ಮುಖನೋಡಿ ಮಣೆಹಾಕೋ ಮಹಾನುಭಾವರೆಲ್ಲ ಮೊದ್ಲು ಈ ಕತೆಯನ್ನ ಓದಿ…
ಒಂದೂರಲ್ಲಿ ಒಬ್ಬ ಪಂಡಿತ ಇರ್ತಾನೆ.ಅವನು ಎಲ್ಲಾ ಗ್ರಂಥಗಳಲ್ಲಿ ಚೆನ್ನಾಗಿ ಪರಿಣತರಾಗಿದ್ದನು. ಅವನು ಎಲ್ಲವನ್ನೂ ತಿಳಿದಿದ್ದರು, ಆದರೆ ಅವನು ತುಂಬಾ ಬಡವನಾಗಿದ್ದನು. ಅವನಿಗೆ ಇರಲು ಮನೆ ಇರಲಿಲ್ಲ.ಅವನು ತನ್ನ ಒಂದೊತ್ತಿನ ಊಟಕ್ಕೆ ಬಹಳ ಕಷ್ಟ ಪಡುತ್ತಿದ್ದನು.ಅವನು ಹಾಕಿಕೊಳ್ಳುತ್ತಿದ್ದ ಬಟ್ಟೆಗಳು ಸಹ ಹರಿದಿದ್ದವು.
ಊಟಕ್ಕಾಗಿ ಅವನು ಮನೆ ಮನೆಗಳಲ್ಲಿ ಭಿಕ್ಷೆಯನ್ನು ಬೇಡುತ್ತಿದ್ದನು.ಅವನ ಹರಿದ ಬಟ್ಟೆಗಳನ್ನು ನೋಡಿದ ಜನರು ಅವನನ್ನು ಹುಚ್ಚನೆಂದು ತಿಳಿದುಕೊಂಡು ಮನೆಗೆ ಸೇರಿಸುತ್ತಿರಲಿಲ್ಲ. ಒಬ್ಬರು ಅವನು ಮನೆ ಹತ್ತಿರ ಹೋಗುತ್ತಿದ್ದಂತೆ “ಬರ್ಬೇಡ ಹೋಗು”ಎಂದು ತುಚ್ಛ ಭಾವದಿಂದ ಬಾಗಿಲುಗಳನ್ನು ಹಾಕೊಂಡು ಅವನನ್ನು ಅವಮಾನ ಮಾಡಿದ್ದರು. ಆ ಪಂಡಿತನಿಗೆ ಅವತ್ತು ಎಲ್ಲೂ ಊಟವೇ ಸಿಗಲಿಲ್ಲ.
ಒಂದು ದಿನ ಒಬ್ಬ ಶ್ರೀಮಂತ ವ್ಯಕ್ತಿಯು ಅವನಿಗೆ ಹೊಸ ಬಟ್ಟೆಯನ್ನು ಕೊಟ್ಟನು. ಅವನ್ನು ಹಾಕಿಕೊಂಡು ದಾರಿಯಲ್ಲಿ ಹೋಗುವಾಗ “ಬರ್ಬೇಡ ಹೋಗು “ಎಂದು ಹೇಳಿದ್ದ ವ್ಯಕ್ತಿಯು “ಸ್ವಾಮಿ ಬನ್ನಿ, ಮನೆ ಒಳಕ್ಕೆ ಬನ್ನಿ” ಎಂದು ಕರೆದು ಮನೆಯೊಳಕ್ಕೆ ಕರ್ಕೊಂಡು ಹೋಗಿ”ನಿಮ್ಮಂಥ ಪಂಡಿತರು ನಮ್ಮ ಮನೆಯಲ್ಲಿ ಊಟ ಮಾಡಿದರೆ ಮನೆಗೆ ಒಳ್ಳೇದಾಗುತ್ತಂತೆ “ಎಂದು ಆ ಪಂಡಿತನಿಗೆ ಊಟವನ್ನು ಬಡಿಸಿದನು.
ಪಂಡಿತನ ಮುಂದೆ ಒಂದು ಬಾಳೆಯೆಲೆಯನ್ನು ಹಾಕಿ ವಿವಿಧ ರೀತಿಯ ಖಾದ್ಯಗಳನ್ನು ಉಣಬಡಿಸಿದರು.
ಸ್ವಾಮಿ ಊಟ ಮಾಡಲು ಶುರು ಮಾಡುವ ಬದಲು ಒಂದ್ಸ್ವಲ್ಪ ಸಿಹಿ ತಿಂಡಿಯನ್ನು ತೆಗೆದುಕೊಂಡು ಅವನ ಬಟ್ಟೆಗೆ ‘ತಗೋ ತಿನ್ನು,ತಿನ್ನು”ಎಂದು ಹೇಳುತ್ತಿದ್ದರು.
ಪಂಡಿತನ ಈ ವರ್ತನೆ ಇಂದ ಮನೆಯವರಿಗೆಲ್ಲ ಆಶ್ಚರ್ಯವಾಗಿ “ಏನು ಸ್ವಾಮೀ ನೀವು.ಬಟ್ಟೆ ಎಲ್ಲಾದರೂ ಊಟ ಮಾಡುತ್ತದೆಯೇ,ಎಲ್ಲ ಬಲ್ಲವರು ನೀವೇ ಮೂರ್ಖರ ಹಾಗೆ ವರ್ತಿಸುತ್ತಿದ್ದೀರಲ್ಲ “ಎಂದು ಕೇಳಿದರು ಅದಕ್ಕೆ ಸ್ವಾಮಿ “ನೆನ್ನೆ ಇದೆ ಸಮಯಕ್ಕೆ ನಾನು ಊಟ ಕೊಡಿಯೆಂದು ಹಳೆ ಬಟ್ಟೆ ಹಾಕಿಕೊಂಡು ಬಂದಾಗ ನೀವು ಕೊಡದೆ ಹೊರಗೆ ಹಟ್ಟಿದಿರಿ.
ಆದರೆ ಇವತ್ತು ಯಾರೋ ಪುಣ್ಯಾತ್ಮ ಹೊಸ ಬಟ್ಟೆಯನ್ನು ಕೊಟ್ಟ ಅಂತ ಅವನ್ನು ಹಾಕೊಂಡು ರಸ್ತೆಯಲ್ಲಿ ನಡ್ಕೊಂಡ್ ಸುಮ್ನೆ ಹೋಗ್ತಿದ್ದವ್ನ ಕರ್ಕೊಂಡು ಬಂದು ಊಟಕ್ಕೆ ಇಡ್ತಿದ್ದೀರಾ ಅಂದ್ರೆ ಅದು ಈ ಹೊಸ ಬಟ್ಟೆಗೆ ಇರುವ ಇಷ್ಟೊಂದು ಗೌರವದಿಂದ ಅಲ್ಲವೇ, ಅದ್ಕಕಾಗಿ ಈ ಬಟ್ಟೆಗೆ ನಾನು ಮೊದಲ ಆದ್ಯತೆ ನೀಡಿ ಊಟಮಾಡಿಸುವುದು ತಪ್ಪೇ” ಎಂದು ಕೇಳಿದಾಗ ಮನೆಯವಿರಿಗೆಲ್ಲ ತಮ್ಮ ನೀಚ ತಪ್ಪಿನ ಅರಿವಾಗಿ ನಾಚಿಕೆಯಿಂದ ತಲೆತಗ್ಗಿಸುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
