ಹಾಲಿವುಡ್ ನಲ್ಲಿ ‘ಕಿಚ್ಚ ಸುದೀಪ್’…
ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ತಮ್ಮ ಅಭಿನಯದ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿರುವ ಕನ್ನಡ ನಟ ‘ಅಭಿನಯಚಕ್ರವರ್ತಿ ಕಿಚ್ಚಸುದೀಪ್’ ಇದೀಗ ಹಾಲಿವುಡ್ ನಲ್ಲಿ ತಮ್ಮ ಅಭಿನಯದ ಕಂಪನ್ನು ಬೀರಲು ರೆಡಿಯಾಗಿದ್ದಾರೆ ಎಂಬ ವಿಷಯವೊಂದು ಎಲ್ಲೆಡೆ ಹರಿದಾಡ್ತಿದೆ.ಕೇಳೆಡರದು ದಿನಗಳಿಂದ ಕೋಟಿಗೊಬ್ಬ 3 ಚಿತ್ರಕ್ಕಾಗಿ ಅತಿ ಹೆಚ್ಚು ಸಂಭಾವನೆಯನ್ನು ಪಡೆದು ಭಾರಿ ಸುದ್ದಿಯಲ್ಲಿದ್ದ ಸುದೀಪ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಸುದೀಪ್ ರವರು ಹಾಲಿವುಡ್ ಚಿತ್ರವೊಂದರಲ್ಲಿ ನಟಿಸಲಿದ್ದಾರೆ ಎಂದು ಆಪ್ತವಲಯದಿಂದ ಕನ್ಫರ್ಮ್ ಸುದ್ದಿಯೊಂದು ಹೊರಬಿದ್ದಿದೆ.ಹಾಗಾದರೆ ಆ ಚಿತ್ರ ಯಾವ್ದು,ಸುದೀಪ್ ಅವರದ್ದು ಆ ಚಿತ್ರದಲ್ಲಿ ಯಾವ ಪಾತ್ರ ಎಂಬ ಹತ್ತು ಹಲವು ಪ್ರಶ್ನೆಗಳು ಹುಟ್ಟುತ್ತವೆ. ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿ ಉತ್ತರ ಇದೆ ನೋಡಿ.
ಆಸ್ಟ್ರೇಲಿಯಾ ಮೂಲದ ಎಡ್ಡಿ ಆರ್ಯ ಎಂಬುವವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ರೈಸನ್’ಎಂಬ ಇಂಗ್ಲಿಷ್ ಚಿತ್ರಕ್ಕಾಗಿ ಕಿಚ್ಚ ಸುದೀಪ್ ರವರು ಬಣ್ಣ ಹಚ್ಚಲಿದ್ದು ಲಂಡನ್ ಮೂಲದ ಪ್ರತಿಷ್ಠಿತ ಸಂಸ್ಥೆಯೊಂದು ಈ ಚಿತ್ರಕ್ಕೆ ಬಂಡವಾಳ ಹೂಡಲಿದೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ರವರು ಆರ್ಮಿ ಮಾರ್ಷಲ್ ಪಾತ್ರವನ್ನು ಮಾಡುತ್ತಾರೆ. ರಷ್ಯಾದ ಶೇಲಾಬಿನ್ಸ್ಕ್ ಉಲ್ಕಾಪಾತವನ್ನು ಆದರಿಸಿ ಈ ಚಿತ್ರವೂ ಮೂಡಿಬರಲಿದ್ದು ಹಾಲಿವುಡ್ ನ ಹೆಸರಾಂತ ಕಲಾವಿದರು ಈ ಚಿತ್ರದಲ್ಲಿದ್ದಾರಂತೆ.
ಇನ್ನು ಈ ಸುದ್ದಿಗೆ ಸಂಬಂಧಿಸಿದಂತೆ ನಟ ಸುದೀಪ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದರೂ, ಸುದ್ದಿ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದ್ಯ ಪ್ರೇಮ್ ನಿರ್ದೇಶನದ ದಿ ವಿಲ್ಲನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ವರ್ಷಾಅಂತ್ಯದಲ್ಲಿ ಈ ಇಂಗ್ಲಿಷ್ ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ದೇಶದ ಎಲ್ಲೆಡೆ ತಮ್ಮ ಅಭಿನಯದ ಮೂಲಕ ಕನ್ನಡದ ಕಂಪನ್ನು ಪಸರಿಸುತ್ತಿರುವ ಕನ್ನಡಿಗ ಸುದೀಪ್ ಹಾಲಿವುಡ್ ನಲ್ಲೂ ಯಶಸ್ಸನ್ನು ಕಾಣಲಿ ಎಂದು ಎಲ್ಲರು ಹಾರೈಸೋಣ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
