fbpx
ಸಾಧನೆ

ಹೆಮ್ಮೆಯ ಕನ್ನಡಿಗ ನಾರಾಯಣ ಮೂರ್ತಿಯವರ ಒಂದು ಸಣ್ಣ ರೂಮ್ ನಲ್ಲಿ ಶುರು ಮಾಡಿ ಹೆಮ್ಮರವಾದ ಇನ್ಫೋಸಿಸ್ ಕಟ್ಟಿದ ಕಥೆ..

ಹೆಮ್ಮೆಯ ಕನ್ನಡಿಗ ನಾರಾಯಣ ಮೂರ್ತಿಯವರ ಬಗ್ಗೆ ನಿಮಗೆಷ್ಟು ಗೊತ್ತು. 

ಇನ್‌ಪೋಸಿಸ್, ಕನ್ನಡದ ನೆಲದಲ್ಲಿ ಹುಟ್ಟಿ ಪ್ರಪಂಚದಾದ್ಯಂತ ವಿಜಯ ಪತಾಕೆ ಹಾರಿಸಿದ ಸಂಸ್ಥೆ. ಈ ಸಂಸ್ಥೆಯ ಜನಕ ಸಾಫ್ಟ್‌ವೇರ್ ಸಂತ ಎಂದು ಹೆಸರಾಗಿರುವ ಎನ್. ಆರ್. ನಾರಾಯಣಮೂರ್ತಿ.ಈ ಕತೆಯು ಒಬ್ಬ ಸ್ಕೂಲ್ ಮಾಸ್ಟರ್ ನ ಮಗ ಸಾಧಸಿದ ಯಶೋಗಾಥೆ.


ಎನ್. ರಾಮರಾವ್-ಪದ್ಮಾವತಮ್ಮ ದಂಪತಿಗಳ ಎಂಟು ಜನ ಮಕ್ಕಳಲ್ಲಿ ಒಬ್ಬ ಮಗನಾಗಿ 1946ರ ಆಗಸ್ಟ್20 ರಂದು ಜನಿಸಿದ ನಾರಾಯಣಮೂರ್ತಿ.ಬಹಳ ಬುದ್ದಿವಂತರು. ಅವರು ಗಣಿತ ಮತ್ತು ಭೌತಶಾಸ್ತ್ರದ ಬಗ್ಗೆ ತುಂಬಾ ಆಸಕ್ತಿಯನ್ನು ಹೊಂದಿದ್ದರು ಮತ್ತು ಯಾವಾಗಲೂ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಜ್ಞಾನವನ್ನು ಪಡೆಯುವ ಆಸೆಯನ್ನು ಹೊಂದಿದ್ದರು.ಆದ್ದರಿಂದ, ಅವರು ಮೈಸೂರು ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಬ್ಯಾಚುಲರ್ ಪದವಿಯನ್ನು ಪಡೆದರು ನಂತರ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕಾನ್ಪುರದಿಂದ ತಮ್ಮ ಸ್ನಾತಕೋತ್ತರ ಪದವಿ ಪಡೆದರು.


ನಾರಾಯಣ ಮೂರ್ತಿ ಬಡ ಕುಟುಂಬದಲ್ಲಿ ಜನಿಸಿದರೂ, ಅವರ ಕನಸುಗಳು ದೊಡ್ಡದಾಗಿದ್ದವು ಚಿಕ್ಕ ವಯಸ್ಸಿನಲ್ಲೇ ಅವರು ತಮ್ಮ ಸ್ವಂತ ಉದ್ಯಮವನ್ನು ಆರಂಭಿಸುವ ಕನಸು ಕಂಡಿದ್ದರು.ನಾರಾಯಣ ಮೂರ್ತಿ ತಮ್ಮ ವೃತ್ತಿಜೀವನವನ್ನು ಐಐಎಂ ಅಹಮದಾಬಾದ್ನಲ್ಲಿ ಮುಖ್ಯ ವ್ಯವಸ್ಥಾಪಕ ಪ್ರೋಗ್ರಾಮರ್ ಆಗಿ ಆರಂಭಿಸಿದರು.ನಂತರ ಅವರು ಸಾಫ್ಟ್ಟ್ರಾನಿಕ್ಸ್ ಎಂಬ ಕಂಪನಿಯನ್ನು ಪ್ರಾರಂಭಿಸಿದರು, ಇದು ಒಂದೂವರೆ ವರ್ಷದ ನಂತರ ವಿಫಲವಾಯಿತು.ಆದರೆ ಆ ತಪ್ಪುಗಳಿಂದ ಅವರು ಸಾಕಷ್ಟು ವಿಚಾರಗಳನ್ನು ಕಲಿತಿದ್ದರು.
1978ರಲ್ಲಿ ನಾರಾಯಣಮೂರ್ತಿ ಮತ್ತು ಸುಧಾ ಕುಲಕರ್ಣಿ ಎಂಬ ಪ್ರತಿಭಾನ್ವಿತ ಎಂಜಿನಿಯರ್ ಅವರ ಮದುವೆ ನಡೆಯಿತು.ಒಂದು ದಿನ ನಾರಾಯಣಮೂರ್ತಿ ಹೆಂಡತಿಗೆ “ನಾನು ಈ ಜನರಲ್ ಮ್ಯಾನೇಜರ್ ಕೆಲಸ ಬಿಟ್ಟುಬಿಡ್ತೀನಿ. ಸಹೋದ್ಯೋಗಿಗಳೊಂದಿಗೆ ಸೇರಿ ಸ್ವಂತ ಕಂಪೆನಿ ಆರಂಭಿಸುವ ಆಲೋಚನೆ ಇದೆ. ನೋಡತಾ ಇರು, ಭಾರತೀಯರು ಹೆಮ್ಮೆಪಡಬೇಕು, ಅಂಥ ಕಂಪೆನಿ ಕಟ್ಟೀನಿ” ಎಂದು ಹೇಳಿದರು.


ನಾರಾಯಣಮೂರ್ತಿ ತಮ್ಮಯೋಚನೆಯನ್ನು ಸಹೋದ್ಯೋಗಿಗಳಾದ ಎನ್.ಎಸ್.ರಾಘವನ್, ಎಸ್.ಗೋಪಾಲಕೃಷ್ಣನ್, ಎಸ್.ಡಿ.ಶಿಬುಪಾಲ್, ಕೆ.ದಿನೇಶ್, ನಂದನ್ ಎಂ. ನೀಲೇಕಣಿ ಮತ್ತು ಅಲೋಖ್ ಅರೋರ ಅವರೊಂದಿಗೆ ಹಂಚಿಕೊಂಡರು.1991ರಲ್ಲಿ ಸುಧಾ ರವರು ಕೊಟ್ಟ ಕೇವಲ 10 ,000 ರೂಪಾಯಿಗಳಲ್ಲಿ ಹಾಗು ಅವರದ್ದೇ ಆ ಒಂದು ಪುಟ್ಟ ರೂಮಿನಲ್ಲಿ ಒಂದು ಪುಟ್ಟ ಕಂಪನಿಯನ್ನು ಸ್ಥಾಪಿಸಿದರು ‘ಇನ್‌ಫೋಸಿಸ್’ ಎಂದು ಆ ಕಂಪೆನಿಗೆ ಹೆಸರಿಡಲಾಯಿತು.ಇಂದು ಆ ಪುಟ್ಟ ಕಂಪನಿ ಹೆಮ್ಮರವಾಗಿ ಬೆಳೆದು ಸಾವಿರಾರು ಜನರಿಗೆ ಉದ್ಯೋಗಾವಕಾಶವನ್ನು ನೀಡಿದೆ. ನೂರಾರು ಕೋಟಿ ವಾರ್ಷಿಕ ಆದಾಯವನ್ನು ಗಳಿಸುತ್ತಿದೆ.


ಇಂದು, ನಾರಾಯಣ ಮೂರ್ತಿ ಸಾರ್ವಕಾಲಿಕ ಶ್ರೇಷ್ಠ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ.2000 ನೇ ಇಸವಿಯಲ್ಲಿ ದೇಶದ ಐಟಿ ಕ್ಷೇತ್ರ ಮತ್ತು ಆರ್ಥಿಕತೆಗೆ ತನ್ನ ಮಹತ್ವದ ಕೊಡುಗೆಗಾಗಿ ಭಾರತ ಸರ್ಕಾರದಿಂದ ಪದ್ಮಶ್ರೀ ಅವರಿಗೆ ಪ್ರಶಸ್ತಿ ನೀಡಲಾಯಿತು. 2008 ರಲ್ಲಿ, ಅವರಿಗೆ ಭಾರತದ ಎರಡನೇ ಅತಿದೊಡ್ಡ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು.
ನಾರಾಯಣ ಮೂರ್ತಿರವರ ಕತೆಯು ದೇಶದ ಎಲ್ಲ ಯುವಕ ಯುವತಿಯರಿಗೆ ಸ್ಪೂರ್ದಿದಾಯಕ ವಾಗಿದೆ.ನಮ್ಮ ಭವಿಷ್ಯವನ್ನು ಬದಲಾಯಿಸುವ ಬಗ್ಗೆ ನಾವುಆಸಕ್ತಿಯನ್ನು ಹೊಂದಿದ್ದಾರೆ , ನಮ್ಮ ಕನಸುಗಳು ಖಂಡಿತವಾಗಿಯೂ ನಿಜವಾಗುತ್ತವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top