fbpx
ದೇವರು

ಸಾಯಿಬಾಬಾ ರವರ ಬಗ್ಗೆ ನಿಮಗೆಷ್ಟು ಗೊತ್ತು ? ಅವರ 20 ವಿಷಯಗಳು ತಿಳ್ಕೊಳ್ಳೆಬೇಕು..

ಸಾಯಿಬಾಬಾ ರವರ ಬಗ್ಗೆ ನಿಮಗೆಷ್ಟು ಗೊತ್ತು ? ಅವರ ಅಶ್ವಾಸನೆಗಳು ನಿಮಗೆ ಗೊತ್ತೇ ?

ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸಾಯೀರಾಮ.


ಶ್ರೀ ಸಾಯಿಬಾಬಾ ಶ್ರೀ ದತ್ತಾತ್ರೆಯ ದೇವರ ಅವತಾರ ಎಂಬ ವಿಷಯ ಸರ್ವವಿದಿತ.

ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಶಿರ್ಡಿಯ ಶ್ರೀ ಸಾಯಿಬಾಬಾ ಇಬ್ಬರೂ ಅವತಾರ ಪುರುಷರು ,ಸರ್ವಧರ್ಮ ಸಮನ್ವಯಾಚಾರ್ಯರು ಎಂದು ಪ್ರಸಿದ್ಧರಾಗಿದ್ದಾರೆ.


ಹುಬ್ಬಳ್ಳಿಯ ನೃಪತುಂಗ ಬೆಟ್ಟದಡಿಯ ಸೊಬಗಿನ ತಾಣದಲ್ಲಿ ದಕ್ಷಿಣ್ಣೋತ್ತರ ಸಮಿಶ್ರ ಶಿಲ್ಪ ವಿನ್ಯಾಸದಲ್ಲಿ ನಿರ್ಮಿತವಾದ ಭವ್ಯ ಮಂದಿರದಲ್ಲಿ ಶ್ರೀ ಬಾಬಾರವರ ಅಮೃತ ಶಿಲೆಯ ಸುಂದರ ವಿಗ್ರಹವಿದೆ.

ಶ್ರೀ ಸಾಯಿ ಕಥಾಮೃತ

*  ದಿವ್ಯವಾದ ನನ್ನ ಈ ಜನ್ಮಕರ್ಮಗಳನ್ನು ವಾಸ್ತವವಾಗಿ ತಿಳಿದವನು ದೇಹವನ್ನು ಬಿಟ್ಟನಂತರ ಪುನಃ ಹುಟ್ಟುವುದಿಲ್ಲ. ಅವನು ನನ್ನನ್ನು ಸೇರುತ್ತಾನೆ.

*  “ಪ್ರಾಪಂಚಿಕ ಲಾಭಕ್ಕಾಗಿ ನನ್ನ ಕಡೆಗೆ ಬರುವವರು ಅವುಗಳನ್ನು ಪಡೆದ ಮೇಲೆ ಆಧ್ಯಾತ್ಮಿಕ ಬಲವನ್ನು ಬೆಳೆಸಿ ಕೊಳ್ಳುವರು”

*  “ ಶಿರ್ಡಿ ಸತ್ಯ ಸಾಯಿಬಾಬಾ ಹೇಳಿದ ಮಾತು,”ಆ ನಾಯಿಗೆ ತಿನ್ನಿಸುವುದು ನನಗೆ ತಿನ್ನಿಸಿದಂತೆಯೇ, ಯಾರು ಹಸಿದವರಿಗೆ ಆಹಾರ ಹಾಕುತ್ತಾರೋ ಅವರು ಅದನ್ನು ನನಗೆ ಹಾಕಿದಂತೆಯೇ, ಇದು ಸತ್ಯವೆಂದು ತಿಳಿ”

*  ನೀನು ಊಟಕ್ಕೆ ಕುಳಿತುಕೊಳ್ಳುವ ಮೊದಲು ಹಸಿದ ನಾಯಿಯನ್ನು ಕಂಡು ಅದಕ್ಕೆ ರೊಟ್ಟಿ ತುಂಡು ಹಾಕಿದೆ. ಆ ನಾಯಿ ಮತ್ತು ನಾನು ಒಂದೇ. ಹಾಗೆಯೇ ಬೆಕ್ಕು,ಹಂದಿ,ಆಕಳು, ಕುದುರೆ ಗಳಲ್ಲಿ ನಾನೇ ವಾಸಿಸುತ್ತಿದ್ದೇನೆ. ಆ ರೂಪಗಳಲ್ಲಿ ನನ್ನನ್ನು ಕಾಣುವವನು ನನ್ನ ಪ್ರಿಯ ಭಕ್ತನು.

*  ಅಷ್ಟ ಸಿದ್ದಿಗಳು ಅವರ ಆಜ್ಞಾಪರಿಪಾಲನೆಗಾಗಿ ಹಾತೊರೆಯುತ್ತಿರುವಾಗ ಯಾವುದು ತಾನೇ ಅಸಾಧ್ಯ?

*  ನನ್ನ ಭಕ್ತನು ಈ ಭೂಮಿಯ ಮೇಲೆ ಸಾವಿರಾರು ಮೈಲು ಆಚೆಗೆ ಇರಲಿ, ಗುಬ್ಬಿಯೂ ತನ್ನ ಮರಿಗಳನ್ನು ತೆಗೆದುಕೊಂಡು ಬರುವಂತೆ ನಾನು ನನ್ನ ಭಕ್ತರನ್ನು ಕಾಲಿಗೆ ಹಗ್ಗ ಕಟ್ಟಿ ಎಳೆದು ತರುವೆನು ಎಂದು ಶ್ರೀ ಶಿರ್ಡಿ ಸಾಯಿಬಾಬಾ ಹೇಳುತ್ತಿದ್ದರು.

*  ದೇವರೂ ಸರವಂತರ್ಯಾಮಿ ದೇವರು ಎಲ್ಲರ ರಕ್ಷಕ.

*  ಹಾವೇ ಆಗಲಿ,ಚೇಳೆ ಆಗಲಿ ಎಲ್ಲಾ ಪ್ರಾಣಿಗಳಲ್ಲಿಯೂ ಪರಮಾತ್ಮನು ಇರುತ್ತಾನೆ.

*  ಒಂದು ಪಟ್ಟು ಕೊಟ್ಟು ಹತ್ತು ಪಟ್ಟು ಪಡೆಯಿರಿ ಎಂದು ಸಾಯಿಬಾಬಾ ಹೇಳುತ್ತಿದ್ದರು.

*  ನೀವೂ ನನ್ನ ಮಹಿಮೆಯನ್ನು, ಪ್ರಭೆಯನ್ನು ಕಾಣಬಯಸಿದರೆ ನಿಮ್ಮ ಅಹಂಕಾರವನ್ನು ತ್ಯಜಿಸಿರಿ.ಎಲ್ಲಾ ಜೀವ-ಜಂತುಗಳನ್ನು ಪ್ರೀತಿಸಿರಿ,ಯಾರೊಡನೆಯೂ ಜಗಳವಾಡಬೇಡಿ, ದುಷ್ಟಮಾತುಗಳಿಗೆ ಪ್ರತಿಕ್ರಿಯೆ ಕೊಡಬೇಡಿ, ಯಾರನ್ನೂ ನಿಂದಿಸಬೇಡಿ.

*  ನಿಮ್ಮ ವಿರುದ್ದ ಯಾರಾದರೂ ಮಾತನಾಡಿದರೆ ಉದ್ವಿಗ್ನರಾಗದೆ ಸುಮ್ಮನಿರಿ, ಅವು ಅವನನ್ನೆ ಬಾಧಿಸುತ್ತವೆ,”ನಿಮ್ಮನಲ್ಲ, ಪರರನ್ನು ನೋಯಿಸುವುದು ಪಾಪಕರ”

ಶ್ರೀ ಬಾಬಾರ ಅಶ್ವಾಸನೆಗಳು:

1.ಶಿರ್ಡಿಯಲ್ಲಿ ಕಾಲಿಡುವವರ ಕಷ್ಟಗಳು ನಿವಾರಣೆಯಾಗುತ್ತವೆ.

2.ದೀನ-ದುಃಖಿತರು ದ್ವಾರಕಾಮಯಿಯ ಮೆಟ್ಟಿಲುಗಳನ್ನು ಏರಲು ಸುಖ-ಸಂತೋಷಗಳಲ್ಲಿ ತೇಲಾಡುವರು.

3.ನಶ್ವರವಾದ ನನ್ನ ಶರೀರವನ್ನು ಬಿಟ್ಟ ಮೇಲು ನಾನು ಕಾರ್ಯಾಸಕ್ತ ಮತ್ತು ಬಲವಂತ ನಾಗಿರುತೇನೆ.

4.ನನ್ನ ಸಾಮಾಧಿಯು ನನ್ನ ಭಕ್ತರಿಗೆ ಅನುಗ್ರಹ ಮಾಡಿ ಅವರ ಅವಶ್ಯಕತೆಗಳನ್ನು ಪೂರೈಸುತ್ತದೆ.

5.ನಾನು ಸಮಾಧಿಯಿಂದಲೇ ನನ್ನ ಕಲ್ಯಾಣವನ್ನು ಸಮರ್ಥವಾಗಿ ಸಾಧಿಸುತ್ತೇನೆ.

6.ನಾನು ಸಮಾಧಿಯಿಂದಲೇ ಮಾತನಾಡುತ್ತೇನೆ.

7.ನನಗೆ ಶರನಾಗತರಾಗುವವರಿಗೆ, ನನ್ನ ಆಶ್ರಯವನ್ನು ಬಯಸುವವರಿಗೆ ಮಾರ್ಗದರ್ಶನ ಮಾಡಿ, ಅವರಿಗೆ ಸಹಾಯ ಮಾಡುತ್ತೇನೆ.

8.ನೀವೂ ನನ್ನ ಕಡೆಗೆ ನೋಡಿದರೆ ನಾನು ನಿಮ್ಮ ಕಡೆಗೆ ನೋಡುತ್ತೇನೆ.

9.ನಿಮ್ಮ ಭಾರವನ್ನು ನನ್ನ ಮೇಲೆ ಹೊರಿಸಿದರೆ ನಾನು ನಿಶ್ಚಿತವಾಗಿ ಹೊರಬಲ್ಲೆ.

10.ನೀವು ನನ್ನ ಉಪದೇಶ ಮತ್ತು ಸಹಾಯವನ್ನೂ ಬಯಸಿದರೆ ಆ ಕ್ಷಣದಲ್ಲಿ ಅವು ದೊರೆಯುವುವು.

11.ನನ್ನ ಭಕ್ತರ ಮನೆಯಲ್ಲಿ ಯಾವುದಕ್ಕೂ ಕೊರತೆಯಾಗದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top