ಮೂಗಿನ ಸುತ್ತ ಕಪ್ಪುಚುಕ್ಕಿಗಳಿರುವವರು ಈ 8 ಮನೆಮದ್ದುಗಳನ್ನು ಅನುಸರಿಸಿ ಪರಿಹಾರಕಂಡುಕೊಳ್ಳಿ..
ಸಾಮಾನ್ಯವಾಗಿ ಮೂಗಿನ ಮೇಲೆ ಮತ್ತು ಮೂಗಿನ ಸುತ್ತಮುತ್ತ ಚರ್ಮದಲ್ಲಿ ಕಪ್ಪುಚುಕ್ಕೆಗಳು (Blackhead) ಕಾಣಿಸಿಕೊಳ್ಳುತ್ತವೆ.ಈ ಮಾರ್ಕ್ ಗಳು ಮುಖದ ಅಂದವನ್ನು ಕೆಡುಸುತ್ತವೆ. ಈ ಕಪ್ಪುಚುಕ್ಕೆಗಳು ಹೆಚ್ಚಾಗಿ ಮೂಗು, ಕಣ್ಣುಗಳು, ಹಾಗೂ ಕೆಳತುಟಿಯ ಕೆಳಭಾಗದ ಮೇಲೆ ಕಾಣಿಸಿಕೊಳ್ಳುತ್ತವೆ. ಇವುಗಳನ್ನು ನಿವಾರಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಇವು ನೋಡಲಿಕ್ಕೆ ಕಪ್ಪಾಗಿದ್ದರೂ ಇವು ಚರ್ಮದ ಆಳದವರೆಗೂ ಚರ್ಮದ ರಂಧ್ರಗಳಲ್ಲಿ ಸೇರಿಕೊಂಡಿರುತ್ತವೆ.
ಈ ಕಪ್ಪುಚುಕ್ಕೆಗಳನ್ನು ನೋವಿಲ್ಲದೆ ನೈಸರ್ಗಿಕವಾಗಿ ಹಾಗೂ ಶಾಶ್ವತವಾಗಿ ಹೋಗಲಾಡಿಸಲು ಕೆಲವು ಮನೆ ಮದ್ದುಗಳು ಇಲ್ಲಿ ಪಟ್ಟಿ ಮಾಡಲಾಗಿದೆ ನಿಮಗೂ ಈ ಸಮಸ್ಯೆ ಇದ್ದರೆ ಟ್ರೈ ಮಾಡಿ.
1.ನಿಂಬೆರಸ
ಹತ್ತು ಹನಿ ನಿಂಬೆ ರಸಕ್ಕೆ ಸ್ವಲ್ಪ ಸಕ್ಕರೆ ಬೆರೆಸಿ ಚನ್ನಾಗಿ ಮಿಶ್ರಣ ಮಾಡಿ ಅದನ್ನು ಮೂಗಿನ ಸುತ್ತ ಹಚ್ಚಿ ಚೆನ್ನಾಗಿ ತಿಕ್ಕಿ ನಂತರ ತುಸುಬಿಸಿ ನೀರಿನಿಂದ ಮುಖ ತೊಳೆಯುವುದರಿಂದ ಮೂಗಿನ ಸುತ್ತಮುತ್ತಲಿನ ಕಪ್ಪು ಕಲೆಗಳು ಬೇಗ ಮಾಯೆಯವಾಗುತ್ತದೆ.
2.ಪುದೀನಾ ಮತ್ತು ಅರಿಸಿನ :
ಒಂದು ಚಮಚ ಪುದೀನಾ ರಸಕ್ಕೆ ಒಂದು ಚಮಚ ಅರಿಶಿಣ ಪುಡಿ ಹಾಕಿ ಕಲಸಿಕೊಂಡು ಅದನ್ನು ಕೆನ್ನೆ, ಮೂಗಿನ ಸಮೀಪ ಮತ್ತು ಗಲ್ಲಕ್ಕೆ ಹಾಕಿ ತಿಕ್ಕುವುದರಿಂದ ಕಪ್ಪುಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು.
3.ಜೇನು :
ಒಂದು ದೊಡ್ಡ ಚಮಚದಲ್ಲಿ ಅರ್ಧದಷ್ಟು ಜೇನು ತುಂಬಿಸಿ ಈ ಚಮಚವನ್ನು ನೇರವಾಗಿ ಒಲೆಯ ಬೆಂಕಿಯ ಮೇಲೆ ಹಿಡಿಯಬೇಕು. ಜೇನು ಉಗುರುಬೆಚ್ಚಗೆ ಆಗುತ್ತಿದ್ದಂತೆ ಬೆಂಕಿಯಿಂದ ಹೊರತೆಗೆಯಿರಿ.ಈ ಬೆಚ್ಚಗಿನ ಜೇನನ್ನು ಕಪ್ಪುಕಪೆಗಳಿರುವಲ್ಲಿ ದಪ್ಪನಾಗಿ ಹಚ್ಚಿ. ಸುಮಾರು ಹದಿನೈದು ನಿಮಿಷದ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ.
4.ಮೆಕ್ಕೆಜೋಳದ ಹಿಟ್ಟು:
ಮೆಕ್ಕೆಜೋಳದ ಹಿಟ್ಟನ್ನು ಸ್ವಲ್ಪ ನೀರಿನೊಂದಿಗೆ ಸೇರಿಸಿ ಅಂಟಿನ ರೂಪಕ್ಕೆ ಬರುವಹಾಗೆ ಮಾಡಿಕೊಳ್ಳಿ. ಕಪ್ಪು ಚುಕ್ಕಿಗಳು ಇರುವಲ್ಲಿ ದಪ್ಪನಾಗಿ ಹಚ್ಚಿಕೊಂಡು ಒಣಗಲು ಬಿಡಿ. ಸುಮಾರು ಇಪ್ಪತ್ತು ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆದುಕೊಳ್ಳಿ.
5.ಕಿತ್ತಳೆ ಸಿಪ್ಪೆ :
ಕಿತ್ತಲೆ ಸಿಪ್ಪೆಯನ್ನು ಅರೆದು ಪೇಸ್ಟ್ ಮಾಡಿ ಅದಕ್ಕೆ ಒಂದು ಚಮಚ ಹಾಲು ಬೆರೆಸಿ ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ 15ನಿಮಿಷ ಬಟ್ಟು ಬೆಚ್ಚಗಿನ ನೀರಿನಿಂದ ತೊಳೆಯುವುದರಿಂದ ಕಪ್ಪು ಕಲೆಗಳು ಮಾಯವಾಗುತ್ತವೆ.
6.ಆಲೂಗಡ್ಡೆ:
ಹಸಿ ಆಲುಗಡ್ಡೆ ಬ್ಲ್ಯಾಕ್ ಹೆಡ್ ನಿವಾರಣೆಗೆ ಬಳಸಬಹುದು.ಆಲೂಗೆಡ್ಡೆಯ ತೆಳುವಾದ ಪೀಸನ್ನು ಕತ್ತರಿಸಿಕೊಂಡು ಬ್ಲ್ಯಾಕ್ ಹೆಡ್ ಇರುವಲ್ಲಿ ಸ್ವಲ್ಪ ಗಟ್ಟಿಯಾಗಿ ಸ್ವಲ್ಪ ಸಮಯ ಉಜ್ಜಬೇಕು. ಅರ್ಧಗಂಟೆ ಬಿಟ್ಟು ದಪ್ಪನೆಯ ತವಳ್ ನಿಂದ ರಸವನ್ನು ಒರೆಸಿ ತೆಗೆಯಬೇಕು. ಇದು ಕಪ್ಪುಚುಕ್ಕಿಗಳನ್ನು ತನ್ನೊಂದಿಗೆ ಸೆಳೆದುಕೊಂಡು ಬರುತ್ತದೆ. ನಂತರ ತಣ್ಣನೆಯ ನೀರಿನಲ್ಲಿ ಬಳಿಕ ಮುಖ ತೊಳೆದುಕೊಳ್ಳಿ.
7.ಲೋಳೆಸರ:
ಲೋಳೆಸರ ಕಪ್ಪುಕಲೆಗಳಿಗೆ ಅತ್ಯುತ್ತಮವಾದ ಮನೆಮದ್ದಾಗಿದೆ. ಲೋಳೆಸರದ ಚಿಗುರು ಕಾಂಡವೊಂದರ ರಸವನ್ನು ಬ್ಲ್ಯಾಕ್ ಹೆಡ್‌ಗಳ ಮೇಲೆ ಉಜ್ಜಿ.ಸುಮಾರು ಹದಿನೈದು ನಿಮಿಷ ಸತತವಾಗಿ ಉಜ್ಜಬೇಕು. ನಂತರ ತಣ್ಣೀರಿನಿಂದ ತೊಳೆದುಕೊಳ್ಳಬೇಕು.
8.ಮನೆಯಲ್ಲಿ ತಯಾರಿಸಿದ ಟೊಮಾಟೊ ಸಾಸ್:
ಹಣ್ಣಾದ ಒಂದು ಟೋಮಾಟೋದ ಸಿಪ್ಪೆ ಸುಲಿದು ಬೀಜ ಬೇರ್ಪಡಿಸಿ ಕೇವಲ ತಿರುಳನ್ನು ಮಾತ್ರ ಚೆನ್ನಾಗಿ ರುಬ್ಬಿ ಸಾಸ್ ತಯಾರಿಸಿ. ಈ ಸಾಸ್ ಅನ್ನು ಬ್ಲ್ಯಾಕ್ ಹೆಡ್ ಅರುವ ಜಾಗದಲ್ಲಿ ದಪ್ಪನಾಗಿ ಹಚ್ಚಿ.ಸುಮಾರು ಹದಿನೈದರಿಂದ ಮೂವತ್ತು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
