ನಮಸ್ಕಾರ ಮಾಡುವುದರಿಂದ ನಮಗೆ ಆಗುವ ಪ್ರಯೋಜನಗಳೇನು ?
ನಮಸ್ಕಾರ ಅಂದರೆ ಎರಡು ಕೈ ಗಳನ್ನು ಮುಂದೆ ತಂದು ಜೋಡಿಸಿ ಭಕ್ತಿಯಿಂದ ಮತ್ತು ಪೂರ್ಣ ಮನಸ್ಸಿನಿಂದ ಕೈ ಮುಗಿಯುವುದನ್ನು ನಮಸ್ಕಾರ ಎನ್ನುತ್ತೇವೆ.
ಕೈ ಮುಗಿದು ನಮಸ್ಕಾರ ಮಾಡುವುದು ನಮ್ಮ ಭಾರತೀಯ ಸಂಪ್ರದಾಯ ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯ ಇದು. ನಮಸ್ಕಾರಕ್ಕೆ ಮಹತ್ತರವಾದ ಸ್ಥಾನವಿದೆ.ಸನಾತನ ಭಾರತೀಯ ಪರಂಪರೆಯಲ್ಲಿ ನಮಸ್ಕಾರಕ್ಕೆ ಮಹತ್ವದ ಸ್ಥಾನವಿದೆ.ಸಾವಿರಾರು ವರ್ಷಗಳಿಂದ ನಮ್ಮ ದೇಶದಲ್ಲಿ ನಮಸ್ತೆ,ನಮಸ್ಕಾರ ಹಾಗೂ ಹಿರಿಯರಿಗೆ ನಮಸ್ಕಾರ ಮಾಡಿ ಆಶೀರ್ವಾದವನ್ನು ಪಡೆಯುವ ಸಂಪ್ರದಾಯ ಚಾಲ್ತಿಯಲ್ಲಿದೆ. ಈ ಸಂಪ್ರದಾಯದ ಹಿಂದೆ ಸಾಕಷ್ಟು ಲಾಭ ಅಡಗಿದೆ.
ಹೀಗೆ ನಾವು ನಮಗಿಂತ ಹಿರಿಯರಿಗೆ ಮತ್ತು ದೇವಸ್ಥಾನಗಳಿಗೆ ಹೋದಾಗ ದೇವರಿಗೆ ಕೈ ಮುಗಿಯುತ್ತೇವೆ. ನಾವು ಏಕೆ ಹೀಗೆ ನಮಸ್ಕಾರ ಮಾಡುತ್ತೇವೆ ? ಇದರಿಂದಾಗುವ ಪ್ರಯೋಜನಗಳೇನು ? ನಮ್ಮ ಹಿರಿಯರು ಇದನ್ನು ಸಂಪ್ರದಾಯವನ್ನಾಗಿ ಏಕೆ ಮಾಡಿದರು ಎಂದು ನಿಮಗೆ ತಿಳಿದಿಲ್ಲ ಅಲ್ಲವೇ ? ಬನ್ನಿ ನಮಸ್ಕಾರದಿಂದ ಆಗುವ ಚಮತ್ಕಾರಗಳು ಏನೆಂದು ತಿಳಿಯೋಣ ….
ನಮಸ್ಕಾರ ಮಾಡುವ ವ್ಯಕ್ತಿಯಿಂದ ನಕಾರಾತ್ಮಕ ವಿಚಾರ ಹಾಗೂ ನಕಾರಾತ್ಮಕ ಭಾವನೆ ದೂರವಾಗುತ್ತದೆ. ನಮಸ್ಕಾರ ಮಾಡುವ ವ್ಯಕ್ತಿಯ ಮನಸ್ಸಿಗೆ ಆನಂದ ಉಂಟಾಗುತ್ತದೆ.
ಆದ್ದರಿಂದ ಇದನ್ನು ಆನಂದ ಮುದ್ರೆ ಎಂದು ಸಹ ಕರೆಯಾಲಾಗುತ್ತದೆ.
ಎರಡು ಕೈಗಳನ್ನು ಸೇರಿಸಿ ನಮಸ್ಕಾರ ಮಾಡುವುದರಿಂದ ದೇಹದಲ್ಲಿರುವ ಕೀಟಾಣುಗಳನ್ನು ನಾಶ ಮಾಡುವ ಹಾರ್ಮೋನ ಸಕ್ರಿಯವಾಗುತ್ತದೆ ಮತ್ತು ನರಗಳ ಶಕ್ತಿ ಹೆಚ್ಚಾಗುತ್ತದೆ.
ಎರಡೂ ಕೈ ಮುಗಿದಾಗ ಎರಡೂ ಕೈಗಳ ಮದ್ಯೆ ಉತ್ಪತ್ತಿಯಾಗುವ ಶಕ್ತಿ ತರಂಗ ರೂಪದಲ್ಲಿ ಗೌರವ ಸಲ್ಲಿಸುವ ಅಥವಾ ನಾವು ನಮಸ್ಕರಿಸುವ ವ್ಯಕ್ತಿಯನ್ನು ತಲುಪುತ್ತದೆ.
ಹಿರಿಯ ವ್ಯಕ್ತಿಗಳಿಗೆ ನೀವು ನಮಸ್ಕರಿಸಿದಾಗ ನಿಮ್ಮ ತಲೆ ಮೇಲೆ ಕೈ ಇಟ್ಟು ಅವರು ಆಶೀರ್ವಾದ ಮಾಡಿದ್ರೆ ಅವರ ಶಕ್ತಿ ನಿಮ್ಮ ದೇಹ ಸೇರುತ್ತದೆ.
ವೈಜ್ಞಾನಿಕ ಕಾರಣ.
ಇದು ನಮ್ಮ ಭಾರತೀಯ ಸಂಪ್ರದಾಯ ಮಾತ್ರ .ಇನ್ನೂ ಪಾಶ್ಚಿಮಾತ್ಯರು ಕೈ ಕುಲುಕುತ್ತಾರೆ (shake hand) ಇದು ಅವರ ಅಭ್ಯಾಸ ಯಾರಾದರೂ ದೊಡ್ಡವರು ಬಂದರೆ ಅವರು ಹಾಯ್ ಎಂದು ಹೇಳಿ ಕೈ ಕುಲುಕುತ್ತಾರೆ.
ಇತ್ತೀಚೆಗೆ ಈ ಸಂಸ್ಕೃತಿ ನಮ್ಮ ಭಾರತಕ್ಕೂ ಲಗ್ಗೆ ಇಟ್ಟಿದೆ.ಆದರೆ ಇದು ತಪ್ಪು ಈ ಕೈ ಕುಲುಕುವುದು ವೈಜ್ಞಾನಿಕವಾಗಿ ಅಷ್ಟು ಒಳ್ಳೆಯದಲ್ಲ.
ಯಾಕೆಂದರೆ ನೀವು ನಿಮ್ಮ ಕೈಯನ್ನು ಬೇರೆಯವರ ಕೈಗೆ ಸೇರಿಸಿ ಕೈ ಕುಲುಕುವುದರಿಂದ ಅದೆಷ್ಟೋ ಹಾನಿಕಾರಕ ಕೀಟಾಣುಗಳು,ವೈರಾಣುಗಳು ನಮ್ಮ ಕಣ್ಣಿಗೆ ಕಾಣಿಸದ ಸೂಕ್ಷ್ಮ ಜೀವಿಗಳು ಅಡಗಿವೆ .ಅವು ನಿಮ್ಮ ಕೈಯಲ್ಲಿ ಸೇರಿಕೊಳ್ಳುತ್ತವೆ.ನಿಮ್ಮ ಕೈ ಶುದ್ಧವಿಲ್ಲವೋ ಅಥವಾ ಅವರ ಕೈ ಶುದ್ಧವಿಲ್ಲವೋ ಗೊತ್ತಿಲ್ಲ ಆದರೆ ಕೈ ಕುಲುಕುವುದಂತು ಹಾನಿಕಾರಕವೇ.
ಅದರಿಂದ ಭಾರತೀಯರಾದ ನಾವು ನಮ್ಮ ಸಂಸ್ಕೃತಿಯನ್ನು ಕಾಪಾಡುವುದು ನಮ್ಮ ಧರ್ಮವೇ ಸರಿ ಮತ್ತು ವೈಜ್ಞಾನಿಕವಾಗಿ ಕೂಡ ಅದೇ ಉತ್ತಮವಾದುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
