fbpx
ದೇವರು

ಪ್ರತಿದಿನವೂ ಮನೆಯಲ್ಲಿ ಮಾಡುವ ಪೂಜೆ ಯಾವಾಗ? ಹೇಗೆ ಮಾಡಬೇಕು ?

ಪ್ರತಿದಿನವೂ ಮನೆಯಲ್ಲಿ ಮಾಡುವ ಪೂಜೆ ಯಾವಾಗ  ?  ಹೇಗೆ ಮಾಡಬೇಕು ?

ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿದಿನ ಪೂಜೆ ಮಾಡಿದರೆ ಎಲ್ಲಾ ರೀತಿಯಲ್ಲೂ ಒಳ್ಳೆಯದಾಗುತ್ತದೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ.ಆದರೆ ಈ ಪೂಜೆಯನ್ನು ಮಾಡುವ ವಿಧಾನದ ಬಗ್ಗೆ ತುಂಬಾ ಜನರಿಗೆ ಈ ಆಧುನಿಕ ಕಾಲದಲ್ಲಿ ತುಂಬಾ ಹೆಚ್ಚಾಗಿ ಸಂದೇಹಗಳು ಮನಸ್ಸಿನಲ್ಲಿ ಮೂಡಿ ಬರುತ್ತಿವೆ. ಇದಕ್ಕೆ ಕಾರಣ ಹಿರಿಯರು ವಿವಿಧ ಕಾರಣಗಳಿಂದ ನಮ್ಮ ಹತ್ತಿರ ಇಲ್ಲದೆ ಇರುವುದು.ಒಂದು ವೇಳೆ ಇದ್ದರೂ ಸಹ ನಾವು ಅವರ ಮಾತುಗಳನ್ನು ನಿರ್ಲ್ಯಕ್ಷದಿಂದ ತಿರಸ್ಕರಿಸುವುದು.

ಯಾವಾಗ ಹಿರಿಯರ ನೀರಿಕ್ಷಣೆ ಕಡಿಮೆ ಆಗುತ್ತದೆಯೋ,ಆಗ ಧರ್ಮದ ಬಗ್ಗೆ ಸಂದೇಹಗಳು ಹೆಚ್ಚಾಗುತ್ತಾ ಹೋಗುತ್ತದೆ. ಮುಖ್ಯವಾಗಿ ಪ್ರತಿದಿನ ದೇವರ ಪೂಜೆಯನ್ನು ಯಾವ ಸಮಯದಲ್ಲಿ ಮತ್ತು ಹೇಗೆ ಮಾಡಬೇಕು ಎಂದು ಅನುಮಾನಗಳು ಹೆಚ್ಚು.

ಮೊದಲಿಗೆ ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು,ಅಂದರೆ ಬೆಳಗಿನ ಜಾವ 4 ರಿಂದ 5 ಗಂಟೆಯವರೆಗೆ,ಈ ಸಮಯದ  ಒಳಗೆ ಎದ್ದು  ಬೆಳಗಿನ ನಿತ್ಯ ಕರ್ಮಗಳನ್ನು ಮುಗಿಸಿ ಸ್ನಾನ  ಮಾಡಿಕೊಂಡು ಸೂರ್ಯೋದಯದ ಸಮಯಕ್ಕೆ ಸೂರ್ಯ ನಮಸ್ಕಾರವನ್ನು ಮಾಡಿ ನಂತರ ಶ್ರದ್ಧೆಯಿಂದ ದೇವರಿಗೆ ಪೂಜೆಯನ್ನು ಮಾಡಬೇಕು.

ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆಯನ್ನು ಮಾಡುವುದರಿಂದ ಪೂಜೆಯ ಫಲಿತಾಂಶ ವೇಗವಾಗಿ ಸಿಗುತ್ತದೆ.ಏಕೆಂದರೆ ಆ ಸಮಯದಲ್ಲಿ ದೇವತೆಗಳು ಸಂಚರಿಸುತ್ತಾರೆ  ಎಂದು ವೇದಗಳಲ್ಲಿ ಹೇಳಲಾಗಿದೆ .ಆ ಸಮಯದಲ್ಲಿ ದೇವತೆಗಳ ಶಕ್ತಿ ಹೆಚ್ಚಾಗಿ ಇರುತ್ತದೆ.ಅದರಿಂದ ನಮ್ಮ ಕೋರಿಕೆಗಳು ಬೇಗನೇ ಈಡೇರುತ್ತವೆ.

ಖಾಲಿ ಹೊಟ್ಟೆಯಲ್ಲಿ ಪೂಜೆಯನ್ನು ಏಕೆ ಮಾಡಬೇಕು ? ಅದರಿಂದ ಏನು ಲಾಭ ?

ಏಕೆಂದರೆ ಭಗವಂತನಿಗೆ ಪೂಜೆ,ಧ್ಯಾನವನ್ನು ಮಾಡಬೇಕೆಂದರೆ ಏಕಾಗ್ರತೆಯ ಅವಶ್ಯಕತೆ ಇದೆ. ನಮ್ಮ ಮನಸ್ಸು ಮತ್ತು ನಮ್ಮ ಆಲೋಚನೆ ಎರಡನ್ನು ಭಗವಂತನ ಕಡೆ ಇಟ್ಟು ಏಕಾಗ್ರತೆಯಿಂದ ಪೂಜೆ ಮಾಡುವುದರಿಂದ  ಆ ಭಗವಂತನ ಅನುಗ್ರಹ ನಮಗೆ ಸಿಗುತ್ತದೆ ಎಂದು ವೇದಗಳು ಹೇಳುತ್ತವೆ.

ಖಾಲಿ ಹೊಟ್ಟೆಯಲ್ಲಿ ಪೂಜೆ ಮಾಡುವಾಗ ನಿಮ್ಮ ದೇಹದಲ್ಲಿರುವ ಶಕ್ತಿಯ ಮೊತ್ತವೆಲ್ಲ, ನಮ್ಮ ಮೆದುಳಿಗೆ ಸೇರಿ,ಪೂಜೆ ಮಾಡುವಾಗ ಏಕಾಗ್ರತೆ ಹೆಚ್ಚಾಗುವಂತೆ ಸಹಾಯ ಮಾಡುತ್ತದೆ.

ಅದೇ ನಮ್ಮ ಹೊಟ್ಟೆಯಲ್ಲಿ ಆಹಾರವಿದ್ದರೆ.ಅದನ್ನು ಜೀರ್ಣ ಮಾಡಿಕೊಳ್ಳುವ ಕ್ರಿಯೆಯಲ್ಲಿ ಸಕ್ರಿಯವಾಗಿರುತ್ತದೆ.ಆ ಸಮಯದಲ್ಲಿ ನಮ್ಮ ಮೆದುಳಿಗೆ ರಕ್ತ ಸಂಚಲನೆ ಕಡಿಮೆಯಾಗಿ ನಿದ್ದೆ ಬರುವುದು. ಏಕಾಗ್ರತೆಯೂ ಕಡಿಮೆಯಾಗುತ್ತದೆ ದೇವರ ಪೂಜೆ ಸರಿಯಾಗಿ ಮಾಡಲು ಆಗುವುದಿಲ್ಲ.

ಮನಸ್ಸು ಪೂರ್ತಿಯಾಗಿ ಏಕಾಗ್ರತೆ ಇಲ್ಲದೆ ಪೂಜೆ ಮಾಡುವುದು ವ್ಯರ್ಥ ಎಂದು ಹಿರಿಯರು ಹೇಳುತ್ತಿದ್ದಾರೆ. ಅದರಿಂದ ನಾವು ಖಾಲಿ ಹೊಟ್ಟೆಯಲ್ಲಿ ಮಾಡುವ ಪೂಜೆಯಿಂದ ಏಕಾಗ್ರತೆ ಹೆಚ್ಚಾಗಿ ಮನಸ್ಪೂರ್ತಿಯಾಗಿ ಪೂಜೆಯನ್ನು ಮಾಡುವುದರಿಂದ ಆ ಭಗವಂತನ ಆಶೀರ್ವಾದ ಸಿಗುತ್ತದೆ.

ಆದ್ದರಿಂದ ಬ್ರಾಹ್ಮಿ ಮುಹೂರ್ತದಲ್ಲಿ ಪೂಜೆ ಮಾಡುವುದು ಒಳ್ಳೆಯದು. ದೇವರು ಪ್ರಸನ್ನಗೊಂಡು ನಿಮ್ಮ ಆಸೆಗಳನ್ನು ಪೂರೈಸುತ್ತಾನೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top