fbpx
ಭವಿಷ್ಯ

8 ಜೂಲೈ : ನಿತ್ಯ ಭವಿಷ್ಯ ಮತ್ತೆ ಪಂಚಾಂಗ

ಶನಿವಾರ, ೦೮ ಜುಲೈ ೨೦೧೭
ಸೂರ್ಯೋದಯ : ೦೫:೩೩
ಸೂರ್ಯಾಸ್ತ : ೧೯:೧೮
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಆಷಾಢ
ಪಕ್ಷ : ಶುಕ್ಲ ಪಕ್ಷ
ತಿಥಿ : ಚತುರ್ದಶೀ
ನಕ್ಷತ್ರ : ಮೂಲ
ಯೋಗ : ಬ್ರಹ್ಮ
ಅಮೃತಕಾಲ : ೦೭:೦೨ – ೦೮:೪೯

ರಾಹು ಕಾಲ: ೦೯:೦೦ – ೧೦:೪೩
ಗುಳಿಕ ಕಾಲ: ೦೫:೩೩ – ೦೭:೧೭
ಯಮಗಂಡ: ೧೪:೦೯ – ೧೫:೫೨

ಮೇಷ (Mesha)


ವೃತ್ತಿರಂಗದಲ್ಲಿ ನಿಮ್ಮ ಅಭಿವೃದ್ಧಿಗೆ ಹಿತಶತ್ರುಗಳ ಬಾಧೆ ಬರುತ್ತದೆ. ನಿರುದ್ಯೋಗಿಗಳಿಗೆ ಬಂದ ಅವಕಾಶಗಳು ತಪ್ಪಿ ಹೋಗಬಹುದು. ಮಹಿಳೆಯರು ಮಾನಸಿಕ ಅಸ್ಥಿರತೆಗೆ ಒಳಗಾಗದಿರಿ.

ವೃಷಭ (Vrushabh)


ಗುರುಬಲದ ಪ್ರಭಾವದಿಂದ ಹಂತ ಹಂತವಾಗಿ ಅಭಿವೃದ್ಧಿ ಗೋಚರಕ್ಕೆ ಬರಲಿದೆ. ವೃತ್ತಿರಂಗದಲ್ಲಿ ಮುನ್ನಡೆಯಲಿದ್ದೀರಿ. ಸಣ್ಣ ಪುಟ್ಟ ಸಮಸ್ಯೆಗಳು ಹಂತ ಹಂತವಾಗಿ ನಿವಾರಣೆಯಾಗಲಿವೆ.

ಮಿಥುನ (Mithuna)


ಆರ್ಥಿಕವಾಗಿ ಹೂಡಿಕೆಗಳು ವ್ಯಾಪಾರ, ವ್ಯವಹಾರಗಳಲ್ಲಿ ಧನವ್ಯಯ ವಾದರೂ ಲಾಭ ಸಿಗಲಿದೆ. ನಿವೇಶನ ಖರೀದಿಗೆ ಸಾಧ್ಯವಾದೀತು. ಮಿತ್ರರ ಸಮಾಗಮ ಸಂತಸ ತರಲಿದೆ. ದಿನಾಂತ್ಯ ಶುಭ.

ಕರ್ಕ (Karka)


ಪ್ರೇಮಿಗಳ ಪ್ರೇಮ ಸಲ್ಲಾಪಕ್ಕೆ ಅಡೆತಡೆಗಳು ತೋರಿ ಬರಲಿವೆ. ಹತ್ತು ಹಲವು ಜಂಜಾಟಗಳು, ಊಟ, ನಿದ್ರೆಗೂ ಸಮಯ ಕೊಡಲಾರದು. ಮೇಲಧಿಕಾರಿಗಳಿಗೆ ಸಮಯಾವೆಧಾನ ಕಡಿಮೆ ಆಗಲಿದೆ.

ಸಿಂಹ (Simha)


ಆರ್ಥಿಕವಾಗಿ ತುಸು ಚೇತರಿಕೆಯ ದಿನಗಳಿವು. ಹಿರಿಯರಿಗೆ ಯತ್ರಾದಿ ಪುಣ್ಯಕ್ಷೇತ್ರದ ದರ್ಶನದಿಂದ ಶಾಂತಿ, ಸಮಾಧಾನ ಸಿಗಲಿದೆ. ನೂತನ ವಧುವರರಿಗೆ ವಿರಹಯೋಗ ವಿರುವುದು.

ಕನ್ಯಾರಾಶಿ (Kanya)


ಸಾಕಷ್ಟು ಧನವ್ಯಯವಾದರೂ ಕಾರ್ಯಾನುಕೂಲವಾಗಲಿದೆ. ಅವಿವಾಹಿತರ ವಿವಾಹ ಯೋಗ ತಪ್ಪಿ ಹೋಗಲಿದೆ. ಹಿರಿಯರ ಅಸಹಕಾರದಿಂದ ಸಾಂಸಾರಿಕವಾಗಿ ನೆಮ್ಮದಿ ಸಿಗಲಾರದು.

ತುಲಾ (Tula)


ಉನ್ನತ ವ್ಯಾಸಂಗದ ಯೋಗ ವಿದ್ಯಾರ್ಥಿಗಳು ಪಡೆದುಕೊಂಡಾರು. ಕಾರ್ಯ ಒತ್ತಡಗಳು ಅನಾರೋಗ್ಯಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸಿರಿ. ಧನಾಗಮನವಿದ್ದರೂ ಅಧಿಕ ಖರ್ಚುವೆಚ್ಚ ತೋರಿ ಬಂದೀತು.

ವೃಶ್ಚಿಕ (Vrushchika)


ನಿರುದ್ಯೋಗಿಗಳಿಗೆ ಆಕರ್ಷಕ ವಾದ ದುಡಿಮೆಗೆ ಅವಕಾಶ ಒದಗಿ ಬಂದೀತು. ಧಾರ್ಮಿಕ ಕ್ರಿಯೆಗಾಗಿ ಹೋಮ, ಹವನ ಧರ್ಮಕಾರ್ಯಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕಾಗಿ ಪ್ರಯಾಣವಿದೆ.

ಧನು ರಾಶಿ (Dhanu)


ಛಲ ತೊಟ್ಟು ಪ್ರಯತ್ನಬಲ ದಿಂದ ಮುಂದುವರಿಯಿರಿ. ಕಾರ್ಯಸಾಧ ಯಾಗಲಿದೆ. ಲಕ್ಷ್ಮೀ ಕಟಾಕ್ಷವಿಲ್ಲದಿದ್ದರೂ ಧನಾಗಮನಕ್ಕೆ ತೊಂದರೆ ಇರದು. ಆರೋಗ್ಯ ಸ್ಥಿತಿಯಲ್ಲಿ ಜಾಗ್ರತೆ ವಹಿಸಿರಿ.

ಮಕರ (Makara)


ಔದ್ಯೋಗಿಕ ಮಾಲಿಕರಿಗೆ ಸೇವಕ ವರ್ಗದವರಿಂದ ಅಸಮಾಧಾನದ ವಾತಾವರಣ. ಅನಾವಶ್ಯಕವಾಗಿ ಅಪವಾದ ಭೀತಿ ತಂದೀತು. ರಾಜಕೀಯದ ಆಟ ರಾಜಕೀಯ ವರ್ಗಕ್ಕೆ ಆಗಾಗ ಕಾಡಲಿದೆ.

ಕುಂಭರಾಶಿ (Kumbha)


ದಶಮದ ಶನಿ ಧನ ಚಿಂತೆಯ ಸೂಚಕವಾದೀತು. ರಾಶಿ ಸ್ಥಿತ ಕೇತು ರಾಹುಗಳ ಪ್ರತಿಕೂಲತೆ ಆರೋಗ್ಯ ಭಾಗ್ಯಕ್ಕೆ ಹಾನಿ ತಂದೀತು. ಜಾಗ್ರತೆ ವಹಿಸಿರಿ. ಬೇಸಾಯಗಾರರಿಗೆ ಸಂದಿಗತೆ.

ಮೀನರಾಶಿ (Meena)


ಯುವಕರಿಗೆ ಪ್ರೇಮ ವಿವಾಹದ ಯೋಗವಿದೆ. ಕೃಷಿ ಬೇಸಾಯ ಕಾರ್ಯವು ಸರಾಗವಾಗಿ ನಡೆಯಲಿದೆ. ಸರಕಾರಿ ವರ್ಗಕ್ಕೆ ಮುಂಭಡ್ತಿ ಯೋಗವು ಸಂತಸ ತಂದು ಕೊಡಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top