ಮಂಗಳವಾರ, ೧೧ ಜುಲೈ ೨೦೧೭
ಸೂರ್ಯೋದಯ : ೦೫:೩೫
ಸೂರ್ಯಾಸ್ತ : ೧೯:೧೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಆಷಾಢ
ಪಕ್ಷ : ಕೃಷ್ಣ ಪಕ್ಷ
ತಿಥಿ : ಬಿದಿಗೆ
ನಕ್ಷತ್ರ : ಶ್ರವಣ
ಯೋಗ : ವಿಷ್ಕುಂಭ
ಅಮೃತಕಾಲ : ೦೯:೫೪ – ೧೧:೩೮
ರಾಹು ಕಾಲ: ೧೫:೫೨ – ೧೭:೩೪
ಗುಳಿಕ ಕಾಲ: ೧೨:೨೬ – ೧೪:೦೯
ಯಮಗಂಡ: ೦೯:೦೦ – ೧೦:೪೩
ಮೇಷ (Mesha)
ಮಹಿಳೆಯರಿಗೆ ಅನಾವಶ್ಯಕವಾಗಿ ಋಣಾತ್ಮಕ ಚಿಂತನೆಗಳು ಕಾಡಬಹುದು. ವ್ಯಾಪಾರ ವ್ಯವಹಾರಗಳು ಸರಾಗವಾಗಿ ನಡೆದರೂ ಲಾಭಾಂಶ ನಿಮಗೆ ಸೇರದೇ ಇರಬಹುದು. ಅವಿವಾಹಿತರಿಗೆ ಅಚ್ಚರಿಯ ವಾರ್ತೆ ಇದೆ.
ವೃಷಭ (Vrushabh)
ಉದ್ಯೋಗಾಕಾಂಕ್ಷಿಯವರಿಗೆ ಆಕಸ್ಮಿಕ ಉದ್ಯೋಗ ಲಾಭವಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ಅಧಿಕ ಧನವ್ಯಯವಾದರೂ ಧನಾಗಮನ ಉತ್ತಮವಿರುತ್ತದೆ. ಸ್ವಪ್ರಯತ್ನದಲ್ಲಿ ನಂಬಿಕೆ ಇರಲಿ.
ಮಿಥುನ (Mithuna)
ನಿರುದ್ಯೋಗಿಗಳಿಗೆ ಅವರ ಇಚ್ಛೆಗೆ ಅನುಗುಣವಾಗಿ ಉದ್ಯೋಗ ಲಾಭವಿದೆ. ವ್ಯಾಪಾರ, ವ್ಯವಹಾರಗಳಿಗೆ ತಕ್ಕ ಮಟ್ಟಿನ ಲಾಭ ಸಿಗಲಿದೆ. ಆರ್ಥಿಕವಾಗಿ ಹೆಚ್ಚಿನ ಜಾಗ್ರತೆ ವಹಿಸಿರಿ. ಸಾಂಸಾರಿಕವಾಗಿ ಒಳ್ಳೆಯ ಸುಖ.
ಕರ್ಕ (Karka)
ಬಹುದಿನಗಳಿಂದ ಕಾದು ಕುಳಿತ ಯೋಗ್ಯ ವಯಸ್ಕರಿಗೆ ಕಂಕಣಬಲದ ಸುವಾರ್ತೆ ಇದೆ. ಉದ್ಯೋಗಸ್ಥರಿಗೆ ಹಿರಿಯ ಅಧಿಕಾರಿ ವರ್ಗದವರಿಂದ ಕಿರಿಕಿರಿಯಾಗಲಿದೆ. ದುಡುಕಿನ ಪರಿಣಾಮಗಳಿಗೆ ಕಾರಣರಾಗದಿರಿ.
ಸಿಂಹ (Simha)
ಕೃಷಿಕರಿಗೆ ಸರಕಾರೀ ವರ್ಗದವರಿಂದ ಬೇಕಾದ ಸಹಕಾರ, ಸಹಾಯ ಸಿಗಲಿದೆ. ಕಾರ್ಮಿಕ ವರ್ಗದವರಿಗೆ ಮುಂಭಡ್ತಿ ಇದೆ. ಕೂಡಿಟ್ಟ ಹಣಕ್ಕೆ ನಾನಾ ರೀತಿಯಿಂದ ಖರ್ಚಿಗೆ ದಾರಿಯಾಗಲಿದೆ.
ಕನ್ಯಾರಾಶಿ (Kanya)
ಆಕಸ್ಮಿಕ ಧನಾಗಮನದಿಂದ ಕಾರ್ಯಸಿದ್ಧಿಯಾಗಲಿದೆ. ಎಲ್ಲದಕ್ಕೂ ಹಿರಿಯರ ಮಾರ್ಗದರ್ಶನದತ್ತ ಒಲವು ತೋರಿಸಿರಿ. ಆಚಾರ್ಯ ವರ್ಗದವರಿಗೆ ಸಣ್ಣ ಪುಟ್ಟ ಸಮಸ್ಯೆಗಳು ಎದುರಾಗಬಹುದು. ಚಾಲನೆಯಲ್ಲಿ ಜಾಗ್ರತೆ ಇರಲಿ.
ತುಲಾ (Tula)
ಸಾಧಕ, ಬಾಧಕಗಳ ಬಗ್ಗೆ ಯೋಚಿಸಿ ಮುನ್ನಡೆಯಿರಿ. ದೂರ ಸಂಚಾರದ ಯೋಗವಿದೆ. ಕೆಲವೊಂದು ದುಡುಕಿನ ಕೆಲಸಗಳು ನಿಮ್ಮ ನೆಮ್ಮದಿಯನ್ನು ಕೆಡಿಸಲಿದೆ. ಅನಿರೀಕ್ಷಿತ ಅಚ್ಚರಿಯ ವಾರ್ತೆಯು ಸಂತಸ ತಂದೀತು.
ವೃಶ್ಚಿಕ (Vrushchika)
ವೈವಾಹಿಕ ಪ್ರಸ್ತಾವಗಳು ಕಂಕಣಬಲಕ್ಕೆ ಪೂರಕವಾಗಲಿವೆ. ಆಕಸ್ಮಿಕ ವಿದೇಶ ಯಾನದ ಯೋಗದಿಂದ ಉದ್ಯೋಗಿಗಳಿಗೆ ಸಂತಸ. ರಾಜಕೀಯದಲ್ಲಿ ಸ್ಥಾನಮಾನ ಸಿಗಲಿದೆ. ಸಾಂಸಾರಿಕವಾಗಿ ಶುಭಮಂಗಲ ಕಾರ್ಯದ ಸಂಭ್ರಮ.
ಧನು ರಾಶಿ (Dhanu)
ಉದ್ಯೊಗಸ್ಥರಿಗೆ ಮುಂಭಡ್ತಿ ತಂದು ಕೊಡಲಿದೆ. ನಿರುದ್ಯೋಗಿಗಳಿಗೆ ಅನೇಕ ಅವಕಾಶಗಳು ಒದಗಿ ಬಂದಾವು. ದಾಯಾದಿಗಳಿಂದ ನ್ಯಾಯಾಲಯದ ದರ್ಶನವಾಗಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನಬಲದಿಂದಲೇ ಉತ್ತಮ ಫಲಿತಾಂಶ ಪಡೆದಾರು.
ಮಕರ (Makara)
ತಾಳ್ಮೆ ಸಮಾಧಾನದಿಂದ ಇದ್ದಲ್ಲಿ ಉತ್ತಮ. ಅನಾವಶ್ಯಕವಾಗಿ ಮಿಥ್ಯಾರೋಪ ಕಾಡಲಿದ್ದು ಜಾಗ್ರತೆ ವಹಿಸಿರಿ. ಹಿತೈಷಿಗಳಾದ ಬಂಧುಮಿತ್ರರು ಹಿತಶತ್ರುಗಳಾದಾರು. ಅನಿರೀಕ್ಷಿತ ಉದ್ಯೋಗ ಲಾಭ ನಿರುದ್ಯೋಗಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಿದೆ.
ಕುಂಭರಾಶಿ (Kumbha)
ರಾಹು, ಕೇತುಗಳ ಕೆಲವೊಂದು ಪ್ರತಿಕೂಲ ಫಲಗಳು ಕಿರಿಕಿರಿ ತಂದಾವು. ಧರ್ಮಬಾಹಿರ ಪ್ರವೃತ್ತಿ ಉಡಾಫೆ ಮಾತುಗಳು ಅನಾವಶ್ಯಕವಾಗಿ ನಿಮ್ಮನ್ನು ಕಾಡಲಿವೆ. ಜೀವನದಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಿಕೊಳ್ಳಿರಿ.
ಮೀನರಾಶಿ (Meena)
ಆರ್ಥಿಕವಾಗಿ ಕೆಲವೊಂದು ಬೇಡಿಕೆಗಳು ಈಡೇರಲಿವೆ. ಹಿರಿಯರಿಗೆ ಹೊಸ ಹೊಸ ಸ್ಥಳದ ಸಂದರ್ಶನ ಅವಕಾಶವಿರುವುದು. ಯಾವುದೇ ಕಷ್ಟನಷ್ಟಗಳನ್ನು ಎದುರಿಸಲು ಗುರುಬಲ ನಿಮಗೆ ಸಾಧಕವಾಗಿರುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
