fbpx
ಭವಿಷ್ಯ

ಯಾವ ರಾಶಿಗೆ ಯಾವ ಬಣ್ಣದ ಬಟ್ಟೆ ಮತ್ತು ಯಾವ ರೀತಿಯ ಬಟ್ಟೆ ಸೂಕ್ತ ?

ಯಾವ ರಾಶಿಗೆ ಯಾವ ಬಣ್ಣದ ಬಟ್ಟೆ ಮತ್ತು ಯಾವ ರೀತಿಯ ಬಟ್ಟೆ ಸೂಕ್ತ ?

1.ಮೇಷ ರಾಶಿ:-

ಮೇಷ ರಾಶಿಯ ಮಂದಿಗೆ ಮಂಗಳನು ಅಧಿಪತಿಯಾಗಿರುವುದರಿಂದ ಅವರಿಗೆ  ಪರಿಶುದ್ಧ ಹಾಗೂ  (ಸಿನ್ಥೆಟಿಕ್) ಸಂಶ್ಲೇಷಿತ  ಮಾದರಿಯ ಬಟ್ಟೆಗಳು ಸರಿ ಹೊಂದುತ್ತವೆ.ಮೇಷ ರಾಶಿಯವರಿಗೆ ಲೆದರ್, ಬೆಳ್ಳಿ, ಕಬ್ಬಿಣದ ವಸ್ತುಗಳು ಸರಿ ಹೊಂದುವುದಿಲ್ಲ. ನೀಲಿ, ಕೆಂಪು, ಕೇಸರಿ ಬಣ್ಣದ ಬಟ್ಟೆಗಳು ಇವರಿಗೆ ಉತ್ತಮ.

2.ವೃಷಭ ರಾಶಿ:-

ಹಸಿರು, ಬಿಳಿ ಮತ್ತು ಕಂದು ಬಣ್ಣದ,ದಟ್ಟ ಬಣ್ಣದ ರೇಷ್ಮೆ  ಬಟ್ಟೆಗಳು ಇವರಿಗೆ ಸರಿಯಾಗಿ ಹೊಂದುತ್ತವೆ.ಈ ಬಣ್ಣದ ಬಟ್ಟೆಗಳು ಸದಾ  ಡಿಸೈನ್ ರಹಿತ ಹಾಗೂ ಬಹು ಬಣ್ಣದ ಪದರಗಳನ್ನು ಒಳಗೊಂಡಿದ್ದರೆ ಇನ್ನೂ ಉತ್ತಮ.

3.ಮಿಥುನ ರಾಶಿ:-

ಪರಿಶುದ್ಧ ಹತ್ತಿಯ ಹಾಗೂ ಲೆನಿನ್ ಬಟ್ಟೆಗಳು ಇವರಿಗೆ ಹೊಂದುತ್ತವೆ. ಹಸಿರು,ಬಿಳಿ ಇವರಿಗೆ ಅತ್ಯುತ್ತಮ. ಪ್ಲಾಟಿನಂ, ಚಿನ್ನ ಹಾಗೂ ಬೆಳ್ಳಿ ಇವರಿಗೆ ಹೊಂದಿಕೊಳ್ಳುತ್ತದೆ.

4.ಕಟಕ ರಾಶಿ:-

ರೇಷ್ಮೆ, ಹತ್ತಿಯ ಹಾಗೂ ಲೆನಿನ್ ಬಟ್ಟೆಗಳು ಅತ್ಯುತ್ತಮ, ಬಿಳಿ ಬಣ್ಣದ ಬಟ್ಟೆಗಳು ಅಥವಾ ತುಂಬಾ ಸರಳವಾದ ಡಿಸೈನ್ ಹೊಂದಿರುವ ಬಟ್ಟೆಗಳು ಇವರಿಗೆ ಒಳ್ಳೆಯದು.

5.ಸಿಂಹ ರಾಶಿ:-

ಸಿಂಹ ರಾಶಿಯ ಮಂದಿಗೆ ಕೆಂಪು,ಹಳದಿ, ಹಾಗೂ ಕೇಸರಿ ಬಣ್ಣದ ಹತ್ತಿಯ ಬಟ್ಟೆಗಳು ಉತ್ತಮ.ಲೆದರ್,ಫೆದರ್, ಬೆಳ್ಳಿ ಹಾಗೂ ಕಬ್ಬಿಣ ಇವರಿಗೆ  ಒಳ್ಳೆಯದಲ್ಲ.

6.ಕನ್ಯಾ ರಾಶಿ:-

ಹತ್ತಿಯ ಹಾಗೂ ಲೆನಿನ್ ಬಟ್ಟೆ ಇವರಿಗೆ ಒಳ್ಳೆಯದಲ್ಲ.ಹಗಲವಾದ ಕಟ್ಗಳು ಮತ್ತು ಬಣ್ಣದ ಛಾಯೆಗಳಿರುವ (shades) ಬಟ್ಟೆ ಅಷ್ಟು ಒಳ್ಳೆಯದಲ್ಲ.ಬೆಳ್ಳಿ,ಪ್ಲಾಟಿನಂ ಚಿನ್ನ ಇವರಿಗೆ ಒಪ್ಪುತ್ತದೆ.ಎಮರಾಲ್ಡ್ ಒಳ್ಳೆಯದಲ್ಲ.

7.ತುಲಾ ರಾಶಿ:-

ತುಲಾ ರಾಶಿಯ ಮಂದಿಗೆ ಸಿನ್ಥೆಟಿಕ್ ರೇಷ್ಮೆ ಬಟ್ಟೆಗಳು ಒಳ್ಳೆಯದು.ಕೆಂಪು,ಕೇಸರಿ, ಬಣ್ಣದ ಬಟ್ಟೆಗಳು ಹೊಂದಿಕೆಯಾಗುವುದಿಲ್ಲ ಬೆಳ್ಳಿ ಹಾಗೂ ಪ್ಲಾಟಿನಂ ಆಭರಣ ಕೂಡ ಉತ್ತಮವಲ್ಲ.

8.ವೃಶ್ಚಿಕ ರಾಶಿ:-

 

ವೃಶ್ಚಿಕ ರಾಶಿಯ ಮಂದಿಗೆ ಹತ್ತಿಯ ಜೊತೆ ಕಸೂತಿ ಮಾಡಿರುವ ಬಟ್ಟೆಗಳು ಉತ್ತಮ. ಬೆಳ್ಳಿ ಹಾಗೂ ಪ್ಲಾಟಿನಂ ಮಾರುತ್ತಿದ್ದರೆ ಉತ್ತಮವಲ್ಲ.

9.ಧನಸ್ಸು ರಾಶಿ:-

ಈ ರಾಶಿಯ ಮಂದಿಗೆ ಹಳದಿ,ತೆಳು ಕೇಸರಿ, ಕಿತ್ತಳೆ ಬಣ್ಣಗಳು ಹೊಂದುತ್ತವೆ. ಚಿನ್ನದ ಆಭರಣಗಳು ಚೆನ್ನಾಗಿ ಹೊಂದುತ್ತವೆ.

10.ಮಕರ ರಾಶಿ:-

ಈ ರಾಶಿಯ ಮಂದಿಗೆ  ಹತ್ತಿ, ರೇಷ್ಮೆ, ಹಾಗೂ ಲೆನಿನ್ ಮಾದರಿಯ ಬಟ್ಟೆಗಳು ಉತ್ತಮ.ತಾಮ್ರ ಹಾಗೂ ಚಿನ್ನದ ಬಳಕೆಯಿಂದ ದೂರವಿದ್ದರೆ ಉತ್ತಮ.

11.ಕುಂಭ ರಾಶಿ:-

ಈ ರಾಶಿಯವರಿಗೆ ತೆಳು ಬಣ್ಣದ ಬಟ್ಟೆಗಳು ಅತ್ಯುತ್ತಮವಾಗಿ ಹೊಂದಿಕೊಳ್ಳುತ್ತವೆ.ನೇರಳೆ ಬಣ್ಣದ, ನೌಕಾ ನೀಲಿ (navy blue)ತೆಳು  ಬಣ್ಣದ ಛಾಯೆಗಳಿರುವ ಅಥವಾ ಎರಡು ಮೂರು ಬಣ್ಣಗಳ ಮಿಶ್ರಣವನ್ನು ಹೊಂದಿರುವ  ಬಟ್ಟೆಗಳು ಇವರಿಗೆ ಚೆನ್ನಾಗಿ ಒಗ್ಗುತ್ತವೆ.

12.ಮೀನ ರಾಶಿ:-

ಹಳದಿ, ಕಿತ್ತಳೆ,ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ ಒಳ್ಳೆಯದು.ಇವರಿಗೆ ಸಾಮಾನ್ಯವಾಗಿ ಎಲ್ಲಾ ಮಾದರಿಯ ಬಟ್ಟೆಗಳು ಹೊಂದುತ್ತವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top