fbpx
ಸಮಾಚಾರ

ಮೆಟ್ರೋ ಬಂದ್..

ಮೆಟ್ರೋ ಬಂದ್..

ಗುರುವಾರ ಮೆಟ್ರೋ ಸಿಬ್ಬಂದಿ ಮೇಲೆ ಕರ್ನಾಟಕ ರಾಜ್ಯ ಇಂಡಸ್ಟ್ರಿಯಲ್ ಫೋರ್ಸ್ ಕಾನ್ಸ್‍ಟೇಬಲ್‍ನಿಂದ ಹಲ್ಲೆ ನಡೆದಿತ್ತು. ಇದೆ ಕಾರಣಕ್ಕೆ ಪೊಲೀಸರು ಹಾಗೂ ಮೆಟ್ರೋ ಸಿಬ್ಬಂದಿ ನಡುವೆ ಗಲಾಟೆ ನಡೆದಿತ್ತು ಆ ವೇಳೆ ಆರು ಜನ ಬಿಎಂಆರ್‍ಸಿಎಲ್ ಸಿಬ್ಬಂದಿಗಳನ್ನು ಬಂಧಿಸಲಾಗಿತ್ತು.

ಬಂಧನವನ್ನು ಖಂಡಿಸಿ ಮೆಟ್ರೋ ಸಿಬ್ಬಂದಿ ರಾತ್ರಿ ಬೈಯಪ್ಪನಹಳ್ಳಿ ಮೆಟ್ರೋ ಡಿಪೋದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ , ತಮ್ಮ ಸಿಬ್ಬಂದಿಯನ್ನು ತಕ್ಷಣವೇ ಬಿಡಬೇಕೆಂದು ಆಗ್ರಹಗೊಳಿಸಿದ್ದಾರೆ.
ಬೈಯಪ್ಪನಹಳ್ಳಿ ಡಿಪೋ ನೌಕರರ ಪ್ರತಿಭಟನೆಯಿಂದಾಗಿ ಮೆಟ್ರೋ ಸಂಚಾರ ಸಂಪೂರ್ಣವಾಗಿ ನಿಂತು ಹೋಗಿದೆ.

ಆದರೆ ಪೊಲೀಸ್ ರು ಸಿಬ್ಬಂದಿಯನ್ನು ಬಿಡಲು ಸಾಧ್ಯವಿಲ್ಲ ಕೋರ್ಟ್ ನಲ್ಲಿ ಹಾಜರುಪಡಿಸುತ್ತೇವೆ ಎಂದು ಹೇಳುತ್ತಿದ್ದರಂತೆ , ಇದರ ಮಧ್ಯೆ ಪ್ರತಿಭಟನಾ ಸ್ಥಳಕ್ಕೆ ಬಿಎಂಆರ್‍ಸಿಎಲ್ ಎಂ.ಡಿ ಪ್ರದೀಪ್ ಸಿಂಗ್ ಭೇಟಿ ನೀಡಿ ಪ್ರತಿಭಟನೆ ನಿಲ್ಲಿಸಿ ತಮ್ಮ ಕೆಲಸಗಳಿಗೆ ಮರಳುವಂತೆ ಮನವಿ ಮಾಡಿಕೊಂಡರು .

ಪ್ರಕರಣ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಾಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top