ಬೆಂಗಳೂರಿನಲ್ಲಿ ಅತೀ ಹೆಚ್ಚು ಸಂಬಳ ನೀಡುತ್ತಿರುವ 10 ಕಂಪನಿಗಳು.
ಬೆಂಗಳೂರಿನಲ್ಲಿ ಅತೀ ಹೆಚ್ಚು ಸಂಬಳ ಪಾವತಿಸುವ ಮೊದಲ ಹತ್ತು ಕಂಪನಿಗಳು ಯಾವುವು ? ಎಂಬುದರ ಬಗ್ಗೆ ಮಾಹಿತಿ ಮತ್ತು ವಿವರ ಇಲ್ಲಿದೆ ನೋಡಿ.
ಅತೀ ಹೆಚ್ಚು ಸಂಬಳ ಕೊಡುವ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಉನ್ನತ ಕಂಪನಿ,ಹೆಚ್ಚು ಸಂಬಳ, ಸಮಾಜದಲ್ಲಿ ನಮ್ಮ ಸ್ಥಾನ, ಮಾನ,ಘನತೆ,ಗೌರವ ಹೆಚ್ಚಿಸುತ್ತದೆ ಎನ್ನುವುದು ಹಚ್ಚಿನವರ ನಂಬಿಕೆ.
ಯಾವ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದೀರಿ ? ಎಷ್ಟು ಸಂಬಳ ಕೊಡ್ತಾರೆ ? ಅದಕ್ಕಿಂತಲೂ ಈ ಕಂಪೆನಿಯೇ ಎಷ್ಟೋ ಚೆನ್ನಾಗಿತ್ತು. ಸಂಬಳ ಕೂಡ ಜಾಸ್ತಿ ಕೊಡ್ತಿದ್ರು, ಯಾಕೆ ಪ್ರಯತ್ನ ಮಾಡಿಲ್ವಾ ? ಹೀಗೆಂದು ಸುತ್ತಮುತ್ತಲಿನವರು ಕೇಳ್ತಾ ಇರ್ತಾರೆ.ಇನ್ಮೇಲೆ ಯೋಚನೆ ಮಾಡಬೇಡಿ .ನೀವು ಇಲ್ಲಿರುವ ಕೆಲವು ಕಂಪೆನಿಗಳಲ್ಲಿ ಜಾಸ್ತಿ ಸಂಬಳ ಕೊಡ್ತಾರೆ ನೋಡಿ. ಈ ಕಂಪನಿಯಲ್ಲಿ ಸೇರಿಕೊಳ್ಳಲು ಪ್ರಯತ್ನಿಸಿ.
1.ಮೈಕ್ರೋಸಾಫ್ಟ್(microsoft).
*ಪೇ ಪ್ಯಾಕೇಜ್:-ಸಾಫ್ಟವೇರ್ ಡೇವಲಪ್ಮೆಂಟ್ ಇಂಜಿನಿಯರ್ (SDE) ಆಗಿ ಸೇರುವ ಹೊಸಬರಿಗೆ (freshers) ವಾರ್ಷಿಕವಾಗಿ 11-21 ಲಕ್ಷ ಸಂಬಳ ಪಾವತಿಸುತ್ತಿದ್ದು. ಸರಾಸರಿ 12.77 ಲಕ್ಷ ಸಂಬಳ ಪಾವತಿಸುತ್ತದೆ.
*ಸಾಫ್ಟವೇರ್ ಕ್ಷೆತ್ರದ ದಿಗ್ಗಜ ಕಂಪೆನಿಯಾದ ಮೈಕ್ರೋಸಾಫ್ಟ್ ಹೆಚ್ಚು ಸಂಬಳ ನೀಡುವಲ್ಲಿ ಮುಂಚೂಣಿಯಲ್ಲಿದೆ.ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಕಂಪನಿಯ ಸ್ಥಾಪಕರು,ಮೈಕ್ರೋಸಾಫ್ಟ್ ಕಂಪನಿಯ ಲೈಸೆನ್ಸ್, ಕಂಪ್ಯೂಟರ್ ಸಾಫ್ಟವೇರ್, ಎಲೆಕ್ಟ್ರಾನಿಕ್ ಪರ್ಸನಲ್ ಕಂಪ್ಯೂಟರ್ಸ್ ಮತ್ತು ಸೇವೆಗಳನ್ನು ಒದಗಿಸುತ್ತದೆ. ಮೈಕ್ರೋಸಾಫ್ಟ್ ಕಂಪ್ಯೂಟರ್ ಕ್ಷೇತ್ರದಲ್ಲಿ ಜಾಗತಿಕವಾಗಿ ಮೊದಲ ಸ್ಥಾನದಲ್ಲಿದೆ.
2.ಅಮೆಜಾನ್ (amazon).
*ಪೇ ಪ್ಯಾಕೇಜ್:-ಅಮೆಜಾನ್ ಸಂಸ್ಥೆ ಸಾಫ್ಟವೇರ್ ಡೆವಲಪ್ಮೆಂಟ್ ಇಂಜಿನಿಯರ್ (SDE) ಆಗಿ ಸೇರುವ ಹೊಸಬರಿಗೆ ವಾರ್ಷಿಕವಾಗಿ 7-18 ಲಕ್ಷ ಸಂಬಳ ನೀಡುತ್ತಿದ್ದು,ಸರಾಸರಿ 13.39 ಲಕ್ಷ ಪಾವತಿಸುತ್ತಿದೆ.
*ಜೆಫ್ ಬೆಜೋಸ್:- ಅಮೆಜಾನ್.ಕಾಮ್ ಸಂಸ್ಥೆಯ ಸಂಸ್ಥಾಪಕ ಹಾಗೂ ceo.
ಅಮೆಜಾನ್.ಕಾಮ್ ಜಗತ್ತಿನ ಪ್ರತಿಷ್ಠಿತ ಇ- ಕಾಮರ್ಸ್ ಆನ್ಲೈನ್ ಮಾರುಕಟ್ಟೆಯಲ್ಲಿ ಬೃಹತ್ ಕಂಪೆನಿಯಾಗಿದೆ.
3.ಫ್ಲಿಪ್ಕಾರ್ಟ್(flip cart).
ಪೇ ಪ್ಯಾಕೇಜ್:- ಸಾಫ್ಟವೇರ್ ಡೆವೆಲಪ್ಮೆಂಟ್ ಇಂಜಿನಿಯರ್(SDE) ಆಗಿ ಸೇರುವ ಹೊಸಬರಿಗೆ ವಾರ್ಷಿಕವಾಗಿ 12.22 ಲಕ್ಷ ಸಂಬಳ ನೀಡುತ್ತಿದ್ದು,ಸರಾಸರಿ 16.2 ಲಕ್ಷ ಪಾವತಿಸುತ್ತಿದೆ.
4.ಇಂಟ್ಯೂಟ್(intuit).
*ಪೇ ಪ್ಯಾಕೇಜ್:- ಸಾಫ್ಟವೇರ್ ಇಂಜಿನಿಯರ್ ಆಗಿ ಸೇರುವ ಉದ್ಯೋಗಿಗಳಿಗೆ ವಾರ್ಷಿಕವಾಗಿ 8-20 ಲಕ್ಷ ವ್ಯಾಪ್ತಿಯಲ್ಲಿ ಸಂಬಳ ನೀಡುತ್ತಿದ್ದು,ವಾರ್ಷಿಕ ಸರಾಸರಿ 12.5 ಲಕ್ಷ ಪಾವತಿಸುತ್ತದೆ.
*ತುಂಬಾ ವೇಗವಾಗಿ ಬೆಳೆಯುತ್ತಿರುವ ಇಂಟ್ಯೂಟ್ ಸಂಸ್ಥೆ ಉತ್ತಮ ಆಕರ್ಷಕ ಸಂಸ್ಥೆಯಾಗಿದೆ.
5.ಸ್ನಾಪಡೀಲ್(snapdeal).
ಪೇ ಪ್ಯಾಕೇಜ್:- ಸಾಫ್ಟವೇರ್ ಇಂಜಿನಿಯರ್ ಆಗಿ ಹುದ್ದೆಗೆ ಸೇರುವ ಉದ್ಯೋಗಿಗಳಿಗೆ ವಾರ್ಷಿಕವಾಗಿ 7-16 ಲಕ್ಷ ವ್ಯಾಪ್ತಿಯಲ್ಲಿ ಸಂಬಳ ಪಾವತಿಸುತ್ತಿದ್ದು ವಾರ್ಷಿಕ ಸರಾಸರಿ 10 ಲಕ್ಷ ನೀಡುತ್ತಿದೆ.
6.ಲಿಂಕೆಡಿನ್ (linke din)
ಪೇ ಪ್ಯಾಕೇಜ್:- ಸಾಫ್ಟವೇರ್ ಇಂಜಿನಿಯರ್ ಆಗಿ ಸೇರುವ ಉದ್ಯೋಗಿಗಳಿಗೆ ವಾರ್ಷಿಕವಾಗಿ 12.5-15 ಲಕ್ಷ ವ್ಯಾಪ್ತಿಯಲ್ಲಿ ಸಂಬಳ ನೀಡುತ್ತಿದ್ದು,ವಾರ್ಷಿಕ ಸರಾಸರಿ 14.25 ಲಕ್ಷ ನೀಡುತ್ತಿದೆ.
7.ವಿಸಾ ಇಂಕ್ (visa inc).
ಪೇ ಪ್ಯಾಕೇಜ್:- ವಿಸಾ ಇಂಕ್ ಕಂಪನಿಯಲ್ಲಿ ಕೆಲಸ ಗಿಟ್ಟಿಸುವವರು ವಾರ್ಷಿಕವಾಗಿ 8-23 ಲಕ್ಷ ವ್ಯಾಪ್ತಿಯಲ್ಲಿ ಉತ್ತಮ ಸಂಬಳ ಪಡೆಯಬಹುದು. ವಾರ್ಷಿಕ ಸರಾಸರಿ 16 ಲಕ್ಷ ಪಾವತಿಸುತ್ತಿದೆ.
8.ವಾಲ್ ಮಾರ್ಟ್ (wall mart).
ಪೇ ಪ್ಯಾಕೇಜ್:- ವಾಲ್ ಮಾರ್ಟ್ ಸಂಸ್ಥೆ ಉದ್ಯೋಗಿಗಳಿಗೆ ವಾರ್ಷಿಕವಾಗಿ 16-19 ಲಕ್ಷ ವ್ಯಾಪ್ತಿಯಲ್ಲಿ ಸಂಬಳ ಪಾವತಿಸುತ್ತಿದೆ. ವಾಲ್ ಮಾರ್ಟ್ ಅಮೆರಿಕ ಮೂಲದ ಕಂಪೆನಿಯಾಗಿದ್ದು, ಇನ್ನೊಂದು ಹೈಪರ್ ಮಾರ್ಕೆಟ್, ರಿಯಾಯಿತಿ ಮಳಿಗೆ ಮತ್ತು ದಿನಸಿ ಸ್ಟೋರ್ ಆಗಿದೆ.
9.ಸಿಸ್ಕೋ( cisco).
ಪೇ ಪ್ಯಾಕೇಜ್:- ಅಂತರ ರಾಷ್ಟ್ರೀಯ ಖ್ಯಾತಿಯ ಸಿಸ್ಕೊ ಹೊಸ ಉದ್ಯೋಗಿಗಳಿಗೆ ಸರಾಸರಿ 10.3 ಲಕ್ಷ ಸಂಬಳ ನೀಡುತ್ತಿದ್ದು . ವಾರ್ಷಿಕ ಸರಾಸರಿ 25 ಲಕ್ಷ ಪಾವತಿಸುತ್ತಿದೆ.
10.ಗೂಗಲ್ (google).
ಪೇ ಪ್ಯಾಕೇಜ್:- ಗೂಗಲ್ ಕೂಡ ಉತ್ತಮ ಸಂಬಳ ಒದಗಿಸುತ್ತಿದೆ.ವಾರ್ಷಿಕವಾಗಿ 6-10 ಲಕ್ಷ ಪಾವತಿಸುತ್ತದೆ. ಸರಾಸರಿ 18 ಲಕ್ಷ ಸಂಬಳ ಪಾವತಿಸುತ್ತದೆ.
ಇನ್ನೂ ಇವುಗಳ ನಂತರದಲ್ಲಿ ಪ್ರಕ್ಟೋ (practo) ಮತ್ತು ಕೋಡನೇಶನ್ ( codenation ) ಕೂಡ ಈಗ ಅತೀ ಹೆಚ್ಚು ಸಂಬಳವನ್ನು ಪಾವತಿಸುತ್ತಿವೆ.
ಇಷ್ಟು ಸಂಬಳ ಹೆಚ್ಚಿದರು ಈ ಕಂಪನಿಗಳು ಉದ್ಯೋಗಸ್ತರನ್ನು ಉದ್ಯೋಗದಿಂದ ತೆಗೆದುಹಾಕುತ್ತಿವೆ ಎನ್ನುವ ಮಾತು ಇದೆ ಅಂದರೆ ( job cut)ಮಾಡುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
