ಇವತ್ತಿನ ಕೆತೆಯು ತನ್ನ ಕಾಲೇಜಿನ ಪ್ರವೇಶ ಪರೀಕ್ಷೆಯಲ್ಲಿ ಫೇಲ್ ಆಗಿ ನಂತರ ಕೆಲಸ ಪಡೆದುಕೊಳ್ಳಲು ಹೋದಾಗ ಹತ್ತಾರು ಬಾರಿ ತಿರಸ್ಕೃತನಾದ ಒಬ್ಬ ಚೀನೀ ಹುಡುಗ ವಿಶ್ವದ ಆರ್ಥಿಕತೆ ಮತ್ತು ಚೀನೀ ಇಂಟರ್ನೆಟ್ ಉದ್ಯಮವನ್ನು ಚಂಡಮಾರುತದಂತೆ ಸ್ಪಾಪಿಸಿ ಏಷ್ಯಾದಲ್ಲೇ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಸ್ಪೂರ್ತಿದಾಯಕ ಕತೆಯಾಗಿದೆ..
ನಾವು ಇಂದು ಹೇಳಲು ಹೊರಟಿರುವ ಕತೆ ಚೀನಾದ ಅತಿದೊಡ್ಡ ಈ ಕಾಮರ್ಸ್ ಸಂಸ್ಥೆಯಾದ ‘ಅಲಿಬಾಬಾ’
ಸಂಸ್ಥಾಪಕರಾದ ಜಾಕ್ ಮಾ ರವರದ್ದು. ಒಂದು ಕೆಳಮಟ್ಟದ ಜನಾಂಗದ ಬಡಕುಟುಂಬದಲ್ಲಿ ಹುಟ್ಟಿದ ಜಾಕ್ ಮಾ ತನ್ನ ಬಾಲ್ಯದಲ್ಲಿ ಬಹಳ ಕಷ್ಟ ಪಟ್ಟರು.ಇವರು ತಮ್ಮ ಪ್ರಾರ್ಥಮಿಕ ಶಾಲೆಯಲ್ಲಿದ್ದಾಗ ಎರಡು ಬಾರಿ ಮತ್ತು ಪ್ರೌಢಶಾಲೆಯಲ್ಲಿದ್ದಾಗ ಮೂರು ಬಾರಿ ಫೇಲ್ ಆಗಿದ್ದರು. ಕುಟುಂಬದ ಆರ್ಥಿಕ ಸ್ಥಿತಿ ದುರ್ಬಲವಾಗಿದ್ದರಿಂದ ಶಾಲೆಗೆ ಹೋಗುವುದು ಕಷ್ಟವಾಗುತ್ತಿತ್ತು.
ಇವಿಷ್ಟೇ ಇವರ ವೈಫಲ್ಯತೆಗಳಲ್ಲ, ಇವರ ಪ್ರೌಢ ಶಿಕ್ಷಣ ಮುಗಿದ ನಂತ್ರ ಕಾಲೇಜ್ಗೆ ಸೇರಿಕೊಳ್ಳಲು ಅರ್ಜಿ ಸಲ್ಲಿಸಿದಾಗ ಎರಡು ಬಾರಿ ಪ್ರವೇಶ ಪಡೆಯಲು ಇದ್ದ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಈ ಎಲ್ಲವಿಫಲತೆಗಳ ನಡುವೆಯೂ ಇವನು ಇಂಗ್ಲಿಷ್ ವಿಷಯದಲ್ಲಿ ಪದವಿಯನ್ನು ಮುಗಿಸುತ್ತಾನೆ.
ವಿದ್ಯಾಭ್ಯಾಸವು ಮುಗಿದ ನಂತರ 1988ರಲ್ಲಿ ಕೆಲಸಕ್ಕೆಂದು ಸುಮಾರು ಮೂವತ್ತಕ್ಕೂ ಹೆಚ್ಚು ಸಂಸ್ಥೆಗಳಲ್ಲಿ ಅರ್ಜಿ ಸಲ್ಲಿಸಿದ್ದನು ಮತ್ತು ಆತನು ಸಲ್ಲಿಸಿದ್ದ ಅರ್ಜಿಗಳನ್ನು ಎಲ್ಲ ಸಂಸ್ಥೆಯವರು ರಿಜೆಕ್ಟ್ ಮಾಡಿದ್ದರು.ಇಷ್ಟು ಹೋರಾಟದ ನಂತರ ಸ್ಥಳೀಯ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕನಾಗಿ ಸೇರಿಕೊಂಡನು.ಅವನಿಗೆ ಅಲ್ಲಿ ಕೊಡುತ್ತಿದ್ದ ಸಂಬಳ ತಿಂಗಳಿಗೆ 800 ರುಪಾಯಿಗೆ ಸಮನಾದದ್ದು.
ಇವರಿಗೆ ಇಂಗ್ಲಿಷ್ ಚನ್ನಾಗಿ ಮಾತನಾಡಲು ಬರುತ್ತಿದ್ದರಿಂದ 1995 ರಲ್ಲಿ ಅಮೆರಿಕಾಗೆ ಅನುವಾದಕನಾಗಿ ಹೋಗುವ ಅವಕಾಶ ಸಿಗುತ್ತದೆ.ಅಲ್ಲಿ ಅವನಿಗೆ ಇಂಟರ್ನೆಟ್ ನಿಂದ ಜಗತ್ತಿನಲ್ಲಿ ಏನೋ ಸಾದಿಸಬಹುದು ಎಂದು ಮನವರಿಸಿಕೊಂಡನು.
1995 ರಲ್ಲಿ ಜಾಕ್ ಮಾ ರವರು ಅವರ ಪತ್ನಿಯ ಜೊತೆಗೂಡಿ ಚಿಕ್ಕ ಕಂಪೆನಿಗಳಿಗೆಂದೇ ಒಂದು ವೆಬ್ಸೈಟ್ ಅನ್ನು ಕೇವಲ ಇಪ್ಪತ್ತು ಸಾವಿರ US ಡಾಲರ್ ಗಳಲ್ಲಿ ಸ್ಟಾರ್ಟ್ ಮಾಡಿದರು.ಸ್ಥಾಪನೆಯಾದ ಕೇವಲ ಮೂರು ವರ್ಷಗಳಲ್ಲೇ ಎಂಟು ಲಕ್ಷ USಡಾಲರ್ ಲಾಭವನ್ನು ಇದು ಗಳಿಸುತ್ತದೆ.ಇದು ಅವನ ಜೀವನದಲ್ಲಿ ಒಂದು ಮಹತ್ತರದ ತಿರುವನ್ನು ಪಡೆದುಕೊಳ್ಳುತ್ತದೆ.ಪ್ರಾರಂಭದ ಯಶಸ್ಸನ್ನು ಸ್ಪೂರ್ತಿಯಾಗಿಟ್ಟುಕೊಂಡು ತನ್ನ ಬಿಸಿನೆಸ್ ಅನ್ನು ವಿಸ್ತರಿಸುತ್ತಾನೆ. ಆಗ ಆಲಿಬಾಬ ಗ್ರೂಪ್ ಹುಟ್ಟಿಕೊಳ್ಳುತ್ತದೆ.
ಇವತ್ತು ಆ ಅಲಿಬಾಬಾ ಸಂಸ್ಥೆಯು ಪ್ರತಿದಿನ ನೂರು ಮಿಲಿಯನ್ ಗ್ರಾಹಕರನ್ನು ಒಂದು ದಿನದ ಸರಾಸರಿಯಾಗಿ ಹೊಂದಿದೆ.ಸುಮಾರು ನಲವತ್ತು ಮಿಲಿಯನ್ ಉದ್ಯೋಗಿಗಳನ್ನು ಹೊಂದಿದೆ.
ಜೀವನದಲ್ಲಿ ಎಷ್ಟೇ ಫೇಲೂರ್ ಗಳಿದ್ದರು ದೃಢಮನಸೊಂದಿದ್ದರೆ ಅವನ ಕನಸನ್ನು ನನಸು ಮಾಡಿಕೊಳ್ಳಬಹುದು ಎಂಬುದಕ್ಕೆ ಜಾಕ್ ಮಾ ರವರು ಜೀವಂತ ಉಧಾಹರಣೆಯಾಗಿದ್ದಾರೆ
FB.COM/ARALIKATTEZ ಲೈಕ್ ಮಾಡೋಕೆ ಮರೀಬೇಡಿ ಏಕೆಂದರೆ ನಿಮ್ಮ ಲೈಕ್ ಗಳು ನಮಗೆ ಬಹಳ ಮುಖ್ಯ .
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
