fbpx
ಆರೋಗ್ಯ

ಹರೀತಕಿಯಿಂದಾಗೋ ಈ 7 ಪ್ರಯೋಜನಗಳು ಗೊತ್ತಾದ್ರೆ. ಡೈಲಿ ಬಳ್ಸೋದಕ್ಕೆ ಸ್ಟಾರ್ಟ್ ಮಾಡ್ತೀರ…

ಹರೀತಕಿಯಿಂದಾಗೋ ಈ 7 ಪ್ರಯೋಜನಗಳು ಗೊತ್ತಾದ್ರೆ. ಡೈಲಿ ಬಳ್ಸೋದಕ್ಕೆ ಸ್ಟಾರ್ಟ್ ಮಾಡ್ತೀರ…

 

“ಆರ್ಯುವೇದ ಗಿಡಮೂಲಿಕೆಗಳ ರಾಜ” ಎಂದು ಕರೆಯಲ್ಪಡುವೀಕಿಯನ್ನು ಉಪಯೋಗಿಸುವುದರಿಂದ ಅನೇಕಾ ರೋಗಗಳನ್ನು ವಾಸಿ ಮಾಡ್ಕೊಳ್ಳಬಹುದು.ಹರಿಟಿಕಿಯಿಂದ ಗುಣವಾಗದ ಕಾಯಿಲೆಯೇ ಇಲ್ಲ ಎಂದು ಹೇಳಲಾಗುತ್ತದೆ. ಈ ಹರೀತಕಿಯ ಆರೋಗ್ಯಾತ್ಮಕ ಉಪಯೋಗಗಳನ್ನು ತಿಳಿದುಕೊಂಡಿದ್ದರೆ ಸಮಯಕ್ಕೆ ಬರುತ್ತದೆ.

ಅಳಲೆ ಕಾಯಿಯ ಆರೋಗ್ಯಾತ್ಮಕ ಉಪಯೋಗಗಳು:

1.ಮೂಲವ್ಯಾಧಿ(ಪೈಲ್ಸ್)

ಚಿತ್ರಮೂಲ, ಶುಂಠಿ, ಅಳಲೆಕಾಯಿ ಸಿಪ್ಪೆ ಈ ಮೂರು ವಸ್ತುಗಳನ್ನು ಕ್ರಮವಾಗಿ 10 ಗ್ರಾಂ ತೆಗೆದುಕೊಂಡು ನುಣ್ಣಗೆ ಕುಟ್ಟಿ ಪುಡಿಮಾಡಿ ಗಾಳಿ ಆಡದ ಗಾಜಿನ ಬಾಟಲ್ ನಲ್ಲಿ ಶೇಖರಣೆ ಮಾಡಿಕೊಳ್ಳಿ. 10 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯ ಮಾಡಿ 2 ಗ್ರಾಂ ಯವಕ್ಷಾರವನ್ನು ಹಾಕಿ ಸೇವಿಸುವುದರಿಂದಾಗಿ ಮೂಲದ ಮೊಳೆಗಳು  ನಿಧಾನವಾಗಿ ಕರಗಿ ಹೋಗುತ್ತವೆ.ಮತ್ತು ರಕ್ತಸ್ರಾವ, ಉರಿ ಮಾಯವಾಗುವುದು.

2.ಕಣ್ಣು ಉರಿಯುವುದು

ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು ಚೆನ್ನಾಗಿ ಬಲಿತಿರುವ ಹರಿತಿಕಿಯನ್ನು ಶುದ್ಧವಾದ ನೀರಿನಲ್ಲಿ ತೇದು ಕಣ್ಣಿಗೆ ಹಚ್ಚುವುದರಿಂದ ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು ಕಡಿಮೆಯಾಗುತ್ತದೆ.

3.ಕಿರುನಾಲಿಗೆ ಬೀಳುವುದು:

ಅಳಲೆಕಾಯಿ ಸಿಪ್ಪೆಯ ವಸ್ತ್ರಗಾಳಿತ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಕಿರುನಾಲಿಗೆಗೆ ಸ್ಪರ್ಶಿಸುವುದರಿಂದ ಈ ಕಾಯಲೆ ಗುಣಮುಖವಾಗುತ್ತದೆ.

4.ಬಾಯಿಯ ಹುಣ್ಣು :

ಅಳಲೆ ಕಾಯಿಯ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಅದರಿಂದ ಬಾಯಿ ಮುಕ್ಕಳಿಸಿ ಉಗುಳುವುದರಿಂದ ಬಾಯಿಹುಣ್ಣು ಮತ್ತಿತರ ವಸಡು ದೋಷಗಳು ಗುಣಮುಖವಾಗುತ್ತವೆ.

5.ಮದುಮೇಹ ನಿಯಂತ್ರಣೆಗಾಗಿ :

ಡಯಾಬಿಟಿಕ್ ಔಷಧಿಗಳಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಜೊತೆಗೆ ಕೆಲವು ಅಡ್ಡಪರಿಣಾಮಗಳು ಉಂಟಾಗುತ್ತವೆ ಆದರೆ ಹರೀತಕಿ ಯಾವುದೇ ಅಡ್ಡಪರಿಣಾಮಗಳನ್ನು ಉಂಟು ಮಾಡುವುದಿಲ್ಲ.ಆದರೆ ಡಯಾಬಿಟಿಕ್ ರೋಗಿಗಳು ಹರೀತಕಿಯನ್ನು ತೆಗೆದುಕೊಳ್ಳುವ ಮೊದಲು ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಬೇಕು.

6.ಪುರುಷರಲ್ಲಿ ವೀರ್ಯಾಣುಗಳ ಹೆಚ್ಚಳ

ಆಮ್ಲ ಕಾಯಿ , ಹರೀತಕಿ , ಬಿಭಿತಕಿ ಇವುಗಳ ಸಮ ಪ್ರಮಾಣವನ್ನು ತೆಗೆದುಕೊಂಡು ಕುಟ್ಟಿ ಪುಡಿ ಮಾಡಿಕೊಂಡು ಕಷಾಯ ಮಾಡಿ ಕುಡಿಯುವುದರಿಂದ ಪುರುಷರಲ್ಲಿ ವೀರ್ಯಾಣುಗಳ ಉತ್ಪತ್ತಿ ಹೆಚ್ಚಾಗುತ್ತದೆ.

7.ಹೊಟ್ಟೆಯ ಮೇಲಿನ ಬೊಜ್ಜನ್ನು ಕರಗಿಸಲು

ಆಮ್ಲ ಕಾಯಿ , ಹರೀತಕಿ ಮತ್ತು ಬಿಭಿತಕಿ ಇವುಗಳ ಸಮ ಪ್ರಮಾಣವನ್ನು ತೆಗೆದುಕೊಂಡು ಕುಟ್ಟಿ ಪುಡಿಮಾಡಿ
ರಾತ್ರಿ ಮಲಗುವ ಮೊದಲು ಕುಡಿಯುವುದರಿಂದ ದೇಹದಲ್ಲಿನ ಬೊಜ್ಜು ಕರಗಿ ದೇಹದ ತೂಕವು ಕರಗುತ್ತದೆ.

 

ಸೂಚನೆ: ಗರ್ಭಿಣಿ ಸ್ತ್ರೀಯರು ಹರೀತಕಿಯನ್ನು ಸೇವಿಸುವುದರಿಂದ ಗರ್ಭಪಾತ ಆಗುವ ಸಾಧ್ಯತೆ ಇರುವುದರಿಂದ ಅವರು ಸೇವಿಸಬಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top