fbpx
ದೇವರು

ವ್ಯಾಪಾರದಲ್ಲಿ ಲಾಭಗಳಿಸಲು ವಾಸ್ತು ಸಲಹೆಗಳನ್ನು ಅನುಸರಿಸಿ.

ವ್ಯಾಪಾರದಲ್ಲಿ ಲಾಭಗಳಿಸಲು ವಾಸ್ತು ಸಲಹೆಗಳನ್ನು ಅನುಸರಿಸಿ.

ಒಂದು ಹೊಸ ವಾಣಿಜ್ಯ,ವಹಿವಾಟು ಅಥವಾ ವ್ಯಾಪಾರವನ್ನು ಪ್ರಾರಂಭಿಸಬೇಕೆಂದಿದ್ದರೆ ಇದಕ್ಕೆ ಸೂಕ್ತವಾದ ಮುಹೂರ್ತವನ್ನು ಪರಿಗಣಿಸಿಯೇ ನಾವೆಲ್ಲ ಮುಂದುವರೆಯುತ್ತೇವೆ. ಆದರೆ ವ್ಯಾಪಾರ ಯಶಸ್ವಿಯಾಗಲು ಕೇವಲ ಮುಹೂರ್ತದ ಸಮಯ ನೋಡಿಕೊಂಡರೆ ಮಾತ್ರ ಸಾಕಾಗುವುದಿಲ್ಲ. ಬದಲಿಗೆ ವ್ಯಾಪಾರ ಕುದುರಲು ಹಾಗೂ ಅದೃಷ್ಟ ಖುಲಾಯಿಸಲು ಇನ್ನೂ ಕೆಲವು ವಿಷಯಗಳನ್ನು ಪರಿಗಣಿಸಬೇಕಾಗಿದೆ.

ಪ್ರತಿ ವ್ಯಾಪಾರ ಅಥವಾ ಕೆಲಸದ ಸ್ಥಳಗಳಲ್ಲಿ ವಾಸ್ತುವನ್ನು ಅನುಸರಿಸುವುದು ಅಗತ್ಯವಾಗಿದ್ದು. ಇವು ಧನಾತ್ಮಕ ಪರಿಣಾಮ ಬೀರುವ ಮೂಲಕ ವ್ಯಾಪಾರವನ್ನು ವೃದ್ಧಿಸುತ್ತವೆ. ಈ ಸುಲಭ ಕ್ರಮಗಳನ್ನು ಅನುಸರಿಸುವ ಮೂಲಕ ವಾಸ್ತುವನ್ನು ಉತ್ತಮಗೊಳಿಸುವುದು ಹೇಗೆಂದು ತಿಳಿದುಕೊಳ್ಳೋಣ.

1.ತಡೆಗಳನ್ನು ನಿವಾರಿಸಿ.

ನಿಮ್ಮ ವ್ಯಾಪಾರ ಅಥವಾ ಕೆಲಸದ ಸ್ಥಳದಲ್ಲಿ ಯಾವುದೇ ತಡೆ ಇರದಂತೆ ನೋಡಿಕೊಳ್ಳಿದೊಡ್ಡ ಕಲ್ಲು ಮೊದಲಾದವು ಏನೇ ಇದ್ದರು ನಿಮ್ಮ ವ್ಯಾಪಾರ ಸ್ಥಳದೊಳಗೆ ಧನಾತ್ಮಕ ಶಕ್ತಿ ಪ್ರವೇಶವಾಗುವುದನ್ನು ತಡೆಯುತ್ತದೆ.ಇದು ವ್ಯಾಪಾರದಲ್ಲಿ ನಷ್ಟವನ್ನುಂಟು ಮಾಡಬಹುದು.

2.ಪೀಠೋಪಕರಣಗಳ ಸ್ಥಾನ.

ವ್ಯಾಪಾರಕ್ಕೆ ಅಗತ್ಯವಾದ ಸೋಫಾ , ಕುರ್ಚಿ,ಮೇಜು, ಕಪಾಟು, ಪ್ರದರ್ಶನ ಕಪಾಟು,ಡ್ರೆಸ್ಸಿಂಗ್ ಟೇಬಲ್ ಇತ್ಯಾದಿಗಳೆಲ್ಲಾ ನೈಋತ್ಯ ದಿಕ್ಕಿಗೆ ಮುಖ ಮಾಡುವಂತೆ ಇರಿಸಬೇಕು. ಇದರಿಂದ ಅತ್ಯಧಿಕ ಪ್ರಮಾಣದ ಧನಾತ್ಮಕ ಶಕ್ತಿ ಈ ಸ್ಥಳದಲ್ಲಿ ಅಗಮಿಸಲು ಸಾಧ್ಯವಾಗುತ್ತದೆ.

3.ಹೆಚ್ಚುವರಿ ವಸ್ತುಗಳು.

ಕಚೇರಿ ಮತ್ತು ಮುಖ್ಯ ಸ್ಥಳದಲ್ಲಿ ಅಗತ್ಯವಿದ್ದಷ್ಟು ಮಾತ್ರವೇ ದಾಸ್ತಾನುಗಳನ್ನಿರಿಸಿ ಉಳಿದವನ್ನು ಗೋದಾಮಿನಲ್ಲಿ ನೈಋತ್ಯ ದಿಕ್ಕಿಗೆ ಮುಖ ಮಾಡುವಂತೆ ಇರಿಸಬೇಕು. ಸಾಮಾನ್ಯವಾಗಿ ವ್ಯಾಪಾರ ಸ್ಥಳದಲ್ಲಿ ಗಲ್ಲಾ ಪೆಟ್ಟಿಗೆಯ ಬಳಿ ಎಲ್ಲರೂ ದೇವರ ಫೋಟೋ ಅಥವಾ ಪುಟ್ಟ ವಿಗ್ರಹವನ್ನು ಇರಿಸಿ ಪೂಜೆ ಸಲ್ಲಿಸುತ್ತಾರೆ. ಈ ಫೋಟೋ ಅಥವಾ ವಿಗ್ರಹಗಳು ಉತ್ತರ ಅಥವಾ ಪೂರ್ವಾಭಿಮುಖವಾಗಿರುವಂತೆ ನೋಡಿಕೊಳ್ಳಬೇಕು.

4.ವ್ಯವಸ್ಥಾಪಕರ ಖುರ್ಚಿ.

ಈ ವಾಣಿಜ್ಯ ವಹಿವಾಟುಗಳನ್ನು ನಿರ್ವಹಿಸುವ ವ್ಯವಸ್ಥಾಪಕರ ಕೋಣೆಯಲ್ಲಿ ಖುರ್ಚಿಯನ್ನು ಪಶ್ಚಿಮಾಭಿಮುಖವಾಗಿ ಇರುವಂತೆ ನೋಡಿಕೊಳ್ಳಬೇಕು. ಇದರಿಂದ ವ್ಯಾಪಾರ ಸ್ಥಳದಲ್ಲಿ ಧನಾತ್ಮಕ ಶಕ್ತಿ ಹೆಚ್ಚುವ ಮೂಲಕ ವಹಿವಾಟು ಸಹ ಉತ್ತಮಗೊಳ್ಳುತ್ತದೆ ಎಂದು ನಂಬಲಾಗಿದೆ. ಒಂದು ವೇಳೆ ಹಣವನ್ನಿರಿಸಲು  ತಿಜೋರಿಯನ್ನು ಬಳಸುವುದಾದರೆ.ಈ ಸ್ಥಳದಲ್ಲಿ ಪ್ರಖರ ಬೆಳಕಿನ ಮೂಲ ಇರಬಾರದು . ಏಕೆಂದರೆ ಈ ಪ್ರಖರ ಬೆಳಕು ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಬಹುದು.

5.ಕುಳಿತುಕೊಳ್ಳುವ ಭಂಗಿ.

ಗ್ರಾಹಕರೊಂದಿಗೆ ವ್ಯವಹರಿಸುವಾಗ ಪೂರ್ವಾಭಿಮುಖವಾಗಿ ಕುಳಿತು ಅಥವಾ  ನಿಂತುಕೊಂಡಿದ್ದರೆ ವ್ಯಾಪಾರದಲ್ಲಿ ಹೆಚ್ಚಳವಾಗಿ  ಮನೆಗೆ ಆಗಮಿಸುವ ಸಮೃದ್ಧಿ  ಹೆಚ್ಚುತ್ತದೆ.  ಮಾಲೀಕ , ಉದ್ಯೋಗಿಗಳು ಮತ್ತು  ಗ್ರಾಹಕರ ನಡುವಿನ ಸಂಬಂಧವೂ ಉತ್ತಮಗೊಳ್ಳುತ್ತದೆ.

6.ಪಶ್ಚಿಮಾಭಿಮುಖವಾಗಿ ಗ್ರಾಹಕರನ್ನು ಎದುರುಗೊಳ್ಳದಿರಿ.

ಪಶ್ಚಿಮಾಭಿಮುಖವಾಗಿ ಕುಳಿತು ಗ್ರಾಹಕರನ್ನು ಎದುರುಗೊಳ್ಳುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಇದರಿಂದ ವ್ಯಾಪಾರಕ್ಕೂ  ದಕ್ಕೆಯುಂಟಾಗುತ್ತದೆ ಹಾಗೂ ವ್ಯಾಪಾರಿಗೆ ಭಾರಿ ನಷ್ಟ ಉಂಟಾಗುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top