ಅಮೆರಿಕಾದ ಕಡುಬಡತನದ ಕುಟುಂಬದಲ್ಲಿ ಒಬ್ಬ ಕಪ್ಪು ಹುಡುಗಿಯಾಗಿ ಹುಟ್ಟಿ,ತನ್ನ ಒಂಭತ್ತನೇ ವಯಸ್ಸಿನಲ್ಲಿ ಅತ್ಯಾಚಾರಕ್ಕೊಳಗಾಗಿ,ತನ್ನ 9ನೇ ವಯಸ್ಸಿನಲ್ಲಿ ತನ್ನ ಸಂಬಂಧಿಗಳಿಂದಲೇ ಲೈಂಗಿಕ ಕಿರುಕುಳಕ್ಕೊಳಗಾಗಿ, 14ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿ, ಮತ್ತು ತನ್ನ ತಾಯಿ ಮತ್ತು ಸಹೋದರರನ್ನ ಕಳೆದುಕೊಂಡು ಜೀವನದಲ್ಲಿ ಸಾಧನೆ ಮಾಡಿದ ಈ ಹೆಣ್ಣು ಮಗಳ ಕಥೆ ವಿಚಿತ್ರ ಎನಿಸಿದರೂ ಇದು ಸತ್ಯವಾದದ್ದು.
ಇದು ಪ್ರಪಂಚ ಟಿವಿ ಶೋಗಳ ಅನಭಿಷಕ್ತ ರಾಣಿಯಾಗಿ ಮೆರೆಯುತ್ತಿರುವ ಅಮೆರಿಕಾದ ಓಫ್ರಾ ವಿನ್ ಫ್ರೇ ಅವರ ಜೀವನದ ಕತೆ.ಓಪ್ರಾ ಬಾಲ್ಯ ನರಕವಾಗಿತ್ತು. ಈಕೆ ಹುಟ್ಟಿದ್ದು ಅಮೆರಿಕಾದ ಮಿಸ್ಸಿಸ್ಸಿಪ್ಪಿಯಲ್ಲಿ. ಇವಳು ಹುಟ್ಟಿದಾಗ ಅವಳ ತಾಯಿಗೆ ಗಂಡ ಕೈ ಕೊಟ್ಟು ಓಡಿ ಹೋಗಿದ್ದ. ಓಪ್ರಾ ತನ್ನ 9 ನೇ ವಯಸ್ಸಿನಲ್ಲೇ ಅತ್ಯಾಚಾರಕ್ಕೊಳಗಾಗಿದ್ದಳು.ಪ್ರೌಢಾವಸ್ಥೆಗೆ ಬರುವಾಗಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಪರಿಣಾಮ 14 ತುಂಬುವಾಗಲೇ ಮಗು ವನ್ನು ಹೆರುವ ಸ್ಥಿತಿ ಅವಳಿಗೆ ಬಂದಿತು.
ಈ ಎಲ್ಲಾ ಸಮಸ್ಯೆಗಳಿಂದ ಹೊರ ಬರಲು ಓಫ್ರಾ ಹೊಸ ಕೆಲಸಗಳನ್ನು ಮಾಡಲು ಶುರು ಮಾಡಿದಳು ಆದರೆ ಎಲ್ಲ ಕೆಲಸದಲ್ಲ್ಲೂ ವಿಫಲತೆಯನ್ನು ಅನುಭವಿಸುತ್ತಿದ್ದಳು.ಕೊನೆಗೆ ಓಪ್ರಾ ಟಿವಿ ಚಾನಲ್ ಸೇರಿದಳು. ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದಾಗ ಅವಳ ವಯಸ್ಸು 19. ಪತ್ರಿಕೋದ್ಯಮದಲ್ಲಿ ಹೊಸ ಸಂಬಂಧವೊಂದು ಚಿಗುರಿತು ಕೊನೆಗೆ ಅವನು ಸಹ ಇವಳಿಗೆ ಕೈಕೋಟಾಗ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಪಟ್ಟಳು.
ಡ್ರಗ್ಸ್ ಸೇವನೆ ಮತ್ತು ಅನೈತಿಕ ಸಂಬಂಧಗಳು ಅವಳ ಬದುಕನ್ನುಹೀನಾಯ ಸ್ಥಿತಿಗೆ ತಂದಿದ್ದವು..ಆದರೂ ಅವಳಲ್ಲಿದ್ದ ಟ್ಯಾಲೆಂಟ್,ಟಿವಿ ನಿರೂಪಣೆಯ ಕಲೆ ಆಕೆಗೆ ಒಲಿದು ಬಂದಿತ್ತು.ಕೆಟ್ಟ ಚಟಗಳಿಂದ ತುಂಬಾ ದಪ್ಪವಾಗಿದ್ದ ಅವಳ ಆ ಕೆಲಸಕ್ಕೂ ಯೋಗ್ಯವಾಗಿರಲಿಲ್ಲ ಹೀಗಿದ್ದೂ 1985ರಲ್ಲಿ ಈಕೆಯ ‘ಚಿಕಾಗೋ ಟಾಕ್ ಶೋ’ ಆರಂಭವಾದಾಗ ಜನ ಹುಚ್ಚೆದ್ದು ನೋಡಲು ಆರಂಭಿಸಿದರು. ಯಾವ ಮಟ್ಟಿಗೆ ಅಂದರೆ ಇವತ್ತಿಗೂ ಟಾಕ್ ಶೋ ವಿಭಾಗದಲ್ಲಿ ಅತೀ ಹೆಚ್ಚಿನ TRP ದಾಖಲೆ ಇರುವುದು ಈಕೆಯ ಹೆಸರಿನಲ್ಲೇ.
ಹೀಗೆ ಒಂದೊಂದೇ ಹೆಜ್ಜೆಯನ್ನ ಇಡುತ್ತ 2008ರ ಹೊತ್ತಿಗೆ ವಿಶ್ವದಲ್ಲಿ ಯಾವ ಟಿವಿ ನಿರೂಪಕರೂ ಪಡೆಯದಷ್ಟು ಸಂಬಾವನೆ ಪಡೆಯುತ್ತಿದ್ದಳು.ನಂತರ ತನ್ನದೇ ಓಪ್ರಾ ವಿನ್’ಫ್ರೇ ನೆಟ್’ವರ್ಕ್ ಹೆಸರಿನಲ್ಲಿ ಚಾನಲ್ ಕಟ್ಟಿದಳು. ಓಪ್ರಾ ಡಾಟ್ ಕಾಂ, ಓಪ್ರಾ ರೇಡಿಯೋ ಹೀಗೆ ಒಂದೊಂದೇ ಕಂಪೆನಿ ಆರಂಭಿಸಿದಳು. ಇವತ್ತು ವಿಶ್ವದ ಶ್ರೀಮಂತ ಪತ್ರಕರ್ತರ ಪಟ್ಟಿಯಲ್ಲಿ ಇವಳಿಗೂ ಒಂದು ಸ್ಥಾನ ಮೀಸಲಿದೆ. ಬಡತನಲ್ಲೇ ಬೆಳೆದು ಬಂದ ಓಪ್ರಾಳ ಇವತ್ತಿನ ಆಸ್ತಿ ಸುಮಾರು 20 ಸಾವಿರ ಕೋಟಿ. ಹೀಗೆ ಅವಳ ಜ್ಞಾನದ ಮುಂದೆ ಅವಳ ಎಲ್ಲ ಕೆಟ್ಟ ವಿಷಯಗಳು ಮರೆಯಾದವು.
ಪ್ರತಿಭೆಯೊಂದಿದ್ದರೆ ಸಾಕು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಉದಾಹರಣೆಯಾಗಿ ನಿಲ್ಲುವ ಹೆಸರು ಓಪ್ರಾ ವಿನ್’ಫ್ರೇ. ಮಾಧ್ಯಮಗಳಲ್ಲಿ ಭವಿಷ್ಯವಿಲ್ಲ, ಎಷ್ಟು ಮಾಡಿದರೂ ಅಷ್ಟೇ ಎಂದು ಆಸಕ್ತಿ ಕಳೆದುಕೊಳ್ಳುವವರಿಗೆ ಓಪ್ರಾ ವಿನ್’ಫ್ರೇ ಒಬ್ಬ ಸ್ಪೂರ್ತಿದಾಯಕ ವ್ಯಕ್ತಿಯಾಗಿ ನಿಲ್ಲುತ್ತಾಳೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
