fbpx
ಆರೋಗ್ಯ

ಈ ಲಕ್ಷಣಗಳು ನಿಮ್ಮಲ್ಲಿ ಕಾಣುಸ್ಕೊಳ್ತಿದ್ರೆ ಸಕ್ಕರೆ ಕಾಯಿಲೆ ಬರೋ ಚಾನ್ಸಸ್ ಜಾಸ್ತಿ ಇರುತ್ತೆ.

 

ಈ ಲಕ್ಷಣಗಳು ನಿಮ್ಮಲ್ಲಿ  ಕಾಣುಸ್ಕೊಳ್ತಿದ್ರೆ ಸಕ್ಕರೆ ಕಾಯಿಲೆ ಬರೋ ಚಾನ್ಸಸ್ ಜಾಸ್ತಿ ಇರುತ್ತೆ.

ಹೆಚ್ಚಿನ ಜನರು ಮಾತ್ರ ಶುಗರ್ ಕಾಯಿಲೆ ಇರುವವರಿಗೆ ಮಾತ್ರ ರಕ್ತದಲ್ಲಿ ಸಕ್ಕರೆ ಮಟ್ಟ ಇರುತ್ತದೆ ಭಾವಿಸಿರುತ್ತಾರೆ. ಹಾಗೇನಾದರು ನೀವು ತಿಳಿದುಕೊಂಡಿದ್ದಾರೆ ಅದು ಸುಳ್ಳು. ಎಲ್ಲಾ ವ್ಯಕ್ತಿಯ ರಕ್ತದಲ್ಲೂ ಸಕ್ಕರೆಯ ಪ್ರಮಾಣ ಇದ್ದೆ ಇರುತ್ತದೆ. ರಕ್ತದ ಅಧಿಕಸಕ್ಕರೆ ಪ್ರಮಾಣವು ಕೋಶಗಳನ್ನು ಪ್ರವೇಶಿಸುವುದರಿಂದ ಗ್ಲುಕೋಸ್ ಅನ್ನು ತಡೆಯುತ್ತದೆ. ಪರಿಣಾಮವಾಗಿ, ದೇಹವು ಶಕ್ತಿಯನ್ನು ಕಳೆದುಕೊಳ್ಳುತ್ತದೆ. ನಿಮ್ಮಲ್ಲೇ ಆಗುವ ಕೆಲವು ಬದಲಾವಣೆಗಳಿಂದ ನಿಮ್ಮ ಆಹಾರದಲ್ಲಿ ಸಕ್ಕರೆ ಪ್ರಮಾಣವು ಹೆಚ್ಚಾಗುತ್ತಿದೆ ಎಂದು ನೀವು ತಿಳಿದುಕೊಳ್ಳಬಹುದು. ಅವು ಈ ಕೆಳಗಿನಂತಿವೆ

1.ಹೆಚ್ಚಿನ ಆಯಾಸ:

ರಕ್ತದಲ್ಲಿನ ಅಧಿಕಸಕ್ಕರೆ ಪ್ರಮಾಣದಲ್ಲಿ ದೇಹವು ಗ್ಲುಕೋಸ್ ಅನ್ನು ಸರಿಯಾಗಿ ಶೇಖರಿಸಿಡಲು ಮತ್ತು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಶಕ್ತಿಯು ಅಸಮರ್ಥವಾಗಿ ಬಳಸಲ್ಪಡುತ್ತದೆ ಮತ್ತು ದೇಹದ ಜೀವಕೋಶಗಳು ಅಗತ್ಯವಿರುವ ವಿಟಮಿನ್ಗಳನ್ನು ಸ್ವೀಕರಿಸುವುದಿಲ್ಲ. ಈ ಎಲ್ಲಾ ಕಾರಣಗಳಿಂದ ವ್ಯಕ್ತಿಯು ಆಗಾಗ್ಗೆ ಆಯಾಸಗೊಂಡಂತೆ ಭಾವಿಸುತ್ತಾನೆ.

2.ಪದೇ ಪದೇ ಮೂತ್ರವಿಸರ್ಜನೆ:

 

ರಕ್ತದಲ್ಲಿ ಸಕ್ಕರೆ ಅಧಿಕವಾಗಿದ್ದರೆ, ಮೂತ್ರಪಿಂಡಗಳು ದ್ರವದ್ರವ್ಯವನ್ನು ಪುನರ್ಜೋಡಿಸಲು ಸಾಧ್ಯವಾಗುವುದಿಲ್ಲ.ಆದ್ದರಿಂದ, ರಕ್ತದಲ್ಲಿ ಮತ್ತು ಕೋಶಗಳಲ್ಲಿ ಗ್ಲುಕೋಸ್ ಸಾಂದ್ರತೆಯನ್ನು ಸಮನಾಗಿರಿಸಲು ಪ್ರಯತ್ನಿಸುತ್ತಿರುವ ದೇಹವು ಅಂತರ್ಜೀವಕೋಶದ ರಕ್ತವನ್ನು ಕರಗಿಸುತ್ತದೆ, ಹೀಗಾಗಿ ಗ್ಲುಕೋಸ್ ಸಾಂದ್ರತೆಯನ್ನು ಕಡಿಮೆಗೊಳಿಸುತ್ತದೆ. ಇದು ಆಗಾಗ್ಗೆ ಮೂತ್ರವಿಸರ್ಜನೆಗೆ ಕಾರಣವಾಗುತ್ತದೆ.

 

3.ಒಣಗಿದ ಬಾಯಿ ಮತ್ತು ಅತಿಯಾದ ಬಾಯಾರಿಕೆ.

ಒಣಬಾಯಿ ಮತ್ತು ಅತಿಯಾದ ಬಾಯಾರಿಕೆಗಳು ತೀವ್ರವಾದ ನೀರಿನ ಅಂಶದ ನಷ್ಟದಿಂದ ಉಂಟಾಗುತ್ತದೆ. ನಿರ್ಜಲೀಕರಣ ಮಟ್ಟವನ್ನು ನಿರ್ಣಯಿಸುವ ಮತ್ತು ಬಾಯಾರಿಕೆಗೆ ಕಾರಣ  ಹೈಪೋಥಾಲಮಸ್ ಅಂಶ.

4.ತೂಕದಲ್ಲಿ ಇಳಿಕೆ :

ನಿಮ್ಮ ದೇಹದ ತೂಕದಲ್ಲಿ ಇಳಿಕೆಯಾಗುತ್ತಿದ್ದರೆ ನಿಮ್ಮಲ್ಲಿ ಸಕ್ಕರೆ ಪ್ರಮಾಣ ಕ್ರಮೇಣವಾಗಿ ಹೆಚ್ಚುತ್ತಿದೆ ಎಂದರ್ಥ.ಅತಿಯಾದ ಗ್ಲೂಕೋಸ್ ಪ್ರಮಾಣವು ಇದಕ್ಕೆ ಕಾರಣವಾಗುತ್ತದೆ.

5.ಒಣಗಿದ ಚರ್ಮ :

ದೇಹದಲ್ಲಿ ಸಕ್ಕೆರೆ ಅಂಶ ಹೆಚ್ಚಾಗುತ್ತಿದ್ದಂತೆ ಮೂತ್ರ ವಿಸರ್ಜನೆಯು ಹೆಚ್ಚಾಗುತ್ತದೆ. ವಿಪರೀತ ಮೂತ್ರವಿಸರ್ಜನೆಯು ದೇಹವು ಒಣಗಲು ಕಾರಣವಾಗುತ್ತದೆ ಮತ್ತು ನಿರ್ಜಲೀಕರಣಗೊಳಿಸುತ್ತದೆ. ಇದರಿಂದ ಚರ್ಮವು ಒಣಗಲು ಶುರುವಾಗುತ್ತದೆ.

6.ಅಸ್ಪಷ್ಟ ದೃಷ್ಟಿ:

ದೇಹದಲ್ಲಿ ಸಕ್ಕರೆ ಪ್ರಮಾಣವು ಹೆಚ್ಚಾಗುತ್ತಿದ್ದಂತೆ ಕಣ್ಣಿನ ದೃಷ್ಟಿಯೂ ಸಹ ಕಡಿಮೆಯಾಗಿ, ಕಣ್ಣು ಮಂಜಾಗುತ್ತಾ ಹೋಗುತ್ತದೆ.

7.ದೇಹದ ಮೇಲಾಗಿರುವ ಗಾಯಗಳು ಬೇಗ ವಾಸಿಯಾಗುವುದಿಲ್ಲ:

ದೇಹದಲ್ಲಿ ಸಕ್ಕೆರೆ ಪ್ರಮಾಣವು ಜಾಸ್ತಿಯಾದಾಗ ನರಗಳು ಸರಿಯಾಗಿ ಕೆಲಸ ಮಾಡುವುದಿಲ್ಲ , ರಕ್ತವು ಹದಗೆಟ್ಟು ಅಪೌಷ್ಟಿಕವಾಗುತ್ತದೆ ಹೀಗಾದಾಗ ಸಾಮಾನ್ಯವಾಗಿ ಆಗಿರುವ ಗಾಯಗಳು ಬೇಗನೆ ವಾಸಿಯಾಗುವುದಿಲ್ಲ.

8.ಸಾಂಕ್ರಾಮಿಕ ಕಾಯಿಲೆಗಳು:

ದೇಹದಲ್ಲಿ ಸಕ್ಕೆರೆಯ ಪ್ರಮಾಣವು ಹೆಚ್ಚಾಗುತ್ತಿದ್ದಾರೆ ಸಾಮನ್ಯವಾಗಿ ಜ್ವರ,ನೆಗಡಿ,ಕೆಮ್ಮು,ಶೀತಗಳು ಪದೇ ಪದೇ ಕಾಣಿಸುಕೊಳ್ಳುತ್ತಿರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top