ಆಧುನಿಕ ಜೀವನದಲ್ಲಿ ಕಣ್ಣಿನ ಸಮಸ್ಯೆ ಬರುವುದು ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಎಲ್ಲ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುವ ಸರ್ವೇ ಸಾಮಾನ್ಯವಾದ ಸಮಸ್ಯೆ.ಕಣ್ಣಿನ ದೃಷ್ಟಿಯಲ್ಲಿ ಏನಾದರೂ ಸಮಸ್ಯೆ ಇರುವವರು ಈ ಕೆಳಗೆ ಹೇಳಿರುವ ಮನೆಮದ್ದನ್ನು ಉಪಯೋಗಿಸಿಕೊಳ್ಳುವುದರ ಮೂಲಕ ಪರಿಹಾರ ಕಂಡುಕೊಳ್ಳಿ.
ಬೇಕಾಗಿರುವ ವಸ್ತುಗಳು: ಬಾದಾಮಿ ಪೌಡರ್ ,ಕಲ್ಲುಸಕ್ಕರೆ ಪೌಡರ್,ಸೋಂಪು ಪೌಡರ್ (ಸಮಪ್ರಮಾಣದಲ್ಲಿ )
ಮಾಡೋದು ಹೇಗೆ: 250ಗ್ರಾಮ್ ಬಾದಾಮಿಯನ್ನು ತಗೊಂಡು ಅದನ್ನ ಎಂಟರಿಂದ ಹತ್ತು ಗಂಟೆಯಷ್ಟು ಕಾಲ ನೀರಿನಲ್ಲಿ ನೆನೆಸಿ ಇಡಿ. ನಂತರ ಅದರ ಸಿಪ್ಪೆ ತೆಗೆದು ಬಿಸಿಲಿನಲ್ಲಿ ಒಣಗಿಸಿ ಅರ್ಧ ಗಂಟೆ ಬಿಸಿಲಿನಲ್ಲಿ ಒಣಗಿಸಿದ ನಂತರ. ಸ್ವಲ್ಪ ಹೊತ್ತಿನ ನಂತರ ಬಾಣಲೆಯಲ್ಲಿ ತುಪ್ಪದ ಜೊತೆಗೆ ಅದನ್ನು ಫ್ರೈ ಮಾಡ್ಕೊಂಡು ನುಣ್ಣಗೆ ಪುಡಿಮಾಕೊಳ್ಳಿ. ನಂತರ 250ಗ್ರಾಮ್ ಸೋಂಪನ್ನು ತೆಗೆದುಕೊಂಡು ಅದನ್ನು ತುಪ್ಪದೊಂದಿಗೆ ಹುರಿದು ಅದನ್ನೂ ಕೂಡ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ತದ ನಂತರ 250ಗ್ರಾಮ್ ಕಲ್ಲುಸಕ್ಕರೆಯನ್ನ ತೆಗೆದು ಕೊಂಡು ಪುಡಿಮಾಡಿಕೊಳ್ಳಿ. ಈ ಮೂರು ಪದಾರ್ಥಗಳನ್ನು ಪುಡಿಮಾಡಿದ ನಂತರ ಮೂರು ವಸ್ತುಗಳನ್ನು ಮಿಕ್ಸ್ ಮಾಡಿಕೊಂಡು ಗಾಳಿಹಾಡದ ಗಾಜಿನ ಬಾಟಲ್ ನಲ್ಲಿ ಹಾಕಿಕೊಂಡು ಇಟ್ಕೊಳಿ.
ಪ್ರತಿದಿನ ದೊಡ್ಡವರು ಎರಡು ಚಮಚೆಯಷ್ಟು ಮತ್ತು ಚಿಕ್ಕ ಮಕ್ಕಳು ಒಂದು ಚಮಚೆಯಷ್ಟು ಈ ಮಿಶ್ರಣವನ್ನು ಕಾಯಿಸಿದ ಹಸುವಿನ ಹಾಲಿನ(ಎಮ್ಮೆ ಹಾಲನ್ನು ಬಳಸಬೇಡಿ) ಜೊತೆ ಹಾಕಿ ಕುಡಿಯಬೇಕು.ಹೀಗೆ ಮಾಡೋದ್ರಿಂದ ತಮ್ಮ ಕಣ್ಣಿನ ದೃಷ್ಟಿಯ ಕ್ಷಮತೆ ಹೆಚ್ಚುತ್ತದೆ. ಈ ಮನೆಮದ್ದನ್ನು ಕನಿಷ್ಠ ಮೂರು ತಿಂಗಳವರೆ ಉಪಯೋಗಿಸಬೇಕು. ಚಿಕ್ಕ ಮಕ್ಕಳು ಈ ಮನೆ ಮದ್ದನ್ನು ಉಪಯೋಗಿಸುವುದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗೋದಿಲ್ಲ. ಇದರಲ್ಲಿ ಬಾದಾಮಿ ಹೆಚ್ಚಾಗಿರೋದ್ರಿಂದ ಅವಳ ಮೆದುಳು ಹೆಚ್ಚು ದಕ್ಷಗೊಂಡು ಅವರು ತುಂಬಾ ಚುರಾಕಾಗುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
