fbpx
ಉಪಯುಕ್ತ ಮಾಹಿತಿ

ಫಾರಂ ಕೋಳಿ ತಿಂದ್ರೆ ಸಾವು ಖಚಿತ…

ಮಾಂಸಾಹಾರಪ್ರಿಯರಿಗೆ ನಾಟಿ ಕೋಳಿ ಅಂದರೆ ಬಲು ಪ್ರೀತಿ. ಆದರೆ ಇತ್ತೀಚೆಗೆ ನಾಟಿ ಕೋಳಿ ಬದಲು ಫಾರಂ ಕೋಳಿ ಬಂದುಬಿಟ್ಟಿವೆ, ಏಕೆಂದರೆ ನಾಟಿಕೋಳಿ ದುರ್ಲಭ ಮತ್ತು ಸಾಕಲು ಕೊಂಚ ಕಷ್ಟಕರವಾದುದರಿಂದ ಅಪರೂಪಕ್ಕೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ಸೇವಿಸಲಾಗುತ್ತದೆ.

00

ಆದರೆ ಇಂದು ಮಾರುಕಟ್ಟೆಯಲ್ಲಿ ಶೇಖಡಾ 99ರಷ್ಟು ಪೌಲ್ಟ್ರಿ ಫಾರಂಗಳಿಂದ ಬಂದ ಬ್ರಾಯ್ಲರ್ ಕೋಳಿಗಳೇ ಲಭ್ಯವಿವೆ. ಜನರ ಬೇಡಿಕೆಗೆ ಅಗತ್ಯವಿರುವಷ್ಟು ಪ್ರಮಾಣವನ್ನು ಪೂರೈಸಲು ಈ ಫಾರಂಗಳಿಂದ ಮಾತ್ರ ಸಾಧ್ಯ. ಅಪ್ಪಟ ವ್ಯಾಪಾರಿ ವ್ಯವಹಾರವಾದ ಈ ಫಾರಂಗಳಿಂದ ಬರುವ ಕೋಳಿಗಳನ್ನು ವಿವಿಧ ಔಷಧಿ, ಹಾರ್ಮೋನುಗಳು ಮತ್ತು ಆಂಟಿ ಬಯೋಟಿಕ್ ಗಳನ್ನು ನೀಡಿ ತಿನ್ನಿಸಿದ ಆಹಾರಕ್ಕೆ ತಕ್ಕ ಮಾಂಸ ಬಲವಂತವಾಗಿ ಬೆಳೆಯುವಂತೆ ಮಾಡಿ ಬಳಿಕ ಸಂಸ್ಕರಿಸಲಾಗಿರುತ್ತದೆ. ವಾಸ್ತವವಾಗಿ ಈ ಕೋಳಿಗಳ ಮಾಂಸದಲ್ಲಿ ಹಲವಾರು ವಿಷಕಾರಿ ಅಂಶಗಳಿದ್ದು ಆರೋಗ್ಯಕ್ಕೆ ಮಾರಕವಾಗಿವೆ. ಏಕೆಂದರೆ ಮಾಂಸ ಬೆಳೆಯಲೆಂದು ತಿನ್ನಿಸಿದ್ದ ಹಾರ್ಮೋನುಗಳು ಕೋಳಿ ಮಾಂಸದಲ್ಲಿ ಮಿಳಿತಗೊಂಡು ತಿಂದ ವ್ಯಕ್ತಿಯ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

thumb

ಪೌಲ್ಟ್ರಿ ಫಾರಂ ಗಳಿಂದ ಹೊರಬಂದ ಈ ಮಾಂಸದ ಉತ್ಪನ್ನಗಳನ್ನು ಇದುವರೆಗೆ ಅರಿವಿರದೇ ತಿನ್ನುತ್ತಾ ಬಂದಿದ್ದು ಈಗಾಗಲೇ ಕೆಲವು ತೊಂದರೆಗಳಿಗೆ ನಮ್ಮನ್ನು ನಾವೇ ಒಡ್ಡಿಕೊಂಡಿರಬಹುದು. ಅಲ್ಲದೇ ಮಾಂಸದ ತುಂಡು ಸಾಕಷ್ಟು ದೊಡ್ಡದಿದ್ದರೆ ಅದರತ್ತ ಆಕರ್ಷಣೆಯೂ ಹೆಚ್ಚುವ ಕಾರಣ ಹೋಟೆಲುಗಳು ದೊಡ್ಡ ತುಂಡುಗಳನ್ನೇ ನೀಡುತ್ತವೆ.

ಫಾರಂ ಕೋಳಿ ಇಂದಾಗುವ ತೊಂದರೆಗಳು :

  • ಕಿಡ್ನಿ ಸಮಸ್ಯೆ
  • ಪುರುಷರಲ್ಲಿ ನಪುಂಸಕತೆ
  • ಕೊಬ್ಬಿನಂಶ ಏರಿಕೆ
  • ಸ್ಥೂಲಕಾಯಕ್ಕೆ ಆಹ್ವಾನ
  • ಮನುಷ್ಯರ ರಕ್ತ ಅಥವಾ ಹೊಟ್ಟೆ ಸೇರಿದರೆ ಅಸ್ವಸ್ಥರಾಗುತ್ತಾರೆ.
  • ಸೋಂಕು ತಗುಲುತ್ತದೆ.

ಕೋಳಿಗಳಿಗೆ ನೀಡುವ ವಿಷಕಾರಿ ಅಂಶಗಳು :

  • ಆಂಟಿಬಯೋಟಿಕ್ಸ್ :

ಕೋಳಿಗಳು ಬೇಗನೇ ಮತ್ತು ಕಡಿಮೆ ಆಹಾರದಲ್ಲಿ ಅತಿಹೆಚ್ಚಿನ ಪ್ರಮಾಣದ ಮಾಂಸ ಹೊಂದುವಂತೆ ಕೋಳಿಗಳು ಮರಿಗಳಾಗಿದ್ದಾಗಿನಿಂದಲೇ ಕೆಲವು ಆಂಟಿ ಬಯೋಟಿಕ್ಸ್ ಔಷಧಿಗಳನ್ನು ನೀಡಲಾಗುತ್ತದೆ ಮನುಷ್ಯನಿಗೆ ವಿಷಕಾರಿಯಾಗಿದೆ.

  • ಗ್ರೋಥ್ ಹಾರ್ಮೋನುಗಳು :

ಬ್ರಾಯ್ಲರ್ ಕೋಳಿಗಳು ನಾಟಿ ಕೋಳಿಗಳಿಗಿಂತಲೂ ತೂಕದಲ್ಲಿ ಹೆಚ್ಚು ತೂಗುತ್ತವೆ, ಇದರಿಂದ ಕೋಳಿ ಕೃತಕ ಬೆಳವಣಿಗೆ ಪಡೆದು ತೂಕ ಪಡೆದುಕೊಂಡಿರುತ್ತದೆ. ಇವುಗಳ ಆಹಾರ ಮತ್ತು ಔಷಧಿಗಳಲ್ಲಿ ಬೆಳವಣಿಗೆ ಹೆಚ್ಚಿಸುವ ಗ್ರೋಥ್ ಹಾರ್ಮೋನುಗಳು ಎಂಬ ರಸದೂತಗಳನ್ನು ನೀಡಲಾಗಿರುತ್ತದೆ.

  • ಬ್ಯಾಕ್ಟೀರಿಯ :

ಕೋಳಿಯ ಎದೆಭಾಗದ ಮಾಂಸದ ಶೇ 97 ರಷ್ಟು ಪಾಲಿನಲ್ಲಿ ಸೋಂಕು ಹರಡಲು ಸಕ್ಷಮವಿರುವ ಬ್ಯಾಕ್ಟೀರಿಯಾಗಳನ್ನು ಹೊಂದಿದೆ. ಈ ಬ್ಯಾಕ್ಟೀರಿಯಾಗಳು ಶೈತ್ಯೀಕರಿಸಿದ ಬಳಿಕವೂ ಜೀವಂತವಾಗಿದ್ದು ಬೇಯಿಸಿದ ಬಳಿಕವೂ ಹಾನಿ ಮಾಡಬಲ್ಲಷ್ಟು ಪ್ರಮಾಣದ ಬ್ಯಾಕ್ಟೀರಿಯಾಗಳು ಆಹಾರದ ಮೂಲಕ ಹೊಟ್ಟೆ ಸೇರುತ್ತದೆ.

  • ಆರ್ಸೆನಿಕ್ ವಿಷ :

ಕೆಲವು ಕೋಳಿಗಳ ಮಾಂಸದಲ್ಲಿ ಆರ್ಸೆನಿಕ್ ಎಂಬ ಭಯಾನಕ ವಿಷದ ಕಣಗಳು ಕಂಡುಬಂದಿವೆ. ಇದರ ಅಲ್ಪ ಪ್ರಮಾಣವೂ ಮನುಷ್ಯರಿಗೆ ಪ್ರಾಣಾಪಾಯ ಉಂಟುಮಾಡಬಲ್ಲುದು.

ಪರಿಹಾರ ಹೇಗೆ :

ಮಾಂಸವನ್ನು ತೊಳೆದುಕೊಳ್ಳುವ ಮುನ್ನ ಮತ್ತು ಬಳಿಕ ಸೋಂಕು ನಿವಾರಕ ದ್ರವದಿಂದ ಸ್ವಚ್ಛಗೊಳಿಸಿ.

ಈ ಮಾಂಸವನ್ನು ಚೆನ್ನಾಗಿ ಬೇಯಿಸಬೇಕು.

ಬ್ರಾಯ್ಲರ್ ಗಿಂತ ನಾಟಿ ಕೋಳಿಯೇ ಉತ್ತಮ.

ಕೊಂಡ ಬಳಿಕ ಪ್ಲಾಸ್ಟಿಕ್ ಚೀಲದಲ್ಲಿಯೇ ತನ್ನಿ ಹಾಗೂ ಪ್ರತಿ ಬಾರಿ ತಾಜಾ ಕೋಳಿಯ ಮಾಂಸವನ್ನೇ ಬಯಸಿ.

ಸಾಧ್ಯವಾದಷ್ಟು ಕಡಿಮೆ ತೂಕದ ಕೋಳಿಗಳನ್ನು ಕೊಳ್ಳುವುದು ಇನ್ನೂ ಉತ್ತಮ.

Roxarsone ಎಂಬ ಔಷಧಿ ನೀಡಲಾಗುತ್ತಿದೆಯೋ ಗಮನಿಸಿ.

ವಿಚಿತ್ರವೆಂದರೆ ಈ ವಿಷ ಕೋಳಿಯ ದೇಹದಲ್ಲಿದ್ದರೂ ಕೋಳಿ ಈ ವಿಷಕ್ಕೆ ಸಾಯುವುದಿಲ್ಲ. ಬದಲಿಗೆ ಇದರ ಮಾಂಸವನ್ನು ಸೇವಿಸಿದವರಿಗೆ ಪ್ರಾಣಾಪಾಯ ಉಂಟುಮಾಡುತ್ತದೆ. ಎಚ್ಚೆತ್ತುಕೊಳ್ಳಿ…

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top