fbpx
ಜೀವನ ಕ್ರಮ

ಕೆಲವೊಮ್ಮೆ ನಮ್ಮ ಪಾಡಿಗೆ ನಾವಿದ್ರೆ ಒಳ್ಳೇದು ಅದು ಬಿಟ್ಟು ಅಯ್ಯೋ ಅಂದ್ರೆ ಆರು ತಿಂಗಳು ಪಾಪ

ಅಯ್ಯೋ ಎಂದರೆ ಆರು ತಿಂಗಳು ಪಾಪ.

ಈ ಘಟನೆಯನ್ನು ಕೇಳಿದಾಗ ನನಗೆ ಏನೋ ಒಂಥರಾ  ಅನಿಸಿತ್ತು.ನಿಮಗೆ ಏನನ್ನಿಸುತ್ತದೆ ? ಬಹಳ ಹಿಂದೆ 1872 ರಲ್ಲಿ ಭಾರತವನ್ನು ಆಳುತ್ತಿದ್ದ ಒಬ್ಬ ಬ್ರಿಟೀಷ್ ವೈಸ್ ರಾಯರು ಬೇಟೆಗಾಗಿ ಕಾಡಿಗೆ ಹೋಗಿದ್ದ. ಅಂದು ರಾತ್ರಿ ಆತ ಬೇಟೆಯಿಂದ ಬಳಲಿ ಬಂದಿದ್ದ.ಗುಡಾರದಲ್ಲಿ ಗಾಢ ನಿದ್ರೆಯಲ್ಲಿದ್ದರು.ಮಧ್ಯರಾತ್ರಿ ಎದೆಯ ಮೇಲೆ ಏನೋ ಭಾರವಾದ ವಸ್ತುವಿದ್ದಂತೆ ಅನಿಸಿದೆ.ಆತನಿಗೆ ಎಚ್ಚರವಾಯಿತು. ಕಣ್ಣು ಬಿಟ್ಟು ನೋಡಿದಾಗ ಆತನ ಎದೆಯ ಮೇಲೆ ಒಂದು ದೊಡ್ಡ ನಾಗರಹಾವು ಮಲಗಿತ್ತು.

ಹೊರಗಡೆ ಚಳಿಯಿತ್ತೇನೋ ! ಒಳಗಡೆ ಬೆಚ್ಚಿಗಿದ್ದುದರಿಂದ ಅದು ಒಳಗಡೆ ಬಂದು ಆತನ ಎದೆಯ ಮೇಲೆ ಮಲಗಿತ್ತು.ತಾನೀಗ ಕದಲಿದರೆ ನಾಗರಹಾವು ಗಾಬರಿಗೊಂಡು ತನ್ನನ್ನು ಕಚ್ಚಬಹುದೆಂಬ ಅರಿವು ಆತನಿಗಾಯಿತು. ಹಾಗೆಯೇ ನಿಶ್ಚಲನಾಗಿ ಕಣ್ತುದಿಯಿಂದ ಹಾವನ್ನು ನೋಡುತ್ತಾ.ಅದು ತಾನಾಗಿಯೇ ಇಳಿದು ಹೋಗಬಹುದೆಂದು ನಿರೀಕ್ಷಿಸುತ್ತಾ ಮಲಗಿದ್ದ. ಹಾಗೆಯೇ ಒಂದು ಗಂಟೆ ಕಳೆಯಿತು.

ಆಗ ಗುಡಾರದೊಳಗೊಬ್ಬ ಪ್ರವೇಶಿಸಿದ. ಅತ್ತಿತ್ತ ನೋಡಿದ. ಆತನಿಗೆ ಅಲ್ಲಿ ಮಲಗಿದ್ದವರ ಎದೆಯ ಮೇಲೆ ಮಲಗಿದ್ದ ನಾಗರಹಾವು ಕಂಡಿತು. ಆತ ನಿಶ್ಶಬ್ದವಾಗಿ ಹೊರಗೆ ಹೋದ.ಸ್ವಲ್ಪ ಹೊತ್ತಿನ ನಂತರ ಕೈಯಲ್ಲೊಂದು ಜಾಡಿ ಹಿಡಿದುಕೊಂಡು ಮತ್ತೆ ಒಳಗೆ ಬಂದ ನಿಧಾನವಾಗಿ ಹೆಜ್ಜೆ ಹಾಕುತ್ತಾ ಬಂದು ಜಾಡಿಯ ಬಾಯಿಯನ್ನು ಹಾವಿನ ತಲೆಯ ಬಳಿ ಇಟ್ಟು. ಜಾಡಿಯೊಳಗೆ ಇನ್ನೂ ಬೆಚ್ಚಗಿರಬಹುದೆಂದು ಭಾವಿಸಿದ ನಾಗರಹಾವು ನಿಧಾನವಾಗಿ ಜಾಡಿಯೊಳಕ್ಕೆ ಸರಿದು ಹೋಯಿತು.

ತಕ್ಷಣ ಜಾಡಿಯ ಬಾಯಿಯನ್ನು ಬಿಗಿಯಾಗಿ ಮುಚ್ಚಿ,ಅದನ್ನು ಹೊರಹೊಯ್ದು  ನಾಗರಹಾವನ್ನು ಅಡವಿಯಲ್ಲಿ ಬಿಟ್ಟ ಅಜ್ಞಾತ  ವ್ಯಕ್ತಿಯ  ಜಾಣತನದಿಂದ ವೈಸ್ ರಾಯರ ಪ್ರಾಣವನ್ನು,ನಾಗರಹಾವಿನ ಪ್ರಾಣವನ್ನೂ ಉಳಿಸಿದ.

ವೈಸ್ ರಾಯರು ಅತನಿಗೆ ಹತ್ತು ರೂಪಾಯಿಯ  ಬೆಳ್ಳಿ ನಾಣ್ಯಗಳನ್ನು ಬಹುಮಾನವಾಗಿ ಕೊಟ್ಟರು.ಆತ ಬೆಳ್ಳಿ ನಾಣ್ಯಗಳನ್ನು ಕಣ್ಣಿಗೊತ್ತಿಕೊಂಡು ತೆಗೆದುಕೊಂಡು ಹೊರಟುಹೋದ.

ಮರುದಿನ ಮುಂಜಾನೆ ವೈಸ್ ರಾಯರು ಸಿಬ್ಬಂದಿಯವರು ಅದೇ ವ್ಯಕ್ತಿಯನ್ನು ಅವರ ಮುಂದೆ ಕೈಕೋಳ ತೊಡಿಸಿ ನಿಲ್ಲಿಸಿದರು. ಆತನನ್ನು ಗುರುತಿಸಿದ ವೈಸ್ ರಾಯರು ವಿಷಯವೇನೆಂದು ಸಿಬ್ಬಂದಿಯನ್ನು ಕೇಳಿದರು.ಅವರು  ಈತ ನಿನ್ನೆ ರಾತ್ರಿ ವೈಸ್ ರಾಯರ ಗುಡಾರದೊಳಕ್ಕೆ ಆಕ್ರಮ ಪ್ರವೇಶ ಮಾಡಿದ್ದಾನೆ.ಲೂಟಿ ಮತ್ತು ಕಳ್ಳತನ ಮಾಡುವುದರಲ್ಲಿದ್ದಾಗ ಸಿಕ್ಕಿ ಹಾಕಿ ಕೊಂಡಿದ್ದಾನೆಂದು ಅಪಾಧನೆ ಪಟ್ಟಿ ಸಲ್ಲಿಸಿದರು. ಎಲ್ಲವನ್ನು ಆಲಿಸಿದ ವೈಸ್ ರಾಯರು.ಆತನಿಗೆ ಹತ್ತು ರೂಪಾಯಿ ದಂಡ ವಿಧಿಸಿ ಕಳುಹಿಸಿದರು.ಆತ ಅದೇ ಬೆಳ್ಳಿ ನಾಣ್ಯವನ್ನು ದಂಡವಾಗಿ ಕಟ್ಟಿ ಬಿಡುಗಡೆ ಗೊಂಡು ಹೊರಟುಹೋದ.

ನಂತರ ನೆಡೆದ ವಿಷಯವನ್ನೆಲ್ಲ ತಿಳಿದುಕೊಂಡು ಯಾರೋ ಒಬ್ಬರು ವೈಸ್ ರಾಯರನ್ನು “ತಮ್ಮ ಪ್ರಾಣ ಉಳಿಸಿದ ಒಳ್ಳೆಯತನಕ್ಕಾಗಿ ಕಳ್ಳತನವನ್ನು ಮನ್ನಿಸ ಬಹುದಿತ್ತಲ್ಲವೇ ?” ಎಂದು ಕೇಳಿದರು.ವೈಸ್ ರಾಯರು  ಗಂಭೀರವದಾನರಾಗಿ “ಆತನ ಒಳ್ಳೆಯತನಕ್ಕೆ ನಿನ್ನೆಯೇ ಬಹುಮಾನ ಕೊಟ್ಟಿದ್ದೇನೆ.ಆದರೆ ಆತನ ಕಳ್ಳತನದ ಪ್ರಯತ್ನಕ್ಕಾಗಿ ಇಂದು ದಂಡ ವಿಧಿಸಿದ್ದೇನೆ” ಎಂದರು. ಆ ಕಳ್ಳನನ್ನು ಸಿಬ್ಬಂದಿವರ್ಗದವರು “ನೆನ್ನೆ ರಾತ್ರಿ ನೀನು ವೈಸ್ ರಾಯರ ಪ್ರಾಣ ಉಳಿಸಲು ಪ್ರಯತ್ನಿಸದೆ,ಕಳ್ಳತನ ಮಾಡಿಕೊಂಡು ಹೊರಟು ಹೋಗಿದ್ದರೆ ಸಿಕ್ಕಿ ಬೀಳುತ್ತಿರಲಿಲ್ಲ” ಎಂದಾಗ ಆತ “ನಾನು ವೃತ್ತಿಯಲ್ಲಿ ಕಳ್ಳನಿರಬಹುದು, ಆದರೆ ಪ್ರವೃತ್ತಿಯಲ್ಲಲ್ಲ.

ಮತ್ತೊಬ್ಬರು ಪ್ರಾಣಪಾಯದಲ್ಲಿದ್ದಾಗ ನನ್ನ ಭಾರತೀಯ ಹೃದಯ ಅಯ್ಯೋ ಎನ್ನದೆ ಇರುತ್ತದೆಯೇ ?” ಎಂದನಂತೆ. ನೀವೀಗ ಕಥೆ ಕೇಳಿದ್ದೀರಿ ! ನಿಮಗೇ ಏನನಿಸುತ್ತದೆ ? ನಿಮಗೊಂದು ಸಣ್ಣ ಪ್ರಶ್ನೆ !  ನೀವು ವೈಸ್ ರಾಯರ ಸ್ಥಾನದಲ್ಲೋ ಅಥವಾ ಕಳ್ಳನ ಸ್ಥಾನದಲ್ಲೊ ಇದ್ದಿದ್ದರೆ ಆಯಾ ಸಂದರ್ಭಗಳಲ್ಲಿ ಏನು ಮಾಡುತ್ತಿದ್ದಿರಿ ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top