fbpx
ಸಣ್ಣ ಕಥೆ

ಪ್ರಾಚೀನ ಕಾಲದ ರಾಜ ಪರಿವಾರದ ಈ 10 ಕರಾಳ ರಹಸ್ಯಗಳನ್ನು ಕೇಳಿದರೆ ಯಾರನ್ನಾದರೂ ಬೆಚ್ಚಿ ಬೀಳಿಸುತ್ತವೆ.

ಪ್ರಾಚೀನ ಕಾಲದ ರಾಜ ಪರಿವಾರದ  ಈ 10  ಕರಾಳ ರಹಸ್ಯಗಳನ್ನು ಕೇಳಿದರೆ ಯಾರನ್ನಾದರೂ ಬೆಚ್ಚಿ ಬೀಳಿಸುತ್ತವೆ.

ಭಾರತವು ಹಲವಾರು ರಾಜ,ರಾಣಿಯರನ್ನು ಕಂಡ ದೇಶ.ಸ್ಪಷ್ಟವಾಗಿ ಈ ರಾಜರೆಲ್ಲರೂ ಯುದ್ಧದಲ್ಲಿ ಹೋರಾಡಿದವರೇ. ಇವರು ತಮ್ಮ ಸಾಮ್ರಾಜ್ಯದ ಕಲ್ಯಾಣಕ್ಕಾಗಿ ಕೆಲಸ ಮಾಡಿದವರು.ಕೃತಿಮ,ಅತ್ಯುತ್ತಮ ದೈತ್ಯಾಕಾರದ ಕೋಟೆಗಳನ್ನು ನಿರ್ಮಿಸಿದ್ದರು.ವಿವಿಧ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು.ಆದರೂ ಸಹ ಇವರ ಖಾಸಗೀ ಜೀವನದ ಕಥೆ ಕೇಳಲು  ತುಂಬಾ ಆಸಕ್ತಿಯನ್ನು ಉಂಟುಮಾಡುತ್ತದೆ. ವಾಸ್ತವವಾಗಿ ಇವರು ರಹಸ್ಯಗಳನ್ನು ಬಚ್ಚಿಡುತ್ತಿದ್ದರು.ಇವರ ದೀರ್ಘಕಾಲದ ಆಳ್ವಿಕೆಯಲ್ಲಿಯೂ ಸಹ ರಹಸ್ಯವನ್ನು ಅಡಗಿಸುವುದರಲ್ಲಿ ನಿಸ್ಸಿಮರಾಗಿದ್ದರು.ಆದರೂ ರಾಜ ಗೋಡೆಗಳ ಒಳಗೆ ಕೆಲವು ಕಳ್ಳರು ಸಹ ಇದ್ದರು.ಅವರಿಗೆ ರಾಜರ ಪ್ರತಿಯೊಂದು ವಿಷಯವೂ ತಿಳಿದಿತ್ತು.

ಈ ಹಿಂದೆ ನೀವೆಂದಿಗೂ ಕೇಳಿರದ ರಾಜರ ರಹಸ್ಯಗಳಿವೆ.ಅದರಲ್ಲಿ ಕೆಲವು ರಹಸ್ಯಕಾರಿ ಪಿಸುಮಾತುಗಳು ರಾಷ್ಟ್ರಾದ್ಯಂತ ಹರಡಿಕೊಂಡಿವೆ. ಅವುಗಳನ್ನು ತಿಳಿಸಿದವರಿಗೆ ಖಂಡಿತವಾಗಿಯೂ  ಧನ್ಯವಾದಗಳನ್ನು ತಿಳಿಸಬೇಕು.ನಮಗೆ ಈಗ ಪ್ರಾಚೀನ ರಾಜರ ವಿಶೇಷ ಒಳನೋಟಗಳ ಬಗ್ಗೆ ಗೊತ್ತಾಗಿದೆ.ಇಲ್ಲವಾದಲ್ಲಿ ಇವರ ಯಾವುದೇ ರಹಸ್ಯಗಳು ನಮಗೆ ತಿಳಿಯುತ್ತಿರಲಿಲ್ಲ,ಹಾಗೆ ಗುಪ್ತವಾಗಿಯೇ ಉಳಿದು ಬಿಡುತ್ತಿದ್ದವು.

1.ಭರತಪುರದ ಮಹಾರಾಜ ಕಿಶನ ಸಿಂಘ ರಹಸ್ಯ.

ರಾಜಸ್ಥಾನದಲ್ಲಿ ಹಲವಾರು ರಾಜರು ದೇವರ ರೀತಿಯಲ್ಲಿಯೇ ಇದ್ದರು.  ಪ್ರಪಂಚದಲ್ಲಿ ತಮ್ಮ   ಪ್ರಚೋದನೆಗಳ ಕಾರಣದಿಂದಾಗಿ ಸರಳವಾಗಿ ಗಾಯಗೊಳ್ಳುತ್ತಿದ್ದರು.ಆ ತರಹದ ಒಬ್ಬ  ರಾಜನೇ ಕಿಶನ ಸಿಂಘ.ಇವರು ತಮ್ಮ ಸುಳ್ಳು ಸ್ವಭಾವ ಮತ್ತು ಸಿನಿಕಥೆಗೆ ಕುಖ್ಯಾತರಾಗಿದ್ದರು.ಈ ಕಿಶನ ರಾಜನು ಒಬ್ಬರು ಅಥವಾ ಇಬ್ಬರನ್ನು  ಮದುವೆಯಾಗಲಿಲ್ಲ ಬದಲಿಗೆ ಓಟ್ಟಾಗಿ ಇವನಿಗೆ 40 ರಾಣಿಯರನ್ನು  ಮುಖ್ಯ ಸಂಗಾತಿಗಳನ್ನಾಗಿ ಹೊಂದಿದ್ದನು.

ದಿವಾನರಾದ ಜರಾಮಣಿ ದಾಸರವರು ತಮ್ಮ ಪುಸ್ತಕದಲ್ಲಿ ಮಹಾರಾಜನ ಹುಚ್ಚುತನವನ್ನು ಒಂದು ಕಂತುಗಳಲ್ಲಿ ಚಿತ್ರಿಸಿದ್ದಾರೆ.ಕಿಶನ ಸಿಂಘ ಭಾಗಶಃ  ಈಜುವುದರಲ್ಲಿ ಅತ್ಯಂತ ಉತ್ಸುಕರಾಗಿದ್ದರು ಎಂದು ಸಂಯೋಜಿಸಿದ್ದಾರೆ. ಈ ಉತ್ಸಾಹವನ್ನು ತೃಪ್ತಿಪಡಿಸುವುದಕ್ಕಾಗಿ ಈ ಭೂಮಿಯ ಮೇಲೆ ಏನು ಬೇಕಾದರೂ ಮಾಡುತ್ತಿದ್ದರು.ಇದೇ ಮಾರ್ಗದಲ್ಲಿ ಸಾಗಿ ಅವರು ಒಂದು ಗುಲಾಭಿ  ಬಣ್ಣದ ಅಮೃತ ಶಿಲೆಯ ದುಬಾರಿ ಸರೋವರವನ್ನು ತಯಾರಿಸಿದರು.ಸರೋವರದ ಒಳಗೆ ಪ್ರವೇಶಿಸಲು ಮೆಟ್ಟಿಲುಗಳನ್ನು,  ಶ್ರೀಗಂಧದ ಮರದ  ತುಂಡುಗಳಿಂದ ತಯಾರಿ ಮಾಡಲಾಗಿತ್ತು.ಇಬ್ಬರು ವ್ಯಕ್ತಿಗಳು  ಒಂದು ತುಂಡಿನ ಮೇಲೆ ಸಲೀಸಾಗಿ ನಿಲ್ಲಬಹುದಾಗಿತ್ತು.

ಕಿಶನ ಸಿಂಘ ಅವರು ತಮ್ಮ  ಎಲ್ಲಾ ಸಂಗಾತಿಗಳಿಗೆ ಅಂದರೆ ರಾಣಿಯರಿಗೆ ಬಟ್ಟೆ ಇಲ್ಲದೇ ಬೆತ್ತಲಾಗಿ ನಿಲ್ಲಲ್ಲು ಆದೇಶ ನೀಡುತ್ತಿದ್ದನು.ಅವನು ಕೊಳಕ್ಕೆ ಬರುವಾಗ ಅವನ ಪ್ರತಿಯೊಬ್ಬ ರಾಣಿಯರು ಸಹ ಅವನನ್ನು ಬೆತ್ತಲೆ ನಿಂತು ಸ್ವಾಗತಿಸಬೇಕಾಗಿತ್ತು.ಹಾಗೆ ಮೆಟ್ಟಿಲನ್ನು ಇಳಿದು ಬರುವಾಗ ಒಬ್ಬಳನ್ನು ಇನ್ನೊಬ್ಬಳನ್ನು ಕೈಹಿಡಿದು ಕರೆದುಕೊಂಡು ಹೋಗುತ್ತಿದ್ದ.ಕೊನೆಯ ಮೆಟ್ಟಿಲು ಸಿಗುವ ತನಕ ಇದೆ ರೀತಿ ಎಲ್ಲರ ಜೊತೆ ಆಟವಾಡುತ್ತಿದ್ದ.

ನಂತರ ಈ ಎಲ್ಲಾ ರಾಣಿಯರು   ಬೆಳಗುತ್ತಿರುವ ಮೇಣದ ಬತ್ತಿಯನ್ನು ತಮ್ಮ ಕೈಯಲ್ಲಿ ಹಿಡಿದು ನೃತ್ಯ ಮಾಡಬೇಕಾಗಿತ್ತು.ಮೇಣದ ಬತ್ತಿಯ ಹೊರತಾಗಿ  ಬೇರೆ ಯಾವ ಬೆಳಕಿನ ವಸ್ತುವು ಕೈಯಲ್ಲಿದ್ದರೂ ಸಹ ಹಾರಿಸಿಬಿಡುತ್ತಿದ್ದ.ಎಲ್ಲಾ ರಾಣಿಯರು ಈ ಉರಿಯುತ್ತಿರುವ ಮೇಣದ ಬತ್ತಿಯನ್ನು ಹಿಡಿದು ನೃತ್ಯ ಮಾಡಿ ಕೊನೆಗೆ ಯಾವ ಒಂದು ರಾಣಿಯ ಕೈಯಲ್ಲಿರುವ ಮೇಣದ ಬತ್ತಿಯೂ ಹಾಗೆ ಉರಿಯುತ್ತಿರುತ್ತದೆಯೋ ಅವಳಿಗೆ ತನ್ನ ಜೊತೆ ಒಂದು ರಾತ್ರಿ ಕಳೆಯಲು ಅವಕಾಶ ನೀಡುತ್ತಿದ್ದ. ಹೀಗೆ  ಇವನು ಒಂದು ರೀತಿಯ ಹುಚ್ಚು ಸ್ವಭಾವದವನಾಗಿದ್ದ.

2.ಫಿರೋಜ್ ಶಾ ತುಘಲಕನ ರಹಸ್ಯ.

675 ವರ್ಷಗಳ ಹಿಂದೆ,1354 ನೇ ಇಸವಿಯಲ್ಲಿ ,ಫಿರೋಜ್ ಶಾ ಅರಮನೆಯ ಆವರಣದ,ಹರಿಯಾಣದ ಹಿಸರ ನಗರದಲ್ಲಿ ಆಡಳಿತ ಮಾಡಿದ್ದನು.ರಾಜ ಫಿರೋಜ್ ಶಾ ತುಘಲಕ್  ಗುಜರಿಯ ಜೊತೆಗೆ ಇರಲು ಈ ಅರಮನೆಯು ಸಹ ಒಂದು ರೀತಿಯಲ್ಲಿ   ಸ್ಪೂರ್ತಿಯಾಗಿತ್ತು.ಈ ಕಾರಣದಿಂದಾಗಿಯೇ  ಅರಮನೆಯನ್ನು ಹಿಂದೆ ‘ಗುಜರಿ ಮಹಲ್’ ಎಂದೂ ಕೂಡ ಕರೆಯಲಾಗುತ್ತಿತ್ತು.

ಫಿರೋಜ್ ಶಾ ತುಘಲಕ್ ಸಂಬಂಧ.

ಈ ಕಥೆಯು ಬಹಳ ಹಿಂದಿನ ಕಾಲದ್ದು.ಆ ಸಮಯ ಇನ್ನೂ ತುಘಲಕ್ ರಾಜನೆಂದು ಘೋಷಿಸಿರಲಿಲ್ಲ.ಆದರೂ ಅವನು ರಾಜಕುಮಾರನಾಗಿದ್ದ.ಇವನಿಗೆ ಬೇಟೆ ಮಾಡುವುದರಲ್ಲಿ ಬಹಳ ಆಸಕ್ತಿ ಇತ್ತು.ಕಾಡಿನ ಮಧ್ಯದೊಳಗೆ ಒಂದು ಸ್ಥಳದಲ್ಲಿ  ಜನಗಳು ಊರಿನಿಂದ ಹೊರಬಂದು ಇಲ್ಲಿ ವಾಸಿಸುತ್ತಿದ್ದರು. ಒಬ್ಬ ಹೆಂಗಸು ಪ್ರತಿನಿತ್ಯ ಇಲ್ಲಿಗೆ ಹಾಲು ಮಾರಲು ಬರುತ್ತಿದ್ದಳು ಹಾಗೆ ತನ್ನ ದಿನಗೂಲಿಯನ್ನು ಸಹ ಪಡೆಯುತ್ತಿದ್ದಳು. ಅಲ್ಲಿಯೇ ಗುರಜಿ ಫಿರೋಜ್ ನನ್ನು  ಮೊದಲ ಬಾರಿ ಬೇಟಿಯಾಗಿದ್ದು ಮತ್ತೆ ಅವನಿಗೆ ಇವಳ ಮೇಲೆ ಪ್ರೀತಿ,ವ್ಯಾಮೋಹ ಉಂಟಾಯಿತು.

ಅಲ್ಲಿಂದ ಮುಂದಕ್ಕೆ ಅವಳನ್ನು ಭೇಟಿಮಾಡಲು  ಪ್ರತಿದಿನ ಕಾಡಿಗೆ ಹೋಗುತ್ತಿದ್ದ.ಅವಳು ಬೇಗನೆ ಅವನಿಗೆ ಜೊತೆಯಾದಳು.ಅವನು ಅವಳನ್ನು ದೆಹಲಿಗೆ ಗೌರವವನ್ನು ಸ್ವೀಕರಿಸಲು ನನ್ನ ಜೊತೆ ಬಾ ಎಂದು ವಿನಂತಿಸಿದನು. ಆದರೆ ಅವಳು ನಿರಾಕರಿಸಿದಳು.ಆದ್ದರಿಂದ ಅವಳಿಗೆಂದೇ ಹರಿಯಾಣದ ಹಿಸರಾ ನಗರದಲ್ಲಿ  ಒಂದು ಕೋಟೆಯನ್ನು  ಕಟ್ಟಿಸಿದ. ಸ್ವತಃ ಇವನೇ  ಅದರ ಒಳಗೆ  ತನಗೊಂದು  ಅರಮನೆಯನ್ನು ನಿರ್ಮಿಸಲು ಆದೇಶ ನೀಡಿದ್ದನು. ಈ  ಕಾರಣದಿಂದಾಗಿಯೇ ಇದು  ‘ಗುಜರಿ ಮಹಲ್’  ಎಂದು ಮುಂದೆ ಹೆಸರು ಪಡೆಯಿತು.

3.ರಾಜಸ್ಥಾನದ ಮಹಾರಾಣ ಕುಂಭ.

ದಂತಕಥೆ ಸೂಚಿಸಿದಂತೆ,1443 ನೇ ಇಸವಿಯಲ್ಲಿ ರಾಣಾ ಕುಂಭದಲ್ಲಿ, ಕುಂಭಾಲ್ಗರ್  ಮಹಾರಾಣನು ಮೊದಲ ಬಾರಿಗೆ ಮತ್ತೂಮ್ಮೆ ಕುಂಭಾಲ್ಗರ್  ಕೋಟೆಯ ಗೋಡೆಯನ್ನು ನಿರ್ಮಿಸಲು ವಿಫಲವಾದರು.

ರಹಸ್ಯವಾಗಿ ಆಧ್ಯಾತ್ಮಿಕ ನಾಯಕರಿಂದ  ಸಲಹೆ  ಪಡೆದು ಮಾನವ ತ್ಯಾಗವನ್ನು  ನೀಡುವ ಸಲುವಾಗಿ ಗೋಡೆ ಮತ್ತು ಕೋಟೆಯನ್ನು  ಕಟ್ಟಲು ಅದೇಶಿಸಿದನು.ಎಲ್ಲಿ ತಲೆ ಬೀಳುತ್ತದೋ ಅಲ್ಲಿ ಗೋಡೆಯನ್ನು ಮತ್ತು ದೇಹ ಬಿದ್ದ ಜಾಗದಲ್ಲಿ ಕೋಟೆಯನ್ನು ನಿರ್ಮಿಸಲು ಅದೇಶಿಸಿದನು.ಹೀಗೆ ರಹಸ್ಯವಾಗಿ ಇವನು ಶತ್ರು ದೇಶದ  ಸಾವಿರಾರು ಪುರುಷರನ್ನು ಹೊಡೆದು ಸಾಯಿಸಿ ಕೋಟೆಗೆ ದಾರಿಯನ್ನು ಸುಗಮ ಗೊಳಿಸಿದನು.

4.ಮೊಘಲ್ ದೊರೆ ಶಹಜಹಾನ.

ಬಹಳ ಜನರಿಗೆ ತಿಳಿದಿದೆ ತಾಜಮಹಲ್ ನಲ್ಲಿ ಪ್ರಸಿದ್ಧ ಭವ್ಯ ಸಮಾಧಿ ಇದೆ ಎಂದು.ಇದು ಭಾರತದ ದೆಹಲಿಯ ಆಗ್ರಾ ನಗರದಲ್ಲಿ ಆರಾಧನೆಯ ಹೆಗ್ಗುರುತ್ತಾಗಿ ಹೊರ ಹೊಮ್ಮಿದೆ.ಇದು ಮೊಘಲ್ ದೊರೆ ಶಹಜಹಾನನ ತನ್ನ ಪ್ರೀತಿ ಪಾತ್ರವಾದ ಮುಮ್ತಾಜ್ ನೆನಪಿಗೆ , ತನ್ನ ಅಂತ್ಯವಿಲ್ಲದ ಪ್ರೀತಿಗೆ  ಸಂಕೇತವಾಗಿದೆ.ಆದರೆ ಅನೇಕ ಜನರಿಗೆ ತಿಳಿದಿಲ್ಲ ಮಗುವು ಜನಿಸಿದ ಮತ್ತು ಸಾವು ಸಂಭವಿಸಿದ ಸಂಕೇತವು ಇದಾಗಿದೆ ಎಂದು.

ನಿಜವಾದ ವಿಷಯವೇನೆಂದರೆ ಮುಮ್ತಾಜ್ ಸತ್ತಿದ್ದು 39ನೇ ವಯಸ್ಸಿನಲ್ಲಿ.ಮುಮ್ತಾಜ್ ಶಹಜಹಾನನ  14 ನೇ ಮಗುವಿಗೆ ಜನ್ಮ ನೀಡಿದ ನಂತರ ಸಾವನ್ನಪ್ಪಿದಳು.ಅವಳ ಅತಿರೂಪ ಲಾವಣ್ಯ ಮತ್ತು ಸೌಂದರ್ಯಕ್ಕೆ ಶಹಜಹಾನ ಮಾರುಹೋಗಿದ್ದ.ಶಹಜಹಾನಗೆ ಇವಳೆಂದರೆ ಬೇರೆ ಎಲ್ಲ ಹೆಂಡತಿಯರಿಗಿಂತಲು ಅಚ್ಚುಮೆಚ್ಚು. ಇವಳಿಗೆ ಬಿಟ್ಟು ಬೇರೆ ಯಾವ ಪತ್ನಿಯರಿಗೂ  ಮಕ್ಕಳಿರಲಿಲ್ಲ. ಅತೀ ಕಡಿಮೆ ಸಮಯದಲ್ಲಿ ಮುಮ್ತಾಜ್ ಪದೇ ಪದೇ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ ಕಾರಣ  ಇವಳಿಗೆ ಅನೇಕ ಆರೋಗ್ಯ ಸಮಸ್ಯೆಗಳು ಅವರಿಸಿಕೊಂಡವು ಇದರಿಂದಾಗಿಯೇ ಇದೇ ಆವಳ ಸಾವಿಗೆ ಕಾರಣವಾಯಿತು.ಈ ದುಃಖವನ್ನು ಮರೆಯಲು ಶಹಜಹಾನ ಅವಳ ಮರಣದ ನಂತರ ತನ್ನ ಸಂಭಂಧದಲ್ಲೇ ಇನ್ನೊಬ್ಬಳನ್ನು ಮದುವೆಯಾದ.ಒಟ್ಟಿಗೆ ಶಹಜಹಾನ ಎಂಟು ಸ್ತ್ರೀಯರನ್ನು  ಮದುವೆಯಾಗಿದ್ದ.

ಅವರು ಯಾವ ರೀತಿಯ ಜೀವನ ನೆಡೆಸುತ್ತಿದ್ದರೆಂದರೆ ,ನಾವು ಕನಸು ಕಾಣುವ ಹಾಗೆ! ಯಾರಿಗೆ ತಾನೇ ಬೆಳ್ಳಿಯ ಚಮಚವನ್ನು ಬಾಯಿಯಲ್ಲಿ ಇಟ್ಟುಕೊಂಡು ಹುಟ್ಟಲು ಇಷ್ಟವಿಲ್ಲ ? ರಾಜನ ಗಾತ್ರದ ಜೀವನ ಶೈಲಿ ಮತ್ತು ಐಷಾರಾಮಿ ತುಂಬಿದ ಪ್ರಪಂಚವು ಯಾವಾಗಲೂ ನಮ್ಮನ್ನು ಆಕರ್ಷಿಸುತ್ತದೆ.ಆದರೆ ಪರಂಪರೆಗಳ ಹಿಂದೆ,ವರ್ಣರಂಜಿತ ಜೀವನವು ಕರಾಳ  ರಹಸ್ಯಗಳನ್ನು ಹೊಂದಿದೆ.

5.ಪಾಟಿಯಾಲಾದ ಭೂಪಿಂದರ್ ಮಹಾರಾಜ.

ಇವನೊಬ್ಬ ಅಸಾಮಾನ್ಯ ಲೈಂಗಿಕ ನೆಡೆವಳಿಕೆಯನ್ನು ಹೊಂದಿದ್ದ  ರಾಜ. ಇವನಿಗೆ ತಿಳಿದ ಹಾಗೆ 88 ಜನ ಮಕ್ಕಳಿದ್ದರು. ಇವನು ಜೀವಂತವಾಗಿ ಚೆನ್ನಾಗಿದ್ದೇನೆ ಎಂದು ತನ್ನ ಹೆಂಡತಿಯರಿಗೆ  ಭರವಸೆ ನೀಡಲು, ಒಂದು ವರ್ಷದಲ್ಲಿ ಒಂದು ಬಾರಿ ತನ್ನ ಎಲ್ಲಾ ಹೆಂಡತಿಯರ ಮುಂದೆ ಬೆತ್ತಲಾಗಿ ಮೆರವಣಿಗೆ ಹೋಗುತ್ತಿದ್ದನು.

6.ಹೈದರಾಬಾದನ ನಿಜಾಮ.

ಇವರ ಅಭದ್ರತೆಯ ಕಥೆ ಇಡೀ ರಾಷ್ಟ್ರದ ಕಿವಿಗಳಿಗೆ ತಲುಪಿದೆ .ಈ ವಿಷಯ ಬಹಿರಂಗವಾದ ಮೇಲೆ ಇವನ ಸಂಪತ್ತನ್ನು ಸರಕಾರ ಕಿತ್ತುಕೊಳ್ಳಬಹುದೆಂಬ ಭಯವಾಯಿತು.ನಂತರ ಏನೇ ಉಪಾಯಗಳನ್ನು ಮಾಡಿದರೂ ಸಹ ಎಲ್ಲವೂ ಮರೆಯಾಯಿತು.ಎಲ್ಲವೂ ಸಹ ಗೆದ್ದಲು ಹುಳ ಮತ್ತು ಪತಂಗ ಗಳಿಂದ ಮುತ್ತುಕೊಂಡಿತು.

7.ಜಯಪುರದ ಮಹಾರಾಣಿ ಗಾಯಿತ್ರಿ ದೇವಿ.

ಇಡೀ ರಾಜರ ವಂಶದಲ್ಲೇ  ಇವಳೊಬ್ಬ ಅತಿರತ ಸುಂದರಿಯಾಗಿದ್ದಳು.ಭಾರತದ ಈ ಪ್ರಾಚೀನ ಸುಂದರಿಯು ತನ್ನ ಜೀವನದಲ್ಲಿ ಎರಡು ಬಾರಿ ಘೋರ ದುರಂತವನ್ನು ಕಂಡಳು.ಮೊದಲನೆಯದಾಗಿ ,ಇವಳ ಗಂಡ ಪೋಲೊ ಆಟವನ್ನು ಆಡುವಾಗ ಅಪಘಾತದಲ್ಲಿ  ಮರಣ ಹೊಂದಿದನು.ಎರಡನೆಯದಾಗಿ ,ತನ್ನ ಸ್ವಂತ ಮಗ1997 ರಲ್ಲಿ ಮರಣ ಹೊಂದಿದ.

8.ಜುನಾಘರನ ನವಾಭ್.

ಇವನು 800 ಶ್ವಾನಗಳನ್ನು ಸಾಕಿ ಅವುಗಳ ಒಡೆಯನಾಗಿದ್ದನು. ಪ್ರತಿಯೊಂದು ಶ್ವಾನಕ್ಕೂ ಕೂಡ ಅದರದೇ ಆದ ವೈಯಕ್ತಿಕ ಮಾನವ ಸಹಾಯಕರಿದ್ದರು.ಅವನ ಎರಡು ಅತ್ಯಂತ ಮುದ್ದಿನ ಪ್ರೀತಿಯ ನಾಯಿಗಳು ಸಂಕಲನಗೊಂಡಿದ್ದಕ್ಕೆ ,ಅವನು ಅವುಗಳ ಮದುವೆಯನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ  ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಮದುವೆ ಮಾಡಿಸಿದನು.

9.ರಾಣಿ ಅಲಮೇಲಮ್ಮನ ಶಾಪ.

ಒಡೆಯರ ರಾಜವಂಶವು ಅಲ್ಲಿದ್ದ ರಾಜನನ್ನು ಕೊಲ್ಲುವ ಮೂಲಕ ಮೈಸೂರಿನ ಸಾಮ್ರಾಜ್ಯವನ್ನು ವಶಪಡಿಸಿಕೊಂಡರು.ರಾಣಿಯು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಹ ಸಿಕ್ಕಿಹಾಕಿಕೊಂಡಳು .ನಂತರ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಶಾಪ ನೀಡಿದಳು.ಮುಂದೆ ನಿಮ್ಮ ವಂಶಕ್ಕೆ ಸಂತಾನೋತ್ಪತ್ತಿ ಯಾಗದೇ ಇರಲಿ ಎಂದು ಹೇಳಿ ನೀರಿಗೆ  ಹಾರಿದಳು.ನಂತರ ಒಡೆಯರ ವಂಶವು ಅವಳ ಒಂದು ಮೂರ್ತಿಯನ್ನು ಮಾಡಿಸಿ ಅವಳಿಗೆ ಪ್ರತೀದಿನ ಪೂಜೆ ಸಲ್ಲಿಸುತ್ತಿದ್ದರು.ಈಗಲೂ ಸಹ ಈ ಕಾರ್ಯ ಮೈಸೂರು ಅರಮನೆಯಲ್ಲಿ ಮುಂದುವರಿದಿದೆ.

10.ರಾಜಕುಮಾರ ಮನವೆಂದ್ರ ಸಿಂಘ ಗೋಹಿಲ್.

ಇವನೊಬ್ಬನೇ ಏಕೈಕ ರಾಜ ಸಲಿಂಗಕಾಮಿಯಾಗಿದ್ದ ಆದರೂ ಸಹ ಸಾರ್ವಜನಿಕರು ಇವನನ್ನು ರಾಜನೆಂದು ಸ್ವೀಕರಿಸಿದ್ದರು. ದುರಾದೃಷ್ಟವಶಾತ್  ಇವರ ಕುಟುಂಬ ಕುಲಕ್ಕೆ ಅವಮಾನವನ್ನು ತರುವ ಬಗ್ಗೆ ಆರೋಪಿಸಿ ಇವನನ್ನು ನಿರಾಕರಿಸಿದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top