ಈ 10 ಗಿಡಗಳು ಮನೇಲಿದ್ರೆ ಯಾವ ಎ.ಸಿ ಕೂಡ ಬೇಡ ಅಷ್ಟೇ ಯಾಕೆ ಮಲೇರಿಯಾ, ಕ್ಯಾನ್ಸರ್ ಬಹಳ ದೂರ..
ಈ ಹತ್ತು ಗಿಡಗಳನ್ನು ನಿಮ್ಮ ಮನೆಯೊಳಗೆ ಬೆಳೆಸಿದರೆ ಸ್ವಚ್ಛವಾದ ಗಾಳಿಯನ್ನು ಹರಡುವಂತೆ ಮಾಡುತ್ತವೆ ಮತ್ತು ಕ್ಯಾನ್ಸರ್ ನ ಕಣಗಳ ಜೊತೆಗೂ ಸಹ ಹೋರಾಡುತ್ತವೆ.ಈ ಗಿಡಗಳು ನಿಮ್ಮ ಮನೆಯಲ್ಲಿ ಇವೆಯೇ ಎಂದು ಒಮ್ಮೆ ನೋಡಿ.
ವಾಯು ಮಾಲಿನ್ಯವು ಒಂದು ತೀವ್ರವಾದ ತೊಂದರೆಯಾಗಿದ್ದು ಭಾರತದಲ್ಲಿ ಅದು ದೆಹಲಿಯಾಗಿರಬಹುದು, ಮುಂಬೈ ಆಗಿರಬಹುದು. ಎರಡನೇ ಶ್ರೇಣಿಯ ನಗರಗಳಾದ ಇಂಡೋರ್, ಭೂಪಾಲ ಮತ್ತು ಪುಣೆಯಾಗಿರಬಹುದು. ಗಾಳಿಯ ಗುಣಮಟ್ಟದ ಸೂಚ್ಯಂಕವು ಎಚ್ಚರಿಕೆಯ ಮಟ್ಟವನ್ನು ತಲುಪಿದೆ. ಭಾರತದಲ್ಲಿ 2013 ನೇ ಇಸವಿಯಲ್ಲಿ ಒಂದು ಅಧ್ಯಯನವನ್ನು ಮಾಡಲಾಗಿದ್ದು, ಅದು ಯುರೋಪಿಯನ್ ದೇಶದ ಜನರಿಗೆ ಹೋಲಿಸಿದರೆ ಭಾರತ ದೇಶದವರಲ್ಲಿ ವಾಸಿಸುವ ಜನರಲ್ಲಿ ಅದರಲ್ಲೂ ಧೂಮಪಾನ ಮಾಡದೇ ಇರುವವರಲ್ಲಿ ಶೇಕಡ 30 % ನಷ್ಟು ಕೆಳ ಭಾಗದ ಶ್ವಾಸಕೋಶದ ಸೋಂಕು ಕಂಡು ಬಂದಿದೆ ಎಂದು ಬಹಿರಂಗ ಪಡಿಸಲಾಗಿದೆ.
ಆರೋಗ್ಯ ಸಮಸ್ಯೆಗಳನ್ನು ತಡೆಯಲು , ಜನರು ದೊಡ್ಡ ದೊಡ್ಡ ಗಾಳಿಯನ್ನು ಶುದ್ಧಿಕರಿಸುವ ಯಂತ್ರಗಳನ್ನು ಖರೀದಿಸಿ ಮನೆಯಲ್ಲಿ ಅಳವಡಿಸಿಕೊಂಡು ಬಳಸುತ್ತಿದ್ದಾರೆ.ಆದರೆ ಇಲ್ಲಿ ಹೇಳಲಾಗಿರುವ ಸಸ್ಯಗಳನ್ನು ನೀವು ಅತೀ ಕಡಿಮೆ ಬೆಲೆಗೆ ಕೊಂಡುಕೊಳ್ಳಬಹುದು . ಪ್ರಕೃತಿಯು ನಮಗೆ ಈ ಸಸ್ಯಗಳನ್ನು ವರದಾನವಾಗಿ ಕರುಣಿಸಿದೆ.ಅವು ಗಾಳಿಯಲ್ಲಿರುವ ವಿಷಕಾರಿ ಅಂಶ ಮತ್ತು ಧೂಳಿನ ಕಣಗಳನ್ನು ಹೊರದೂಡುತ್ತವೆ. ಇಷ್ಟೊಂದು ಉಪಯೋಗವಿರುವ ಈ ಗಿಡಗಳನ್ನು ನಾವು ಯಾವುವೆಂದು ತಿಳ್ಕೋಬೇಕು ಅಷ್ಟೆ.ಬನ್ನಿ ಅವು ಯಾವುವು ಎಂದು ನೋಡೋಣ…
1.ಜೇಡರ ಗಿಡ.
ಈ ಸಸ್ಯವು ದೃತಿಸಂಶ್ಲೇಷಣೆ ನೆಡೆಸುತ್ತದೆ.ಅದು ಸೂರ್ಯನ ಬೆಳಕು ಇಲ್ಲದಿದ್ದರೂ ಅಥವಾ ಸ್ವಲ್ಪ ಬೆಳಕಿದ್ದರೂ ಸಾಕು.ಆದ್ದರಿಂದ ಶುದ್ದವಾದ ಗಾಳಿಯನ್ನು ಬಿಡುಗಡೆ ಮಾಡುತ್ತದೆ.ಇದು ದೊಡ್ಡ ದೊಡ್ಡ ಗಾಳಿ ಶುದ್ಧಿಕರಿಸುವ ಯಂತ್ರಗಳು ಮಾಡಲಾಗದಂತಹ ಕೆಲಸವನ್ನು ಸಹ ಮಾಡುತ್ತದೆ.ಅದೇನೆಂದರೆ ಸಿಗರೇಟನಲ್ಲಿರುವ ಕ್ಯಾನ್ಸರ್ ಕಾರಕ ಅಂಶ ನಿಕೋಟಿನ್ ಧೂಮಪಾನ ಮಾಡುವಾಗ ಬಿಡುಗಡೆಯಾಗುತ್ತದೆ ಮತ್ತು ಬೆನ್ಜಿನ್ ನಂತಹ ಕಾರ್ಸಿನೋಜನಗಳನ್ನು ಸಹ ಗಾಳಿಯಿಂದ ಶುದ್ಧಿಕರಿಸುತ್ತದೆ.
2 ಲೋಳೆಸರ.
ನಿಮಗೆ ಗೊತ್ತಾ ಒಂದು ಹೂವಿನ ಕುಂಡದಲ್ಲಿ ಬೆಳೆಸುವ ಲೋಳೆಸರದ ಒಂದು ಸಣ್ಣ ಸಸ್ಯವು ಒಂಭತ್ತು ಜೈವಿಕ ಗಾಳಿ ಶುದ್ದೀಕರಣ ಮಾಡುವ ಘಟಕಕ್ಕೆ ಸಮನಾಗಿರುತ್ತದೆ.ಇಂಗಾಲದ ಡೈ ಆಕ್ಸೈಡ್ ಅನ್ನು ಹೊರತು ಪಡಿಸಿ,ಈ ಸಸ್ಯವು ಕಾರ್ಬನ್ ಮೋನೋ ಆಕ್ಸೈಡ್ , ಫಾರ್ಮಲ್ ಡೈ ಆಕ್ಸೈಡ್ ಅನ್ನು ಕೂಡ ಹೀರಿಕೊಳ್ಳುತ್ತದೆ. ನಿಮಗೆ ಉಸಿರಾಡಲು ಶುದ್ದ ಗಾಳಿಯನ್ನು ಸಹ ನೀಡುತ್ತದೆ. 90% ನಷ್ಟು ಫಾರ್ಮಲ ಡಿಆಕ್ಸೈಡ್ ಆನ್ನು ಉತ್ಪತ್ತಿ ಮಾಡಲು ನಾಲ್ಕು ಗಂಟೆಗಳ ಸೂರ್ಯನ ಬೆಳಕು ಸಸ್ಯಕ್ಕೆ ಸಿಕ್ಕಿದರೆ ಸಾಕು ಅದು ಒಂದು ಚದುರ ಮೀಟರ್ ಜಾಗಕ್ಕೆ ಈ ಗಾಳಿಯನ್ನು ಹರಡುತ್ತದೆ.
3.ಶತಾವರಿ ಗಿಡ.(ಅಸ್ಪರಾಗಸ್)
ಆಸ್ಪರಾಗಸ್ ಇದು ಒಂದು ಗ್ರೀಕ್ ಪದ.ಇದರ ಅರ್ಥ ಕಾಂಡ ಅಥವಾ ಚಿಗುರು .ಇದರ ವಾಸನೆಯು ನಮ್ಮ ಸುತ್ತಮುತ್ತ ಇರುವ ಗಾಳಿಯಲ್ಲಿರುವ ಅನೇಕ ಕೀಟಾಣುಗಳನ್ನು ಮತ್ತು ವೈರಾಣುಗಳನ್ನು ಕೊಲ್ಲುವುದು.
4.ತುಳಸಿ.(ಪವಿತ್ರ ತುಳಸಿ)
ಶ್ರೇಷ್ಠ ಸಸ್ಯ ವಿಜ್ಞಾನಿ ಶ್ವಾಮಕಾಂತ್ ಪಡೋಲೆ,ಇವರ ಪ್ರಕಾರ “ತುಳಸಿಯು ಇಪ್ಪತ್ತು ಗಂಟೆಗಳ ಕಾಲ ಆಮ್ಲಜನಕವನ್ನು ಮತ್ತು ಉಳಿದ ನಾಲ್ಕು ಗಂಟೆಯಲ್ಲಿ ಓಝೋನ್ ಅನ್ನು ಹೊರ ಸೂಸುತ್ತದೆ. ಇದರ ಜೊತೆಗೆ ಪರಿಸರದಿಂದ ಹೊಸದಾಗಿ ಉತ್ಪತ್ತಿ ಯಾಗುವ ಹಾನಿಕಾರಕ ಅನಿಲಗಳನ್ನು ಸಹ ಹೀರಿಕೊಳ್ಳುತ್ತದೆ.(ಕಾರ್ಬನ್ ಮೋನೋ ಆಕ್ಸೈಡ್, ಸಲ್ಪರ್ ಡೈ ಆಕ್ಸೈಡ್, ಇಂಗಾಲದ ಡೈಆಕ್ಸೈಡ್). ತುಳಸಿಯ ಗಿಡವು ದೊಡ್ಡದಾಗಿದಷ್ಟು ಅತೀ ಹೆಚ್ಚಿನ ಗಾಳಿಯನ್ನು ಶುದ್ದೀಕರಿಸಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
5.ಆನೆಯ ಕಿವಿಯಿರುವ ಅಥವಾ ದೈತ್ಯ ಟಾರೋ.
ಹಿಂದಿಯಲ್ಲಿ ಮಂಕಂದ ಎಂದು ಇದನ್ನು ಕರೆಯುತ್ತಾರೆ.ಇದು ಒಂದು ಅದ್ಭುತವಾದ ಗಿಡವಾಗಿದ್ದು.ಇದು ಗಾಳಿಯಲ್ಲಿ ತೇಲಾಡುತ್ತಿರುವ ಧೂಳನ್ನು ಯಾವುದೇ ಕೋಣೆಯಲ್ಲಿದ್ದರೂ ಕೂಡ ಹೊರ ಹಾಕುತ್ತದೆ. ಆದರೆ ಎಚ್ಚರಿಕೆ ಇದರ ರಸ ಅಥವಾ ಕಾಂಡ ಇದರೊಳಗೆ ಹಾನಿಕಾರಕ ವಿಷ ಅಡಗಿದೆ.
6.ಅದೃಷ್ಟದ ಬಿದಿರು.
ಇದು ಮಲಗುವ ಕೋಣೆಗೆ ಹೇಳಿ ಮಾಡಿಸಿದಂತಿದೆ.ಇದರ ಅದ್ಭುತವಾದ ಹೀರಿಕೊಳ್ಳುವ ಸಾಮರ್ಥ್ಯಕ್ಕೆ ಧನ್ಯವಾದಗಳನ್ನು ಹೇಳಬೇಕು.ನೀವು ನಿಮ್ಮ ಕೋಣೆಯ ಕಿಟಕಿಯನ್ನು ಸುರಕ್ಷತೆಯ ಮೇರೆಗೆ ತೆರೆಯದಿದ್ದರೂ ಸಹ ನಿಮಗೆ ಸ್ವಚ್ಛವಾದ ಗಾಳಿಯನ್ನು ನೀಡುತ್ತದೆ. ಇದು ಹೇಳಿ ಮಾಡಿಸಿದ ಆಯ್ಕೆಯಾಗಿದೆ.
7.ಚೀನಿಯರ ಹಚ್ಚ ಹಸಿರು.
ಈ ಸಸ್ಯವು ಇದರ ಅನನ್ಯ ಗುಣಮಟ್ಟಕ್ಕೆ ಹೆಸರು ವಾಸಿಯಾಗಿದ್ದು.ಇದು ಗಾಳಿಯಲ್ಲಿ ಹಾನಿಕಾರಕ ಅಂಶಗಳು ಅತೀ ಹೆಚ್ಚಾಗಿ ಕಂಡು ಬಂದರೆ ಇದರ ಶುದ್ಧಿಕರಣದ ಶಕ್ತಿಯು ಕೂಡ ಅಷ್ಟೇ ವೇಗವಾಗಿರುತ್ತದೆ.ಈ ಸಸ್ಯ ಎಲ್ಲಿದ್ದರೂ ಆಶ್ಚರ್ಯ ಪಡಬೇಕಾಗಿಲ್ಲ. ಈ ಸಸ್ಯವು ಕಚೇರಿಗಳಿಗೆ ಮತ್ತು ಕೋಣೆಗಳಿಗೆ ಆದರ್ಶವಾದ ಆಯ್ಕೆಯಾಗಿದೆ.
8 ಹಣದ ಗಿಡ(money plant ).
ಈ ಗಿಡವು ವಿಕಿರಣಗಳನ್ನು ಕಡಿಮೆ ಮಾಡುತ್ತದೆ.ಮೊಬೈಲ್, ಲ್ಯಾಪಟಾಪ್, ಅಥವಾ ವೈಫೈ ಗಳಿಂದ ಬರುವ ವಿಕಿರಣಗಳನ್ನು ಕಡಿಮೆ ಮಾಡುತ್ತದೆ.2015 ರಲ್ಲಿ ಭಾರತದ ಸಂಶೋಧಕರಾದ ಎಂ.ಡಿ ಫಾರೂಕ್ ಅಲಿ, ಬಿ. ಬೆಳಮಗಿ, ಸುಧಾಬಿಂದು ರೇ ಇವರು ಲೆಕ್ಕ ಹಾಕಿರುವ ಪ್ರಕಾರ ನಿರ್ದಿಷ್ಟ ಹೀರುವಿಕೆಯ ಧರ (SAR-specific absorption rate) 2.4 GHZ ಇದ್ದು ,ವಿಕಿರಣಗಳಿಂದ ಪರಿಣಾಮಕಾರಿಯಾಗಿ ರಕ್ಷಿಸುವುದು.ಇವರ ಅಧ್ಯಯನವು ಕೊನೆಗೆ ವಿದ್ಯುತ್ ಕಾಂತೀಯ ವಿಕಿರಣಗಳನ್ನು ಒದಗಿಸುವುದರ ಮೂಲಕ ರಕ್ಷಾ ಕವಚವನ್ನು ಒದಗಿಸುವುದು.ಆದ್ದರಿಂದ ಈ ಹಣದ ಗಿಡ ಅಥವಾ ಮನಿ ಪ್ಲಾಂಟ್ ಆನ್ನು ನಿಮ್ಮ ಮನೆಯ ನೀರಿನಲ್ಲಿ ಬೆಳೆಸಿ ಹಾಗೂ ಇದನ್ನು ನಿಮ್ಮ ಮೇಜಿನ ಬಳಿ ಅಥವಾ ವೈಫೈ ಇರುವ ಮಾರ್ಗದಲ್ಲಿ ಇಟ್ಟರೆ ಒಳ್ಳೆಯದು.
9.ರಬ್ಬರ್ ಗಿಡ.
ಇದು ಬಹು ಕ್ರಿಯಾತ್ಮಕ ,ಅಧಿಕ ವಾಯು ಶುದ್ದಿ ಕಾರ್ಯವನ್ನು ನಿರ್ಮಿಸುತ್ತದೆ.ಇದು ಗಾಳಿಯಲ್ಲಿರುವ ಕಣಗಳನ್ನು ಆಕರ್ಷಿಸುತ್ತದೆ ಮತ್ತು ಸುತ್ತಲೂ ಇರುವ ಧೂಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.
10.ಸೇವಂತಿಗೆ ಹೂ.
ಇದು ಬೆಳೆಗಾರರ ಮೆಚ್ಚಿನ ಹೂವಾಗಿದ್ದು ಹೂಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಅಲಂಕರಿಸಿದೆ.ಈ ಹೂವು ಗಾಳಿಯನ್ನು ಶುದ್ದಿ ಮಾಡುವುದರಲ್ಲಿಯೂ ಸಹ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತದೆ. ಈ ಹೂವಿನ ಗಿಡ ಸಾಮಾನ್ಯವಾಗಿ ಹಾನಿಕಾರಕ ವಿಷಗಳಾದ,ಬೆನ್ಜಿನ್,ಸಿಗರೇಟಿನಿಂದ ಬರುವ ಹೊಗೆ ಮತ್ತು ಅಮೋನಿಯಾವನ್ನು ಗಾಳಿಯಿಂದ ಹೊರದೂಡುತ್ತವೆ.ಇಷ್ಟಿದ್ದರೂ ಹೂವಿಲ್ಲದೆ ಈ ಗಿಡ ಗಾಳಿಯನ್ನು ಶುದ್ದಿ ಮಾಡುವಲ್ಲಿ ಅಷ್ಟು ಪರಿಣಾಮಕಾರಿಯಾಗಿಲ್ಲ ಎಂದು ಹೇಳಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
