ವಾಸ್ತು ಶಾಸ್ತ್ರದ ಪ್ರಕಾರ ನವಿಲುಗರಿಯಿಂದ ಆಗುವ ಪ್ರಯೋಜನಗಳು.
ನವಿಲುಗರಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ.ಎಲ್ಲರಿಗೂ ಇಷ್ಟ ಯಾಕೆಂದರೆ ನವಿಲುಗರಿಯಲ್ಲಿರುವ ವಿವಿಧ ಬಣ್ಣಗಳಿಂದ ಕೂಡಿರುವ ಕಣ್ಣಿನ ಆಕೃತಿಯಲ್ಲಿರುವ ವಿನ್ಯಾಸ. ಅದು ಬರೀ ಗಂಡು ನವಿಲಿನ ರೆಕ್ಕೆಗಳ ಮೇಲೆ ಮಾತ್ರ ಇರುವುದು ಇನ್ನೂ ವಿಶೇಷ.ಇಂತಹ ನವಿಲುಗರಿಯನ್ನು ನಮ್ಮ ಬಳಿ ಇಟ್ಟುಕೊಂಡರೆ ಒಳ್ಳೆಯದಾಗುತ್ತೆ. ಅದು ಹೇಗೆ ಎಂದು ತಿಳಿಯೋಣ….
ವಾಸ್ತು ಶಾಸ್ತ್ರದ ಪ್ರಕಾರ ಜೀವನದಲ್ಲಿ ನಮ್ಮ ದೋಷ ಪರಿಹಾರ ಮಾಡಲು ಸಂಪತ್ತನ್ನು ಅಭಿವೃದ್ಧಿಗೊಳಿಸಲು ನವಿಲುಗರಿಯಿಂದ ಸಾಧ್ಯವಾಗುತ್ತದೆ. ನವಿಲುಗರಿಯು ನಮ್ಮ ಬಾಲ್ಯ ಜೀವನಕ್ಕೆ ಕರೆದುಕೊಂಡು ಹೋಗುತ್ತದೆ. ನಮ್ಮ ಜೀವನದಲ್ಲಿ ಯಾವುದಾದರೂ ಕೆಲಸವನ್ನು ಅಸಾಧ್ಯ ಎಂದುಕೊಳ್ಳುತ್ತಿದ್ದರೆ ಅದನ್ನು ಸಾಧ್ಯವಾಗಿಸುವ ಶಕ್ತಿ ಈ ನವಿಲುಗರಿಗೆ ಇದೆ.
1.ನವಿಲುಗರಿಯು ಕೇವಲ ಅಲಂಕಾರಕ್ಕೆ ಮಾತ್ರವಲ್ಲ. ವಾಸ್ತುಶಾಸ್ತ್ರದಲ್ಲಿ ಏನು ಹೇಳುತ್ತಾರೆ ಎಂದರೆ ಶನಿದೋಷ ಇರುವವರು ಮೂರು ನವಿಲುಗರಿಯನ್ನು,ಒಟ್ಟಿಗೆ ಇಟ್ಟುಕೊಂಡು ,ಒಂದು ಕಪ್ಪು ದಾರದಲ್ಲಿ ಕಟ್ಟಿ ,ಶನಿ ದೇವರಲ್ಲಿ ಪ್ರಾರ್ಥನೆ ಮಾಡಿ ,ಸ್ವಲ್ಪ ನೀರನ್ನು ಪ್ರೋಕ್ಷಣೆ ಮಾಡಿದರೆ ಶನಿದೋಷ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
2.ವ್ಯಾಪಾರ ಮಾಡುತ್ತಿರುವವರು ನಿಮ್ಮ ಹಣದ ತಿಜೋರಿಯಲ್ಲಿ ನವಿಲುಗರಿಯನ್ನು ಇಟ್ಟುಕೊಂಡರೆ ಸಂಪತ್ತು ಅಭಿವೃದ್ಧಿಯಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಿದ್ದಾರೆ.
3.ಹಾಗೆ ಮನೆಯ ಮುಖ್ಯದ್ವಾರದ ಪ್ರವೇಶದಲ್ಲಿ ನವಿಲುಗರಿಯನ್ನು ಇಟ್ಟರೆ ಯಾವುದೇ ನಕಾರಾತ್ಮಕ ಶಕ್ತಿ ಮನೆಯೊಳಗೆ ಪ್ರವೇಶವಾಗುವುದನ್ನು ತಡೆಯುತ್ತದೆ.
4.ಮನೆಯಲ್ಲಿ ಶಾಂತಿ, ಸಮಾಧಾನ, ಸಂತೋಷ ಉಂಟುಮಾಡುವ ಶಕ್ತಿ ನವಿಲುಗರಿಯಲ್ಲಿ ಇದೆ.ಹಾಗೆ ನಮ್ಮ ಆರೋಗ್ಯವೂ ಸಹ ಅಭಿವೃದ್ಧಿಯಾಗುತ್ತದೆ.
5.ನಮ್ಮ ಮನೆಯ ಒಳಗಡೆ ಪೂಜಾ ಕೋಣೆಯಲ್ಲಿ ನವಿಲುಗರಿಯನ್ನು ಇಟ್ಟರೆ ಒಳ್ಳೆಯದು ಮತ್ತು ಮನೆಯೊಳಗೆ ಕ್ರಿಮಿ ಕೀಟಗಳು ನುಸುಳುವುದಿಲ್ಲ.
6.ಬೆಳಗ್ಗೆ ಎದ್ದ ತಕ್ಷಣ ನವಿಲುಗರಿಯನ್ನು ನೋಡಿದರೆ ಅದು ಶುಭ ಶಕುನವೆಂದು ಮತ್ತು ಹಾಗೆ ನೋಡಿದರೆ ಮನಸ್ಸಿಗೆ ಖುಷಿಯಾಗಿ ಆಹ್ಲಾದಕರ ಭಾವನೆ ಉಂಟಾಗುತ್ತದೆ.ಆದ್ದರಿಂದ ನಮ್ಮ ಮನಸ್ಸು ಉಲ್ಲಾಸ ಹೊಂದಿ ಆ ದಿನ ಪೂರ್ತಿ ಖುಷಿಯಾಗಿರುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
