ್ತಾನದಲ್ಲಿದೆ 1500 ವರ್ಷಗಳ ಇತಿಹಾಸವಿರುವ ಹನುಮಂತನ ದೇವಾಲಯ

ಬಾರತದ ನೆರೆರಾಷ್ಟ್ರ ಪಾಕಿಸ್ತಾನದ ಕರಾಚಿಯಲ್ಲಿರುವ 1500 ವರ್ಷಗಳ ಇತಿಹಾಸದ ಹನುಮಂತನ ಈ ದೇವಾಲಯವು ಭಾರತದ ಹೊರಗಡೆಯಲ್ಲಿರುವ ಪ್ರಮುಖ ಹಿಂದೂ ದೇವಾಲಯಗಳಲ್ಲೊಂದಾಗಿದೆ ಇದು ಪ್ರಪಂಚದ ಏಕಮಾತ್ರ ನೈಸರ್ಗಿಕ(ಮನುಷ್ಯ ನಿರ್ಮಿಸಿರುವುದಲ್ಲ) ದೇವಾಲಯವಾಗಿರುವುದು ವಿಶೇಷವಾಗಿದೆ.

ಈ ದೇವಾಲಯದಲ್ಲಿ ಹಲವು ವರ್ಷಗಳ ಹಿಂದೆ ಪ್ರತಿಷ್ಠಾಪಿಸಿರುವಂತಹ ಎಂಟು ಅಡಿ ಎತ್ತರವಿರುವ ಹನುಮಂತನ ವಿಗ್ರಹವು ಇದೆ ಅದು ಬಿಳಿ ಹಾಗು ನೀಲಿ ಬಣ್ಣಗಳಿಂದ ಕೂಡಿದೆ. ಈ ವಿಗ್ರಹವು ಪಂಚಮುಖಿ ಹನುಮಂತನನ್ನು ಒಳಗೊಂಡಿದ್ದು ನರಸಿಂಹ, ಆದಿವರಾಹ, ಹಯಗ್ರೀವ, ಗರುಡ ಮತ್ತು ಹನುಮಾನ್ ಒಳಗೊಂಡಂತೆ ಇದು ಹನುಮಂತನ ಎಲ್ಲಾ ಐದು ಅಂಶಗಳನ್ನು ಹೊಂದಿದೆ.


ಇದು ದೇವತೆಗಳ ನೈಸರ್ಗಿಕವಾಗಿ ರೂಪುಗೊಂಡ ವಿಗ್ರಹವಾಗಿದ್ದು ದೇವತೆಗಳು ಆರಾಧಕರನ್ನು ಆಶೀರ್ವದಿಸಲು ಗೋಚರಿಸುತ್ತಾರೆ ಎಂದು ನಂಬಲಾಗಿದೆ. ದೇವಾಲಯದೊಳಗೆ ಪ್ರವೇಶಿಸಿದ ನಂತರ ದೇವಾಲಯದ ಆವರಣದ ಮಧ್ಯದಲ್ಲಿ ಕೆತ್ತಿದ ಹಳದಿ ಕಲ್ಲಿನ ರಚನೆಯ ಒಂದು ಭಾಗವು ಬಿರುಕು ಬಿಟ್ಟುಕೊಂಡಿದೆ.

ಈ ದೇವಾಲಯದ ನವೀಕರಣ ಕಾರ್ಯವು 2012 ರಲ್ಲಿ ಪ್ರಾರಂಭವಾಯಿತು ಮತ್ತು ದೇವಾಲಯದ ನೋಟವನ್ನು ಕಾಪಾಡಿಕೊಳ್ಳಲು ಅದರ ಮೂಲ ಹಳದಿ ಕಲ್ಲುಗಳನ್ನು ಕಮಾನಿನ ಗೋಡೆಗಳನ್ನು ಪುನರ್ನಿರ್ಮಾಣ ಮಾಡಲಾಗಿದೆ.ಈ ದೇವಾಲಯದ ಮಧ್ಯಭಾಗದಲ್ಲಿ ಭಕ್ತ್ತ್ರು ಪ್ರದಕ್ಷಿಣೆ ಹಾಕುವುದಕ್ಕಾಗಿ ಪ್ರದಕ್ಷಿಣಾ ಮಂದಿರವನ್ನು ಬಿಳಿ ಮತ್ತು ಅಮೃತ ಶಿಲೆಗಳಿಂದ ನಿರ್ಮಾಣವಾಗಿದೆ. ಭಕ್ತರು ಪ್ರದಕ್ಷಿಣಾ ಮಂದಿರದ ಸುತ್ತ 108 ಸುತ್ತುಗಳ ಪೂರ್ಣಗೊಳಿಸಿದರೆ ಎಲ್ಲಾ ನೋವು, ದುಷ್ಟ ಮತ್ತು ಪ್ರತಿಕೂಲತೆಯನ್ನು ಶುದ್ಧಗೊಳಿಸುತ್ತದೆ ಎಂದು ನಂಬಲಾಗಿದೆ, ಈ ದೇವಾಲಯವು ಎಲ್ಲಾ ಜಾತಿ ಮತ್ತು ಸಮುದಾಯಕ್ಕೆ ಗುಣಪಡಿಸುವ ಕೇಂದ್ರಬಿಂದು ಆಗಿದೆ.

ಮಹಾರಾಷ್ಟ್ರೀಯರ ಹಾಗೆ ಇನ್ನು ಅನೇಕ ಸಮುದಾಯಗಳ ಜನರು ಈ ದೇವಾಲಯಕ್ಕೆ ಭೇಟಿ.

ಹಿಂದೂ ಧರ್ಮದ ವಿರೋಧಿ ರಾಷ್ಟ್ರಗಳಲ್ಲಿ ಈ ರೀತಿಯಾಗಿ ದೇವಾಲಯಗಳು ಇನ್ನು ತಮ್ಮ ಅಸ್ತಿತ್ವಗಳನ್ನು ಉಳಿಸಿಕೊಡಿರುವುದು ಇತಿಹಾಸದ ಬಗ್ಗೆ ಆ ಸ್ಥಳದ ಮಹತ್ವದ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top