ಗುರು ಪೌರ್ಣಮಿ- ಆಧ್ಯಾತ್ಮಿಕವಾಗಿ ಇದು ಒಂದು ದೊಡ್ಡ ಹಬ್ಬ.
ಇದೇ ಆಷಾಢ ಮಾಸದ ಜುಲೈ ತಿಂಗಳಿನಲ್ಲಿ ಬರುವ ಗುರು ಪೌರ್ಣಮಿಯು ಇದೇ ತಿಂಗಳು,9 ನೇ ತಾರೀಖು ,ಭಾನುವಾರ, ಶುಕ್ಲ ಪಕ್ಷ, ಪೂರ್ವಾಷಾಡ ನಕ್ಷತ್ರದ ದಿನದಂದು ಬರಲಿದ್ದು.ಈ ದಿನವನ್ನು ನಮ್ಮ ಭಾರತದಲ್ಲಿ ಒಂದು ದೊಡ್ಡ ಹಬ್ಬವಾಗಿಯೇ ಆಚರಿಸಲಾಗುತ್ತದೆ. ಯಾಕೆ ? ಏನಿದರ ಮಹತ್ವ ? ಎಂದು ತಿಳಿಯೋಣ ಬನ್ನಿ…
1.ಗುರುಗಳ ಪ್ರಾಮುಖ್ಯತೆ ಅಥವಾ ಮಹತ್ವ ಏನು ?
ಹಿಂದೂ ಧರ್ಮದಲ್ಲಿ ಗುರುಗಳಿಗೆ ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ನೀಡುತ್ತಾರೆ.ಗುರುಗಳನ್ನು ಆಗಾಗ್ಗೆ ದೇವರಿಗೆ ಸಮಾನರು ಎಂದು ಹೋಲಿಸಿ , ಉತ್ತಮ ವ್ಯಕ್ತಿತ್ವ ಉಳ್ಳವರು ಎಂದು ಕೂಡ ಹೇಳಲಾಗುತ್ತದೆ.ಪೂರ್ಣ ಚಂದ್ರನು ಸೂರ್ಯನ ಬೆಳಕಿನಿಂದ ಪ್ರತಿಪಲಿಸುತ್ತಾ ಹೇಗೆ ಪೂರ್ಣಮಿಯ ದಿನದಂದು ಪೂರ್ಣ ಬೆಳಕಿನಿಂದ ಕಂಗೊಳಿಸುತ್ತಾನೋ, ಹಾಗೆ ಎಲ್ಲಾ ಶಿಷ್ಯರು ತಮ್ಮ ಗುರುವಿನಿಂದ ಶಿಕ್ಷಣ ಮತ್ತು ವಿದ್ಯೆಯನ್ನು ಪಡೆದು ಚಂದ್ರನಂತೆ ಬೆಳಕಿನಿಂದ ಬೆರಗು ಗೊಳಿಸುತ್ತಾರೆ.
2.ಗುರು ಪೌರ್ಣಮಿ ಎಂದರೇನು ?
ಪೂರ್ಣ ಚಂದ್ರನು ಇರುವ ದಿನವನ್ನು ಹಿಂದೂ ತಿಂಗಳಿನ ಆಷಾಢ ಮಾಸದಲ್ಲಿ (ಜುಲೈ-ಆಗಸ್ಟ್) ಮೊದಲ ಬಾರಿಗೆ ಬರುವ ಪೌರ್ಣಮಿಯನ್ನು ಗುರು ಪೌರ್ಣಮಿ ಎಂದು ಕರೆಯಲಾಗುತ್ತದೆ.ಇದನ್ನು ಮಂಗಳಕರ ದಿನವೆಂದು ಸಹ ಆಚರಿಸಲಾಗುತ್ತದೆ.ಈ ದಿನವನ್ನು ಪವಿತ್ರ ಮಹಾನ ಮಹರ್ಷಿ ವೇದವ್ಯಾಸರ ನೆನಪಿಗಾಗಿಯೇ ಮೀಸಲಿಡಲಾಗಿದೆ.ಎಲ್ಲಾ ಹಿಂದೂ ಧರ್ಮದವರು ಈ ಪ್ರಾಚೀನ ಸಂತರಿಗೆ ಋಣಿಯಾಗಿದ್ದಾರೆ. ಇವರು ನಾಲ್ಕು ವೇದಗಳ ಸಂಪಾದಕರು ಮತ್ತು 18 ಪುರಾಣಗಳನ್ನು ಸಹ ಬರೆದಿದ್ದಾರೆ ಅವು ಮಹಾಭಾರತ, ಶ್ರೀಮದ್ಭಾಗವತಗೀತ ಮತ್ತು ಇನ್ನೂ ಅನೇಕ ಒಟ್ಟು 16 ಪುರಾಣಗಳಿವೆ. ವ್ಯಾಸರು ದತ್ತಾತ್ರೇಯ ಗುರುಗಳಿಗೂ ಸಹ ವಿದ್ಯೆಯನ್ನು ಕಲಿಸಿದ್ದಾರೆ. ಆದ್ದರಿಂದ ಇವರನ್ನು ಗುರಗಳ ಗುರು ಎಂದು ಹೇಳುತ್ತಾರೆ.
3.ಗುರು ಪೌರ್ಣಮಿಯ ಮಹತ್ವ.
ಈ ದಿನ ಎಲ್ಲಾ ಅಧ್ಯಾತ್ಮಿಕ ಆಕಾಂಕ್ಷಿಗಳು ಮತ್ತು ಭಕ್ತರು ತಮ್ಮ ದೈವಿಕ ಮಹತ್ವವುಳ್ಳ, ಗೌರವಾನ್ವಿತ ವ್ಯಾಸರನ್ನು ಪೂಜಿಸುತ್ತಾರೆ.ಎಲ್ಲಾ ಶಿಷ್ಯರು ಇವರ ಪೂಜೆಯನ್ನು ಮಾಡುತ್ತಾರೆ.ಅವರವರ ಶ್ರದ್ಧೆ ,ಭಕ್ತಿಯಿಂದ ಕ್ರಮಬದ್ಧವಾಗಿ ಆಧ್ಯಾತ್ಮಿಕವಾಗಿ ಗುರು ದೇವರನ್ನು ಪೂಜಿಸುತ್ತಾರೆ. ಈ ದಿನವೂ ಕೃಷಿಕರಿಗೆ,ರೈತರಿಗೆ,ವ್ಯವಸಾಯ ಮಾಡುವವರಿಗೆ ಸುದೀರ್ಘವಾದ ಮತ್ತು ಮಹತ್ವದ ದಿನವಾಗಿದ್ದು ಅಧಿಕ ಮಳೆಗೋಸ್ಕರ ಪ್ರಾರ್ಥನೆ ಮಾಡುತ್ತಾರೆ.ಆಧ್ಯಾತ್ಮಿಕ ಅನ್ವೇಷಕರು ಸಂಪ್ರದಾಯವಾಗಿ ಈ ದಿನದಂದು ತಮ್ಮ ಆಧ್ಯಾತ್ಮಿಕ ಸಾಧನೆಯನ್ನು ತೀವ್ರಗೊಳಿಸಲು ಪ್ರಾರಂಭಿಸುತ್ತಾರೆ.
4 .ಚತುರ್ಮಾಸದ ಕಾಲ.
ಚತುರ್ಮಾಸ ಅಂದರೆ 4 ತಿಂಗಳುಗಳು. ಇದು ಈ ಗುರು ಪೌರ್ಣಮಿಯ ದಿನದಿಂದ ಪ್ರಾರಂಭವಾಗುತ್ತದೆ.ಹಿಂದಿನ ಕಾಲದಲ್ಲಿ ಆಧ್ಯಾತ್ಮಿಕ ಗುರುಗಳು ಮತ್ತು ಶಿಷ್ಯರು ತಿರುಗಾಡುತ್ತಾ ಒಂದು ಸ್ಥಳದಲ್ಲಿ ಜಾಗ ಮಾಡಿಕೊಂಡು ನೆಲೆಸುತ್ತಿದ್ದರು. ಅಧ್ಯಯನ ಮತ್ತು ಪ್ರವಚನವನ್ನು ಮಾಡುತ್ತಾ, ಬ್ರಹ್ಮ ಸೂತ್ರದ ಪ್ರಕಾರ ವ್ಯಾಸರಿಂದ ಸಂಯೋಜನೆ ಗೊಂಡಿರುವ ವೇದಾಂತಗಳ ಚರ್ಚೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು.
5.ಸ್ವಾಮಿ ಶಿವಾನಂದರ ಮಾತುಗಳು.
ದಂಥ ಕಥೆಗಳ ಪ್ರಕಾರ ಸ್ವಾಮಿ ಶಿವಾನಂದರು ಕೇಳುತ್ತಾರೆ “ನಿಮಗೆ ಈಗ ತಿಳಿಯಿತೇ, ಅರಿವಾಯಿತೇ . ಈ ದಿನದ ಪಾವಿತ್ರ್ಯತೆ,ಸರ್ವೋಚ್ಚ ಪ್ರಾಮುಖ್ಯತೆ , ಮಹತ್ವ. ಮನುಷ್ಯನ ವಿಕಸನದಲ್ಲಿ ಗುರುಗಳ ಪಾತ್ರ ಏನೆಂದು ? ಆದ್ದರಿಂದಲೇ ಭಾರತವೂ ಕಾರಣ ಇಲ್ಲದೇನೆ ಯಾವುದನ್ನು ಹಬ್ಬ, ಹರಿದಿನವನ್ನಾಗಿ ಆಚರಿಸುವುದಿಲ್ಲ . ವರ್ಷ ಕಳೆದು ವರ್ಷ ಬಂದರೂ, ವಯಸ್ಸು ಹೋದರು,ಕಾಲ ಉರುಳಿ ಹೋದರು, ಮತ್ತೆ ಮತ್ತೆ ಗುರುಗಳ ಬಗ್ಗೆ ಪುನಃ ಪ್ರಾಚೀನ ಪರಿಕಲ್ಪನೆಯನ್ನು ನೆನಪಿಸುತ್ತದೆ, ಅದನ್ನು ಗೌರವಿಸುತ್ತದೆ”.
6.ಗುರು ಪೌರ್ಣಮಿಯ ದಿನದಂದು ಪಠಿಸಬೇಕಾಗಿರುವ ಮಂತ್ರ.
ಗುರು ಬ್ರಹ್ಮ ,ಗುರು ವಿಷ್ಣು, ಗುರು ದೇವೋ ಮಹೇಶ್ವರಃ,
ಗುರು ಸಾಕ್ಷಾತ್ ಪರಬ್ರಹ್ಮ,ತಸ್ಮೈ ಶ್ರೀ ಗುರುವೇ ನಮಃ.
ಅರ್ಥ :-ಗುರುಗಳೇ ಬ್ರಹ್ಮ, ವಿಷ್ಣು, ದೇವರು ಮತ್ತು ಶಿವ, ಗುರುಗಳೇ ಸಾಕ್ಷಾತ್ ಪರಬ್ರಹ್ಮನ ಅವತಾರವಾಗಿದ್ದು ಅಂತಹ ಗುರುಗಳಿಗೆ ನಮ್ಮ ನಮಸ್ಕಾರಗಳು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
