ವಾರದಲ್ಲಿನ ಈ ಏಳು ದಿನಗಳು ಈ ಏಳು ರಹಸ್ಯಗಳನ್ನು ಪಾಲಿಸಿದರೆ ಕೀರ್ತಿ, ಯಶಸ್ಸು,ಸಂಪತ್ತು ನಿಮ್ಮದಾಗುತ್ತದೆ.
ಜೀವನದಲ್ಲಿ ಉನ್ನತ ಸ್ಥಾನ ಪಡೆಯಬೇಕು ಕೀರ್ತಿ, ಸಂಪತ್ತು ಸಮೃದ್ಧಿಯಾಗಿ ನೆಮ್ಮದಿಯ ಬದುಕು ನಮ್ಮದಾಗಬೇಕು ಎಂಬುದು ಎಲ್ಲರ ಮನಸ್ಸಿನ ಆಸೆ. ಯಾವುದೇ ಸಮಸ್ಯೆಗಳು, ಕಷ್ಟ,ಕಾರ್ಪಣ್ಯಗಳು ಅಡ್ಡಿ ಆತಂಕಗಳು ಬರದೇ ಸುಲಲಿತವಾಗಿ ಸರಳವಾಗಿ ಭವಿಷ್ಯ ಜೀವನ ಸಾಗಬೇಕು ಎಂಬುದು ಪ್ರತಿಯೊಬ್ಬರೂ ಕೋರುವ ಸಂಗತಿಯಾಗಿದೆ.ಜೀವನದಲ್ಲಿ ಕೀರ್ತಿ, ಪ್ರತಿಷ್ಠೆಗಳು, ಸುಖ, ಸಂಪತ್ತುಗಳೊಂದಿಗೆ ಅದೃಷ್ಟವು ನಮ್ಮದಾಗಬೇಕು ಎಂದರೆ ಸರಳವಾಗಿ ನಮ್ಮ ಹಿರಿಯರು ಅನುಸರಿಸುತ್ತಿದ್ದ ಶಾಸ್ತ್ರದ ಕ್ರಮಗಳನ್ನು ನಾವು ಸಹ ಪ್ರತಿದಿನ ಪಾಲಿಸಿದರೆ ನೆಮ್ಮದಿಯ ಸುಖವಾದ ಜೀವನ ನಮ್ಮದಾಗುತ್ತದೆ.
ನಮ್ಮ ಪುರಾತನ ಹಿಂದೂ ಗ್ರಂಥಗಳಲ್ಲಿ ನಮ್ಮ ಭಾರತೀಯ ಋಷಿ ಮುನಿಗಳು ,ಶಾಸ್ತ್ರಜ್ಞಕಾರರು ಉಲ್ಲೇಖಿಸಿರುವ ಪ್ರಕಾರ ವಾರದ ಏಳು ದಿನಗಳು ಈ ಏಳು ರಹಸ್ಯಗಳನ್ನು ಪಾಲಿಸಿದರೆ ನಮ್ಮ ಕೋರಿಕೆಗಳು ಈಡೇರುವುದು ಅಷ್ಟೇ ಅಲ್ಲ ಕಾರ್ಯಗಳು ಸಹ ಕೈಗೂಡುತ್ತವೆ ಎನ್ನುತ್ತಾರೆ. ಹಾಗಾದರೆ ಈ ನಿಯಮಗಳು ಯಾವುವೆಂದು ತಿಳಿದುಕೊಳ್ಳೋಣ ಬನ್ನಿ…
1.ಭಾನುವಾರ.
ಭಾನುವಾರವನ್ನು ಆದಿತ್ಯ ವಾರ,ರವಿವಾರ ಅಥವಾ ಸೂರ್ಯನ ದಿನ ಎಂದು ಸಹ ಕರೆಯಲಾಗುತ್ತದೆ. ಅಂದು ಸೂರ್ಯನ ದಿನವಾದ್ದರಿಂದ ತಾಂಬೂಲದ ಎಲೆ ಅಂದರೆ ವೀಳ್ಯದ ಎಲೆಯನ್ನು ಅಗೆದು ಅಥವಾ ತಿನ್ನಲು ಆಗದೇ ಇದ್ದ ಪಕ್ಷದಲ್ಲಿ ಜೇಬಿನಲ್ಲಿ ಎಲೆಯನ್ನು ಇಟ್ಟುಕೊಂಡು ಹೊರಗೆ ಹೋದರೆ ನಮ್ಮ ಕಾರ್ಯಗಳು ಸಿದ್ಧಿಸುತ್ತವೆ. ಹಾಗೆ ನಮಗೆ ರಜೆ ಸಿಗುವುದು ವಾರದ ಒಂದೇ ದಿನ ಮಾತ್ರ ಅದೇ ರವಿವಾರ ಆದ್ದರಿಂದ ಈ ದಿನ ಮಾಂಸಾಹಾರ ಸೇವನೆಯನ್ನು ಮಾಡಬಾರದು.
2.ಸೋಮವಾರ.
ಸೋಮವಾರ ಸೋಮ ಅಂದರೆ ಚಂದ್ರ, ಚಂದ್ರನ ದಿನವೆಂದು ಈ ದಿನ ಶುಭ್ರವಾದ ಬಟ್ಟೆಯನ್ನು ಧರಿಸಿ.ಹೊರಗೆ ಹೋಗುವಾಗ ಒಮ್ಮೆ ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡು ಹೊರಗೆ ಹೋದರೆ ಸಾಕು ಕಾರ್ಯಗಳು ಈಡೇರುತ್ತವೆ. ಸಾಧ್ಯವಾದರೆ ನಿಮ್ಮ ಮನೆಯ ಪ್ರವೇಶ ದ್ವಾರದಲ್ಲಿ ಒಂದು ಮೊಟ್ಟೆಯಾಕಾರದ ಕನ್ನಡಿಯನ್ನು ಅಳವಡಿಸಿಕೊಳ್ಳಿ ಎಂದಿದ್ದಾರೆ ಶಾಸ್ತ್ರಜ್ಞರು.
3.ಮಂಗಳವಾರ.
ಮಂಗಳವಾರವು ಕುಜನ ದಿನವಾದ್ದರಿಂದ ಈ ದಿನ ಕೆಂಪು ಬಟ್ಟೆಯನ್ನು ಧರಿಸುವುದು ಉತ್ತಮ. ಹನುಮಂತನ ವಾರವಾದ್ದರಿಂದ ಶುಭ್ರವಾಗಿ ಸ್ನಾನವನ್ನು ಮಾಡಿ ಹನುಮಂತನ ದೇವಸ್ಥಾನಕ್ಕೆ ಹೋಗಿ ಹನುಮಂತನ ದರ್ಶನ ಮಾಡಿ. ಇಲ್ಲವಾದರೆ ಮನೆಯಲ್ಲಿಯೇ ಹನುಮಾನ ಚಾಲಿಸವನ್ನು ಓದಿ ಬಾಯಿಯನ್ನು ಸಿಹಿ ಮಾಡಿಕೊಂಡು ಬೆಲ್ಲವನ್ನು ತಿಂದರೆ ಇನ್ನೂ ಉತ್ತಮ ಹೀಗೆ ಮಾಡಿದರೆ ಕೆಲಸಗಳು ಕೈಗೂಡುತ್ತವೆ.
4.ಬುಧವಾರ.
ಬುಧುವಾರ ಬುಧ ಗ್ರಹನ ದಿನವಾದ್ದರಿಂದ ಹಸಿರು ಬಟ್ಟೆಯನ್ನು ಧರಿಸುವುದು ಒಳ್ಳೆಯದು. ಮನೆಯಿಂದ ಹೊರಗೆ ಹೋಗುವ ಮುನ್ನ ತುಳಸಿ ಗಿಡಕ್ಕೆ ನಮಿಸಿ ,ಪುದೀನಾ ಅಥವಾ ಕರಿಬೇವಿನ ಎಲೆಯನ್ನು ಬಾಯಿಗೆ ಹಾಕಿಕೊಂಡು ತಿಂದರೆ ಕಾರ್ಯಗಳು ಸಿದ್ಧಿಸುತ್ತವೆ.
5.ಗುರುವಾರ.
ಗುರುವಾರದ ದಿನ ರಾಯರ ದಿನ ಅಥವಾ ಗುರು ಬೃಹಸ್ಪತಿಯ ದಿನವಾದ್ದರಿಂದ ಹಳದಿ ಬಟ್ಟೆಯನ್ನು ಧರಿಸಿ ಹೊರಗೆ ಹೋಗುವಾಗ ಜೀರಿಗೆ ಅಥವಾ ಸಾಸಿವೆಯನ್ನು ಬಾಯಿಗೆ ಹಾಕಿಕೊಂಡು ಮನೆಯ ಹೊಸ್ತಿಲನ್ನು ದಾಟಿದ ಬಳಿಕ ಅವನ್ನು ಜಗಿದು ನೀರು ಕುಡಿದು ಹೋದರೆ ಒಳ್ಳೆಯದು.ಎಲ್ಲಾ ಕಾರ್ಯಗಳು ಕೈಗೂಡುತ್ತವೆ.
6.ಶುಕ್ರವಾರ.
ಶುಕ್ರವಾರ ಶುಕ್ರ ಗ್ರಹದ ದಿನ ಶುಭ್ರವಾದ ಬಿಳಿ ಬಟ್ಟೆಯನ್ನು ಧರಿಸುವುದು ಉತ್ತಮ ಮತ್ತು ಮನೆಯಿಂದ ಹೊರಗೆ ಹೋಗುವಾಗ ಮೊಸರನ್ನು ಅಥವಾ ನೀವು ತಿನ್ನುವ ತಿಂಡಿಗೆ ಮೊಸರು ಹಾಕಿಕೊಂಡು ತಿಂದು ಹೊರಗೆ ಹೋದರೆ ಒಳ್ಳೆಯದು.
7.ಶನಿವಾರ.
ಶನಿವಾರ ಶನಿ ಗ್ರಹದ ಆಳ್ವಿಕೆಯ ದಿನ ಆದ್ದರಿಂದ ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಯನ್ನು ಧರಿಸಿ. ಶುಂಠಿಯನ್ನು ತಿನ್ನಬೇಕು.ಶುಂಠಿಯ ಜೊತೆಗೆ ಸ್ವಲ್ಪ ತುಪ್ಪ ವನ್ನು ಬೆರಸಿ ತಿಂದರೆ ಒಳ್ಳೆಯದು ಮತ್ತು ಇದರಲ್ಲಿ ಅದೆಷ್ಟೋ ಆರೋಗ್ಯಕ್ಕೆ ಲಾಭಗಳನ್ನು ತರುವಂತಹ ಔಷಧೀಯ ಗುಣಗಳು ಇವೆ. ಹಾಗೆ ಧನ ಸಂಪತ್ತು ಕೂಡ ವೃದ್ಧಿಯಾಗುತ್ತದೆ.
ಹೀಗೆ ವಾರದ ಒಂದೊಂದು ದಿನವೂ ಒಂದೊಂದು ಪದ್ದತಿಯನ್ನು ಪಾಲಿಸಿ ಜೀವನದಲ್ಲಿ ಅಳವಡಿಸಿ ಕೊಳ್ಳುವುದರಿಂದ ಮಾನಸಿಕ ನೆಮ್ಮದಿಯ ಜೊತೆಗೆ ಸುಖ ಸಿರಿ ಸಂಪತ್ತು ಕೀರ್ತಿ ಲಭಿಸಿ ಸುಖವಾಗಿ ಜೀವನ ನೆಡೆಸುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
