ಈ ಐದು ದೇವಸ್ಥಾನಗಳಲ್ಲಿ ಪುರುಷರಿಗೆ ಪ್ರವೇಶ ಇಲ್ಲ.
ದೇವಸ್ಥಾನದಂತಹ ಆರಾಧನಾ ತಾಣಗಳು ದೇವರು ನಮ್ಮ ರಕ್ಷಣೆಗೆ ಇದ್ದಾನೆ ಎಂಬ ಭಾವನೆಯನ್ನು ಮೂಡಿಸುವ ಜೊತೆಗೆ ನಮಗೆ ವಿಶ್ರಾಂತಿ ಮತ್ತು ಮನಸ್ಸಿಗೆ ಸಮಾಧಾನವನ್ನು ನೀಡುತ್ತವೆ.ಆದರೆ ಲಿಂಗವನ್ನು(ಪುಲ್ಲಿಂಗ ಮತ್ತು ಸ್ತ್ರೀಲಿಂಗ) ಆಧರಿಸಿ ದೇವಸ್ಥಾನಗಳಿಗೆ ಪ್ರವೇಶಾವಕಾಶವನ್ನು ನೀಡಿವುದರಿಂದ ಮಹಿಳೆಯರಿಗೆ ಪ್ರವೇಶದ ಅವಕಾಶ ಇಲ್ಲದ ಶಬರಿಮಲೆ ಕ್ಷೇತ್ರದಂತಹ ದೇವಸ್ಥಾನಗಳು ಇವೆ.
ಹಾಗೆಯೇ ಪುರುಷರಿಗೆ ಪ್ರವೇಶಾವಕಾಶಗಳು ಇರದೇ ಇರುವ ದೇವಸ್ಥಾನಗಳು ಸಹ ನಮ್ಮ ಭಾರತದಲ್ಲಿಯೇ ಇರುವುದು ಇನ್ನೊಂದು ವಿಶೇಷ . ಇಂತಹ ಐದು ವಿಶಿಷ್ಟವಾದ ದೇವರು ಮತ್ತು ದೇವಸ್ಥಾನದ ವಿವರವನ್ನು ಇಲ್ಲಿ ಹೇಳಲಾಗಿದೆ ಓದಿ ತಿಳಿಯಿರಿ….
ಕೆಲವು ನಿರ್ದಿಷ್ಟ ದಿನಗಳಲ್ಲಿ ಅಥವಾ ಸಂದರ್ಭಗಳಲ್ಲಿ ಈ ದೇವಸ್ಥಾನಗಳಲ್ಲಿ ಪುರುಷರ ಪ್ರವೇಶಕ್ಕೆ ಅವಕಾಶವಿಲ್ಲ.ಅವುಗಳು ಯಾವುವು ಎಂದರೆ
1.ಕೆರಳದಲ್ಲಿರುವ ಅಟ್ಟುಕಾಲು ಭಗವತಿ ದೇವಸ್ಥಾನ.
ಈ ದೇವಸ್ಥಾನದಲ್ಲಿ ಪೊಂಗಲ್ ಹಬ್ಬದ ಸಂದರ್ಭದಲ್ಲಿ ಲಕ್ಷಾಂತರ ಮಹಿಳೆಯರು ಇಲ್ಲಿ ಬಂದು ಸೇರುತ್ತಾರೆ. ಇದು ಧಾರ್ಮಿಕ ಚಟುವಟಿಕೆಗಾಗಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಸಮಾವೇಶವೊಂದನ್ನು ಗಿನ್ನಿಸ ದಾಖಲೆಯ ಪುಸ್ತಕದಲ್ಲಿ ಸೇರಿಗೆ.ಇದು 10 ದಿನಗಳ ಕಾಲ ನೆಡೆಯಲಿರುವ ಈ ಉತ್ಸವದ ಅವಧಿಯಲ್ಲಿ ಪುರುಷರಿಗೆ ದೇವಸ್ಥಾನದ ಒಳಗಡೆ ಪ್ರವೇಶವನ್ನು ನಿಷೇಧಿಸಲಾಗಿದೆ.
2.ಕೆರಳದಲ್ಲಿರುವ ಚಕುಲತಕವೂ ದೇವಸ್ಥಾನ.
ಇದು ಕೆರಳದಲ್ಲಿರುವ ಇನ್ನೊಂದು ದೇವಿ ಭಗವತಿಯ ಅತ್ಯಂತ ಪ್ರಮುಖವಾದ ದೇವಸ್ಥಾನವಾಗಿದೆ. ಧನು ಎಂದು ಕರೆಯಲಾಗುವ ಪ್ರತಿವರ್ಷದ ಡಿಸೆಂಬರ್ ತಿಂಗಳ ಮೊದಲ ಶುಕ್ರವಾರ ಈ ದೇವಸ್ಥಾನದಲ್ಲಿ ನಾರಿ ಪೂಜೆ ನೆಡೆಯುತ್ತದೆ. ಮಹಿಳೆಯರು ಹತ್ತು ದಿನಗಳ ಕಾಲ ಉಪವಾಸವಿದ್ದು ವ್ರತವನ್ನು ಆಚರಿಸಿ ಈ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಅಲ್ಲಿ ಪುರುಷ ಅರ್ಚಕರು ಅವರ ಪಾದಗಳನ್ನು ತೊಳೆಯುತ್ತಾರೆ.ಅಂದು ದೇವಸ್ಥಾನದಲ್ಲಿ ಅರ್ಚಕರನ್ನು ಹೊರತು ಪಡಿಸಿ ಬೇರೆ ಯಾವ ಪುರುಷರಿಗೂ ಕೂಡ ಪ್ರವೇಶವಿಲ್ಲ.ಆ ದೇವಾಲಯವೇ ಚಕುಲತಕವೂ ದೇವಸ್ಥಾನ.
3.ರಾಜಸ್ಥಾನದ ಬ್ರಹ್ಮ ದೇಗುಲ.
ಇಡೀ ವಿಶ್ವದಲ್ಲಿಯೇ ಬ್ರಹ್ಮನಿಗೆ ಇರುವುದು ಒಂದೇ ಒಂದು ದೇವಸ್ಥಾನ ಅದು ರಾಜಸ್ತಾನದ ಪುಷ್ಕರ ದಲ್ಲಿದೆ.ಈ ಬ್ರಹ್ಮ ದೇವಸ್ಥಾನದಲ್ಲಿ ವಿವಾಹಿತ ಪುರುಷರಿಗೆ ಪ್ರವೇಶವಿಲ್ಲ.ಕಾರ್ತಿಕ ಪೌರ್ಣಮಿಯ ದಿನ ಈ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ನೆಡೆಯುತ್ತದೆ.
4.ಕನ್ಯಾಕುಮಾರಿಯ ಭಗವತೀ ಅಮ್ಮನವರ ದೇವಸ್ಥಾನ.
ಈ ದೇವಸ್ಥಾನ ಕನ್ಯಾಕುಮಾರಿಯಲ್ಲಿದೆ .ಇಲ್ಲಿ ಪರಮೇಶ್ವರನನ್ನು ಪತಿಯಾಗಿ ಪಡೆಯಲು ಪಾರ್ವತಿ ದೇವಿಯು ಅತ್ಯಂತ ಕಠಿಣ ತಪ್ಪಸನ್ನು ಆಚರಿಸಿದ್ದು ಇದೇ ದೇವಸ್ಥಾನದಲ್ಲಿ ಎನ್ನಲಾಗಿದೆ.ಈ ದೇವಸ್ಥಾನವನ್ನು ಮಹಿಳೆಯರು ಮಾತ್ರ ಪ್ರವೇಶಿಸಬಹುದಾಗಿದ್ದು ಪುರುಷರಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
5.ಬಿಹಾರದ ಮಾತಾ ದೇವಸ್ಥಾನ.
ಬಿಹಾರದ ಮುಜಾಫರ್ಪುರ್ ದಲ್ಲಿರುವ ಈ ದೇವಸ್ಥಾನದಲ್ಲಿ ವಿಶೇಷ ಅವಧಿಯ ಸಂದರ್ಭ ಕೇವಲ ಮಹಿಳೆಯರಿಗೆ ಮಾತ್ರ ಪ್ರವೇಶ ಅವಕಾಶ ಇದೆ.ಈ ಸಮಯದಲ್ಲಿ ದೇವಸ್ತಾನದ ಅರ್ಚಕರು ಸಹ ದೇವಸ್ಥಾನದ ಆವರಣವನ್ನು ಪ್ರವೇಶಿಸುವಂತಿಲ್ಲ.
ಹೀಗೆ ಪುರುಷರು ಸಹ ದೇವಸ್ಥಾನದಿಂದ ಹೊರಗುಳಿದಿರುವ ದೇವಾಲಯಗಳು ಇವು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
