fbpx
ದೇವರು

ಶ್ರೀ ಕೃಷ್ಣ ಹೇಳಿದಂತೆ ದಿನ ಬೆಳಿಗ್ಗೆ ಹೀಗೆ ಮಾಡಿದರೆ ಸಂಕಷ್ಟ ದುರಾಗುತ್ತೆ.

ಶ್ರೀ ಕೃಷ್ಣ ಹೇಳಿದಂತೆ ದಿನ ಬೆಳಿಗ್ಗೆ ಹೀಗೆ ಮಾಡಿದರೆ ಸಂಕಷ್ಟ ದುರಾಗುತ್ತೆ.

ಭಗವದ್ಗೀತೆ ಹಿಂದೂಗಳ ಓಂದು ಪವಿತ್ರ ಧರ್ಮಗ್ರಂಥ ಮಾತ್ರವಲ್ಲ. ಇದರಲ್ಲಿ ಜೀವನಕ್ಕೆ ಬೇಕಾಗಿರುವಂತಹ ಹಲವಾರು ಸಾರಗಳು ಇವೆ. ಇದನ್ನು ಓದಿಕೊಂಡು ಜೀವನವನ್ನು  ಮುನ್ನೆಡಿಸಿಕೊಂಡು ಹೋದರೆ ಅದರಿಂದ ಖಂಡಿತವಾಗಿಯೂ ನಮಗೆ ಒಳ್ಳೆಯದಾಗುತ್ತದೆ. ಭಗವದ್ಗೀತೆಯಲ್ಲಿರುವ  ಪ್ರಕಾರ ಶ್ರೀ ಕೃಷ್ಣನು ಕೆಲವೊಂದು ಉಪದೇಶಗಳು ಕೇವಲ ಹಿಂದೂಗಳಿಗೆ ಮಾತ್ರವಲ್ಲದೆ ಪ್ರತಿಯೊಬ್ಬರ ಜೀವನದಲ್ಲಿಯೂ  ಅಳವಡಿಸಿಕೊಳ್ಳ ಬಹುದಾಗಿದೆ.

ಮನುಷ್ಯನ ಜೀವನದ ಆರಂಭದಿಂದ ಹಿಡಿದು ಅಂತ್ಯದ ತನಕ ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ  ಹೇಳಿದ್ದಾನೆ. ಪ್ರತಿದಿನವೂ ನಿದ್ರೆಯಿಂದ  ಏಳುವಾಗ ಯಾವ ರೀತಿಯಲ್ಲಿ ಏಳಬೇಕು ಎನ್ನುವ ಬಗ್ಗೆಯೂ ಆ ಭಗವಂತನಾದ  ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿದ್ದಾನೆ.ಇದನ್ನು ಪಾಲಿಸಿಕೊಂಡು ಹೋದರೆ ಖಂಡಿತವಾಗಿಯೂ ಉತ್ತಮ ದಿನ ನಿಮ್ಮದಾಗುವುದರಲ್ಲಿ ಸಂಶಯವೇ ಇಲ್ಲ.

ಆ ಭಗವಂತನಾದ ಶ್ರೀ ಕೃಷ್ಣನು ಹೇಳಿರುವುದು.

“ಮಹರ್ಷ್ಯ ಸಪ್ತ ಪೂರ್ವೇ ಚತ್ಪರೇ  ಮಾನವಸ್ತಥ ಮಧಾವ ಮನಾಸ ಜಾತಾ ಯಷ ಲೋಕಹೀಯಂಪ್ರಜಾಹ್”

ಶ್ಲೋಕದ ಅರ್ಥ.

ಸಪ್ತ ಋಷಿಗಳು ನನ್ನ ಹೃದಯದಿಂದ ಜನ್ಮ ತಳೆದಿದ್ದಾರೆ ಮತ್ತು ಅವರೆಲ್ಲರೂ ನನ್ನ ಪ್ರತಿಬಿಂಬ.ಯಾರು ಇವರೆಲ್ಲರ ಹೆಸರನ್ನು ಬೆಳಗ್ಗೆ ಎದ್ದ ಕೂಡಲೇ  ಜಪಿಸುತ್ತಾರೆಯೋ ಅವರ ದಿನವು ಸಂತೋಷದಾಯಕವಾಗಲಿದೆ. ಅವರಿಗೆ ಆ ದಿನ ಯಶಸ್ಸು ಕೂಡ ಸಿಗಲಿದೆ.

ಸಪ್ತ ಋಷಿಗಳೆಲ್ಲಾ  ಕೃಷ್ಣನ ಪ್ರತಿಬಿಂಬ.

1.ವಿಶ್ವಾಮಿತ್ರ:- ಇವರು ಗಾಯಿತ್ರಿ ಮಂತ್ರವನ್ನು ಬರೆದಿರುವವರು ಮತ್ತು ರಾಮ ಹಾಗೂ ಲಕ್ಷ್ಮಣನಿಗೆ ದೇವಶಾಸ್ತ್ರವನ್ನು ಹೇಳಿಕೊಟ್ಟ ಗುರುಯುದ್ಧದ ಜ್ಞಾನ ಮತ್ತು ಅಸ್ತ್ರಗಳನ್ನು ಉಪಯೋಗಿಸುವ ರೀತಿಯನ್ನು ಹೇಳಿಕೊಟ್ಟಿದ್ದಾರೆ. ರಾಮಾಯಣದಲ್ಲಿ  ಬರುವಂತಹ ಹಲವಾರು ರೀತಿಯ ದುಷ್ಟರನ್ನು ಧ್ವಂಸ ಮಾಡಲು ರಾಮ ಮತ್ತು ಲಕ್ಷ್ಮಣರಿಗೆ ವಿಶ್ವಾಮಿತ್ರ ಮಾರ್ಗದರ್ಶನ ನೀಡಿದ್ದಾರೆ.

2.ಅಗಸ್ತ್ಯ:- ಅಗಸ್ತ್ಯರ ಹುಟ್ಟಿನ ಬಗ್ಗೆ ತುಂಬಾ ಕುತೂಹಲಕಾರಿಯಾದ ಕಥೆ ಇದೆ.ಅಗಸ್ತ್ಯರನ್ನು ತಂದೆಯೂ ಅಲ್ಲ, ತಾಯಿಯೂ ಅಲ್ಲ ಎನ್ನಲಾಗುತ್ತದೆ. ಪುರಾಣಗಳ ಪ್ರಕಾರ ವರುಣ ಮತ್ತು ಮಿತ್ರಾ ಯಜ್ಞ ಮಾಡುತ್ತಿದ್ದ ವೇಳೆ ತ್ರಿಲೋಕ ಸುಂದರಿಯಾದ  ಊರ್ಮಿಳೆಯು ಪ್ರತ್ಯಕ್ಷಳಾಗುತ್ತಾಳೆ. ಆಕೆಯ ರೂಪವನ್ನು ನೋಡಿ ಅವರಿಬ್ಬರಿಗೆ ಸ್ಕಲನವಾಗಿ ವೀರ್ಯವು ಅಲ್ಲೇ ನೆಲದ ಮೇಲೆ ಬೀಳುತ್ತದೆ. ಅದು ಗರ್ಭವಾಗಿ ಅದರಲ್ಲಿ ಅಗಸ್ತ್ಯರು ಜನಿಸಿದ್ದಾರೆ ಎಂದು ಹೇಳಲಾಗುತ್ತದೆ.

3.ಬೃಗು:- ಬ್ರಹ್ಮನು ಸೃಷ್ಟಿಸಿದ ಹಲವಾರು ಪ್ರಜಾಪತಿಗಳಲ್ಲಿ ಇವರು ಒಬ್ಬರಾಗಿದ್ದಾರೆ ಮತ್ತು  ಬೃಗು ಸಂಹಿತ ಎನ್ನುವ ಪುಸ್ತಕದ ಲೇಖಕರಾಗಿದ್ದಾರೆ.ಬ್ರಹ್ಮನ ತಲೆಯಿಂದ ಜನಿಸಿದವರು ಬೃಗು ಮಹರ್ಷಿಗಳು.

4.ಕಶ್ಯಪ:- ಋಷಿ ಕಶ್ಯಪರು ತಪಸ್ಸು ಮಾಡಿದಂತಹ ಸ್ಥಳದಿಂದಾಗಿ ‘ಕಾಶ್ಮೀರ’ ಎನ್ನುವ  ಹೆಸರು ಬಂದಿದೆ.ಕಶ್ಯಪ್ ಮಿರ್ ಅಥವಾ ಕಶ್ಯಪ ನದಿಯಿಂದ  ಕಾಶ್ಮೀರ ಎನ್ನುವ ಹೆಸರು ಬಂದಿದೆ ಎನ್ನಲಾಗಿದೆ.

5.ಜಮದಗ್ನಿ:- ಹಿಂದೂ ಪುರಾಣಗಳ ಪ್ರಕಾರ ಜಮದಗ್ನಿಯೂ ಕೂಡ ಸಪ್ತ ಋಷಿಗಳಲ್ಲಿ ಒಬ್ಬರಾಗಿದ್ದು. ಜಮದಗ್ನಿಯು ಪರಶುರಾಮರ ತಂದೆಯಾಗಿದ್ದು, ಇವರು ವಿಷ್ಣುವಿನ 6ನೇ ಅವತಾರ ವಾಗಿದ್ದಾರೆ.ಜಮದಗ್ನಿಗೆ ಋಷಿಗಳಿಗೆ   ರೇಣುಕಾ ಎಂಬ ಪತ್ನಿಯಿದ್ದು 5 ಜನ ಮಕ್ಕಳಿದ್ದರು.ಇವರಲ್ಲಿ ಚಿಕ್ಕವನೇ ಪರಶುರಾಮ.ಜಮದಗ್ನಿಯೂ ಸಾಕ್ಷತ್ ಶಿವನ ಅವತಾರವೆಂದೇ ಹೇಳಲಾಗಿದೆ.

6.ವಶಿಷ್ಠ:- ದಶರಥನ ನಾಲ್ಕು ಮಕ್ಕಳ ಗುರುಗಳು ವಶಿಷ್ಠರು.ನಾಲ್ಕು ಮಂದಿಗೆ ಪಾಠ ಮಾಡುತ್ತಿರುವ ವೇಳೆ ರಾಮ ಹೇಳಿದಂತೆ ಪ್ರಶ್ನೆ ಹಾಗೂ ಕೆಲವೊಂದು ಗೊಂದಲಗಳಿಗೆ ವಶಿಷ್ಠರು ಉತ್ತರಿಸಿದ್ದಾರೆ.ಅವರನ್ನು ಯೋಗ ವಶಿಷ್ಠರೆಂದು ಸಹ ಕರೆಯಲಾಗುತ್ತದೆ. ಬ್ರಹ್ಮನ  ಶಕ್ತಿಯಿಂದ ಜನಿಸಿದ್ದ ವಶಿಷ್ಠರು ವೇದಶಾಸ್ತ್ರದ ಎಲ್ಲಾ ವಿದ್ಯೆಗಳನ್ನು ಬಲ್ಲವರಾಗಿದ್ದರು.

7.ಅತ್ರಿ:- ಸಪ್ತ ಋಷಿಗಳಲ್ಲಿ ಇವರು ಕೊನೆಯವರು ಮತ್ತು ಬ್ರಹ್ಮನ ನಾಲಗೆಯಿಂದ ಹುಟ್ಟಿರುವರು ಎಂದು ಹೇಳಲಾಗುತ್ತದೆ. ಭಗವಂತನಾದ ಶ್ರೀ ಕೃಷ್ಣನ ಪ್ರಕಾರ ಬೆಳಿಗ್ಗೆ ಎದ್ದ ಬಳಿಕ ಈ ಏಳು ಹೆಸರುಗಳನ್ನು ಹೇಳಿದರೆ ನಿಮ್ಮ ದಿನವೂ ಉತ್ತಮವಾಗಿ ಯಶಸ್ಸನ್ನು ಕಾಣುತ್ತೀರಿ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top