ಮಂಗಳವಾರ, ೧೧ ಜುಲೈ ೨೦೧೭
ಸೂರ್ಯೋದಯ : ೦೫:೩೫
ಸೂರ್ಯಾಸ್ತ : ೧೯:೧೭
ಶಕ ಸಂವತ : ೧೯೩೯ ಹೇವಿಲಂಬಿ
ಅಮಂತ ತಿಂಗಳು : ಆಷಾಢ
ಪಕ್ಷ : ಕೃಷ್ಣ ಪಕ್ಷ
ತಿಥಿ : ಬಿದಿಗೆ
ನಕ್ಷತ್ರ : ಶ್ರವಣ
ಯೋಗ : ವಿಷ್ಕುಂಭ
ಅಮೃತಕಾಲ : ೦೯:೫೪ – ೧೧:೩೮
ರಾಹು ಕಾಲ: ೧೨:೨೬ – ೧೪:೦೯
ಗುಳಿಕ ಕಾಲ: ೧೦:೪೩ – ೧೨:೨೬
ಯಮಗಂಡ: ೦೭:೧೮ – ೦೯:೦೧
ಮೇಷ (Mesha)
ಮರಮಟ್ಟು ಸಾಮಾನುಗಳು, ಪೀಠೋಪಕರಣಗಳು ಹಾಗೂ ಗೃಹಾಲಂಕಾರ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ಲಾಭ.
ವೃಷಭ (Vrushabh)
ವಿರೋಧಿಗಳ ವಿರುದ್ಧ ಲಭಿಸಲಿರುವ ವಿಜಯವು ನಿಮಗೆ ನಿಶ್ಚಯವಾಗಿಯೂ ಸಂತಸ ತರಲಿದೆ. ನೆಮ್ಮದಿಯಿಂದಿರಿ.
ಮಿಥುನ (Mithuna)
ವಿವಿಧ ಬಗೆಯ ರಂಗಗಳಲ್ಲಿ ನಿಮ್ಮ ಆಸಕ್ತಿಯು ಸಕ್ರಿಯವಾಗಿದ್ದು, ನಿಮ್ಮ ಬಗೆಗಿನ ಗೌರವ ಆದರಗಳು ವೃದ್ಧಿಸಲಿವೆ.
ಕರ್ಕ (Karka)
ವಿದ್ಯಾರ್ಥಿಗಳು ಏಕಾಗ್ರತೆಯನ್ನು ಪಡೆದುಕೊಳ್ಳಲು ಸರ್ವಮಂಗಳೆಯಾದ ಪಾರ್ವತಿಯನ್ನು ಸ್ತುತಿಸುವುದು ಒಳಿತು.
ಸಿಂಹ (Simha)
ಕ್ಲಿಷ್ಟವಾದ ಕಾರ್ಯವನ್ನು ಅಧಿಕವಾದ ಚಾಣಾಕ್ಷತೆಯಿಂದ ಮಾಡಿ ಮುಗಿಸುವ ನಿಮಗೆ ಪ್ರಶಂಸೆಗಳು ದೊರೆಯಲಿವೆ.
ಕನ್ಯಾರಾಶಿ (Kanya)
ನಿಮ್ಮ ಎಲ್ಲ ರೀತಿಯ ಭಾವನಾತ್ಮಕ ವಿಚಾರಗಳನ್ನು ಕ್ಷುದ್ರರ ಬಳಿ ಹಂಚಿಕೊಳ್ಳದಿರಿ. ಅವರು ತೊಂದರೆ ತಂದಾರು.
ತುಲಾ (Tula)
ವಿದೇಶ ಪ್ರವಾಸಕ್ಕಾಗಿ ಕಾತರಿಸಿರುವ ವಿದ್ಯಾರ್ಥಿಗಳಿಗೆ ವಿದ್ಯಾಸಿದ್ಧಿಗಾಗಿ ಹೊಸದಾದ ಅವಕಾಶಗಳು ಕೂಡಿಬರಲಿವೆ.
ವೃಶ್ಚಿಕ (Vrushchika)
ನಿಮ್ಮ ಜೋಡಿಯು ಅನುರೂಪವಾಗಿದೆ ಎಂಬಂತಹ ಮಾತುಗಳನ್ನು ಕೇಳಲಿರುವಿರಿ. ಹರ್ಷದಿಂದ ನಿರಾಳವಾಗಿರಿ.
ಧನು ರಾಶಿ (Dhanu)
ಅನುಗ್ರಹಗಳ ಮೂಲಕ ಜಗತ್ತನ್ನು ಕಾಯುವಂತಹ ಶ್ರೀ ಭದ್ರಕಾಳಿಯನ್ನು ಆರಾಧಿಸಿ. ಕಾರ್ಯಗಳು ಸಫಲವಾಗಲಿವೆ.
ಮಕರ (Makara)
ಸುಮ್ಮಸುಮ್ಮನೆ ಕಿರಿಕಿರಿಗಳನ್ನು, ಇಲ್ಲಸಲ್ಲದ ಆರೋಪಗಳನ್ನು ತರುವ ವಿಘ್ನಸಂತೋಷಿಗಳ ವಿರುದ್ಧ ಎಚ್ಚರದಿಂದಿರಿ.
ಕುಂಭರಾಶಿ (Kumbha)
ಪದೋನ್ನತಿ ದೊರೆಯಲು ಅವಕಾಶಗಳಿದ್ದರೂ ಕೆಲವು ಕಾಯ್ದೆಯ ತೊಡಕುಗಳು ನಿಮ್ಮ ತಲೆ ತಿನ್ನಬಹುದಾಗಿದೆ.
ಮೀನರಾಶಿ (Meena)
ಮನೆಯಲ್ಲಿ ಬಾಳಸಂಗಾತಿ ಹಾಗೂ ಮಕ್ಕಳೊಡನೆ ಬಿಗುಮಾನವನ್ನು ಬಿಟ್ಟು ಸಹಜವಾಗಿರಿ. ಇದರಿಂದ ಕ್ಷೇಮವಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
