ಶನಿ ದೇವರಿಗೆ ಎಳ್ಳು ಎಣ್ಣೆ ಎಂದರೆ ಪ್ರಿಯ. ಏಕೆ ? ಓದಿ ಇದರ ಹಿಂದಿರುವ ರಹಸ್ಯಕಾರಿ ಕಥೆ.
ಶನಿದೇವರಿಗೆ ಪ್ರಿಯವಾದ ಎಳ್ಳು ಎಣ್ಣೆಯ ಹಿಂದಿನ ರಹಸ್ಯ ಏನೆಂಬುದನ್ನು ಇಂದು ತಿಳಿದುಕೊಳ್ಳೋಣ ಬನ್ನಿ.ಹಿಂದೂ ಸಂಪ್ರದಾಯದಲ್ಲಿ ಶನಿಯ ಪ್ರಭಾವ ಸಾಡೇ ಸಾತಿ, ಅಷ್ಟಮ ಶನಿ, ಪಂಚಮ ಶನಿ ಹೀಗೆ ಶನಿಯ ಪ್ರಭಾವಗಳನ್ನು ಅವರ ಜೀವಿತಾವಧಿಯಲ್ಲಿ ಅನುಭವಿಸಬೇಕಾಗುತ್ತದೆ.
ಸಾಡೇ ಸಾತಿಯು ಏಳು ವರ್ಷಗಳ ಕಾಲ ಶನಿ ದೋಷವನ್ನು ತರುತ್ತದೆ ಎಂದು ನಂಬಲಾಗಿದೆ. ಆದರೆ 7 ವರ್ಷಗಳ ಅವಧಿಯಲ್ಲಿ ಯಾವ ಕೆಲಸವೂ ಯಶಸ್ವೀ ಯಾಗುವುದಿಲ್ಲ. ಈ ಅವಧಿಯಲ್ಲಿ ಒತ್ತಡ, ಸೋಮಾರಿತನ, ಆರೋಗ್ಯಕ್ಕೆ ಸಂಭದಿಸಿದ ಖಾಯಿಲೆಗಳು,ವೃತ್ತಿ ಜೀವನದಲ್ಲಿ ಅನೇಕ ತೊಂದರೆಗಳು ದುಃಖ, ಮನಸ್ಸಿಗೆ ನೋವು ಉಂಟಾಗುತ್ತವೆ.ಇವುಗಳಿಂದ ಮುಕ್ತಿ ಪಡೆದುಕೊಳ್ಳಲು ಜ್ಯೋತಿಷ್ಯಶಾಸ್ತ್ರದಲ್ಲಿ ಹಲವು ಪರಿಹಾರಗಳನ್ನು ಹೇಳಿದ್ದಾರೆ. ಇದರಲ್ಲಿ ಪ್ರಮುಖವಾದುದು ಶನಿದೇವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುವುದು.ಶನಿ ದೇವರಿಗೆ ಎಳ್ಳೆಣ್ಣೆಯ ಸ್ನಾನ ಹಾಗೂ ಅಭ್ಯಂಜನವನ್ನು ಮಾಡಿಸುವುದು ಪ್ರಮುಖವಾಗಿದೆ.ಆದರೆ ಹೆಚ್ಚಿನವರಿಗೆ ಇದರ ಮಹತ್ವದ ಕಾರಣಗಳೇನೆಂದು ಗೊತ್ತಿಲ್ಲ.
ಎಳ್ಳೆಣ್ಣೆಯ ಹಿಂದಿನ ಕಥೆ.
ಹನುಮಂತನಿಗೆ ಸವಾಲು ಎಸೆದ ಶನಿದೇವ.ಒಂದು ದಿನ ಹನುಮಂತನು ಮರದ ಕೆಳಗೆ ಕುಳಿತು ರಾಮ ಧ್ಯಾನದಲ್ಲಿ ಮಗ್ನನಾಗಿರುವಾಗ. ಶನಿದೇವನು ಅಲ್ಲಿ ಪ್ರತ್ಯಕ್ಷವಾಗಿ ಹೇಳಿದ “ ಈ ಜಗತ್ತಿನಲ್ಲಿ ಅತ್ಯಂತ ಬಲಿಷ್ಠ ನಾನೇ.ಆದರೆ ನೀನು ಸಹ ಪ್ರಭಲನೆಂದು ಕೇಳ್ಪಟ್ಟೆ. ನಿನ್ನ ಪರಾಕ್ರಮ ಎಷ್ಟು ಎಂದು ನನಗೆ ತಿಳಿಯಬೇಕಿದೆ, ಬಾ ಕಣ್ತೆರೆದು ನೋಡು, ನನ್ನೊಂದಿಗೆ ಯುದ್ಧ ಮಾಡು ಎಂದು ಸವಾಲೆಸೆದನು” ತಪ್ಪಸ್ಸಿನಲ್ಲಿ ಮಗ್ನನಾಗಿದ್ದ ಹನುಮಂತ ಶನಿದೇವರ ಸವಾಲಿಗೆ ವಿಚಲಿತನಾಗದೆ ಕಣ್ಣುಗಳನ್ನು ತೆರೆದು ಉತ್ತರಿಸಿದ. “ಈಗ ನಾನು ನನ್ನ ಇಷ್ಟ ದೇವರನ್ನು ಪ್ರಾರ್ಥಿಸುತ್ತ ಇದ್ದೇನೆ.ಈ ಸಮಯದಲ್ಲಿ ನನ್ನನ್ನು ಚಂಚಲಗೊಳಿಸಬೇಡ.ನನ್ನನ್ನು ಒಂಟಿಯಾಗಿ ಪ್ರಾರ್ಥಿಸಲು ಬಿಡು” ಎಂದು ಹೇಳಿದ.
ಆದರೆ ಅದಕ್ಕೆ ಮಣಿಯದ ಶನಿದೇವ ಮತ್ತೆ ಮತ್ತೆ ಯುದ್ಧಕ್ಕೆ ಬರುವಂತೆ ಪ್ರೇರೇಪಿಸಿದ ಆಗ ತಾಳ್ಮೆ ಕಳೆದುಕೊಂಡ ಹನುಮಂತ ಸಿಟ್ಟಿಗೆದ್ದು, ತನ್ನ ಬಾಲದಿಂದ ಶನಿದೇವರ ಶರೀರವನ್ನು ಸುತ್ತುವರಿದು ನಿಧಾನವಾಗಿ ಒತ್ತಡ ಹೆಚ್ಚಿಸಲು ತೊಡಗುತ್ತಾನೆ.ಸಿಟ್ಟಿಗೆದ್ದ ಹನುಮಂತನಿಂದ ತಪ್ಪಿಸಿಕೊಳ್ಳಲು ಶನಿದೇವ ಎಷ್ಟು ಪ್ರಯತ್ನಿಸಿದರೂ ಬಾಲದ ಹೊತ್ತಡ ಹೆಚ್ಚುತ್ತಲೇ ಹೋಗುತ್ತಿತ್ತು.ತನ್ನ ಬಾಲದಿಂದಲೇ ಶನಿದೇವನನ್ನು ಒಂದು ಬಾರಿ ಎತ್ತಿ ಅಲುಗಾಡಿಸಿದ.ಶನಿದೇವರ ಶರೀರ ಲಂಕೆಯ ಸೇತುವೆಗೆ ತಾಗಿ ರಕ್ತ ಬರಲು ಪ್ರಾರಂಭವಾಗುತ್ತದೆ. ಇದರಿಂದ ನೋವನ್ನು ತಡೆದುಕೊಳ್ಳಲಾಗದೆ ಶನಿದೇವ ಸೋಲನ್ನು ಒಪ್ಪಿಕೊಂಡು, ಅವಮಾನಿತನಾಗಿ ಹನುಮಂತನ ಬಳಿ ದಯಾ ಭಿಕ್ಷೆ ಯಾಚಿಸಲು ತೊಡಗುತ್ತಾನೆ. “ದಯವಿಟ್ಟು ನನ್ನನ್ನು ಬಿಡುಗಡೆ ಮಾಡು. ನಾನು ಎಂದಿಗೂ ಈ ತಪ್ಪನ್ನು ಮತ್ತೆ ಮಾಡಲಾರೆ ಎಂದು ಅಂಗಲಾಚಿದ” .
ಅದಕ್ಕೆ ಹನುಮಂತ “ಇನ್ನೂ ಮುಂದೆ ನೀನು ಎಂದಿಗೂ ರಾಮನ ಭಕ್ತರಿಗೆ ತೊಂದರೆ ಮಾಡಲಾರೆ ಎಂದು ಭರವಸೆ ಕೊಟ್ಟರೆ ಮಾತ್ರ ಬಿಡುಗಡೆ ಮಾಡುವೆ” ಎಂದ. ನೋವು ತಾಳಲಾರದೆ ಶನಿದೇವ ಹೀಗೆ ಉತ್ತರಿಸಿದ “ಹಾಗೆ ಆಗಲಿ ಇನ್ನು ಮುಂದೆ ನಾನು ನಿನ್ನ ಹಾಗೂ ರಾಮನ ಭಕ್ತರಿಗೆ ತೊಂದರೆ ನೀಡಲಾರೆ ಎಂದು ಭರವಸೆ ಕೊಡುತ್ತಾನೆ” ಶನಿದೇವರ ಮಾತಿಗೆ ಒಪ್ಪಿ ಹನುಮಂತ ಶನಿದೇವನನ್ನು ಬಂಧನದಿಂದ ಮುಕ್ತಿ ಮಾಡಿದ ಬಳಿಕ ಶನಿದೇವ ತನ್ನ ಶರೀರದ ನೋವನ್ನು ಕಡಿಮೆ ಗೊಳಿಸಲು ಹನುಮಂತನನ್ನು ಈ ರೀತಿಯಾಗಿ ಬೇಡಿದ “ಈ ನೋವನ್ನು ಶಮನಗೊಳಿಸಲು ನನಗೆ ಯಾವುದಾದರೂ ಒಂದು ಔಷಧಿಯನ್ನು ನೀಡುವೆಯಾ” ಎಂದು ಕೇಳುತ್ತಾನೆ.
ಇದಕ್ಕೆ ಒಪ್ಪಿದ ಹನುಮಂತ ಒಂದು ಎಣ್ಣೆಯನ್ನು ನೀಡುತ್ತಾನೆ.ಈ ಎಣ್ಣೆಯನ್ನು ಹಚ್ಚಿದ ಬಳಿಕ ಶನಿದೇವನಿಗೆ ನೋವು ಕಡಿಮೆಯಾಯಿತು.ಶನಿದೇವನು ನೋವು ಕಡಿಮೆ ಮಾಡಿದ ಈ ಎಣ್ಣೆಯನ್ನು ಅಂದಿನಿಂದ ಶನಿದೇವರಿಗೆ ಈ ಎಣ್ಣೆಯನ್ನು ಅರ್ಪಿಸುವುದು ಸಂಪ್ರದಾಯವಾಗಿ ಪ್ರಾರಂಭವಾಯಿತು. ಅದೇ ಎಳ್ಳಿನ ಎಣ್ಣೆ.ಅದರಲ್ಲೂ ಕಪ್ಪು ಎಳ್ಳಿನ ಎಣ್ಣೆ ಇನ್ನೂ ಶ್ರೇಷ್ಠ.ಇದು ದೇಹದ ಎಲ್ಲಾ ನೋವುಗಳನ್ನು ಕಡಿಮೆ ಮಾಡುವ ಸಂಕೇತವಾಗಿದೆ.
ಅನೇಕ ತೊಂದರೆಗಳಿಗೆ ಕಾರಣನಾಗುವ ಶನಿದೇವನಿಗೆ ಎಳ್ಳೆಣ್ಣೆಯನ್ನು ಅರ್ಪಿಸುವ ಮೂಲಕ ಶನಿದೇವ ತನ್ನ ನೋವನ್ನು ಕಡಿಮೆ ಮಾಡಿಕೊಂಡು ಎಳ್ಳೆಣ್ಣೆ ಅರ್ಪಿಸಿದ ಭಕ್ತರ ತೊಂದರೆಗಳನ್ನು ಕಡಿಮೆ ಮಾಡುತ್ತಾನೆ ಎಂದು ನಂಬಲಾಗಿದೆ.
ಶನಿದೇವನಿಗೆ ಯಾವ ಎಣ್ಣೆ ಅರ್ಪಿಸುವುದು ಸೂಕ್ತ ?
ಧರ್ಮ ಗ್ರಂಥಗಳ ಪ್ರಕಾರ ಶನಿದೇವರಿಗೆ ಅರ್ಪಿಸಲು ಎಳ್ಳೆಣ್ಣೆ ಸೂಕ್ತವಾಗಿದೆ.ಇದನ್ನು ಅರ್ಪಿಸಲು ಶನಿದೇವರ ದಿನವಾದ ಶನಿವಾರವೇ ದಿನವಾಗಿದ್ದು ಶನಿದೇವರ ಪ್ರಭಾವದಿಂದ ಹೊರಬರಲು ಹನುಮಂತನನ್ನು ಆರಾಧಿಸುವುದು ಇನ್ನೊಂದು ವಿಧವಾಗಿದೆ.
ರಾಮಾಯಣದ ಪ್ರಕಾರ ರಾವಣನ ಬಿಗಿ ಮುಷ್ಟಿಯಲ್ಲಿದ್ದ ಶನಿದೇವನನ್ನು ಹನುಮಂತ ರಕ್ಷಿಸಿದ.ಈ ಉಪಕಾರವನ್ನು ತೀರಿಸಲು ಹನುಮಂತನು ಭಕ್ತರಿಗೆ ತೊಂದರೆ ನೀಡದಿರುವಂತೆ ಶನಿದೇವರು ಒಪ್ಪಿಕೊಂಡ.ಆದ್ದರಿಂದ ಶನಿದೇವರ ಪ್ರಭಾವ ಇರುವವರು ಹನುಮಂತನನ್ನು ಆರಾಧಿಸಿದರೆ,ಪ್ರಾರ್ಥಿಸಿದರೆ ತೊಂದರೆಗಳಿಂದ ಹೊರ ಬರಲು ಸಾಧ್ಯ ಎಂದು ಪುರಾಣಗಳಲ್ಲಿ ತಿಳಿಸಿದ್ದಾರೆ.
ಶನಿ ದೇವರ ಇಷ್ಟದ ಬಣ್ಣ ಕಪ್ಪು,ಆದ್ದರಿಂದ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸುವ ಮೂಲಕ ಶನಿದೇವನನ್ನು ಸುಲಭವಾಗಿ ಒಲಿಸಿಕೊಳ್ಳಬಹುದು.
ನೀಚ ಶನಿ,ಸಾಡೇಸಾತಿ, ಅಷ್ಟಮ,ಪಂಚಮ ಶನಿಯನ್ನು ಜಾತಕದಲ್ಲಿ ಹೊಂದಿರುವವರು . ಶನಿವಾರದ ದಿನ ಚರ್ಮದ ಅಥವಾ ಕಪ್ಪು ಬಣ್ಣದ ಯಾವುದೇ ವಸ್ತುವನ್ನು ಧರಿಸದೇ ಇರುವುದು ಉತ್ತಮ.
ಶನಿವಾರದ ದಿನ ಮಧ್ಯಪಾನ, ಧೂಮಪಾನ ಮತ್ತು ಮಾಂಸಾಹಾರ ಸೇವನೆಯಂತಹ ದುರಾಭ್ಯಾಸಗಳನ್ನು ತ್ಯಜಿಸುವುದು ಒಳ್ಳೆಯದು.
ಜೀವನದಲ್ಲಿ ಸತ್ಯವನ್ನು ಹೇಳಿ,ಸುಳ್ಳು ಹೇಳದೆ ಪ್ರಾಮಾಣಿಕರಾಗಿ ಇರುವುದರಿಂದ ಮತ್ತು ಲಂಚವನ್ನೂ ತೆಗೆದುಕೊಳ್ಳದೇ ಇರುವುದರಿಂದ ಯಾರಿಗೂ ನೋವನ್ನು ಉಂಟುಮಾಡದೆ ಇದ್ದರೆ ಶನಿಯೂ ಯಾರಿಗೂ ಅನಗತ್ಯವಾಗಿ ಕಾಟ ಕೊಡುವುದಿಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
