fbpx
ಸಣ್ಣ ಕಥೆ

ತೆನಾಲಿರಾಮ ಇಷ್ಟು ಬುದ್ದಿವಂತನಾಗಿದ್ದಕ್ಕೇನೆ, ಕಳ್ಳತನಮಾಡಿನೂ ಶಿಕ್ಷೆಯಿಂದ ಪಾರಾಗಿದ್ದು…

ತೆನಾಲಿರಾಮ ಇಷ್ಟು ಬುದ್ದಿವಂತನಾಗಿದ್ದಕ್ಕೇನೆ, ಕಳ್ಳತನಮಾಡಿನೂ ಶಿಕ್ಷೆಯಿಂದ ಪಾರಾಗಿದ್ದು…

 

ಶ್ರೀ ಕೃಷ್ಣ ದೇವಾರಾಯ ವಿಜಯನಗರ ಚಕ್ರವರ್ತಿಯಾಗಿದ್ದನು. ಅವನ ಆಸ್ಥಾನದಲ್ಲಿ ಅವರಿಗೆ ಎಂಟು ಜನ ಸಲಹೆಗಾರರು ಇದ್ದರು. ತೆನಾಲಿ ರಾಮ ಅವರಲ್ಲಿ ಒಬ್ಬರು.ಅವನು ಬುದ್ಧಿವಂತನಾಗಿದ್ದನು. ಕೃಷ್ಣ ದೇವರಾಯನು ತನ್ನ ತೋಟಲ್ಲಿ ಅಪರೂಪದ ಬದನೆಕಾಯಿಯ ಗಿಡಗಳನ್ನು ಹಾಕಿಸಿದ್ದನು. ಮತ್ತು ಅವುಗಳನ್ನು ಯಾರು ಕಳವು ಮಾಡದ ಹಾಗೆ ಕಾವಲುಗಾರರನ್ನು ಇಡಿಸಿದ್ದನು.ಅಂತಹ ಬದನೇಕಾಯಿ ತಳಿ ವಿಜಯನಗರ ಸಾಮ್ರಾಜ್ಯದಾದ್ಯಂತ ಎಲ್ಲೂ ಸಿಗುತ್ತಿರಲಿಲ್ಲವಂತೆ, ಅಂತಹ ಅದ್ಭುತ ಬದನೇಕಾಯಿ ತಳಿ ಅದು.

ಈ ಬದನೆಕಾಯಿಯ ಗೊಜ್ಜಿನ ರುಚಿಯನ್ನು ಸವಿಯಲು ಕೃಷದೇವರಾಯರು ತನ್ನ ಆಸ್ಥಾನದ ಆಪ್ತರಿಗೆ ಒಂದು ಔತಣ ಕೂಟವನ್ನು ಏರ್ಪಡಿಸಿದನು. ಆ ಕೂಟಕ್ಕೆ ತೆನಾಲಿ ರಾಮಕೃಷ್ಣನು ಹೋಗಿದ್ದನು. ಎಲ್ಲರು ಬದನೆಕಾಯಿಯನ್ನು ಬಹಳ ಸಂತೋಷದಿಂದ ತಿಂದರು. ತೆನಾಲಿ ರಾಮನಿಗೆ ಆ ಬದನೆಕಾಯಿಯ ರುಚಿಯನ್ನು ಮರಿಯಲು ಆಗಲಿಲ್ಲ.ಅವನು ಮನೆಗೆ ಬಂದು ಆ ಬದ್ನೇಕಾಯಿ ಗೊಜ್ಜಿನ ರುಚಿಯ ಬಗ್ಗೆ ತನ್ನ ಹೆಂಡತಿಯಲ್ಲಿ ಹೇಳುತ್ತಾನೆ.
ಬದನೇಕಾಯಿ ಗೊಜ್ಜಿನ ಬಗ್ಗೆ ಕೇಳುತ್ತಿದ್ದಂತೆಯೇ ತೆನಾಲಿ ರಾಮನ ಹೆಂಡತಿಯ ಬಾಯಲ್ಲಿ ನೀರೂರಲು ಶುರುವಾಗುತ್ತದೆ.ಆಕೆಗೂ ಬದನೇಕಾಯಿ ಗೊಜ್ಜು ಎಂದರೆ ಪಂಚ ಪ್ರಾಣ. ತನಗೂ ಆ ಬದನೇಕಾಯಿ ತಂದು ಕೊಡುವಂತೆ ಗಂಡನನ್ನು ಪೀಡಿಸಲು ಶುರು ಮಾಡುತ್ತಾಳೆ. ತೆನಾಲಿ ರಾಮ ಅಲ್ಲಿರುವ ಭದ್ರತೆ ವಿಚಾರಗಳನ್ನು ತಿಳಿಸಿದರೂ ಆಕೆ ಕೇಳುವುದಿಲ್ಲ. ತೆನಾಲಿ ರಾಮ ಈಗ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಅತ್ತ ರಾಜರನ್ನು ಹೋಗಿ ನೇರವಾಗಿ ಬದನೇಕಾಯಿ ಕೊಡಿ ಅಂದು ಕೇಳಲೂ ಸಾಧ್ಯವಿಲ್ಲ, ಕೇಳಿದರೂ ಅವರು ಕೊಡುವುದಿಲ್ಲವೆಂದು ಗೊತ್ತು ಇತ್ತ ಹೆಂಡತಿ ಒಂದೇ ಸಮ ಹಠ ಹಿಡಿದು ಕುಳಿತಿರುತ್ತಾಳೆ. ಹೀಗಿರುವಾಗ ಮರುದಿನ ರಾತ್ರಿಯೇ ರಾಜರ ಹಿತ್ತಲಿಗೆ ನುಗ್ಗಿದ ತೆನಾಲಿ ರಾಮ ಕೆಲವು ಬದನೆಕಾಯಿಗಳನ್ನು ಕದ್ದು ಮನೆಗೆ ತರುತ್ತಾನೆ.

ಆ ದಿನ ರಾತ್ರಿಯೇ ಬದನೇಕಾಯಿ ಗೊಜ್ಜು ತಯಾರಾಗುತ್ತದೆ. ಮಾಡಿದ ಬದನೇಕಾಯಿ ಗೊಜ್ಜನ್ನು ಮಗನಿಗೂ ತಿನ್ನಿಸಬೇಕು ಎಂದು ರಾಮಕೃಷ್ಣನ ಹೆಂಡತಿಗೆ ಆಸೆಯಾಗುತ್ತದೆ. ರಾಜರು ತನಿಖೆಗೆ ಆದೇಶಿಸಿದರೆ ಮಗನೆಲ್ಲಿ ಬಾಯಿ ಬಿಟ್ಟುಬಿಡುವನೋ ಎಂಬ ಭಯದಿಂದ ಅವನಿಗೆ ಬದನೇಕಾಯಿ ಗೊಜ್ಜನ್ನು ಬಡಿಸಬಾರದೆನ್ನುವುದು ತೆನಾಲಿ ರಾಮನ ವಾದ ಮಾಡುತ್ತಾನೆ. ಹೆಂಡತಿ ಹಠ ಹಿಡಿದು ಕುಳಿತುಬಿಡುತ್ತಾಳೆ.ಹೆಂಡತಿಯ ಮಾತಿಗೆ ಕಟ್ಟುಬಿದ್ದು ಮಗನಿಗೂ ಬದನೇಕಾಯಿ ಗೊಜ್ಜುತಿನ್ನಿಸಲು ಒಪ್ಪಿಕೊಳ್ಳುತ್ತಾನೆ. ಮಗ ಶಾಲೆಯಿಂದ ಬಂದು ಆಟವಾಡಿ, ತನಗೆ ಶಾಲೆಯಲ್ಲಿ ಕೊಟ್ಟಿದ್ದ ಮನೆಗೆಲಸಗಳನ್ನೆಲ್ಲ ಮುಗಿಸಿ ಉಪ್ಪರಿಗೆಯ ಮೇಲೆ ಹಾಗೆ ನಿದ್ರೆಗೆ ಜಾರಿರುತ್ತಾನೆ. ತೆನಾಲಿ ರಾಮ ಅಲ್ಲೇ ಪಕ್ಕದಲ್ಲಿದ್ದ ನೀರು ತುಂಬಿದ ಮಡಕೆಯನ್ನು ತೆಗೆದು ಅದರಲ್ಲಿದ್ದ ನೀರನ್ನೆಲ್ಲ ಮಗನ ಮೇಲೆ ಸುರಿದು ಬಿಡುತ್ತಾನೆ. ನಿದ್ರೆಯಲ್ಲಿದ್ದ ಮಗ ಕೊಡಲೇ ಚೀರುತ್ತಾ ಅಲ್ಲಿಂದ ಎದ್ದುಬಿಡುತ್ತಾನೆ. ಕೂಡಲೇ ತೆನಾಲಿ ರಾಮ ತನ್ನ ಹೆಂಡತಿಯನ್ನು ಜೋರಾಗಿ ಕೂಗಿ ಹೇಳುತ್ತಾನೆ. ‘ಹೊರಗಡೆ ಮಳೆ ಬರುತ್ತಿದೆ, ಮಗನನ್ನು ಉಪ್ಪರಿಗೆಯಿಂದ ಒಳಗೆಕರೆದುಕೊಂಡು ಬಾ”.

ನಿದ್ದೆಗಣ್ಣಿನಲ್ಲಿದ್ದ ತೆನಾಲಿರಾಮನ ಮಗ ಹೊರಗೆ ಮಳೆ ಬರುತ್ತಿದೆ ಎಂದು ಕೊಂಡು ಒಳಗೆ ಬರುತ್ತಾನೆ.ಆ ಮೂವರು ಬದನೇಕಾಯಿ ಗೀಜ್ಜಿನಲ್ಲಿ ಊಟಮಾಡುತ್ತಾರೆ. ಮಾರನೇ ದಿನ ಬೆಳಿಗ್ಗೆ ಅರಮನೆಯಲ್ಲಿ ಬದನೇಕಾಯಿ ಕಳ್ಳತನವಾದ ವಿಷ್ಯ ಗೊತ್ತಾಗುತ್ತದೆ.ಇದರಿಂದ ಕೋಪಗೊಂಡ ಕೃಷ್ಣ ದೇವರಾಯನುಕಳ್ಳನನ್ನು ಹಿಡಿದು ಕೊಟ್ಟವರಿಗೆ ಬಹುಮಾನ ಕೊಡುವುದಾಗಿ ಘೋಷಿಸುತ್ತಾನೆ.
ಆಸ್ತಾನದವರಿಗೆ ಬುದ್ಧಿವಂತನಾದ ತೆನಾಲಿರಾಮ ಮೇಲೆ ಅನುಮಾನ ಬರುತ್ತದೆ. ಆಗ ರಾಜನು ತೆನಾಲಿರಾಮನನ್ನು ಕರೆಸಿ ವಿಚಾರಿಸುತ್ತಾನೆ.ತೆನಾಲಿ ಯು ತನಗೇನು ತಿಳಿದಿಲ್ಲ ಎಂದು ಉತ್ತರಿಸುತ್ತಾನೆ. ಪ್ರಧಾನ ಮಂತ್ರಿಗಳಿಗೆ ತೆನಾಲಿ ರಾಮ ಸುಳ್ಳು ಹೇಳುತ್ತಿದ್ದಾನೆ ಎಂದೆನಿಸಿ ಕೂಡಲೇ ತೆನಾಲಿ ರಾಮನ ಮುಗ್ದ ಮಗನನ್ನು ಕೇಳಿದರೆ ಸತ್ಯ ತಿಳಿಯಬಹುದೆಂದು ತೆನಾಲಿ ರಾಮನ ಮಗನನ್ನು ಅರಮನೆಗೆ ಕರೆತರುವಂತೆ ಭಟರನ್ನು ಕಳುಹಿಸುತ್ತಾನೆ. ಆ ಮಗು ಬಂದಮೇಲೆ ರಾಜನು ಅವನನ್ನು ರಾತ್ರಿ ಊಟ ಏನು ಮಾಡಿದ್ದರು ನಿಮ್ಮ ಮನೆಯಲ್ಲಿ ಎಂದು ಕೇಳಿದರು. ಅದಕ್ಕೆ ಆ ಹುಡುಗ “ಬದನೆಕಾಯಿಯ ಗೊಜ್ಜು ಮಾಡಿದ್ರು ಮತ್ತು ಅದು ತುಂಬಾ ರುಚಿಯಾಗಿತ್ತು”ಎಂದು ಹೇಳುತ್ತಾನೆ.

ಆಗ ತೆನಾಲಿ ರಾಮ ‘ಪ್ರಭುಗಳು ಕ್ಷಮಿಸಬೇಕು, ನಾನು ನೆನ್ನೆ ತಮ್ಮ ಭೋಜನ ಕೂಟದಲ್ಲಿ ತಿಂದ ಬದನೆಕಾಯಿ ಗೊಜ್ಜಿನ ಬಗ್ಗೆ ಮನೆಯಲ್ಲಿ ವಿವರಿಸುತ್ತಿದ್ದೆ. ಹಾಗಾಗಿ ಎಲ್ಲೋ ಅದೇ ಇವನಿಗೆ ಕನಸಿನಲ್ಲಿ ಬಂದಿರಬೇಕು’. ಎಂದು ನಾಟಕವಾಡಿಬಿಟ್ಟನು.
ಆಗ ಹುಡುಗನನ್ನು ಹತ್ತಿರಕ್ಕೆ ಕರೆದ ಮಹಾರಾಜರು ‘ಮಗೂ ನೆನ್ನೆ ರಾತ್ರಿ ನೀನು ಏನೇನು ಮಾಡಿದೆ ಹೇಳುವೆಯಾ?’ ಎನ್ನುತ್ತಾರೆ. ಹುಡುಗ ‘ನೆನ್ನೆ ಶಾಲೆಯಿಂದ ಬಂದ ತಕ್ಷಣ ಆಟವಾಡಿ ನಂತರ ಮನೆಗೆಲಸಗಳೆನ್ನೆಲ್ಲಾ ಮುಗಿಸಿ ಉಪ್ಪರಿಗೆಯ ಮೇಲೆ ಮಲಗಿದ್ದೆ ಹಾಗೇ ನಿದ್ರೆ ಹತ್ತಿಬಿಟ್ಟಿತ್ತು. ಅನಂತರ ನನಗೆ ಎಚ್ಚರವಾಗಿದ್ದು ಮಳೆ ಬಂದ ನಂತರವೇ. ಮಳೆಯಿಂದ ನೆನೆದು ಒದ್ದೆಯಾದ ನನ್ನನ್ನು ನನ್ನ ತಾಯಿ ಒಳಗೆ ಕರೆದು ಊಟ ಮಾಡಿಸಿ ಮಲಗಿಸಿದಳು’ ಎಂದ. ವಿಜಯನಗರದಲ್ಲಿ ಎಷ್ಟೋ ದಿನಗಳಿಂದ ಮಳೆಯೇ ಬಂದಿರಲಿಲ್ಲ. ಇದನ್ನು ಕೇಳಿಸಿಕೊಂಡ ಕೃಷ್ಣದೇವರಾಯನು ಹುಡುಗನು ನಿಜವಾಗಿಯೂ ಕನಸು ಕಂಡಿರಬಹುದೆಂದೂ ತೆನಾಲಿ ರಾಮಕೃಷ್ಣನ ಶಿಕ್ಷೆಯಿಂದ ತಪ್ಪಿಸಿ ಬಿಟ್ಟು ಬಿಟ್ಟರು. ಹೀಗೆ ತೆನಾಲಿ ರಾಮಕೃಷ್ಣನು ತನಗೆ ಬಂದಿದ್ದ ಸಂಕಷ್ಟವನ್ನು ತನ್ನ ಬುದ್ಧಿಶಕ್ತಿಯಿಂದ ನಿವಾರಿಸಿಕೊಂಡನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top