ಮುಸ್ಸಂಜೆ ಹೊತ್ತಲ್ಲಿ ಈ ಕೆಲಸಗಳನ್ನು ಮಾಡಬಾರದು, ಮಾಡಿದರೆ ದುರಾದೃಷ್ಟ ಬರೋದು ಗ್ಯಾರಂಟಿ.
ಮುಸ್ಸಂಜೆ ಸಮಯವನ್ನು ಗೋಧೂಳಿ ಸಮಯ ಎಂದು ಸಹ ಕರೆಯಲಾಗುತ್ತದೆ. ಯಾಕೆಂದರೆ ಅದು ಲಕ್ಷ್ಮೀ ಮನೆಗೆ ಬರುವ ಸಮಯವಾಗಿದೆ.ಸಾಮಾನ್ಯವಾಗಿ 6 ಗಂಟೆಯಿಂದ 6.45 ರ ವರೆಗೆ, ಅಂದರೆ ಸೂರ್ಯ ಅಸ್ತಂಗತವಾಗುವ ಸಮಯವನ್ನು ನೋಡಿಕೊಂಡು ಈ ಸಮಯವನ್ನು ನಿರ್ದರಿಸಲಾಗುತ್ತದೆ.
ಅಷ್ಟ ಲಕ್ಷ್ಮೀಗಳು ಮನೆಯಲ್ಲಿ ಇರಬೇಕಾದರೆ ನಮ್ಮ ಆಚಾರ,ವಿಚಾರಗಳು ಸರಿಯಿರಬೇಕು. ನಿತ್ಯವೂ ಕೆಟ್ಟ ಶಬ್ದಗಳು,ಬೈಗುಳ,ಹೊತ್ತಲದ ಹೊತ್ತಲ್ಲಿ ಮಾಡುವ ಕೆಲಸಗಳಿಂದ ನಮ್ಮ ಸಂಪತ್ತು ಕರಗುತ್ತದೆ.ಹಿಂದೂ ಧರ್ಮದ ಪ್ರಕಾರ ಜೀವನದಲ್ಲಿ ಆರೋಗ್ಯ ಮತ್ತು ಸಂತೋಷ ಬರಿತವಾದ ಜೀವನವನ್ನು ನೆಡೆಸಲು ಕೆಲವು ನಿಯಮಗಳನ್ನು ಅನುಸರಿಸಲೇ ಬೇಕು. ಅದರಲ್ಲೂ ಸಾಯಂಕಾಲ ಸೂರ್ಯಾಸ್ತದ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು.ನಾವೇನಾದರೂ ಮಾಡಬಾರದ ಕೆಲಸವನ್ನು ಮಾಡಿದರೆ ನಾವು ಸಾಯುವವರೆಗೂ ಬಡತನ ಮತ್ತು ದುಃಖ ನಮ್ಮನ್ನು ಆವರಿಸುತ್ತದೆ ಎಂದು ಹೇಳಲಾಗುತ್ತದೆ.
“ ವರಿಕಾಲ ಕಾಡ್ಗಿಣಿ ಸಂಧ್ಯಾಕಾಲೆ ವಿವಾರ್ ಜಯೇತ್ ಆಹಾರ ಮೈಥುನಂ, ನಿದ್ರಂ ಸದ್ವೇಚ್ಛಾ ಚತುರ್ಖತಂ”
ಈ ಶ್ಲೋಕದ ಪ್ರಕಾರ ಕೆಲವು ಕೆಲಸಗಳನ್ನು ಸಾಯಂಕಾಲದ ಸಮಯದಲ್ಲಿ ಮಾಡಬಾರದು. ಅದರಿಂದ ನಮಗೆ ದಾರಿದ್ರ್ಯ ಉಂಟಾಗುತ್ತದೆ. ಅವು ಯಾವುವು ಎಂದು ಇಲ್ಲಿವೆ ನೋಡಿ…
1.ಕೆಟ್ಟ ಮಾತುಗಳನ್ನು ಆಡಬಾರದು.
ಮುಸ್ಸಂಜೆ ಸಮಯದಲ್ಲಿ ಕೆಟ್ಟ ಮಾತುಗಳನ್ನಾಡಿಕೊಂಡು ಕಿತ್ತಾಡಬಾರದು. ಇದರ ಬದಲಾಗಿ ದೇವರ ಜಪ,ತಪ, ಮನೆಯಲ್ಲಿ ಮಾಡಬೇಕು.ಸಂಜೆ ಸಮಯದಲ್ಲಿ ಗಲಾಟೆ ನೆಡೆಯುತ್ತಿದ್ದರೆ ಆ ಮನೆಗೆ ದಾರಿದ್ರ್ಯ ಬರುವುದು ಖಂಡಿತ.
2.ಕಸ ಗುಡಿಸುವುದು ನೆಲ ಒರೆಸುವುದು.
ಇನ್ನೂ ಸಂಜೆ ಸಮಯದಲ್ಲಿ ನೆಲವನ್ನು ತೊಳೆಯುವುದು ಅಥವಾ ಕಸ ಗುಡಿಸುವ ಕೆಲಸಕ್ಕೆ ಹೋಗಬಾರದು.ಇದರಿಂದ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ಇದನ್ನು ಮೂಢನಂಬಿಕೆ ಎಂದು ಸಹ ಅನ್ನಬಹುದು.ಆದರೆ ಶಾಸ್ತ್ರದ ಪ್ರಕಾರ ಸಂಧ್ಯಾಕಾಲವು ಲಕ್ಷ್ಮೀ ಪೂಜೆಗೆ ಸೂಕ್ತ. ಆ ಸಮಯದಲ್ಲಿ ಮನೆಯನ್ನು ಸ್ವಚ್ಚಗೊಳಿಸಿದರೆ ಧನಾತ್ಮಕ ಶಕ್ತಿಯು ನಾಶವಾಗುತ್ತದೆ ಎಂದು ಹೇಳಲಾಗುತ್ತದೆ.
3.ಲೈಂಗಿಕ ಕ್ರಿಯೆ.
ಮುಸ್ಸಂಜೆಯ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು. ಸಂಜೆಯ ಸಮಯದಲ್ಲಿ ಲಕ್ಷ್ಮೀಯೂ ಧರೆಗಿಳಿಯುತ್ತಾಳೆ. ಆ ಸಮಯದಲ್ಲಿ ಅಂತಹ ಚಟುವಟಿಕೆಯಲ್ಲಿ ತೊಡಗಿದರೆ ಲಕ್ಷ್ಮೀ ಮುನಿಸಿಕೊಳ್ಳುತ್ತಾಳೆ. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ತಲೆದೂಗುವುದು.
4.ನಿದ್ರೆ ಮಾಡುವುದು.
ಮುಸ್ಸಂಜೆಯ ಸಮಯದಲ್ಲಿ ಮಲಗಬಾರದು ಹಾಗೇನಾದರೂ ಮಲಗಿದರೆ ಮನಸ್ಸು ಮತ್ತು ನೆನಪಿನ ಶಕ್ತಿಯು ದುರ್ಬಲಗೊಳ್ಳುತ್ತದೆ. ಅಷ್ಟೇ ಅಲ್ಲದೆ ಸ್ಥೂಲಕಾಯದ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಾರೆ.
5.ಸಸ್ಯಗಳ ಎಲೆ,ಹೂವನ್ನು ಕೀಳಬಾರದು.
ಮುಸ್ಸಂಜೆ ಸಮಯದಲ್ಲಿ ತುಳಸಿ, ದರ್ಬೆ ಮತ್ತು ಇನ್ನಿತರ ಸಸ್ಯಗಳ ಎಲೆ ಮತ್ತು ಹೂವುಗಳನ್ನು ಕೀಳಬಾರದು.ಇದರಿಂದ ಆ ವ್ಯಕ್ತಿಯ ಮನೆಗೆ ಬಡತನ ಮತ್ತು ಶಾಪ ತಗಲಬಹುದು.ಮುಸ್ಸಂಜೆಯ ನಂತರ ಎಲೆ ಮತ್ತು ಹೂಗಳನ್ನು ಕಿತ್ತರೆ ಆ ಸಸ್ಯವನ್ನು ನಿರ್ಜೀವ ಗೊಳಿಸಿದಂತೆ ಎಂದು ವಿಜ್ಞಾನ ಹೇಳುತ್ತದೆ.
ಆದ್ದರಿಂದ ಈ ಪಂಚ ಸೂತ್ರಗಳನ್ನು ಅರಿತು ನಿಮ್ಮ ಜೀವನದಲ್ಲಿಯೂ ಅಳವಡಿಸಿಕೊಂಡು ನಿಮ್ಮ ದಾರಿದ್ರ್ಯವನ್ನು ಹೋಗಲಾಡಿಸಿಕೊಳ್ಳಿ.ಲಕ್ಷ್ಮೀ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾಳೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
