ನಮ್ಮಲ್ಲಿ ಹಲವರ ಜಾತಕದಲ್ಲಿ ಗಜ ಕೇಸರಿ ಯೋಗ ಎಂದು ಕೇಳಿರುತ್ತೇವೆ ಹಾಗೆಂದರೇನು ತಿಳಿಯೋಣ ಬನ್ನಿ..
ಗಜ ಕೇಸರಿ ಯೋಗ ಎಂದರೆ ಜ್ಯೋತಿಷ್ಯದಲ್ಲಿ ಅತ್ಯಂತ ಮಂಗಳಕರ ಮತ್ತು ಪ್ರಯೋಜನಕಾರಿ ಯೋಗಗಳಲ್ಲಿ ಒಂದು , ಇಲ್ಲಿ ಗಜ ಎಂದರೆ ಆನೆ ಮತ್ತು ಕೇಸರಿ ಎಂದರೆ ಸಿಂಹ .
ಉಗ್ರ ಸಿಂಹವು ಆನೆಗಳ ಸಮೂಹದ ಮೇಲೆ ದಾಳಿ ನಡೆಸಿದಾಗ ಆನೆಗಳು ಚದುರಿಹೋಗುತ್ತವೆ ಹಾಗೆಯೇ ಈ ಯೋಗವು ಬಹಳ ಬಲಿಷ್ಠವಾದದ್ದು
ಈ ದೋಷವಿರುವ ವ್ಯಕ್ತಿಗೆ ಯಾವುದೇ ಇತರ ದೋಷಗಳು ಅಂದರೆ ಕುಜ ದೋಷ ಅಥವಾ ಇನ್ನಿತರ ಘೋರ ಪರಿಣಾಮಗಳನ್ನು ಉಂಟುಮಾಡುವ ದೋಷಗಳು ಇರುವುದಿಲ್ಲ ಎಂದು ಹೇಳಲಾಗುತ್ತದೆ .
ಈ ಯೋಗವು ದೀರ್ಘಾವಧಿಯ ಜೀವನ, ಖ್ಯಾತಿ, ಅದೃಷ್ಟ, ಸಂಪತ್ತು, ಸಂತೋಷವನ್ನು ನೀಡುತ್ತದೆ ಮತ್ತು ವ್ಯಕ್ತಿಯನ್ನು ಜೀವನದಲ್ಲಿ ಉನ್ನತ ಸ್ಥಾನದಲ್ಲಿ ಇಡಲು ಸಹಾಯ ಮಾಡುತ್ತದೆ, ಗುರು ಮತ್ತು ಚಂದ್ರರು ಪರಸ್ಪರ ಕೇಂದ್ರದಲ್ಲಿರುವಾಗ ಗಜ ಕೇಸರಿ ಯೋಗ ರೂಪಿಸುತ್ತದೆ. ಇದರರ್ಥ, ಜನ್ಮಕುಂಡಲಿಯಲ್ಲಿ ಗುರುವು ಚಂದ್ರನಿಂದ 1, 4 ನೇ, 7 ನೇ, 10 ನೇ ಕೇಂದ್ರದಲ್ಲಿದ್ದರೆ ಅಥವಾ ಸಂಯೋಗದೊಂದಿಗೆ ಇದ್ದರೆ ಬರುವ ಯೋಗ.
ಉದಾಹರಣೆಗೆ :
ಮೇಲಿನ ಕುಂಡಲಿಯನ್ನು ಒಮ್ಮೆ ಗಮನಿಸಿ ಈಗ ಗುರುವು ನಾಲ್ಕನೇ ಮನೆಯಲ್ಲಿ ಇದ್ದಾನೆ ಎಂದುಕೊಳ್ಳೋಣ ಆಗ
ನಾಲ್ಕು ಮನೆಗಳನ್ನು ಎಡಗಡೆಯಿಂದ ಲೆಕ್ಕ ಹಾಕಿ ಅಂದರೆ 4 , 5 ,6 ಮತ್ತು 7 ಅಂದರೆ ಇದು ಕೇಂದ್ರ ಸ್ಥಾನ ಈಗ ಚಂದ್ರ 7 ನೇ ಮನೆಯಲ್ಲಿದ್ದರೆ ಗಜ ಕೇಸರಿ ಯೋಗ .
ಇನ್ನೊಂದು ಉದಾಹರಣೆ ಗುರುವು ಒಂದನೇ ಮನೆಯಲ್ಲಿ ಇದ್ದಾನೆ ಎಂದುಕೊಳ್ಳೋಣ ಆಗ
ನಾಲ್ಕು ಮನೆಗಳನ್ನು ಬಲಗಡೆಯಿಂದ ಲೆಕ್ಕ ಹಾಕಿ ಅಂದರೆ 1,2,11,10 ಅಂದರೆ ಇದು ಕೇಂದ್ರ ಸ್ಥಾನ ಈಗ ಚಂದ್ರ 10 ನೇ ಮನೆಯಲ್ಲಿದ್ದರೆ ಗಜ ಕೇಸರಿ ಯೋಗ .
ದುರ್ಬಲವಾದ ರಾಶಿ (ಮಕರ ) ಅಥವಾ 6 ನೇ ಮನೆಯಲ್ಲಿ, 8 ನೇ ಮನೆ ಅಥವಾ 12 ನೇ ಮನೆಯಲ್ಲಿ ಅಥವಾ ಇನ್ನಿತರ ನಕಾರಾತ್ಮಕ ಗ್ರಹಗಳಿಂದ ಗುರುವು ದುರ್ಬಲವಾಗಿರಬಾರದು ಆಗ ಗಜಕೇಸರಿ ಯೋಗ ಎಂದು ಕರೆಯಲಾಗುತ್ತದೆ.
ಗುರು-ಚಂದ್ರ ಅಥವಾ ಚಂದ್ರ-ಗುರು ಎರಡೂ ಉತ್ತಮ ಸ್ಥಾನದಲ್ಲಿದ್ದರೆ ಒಳ್ಳೆಯದು.
ಯಾವುದೇ ಯೋಗವು ಮಹಾದಶ (ಶುಕ್ರ ದಶೆ ಇತರೆ ) ಅಥವಾ ವಯಸ್ಸಿನ ಮೇಲೆ ಅವಲಂಬಿತವಾಗಿಲ್ಲ ಒಮ್ಮೆ ಈ ಯೋಗವು ಬಂದರೆ ಜೀವನ ಪರ್ಯಂತ ಇರುತ್ತದೆ ಸಮಯ ಅಥವಾ ವಯಸ್ಸಿನ ಮೇಲೆ ಯಾವುದೇ ಬದಲಾವಣೆಯಾಗುವುದಿಲ್ಲ.
ಯೋಗವು ದುರ್ಬಲವಾಗಿದ್ದರೆ ಯಾವುದೇ ಶಾಶ್ವತ ಫಲಿತಾಂಶವನ್ನು ನೀಡುವುದಿಲ್ಲ ಆದಾಗ್ಯೂ, ಗುರು ಮತ್ತು ಚಂದ್ರ ಪರಸ್ಪರ ಕೇಂದ್ರದಲ್ಲಿದ್ದರೆ ಗುರು-ಚಂದ್ರನ ದಶಾ ಯಾವಾಗಲೂ ಒಳ್ಳೆಯ ಫಲವನ್ನು ನೀಡುತ್ತದೆ.
ಗುರು-ಚಂದ್ರ ಸಂಯೋಗಗೊಂಡಾಗ :
ಗುರು-ಚಂದ್ರ ಸಂಯೋಗಗೊಂಡಾಗ ಫಲಿತಾಂಶಗಳು ಬಹಳ ಬಲವಾದವು ವ್ಯಕ್ತಿಯು ಉತ್ತಮ ವ್ಯಕ್ತಿತ್ವ, ಬುದ್ಧಿವಂತ, ದಯೆ, ಇತ್ಯಾದಿ ಗುಣಗಳನ್ನು ಹೊಂದಿರುತ್ತಾನೆ.
ಆದಾಗ್ಯೂ ಈ ವ್ಯಕ್ತಿಯು ಚಂಚಲ ಮನಸ್ಸು ಮತ್ತು ಭಾವನಾತ್ಮಕವಾಗಿ ದುರ್ಬಲರಾಗಿರುತ್ತಾರೆ.ಈ ಸಂಯೋಗದಲ್ಲಿ ಇಬ್ಬರಲ್ಲಿ ಒಬ್ಬರ ಮಹಾದಶ ಒಳ್ಳೆಯದಾಗಿರುತ್ತದೆ ಮತ್ತು ಇನ್ನೊಬ್ಬರು ದುಃಖಗಳನ್ನು ಹೊಂದಿರುತ್ತಾರೆ.
ಗುರು-ಚಂದ್ರ ಕೇಂದ್ರ ಸ್ಥಾನದಲ್ಲಿರುವಾಗ :
ಈ ಯೋಗವು ಸಹ ಒಳ್ಳೆಯದು 4 ನೇ ಅಥವಾ 10 ನೇಯ ಸ್ಥಾನದಲ್ಲಿ ಚಂದ್ರನೊಂದಿಗೆ ರೂಪುಗೊಳ್ಳುತ್ತದೆ, ಫಲಿತಾಂಶಗಳ ಬಲ ಸ್ವಲ್ಪ ಕಡಿಮೆಯಾಗಿರುತ್ತವೆ. ಫಲಿತಾಂಶಗಳು ಇನ್ನೂ ಸ್ಪಷ್ಟವಾಗಿ ಗೋಚರಿಸುತ್ತವೆ ಏಕೆಂದರೆ ಗುರು ಮತ್ತು ಚಂದ್ರ, ಎರಡು ಕಾರಕ ಗ್ರಹಗಳು.
ಈ ಯೋಗದ ಫಲಗಳು :
ವ್ಯಕ್ತಿಯು ಸುಪ್ರಸಿದ್ಧ ವಾಗುತ್ತಾರೆ, ಅತಿಶಯವಾದ, ಸದ್ಗುಣಶೀಲ, ಶ್ರೀಮಂತ, ಬುದ್ಧಿವಂತ, ಪಾಂಡಿತ್ಯಪೂರ್ಣ, ಕೀರ್ತಿಗಳಿಸುವ ಮತ್ತು ಶಾಶ್ವತ ಖ್ಯಾತಿಯನ್ನು ಪಡೆಯುತ್ತಾನೆ, ಹೆಣ್ಣು ಮಕ್ಕಳು ಸಹ ಧೈರ್ಯವಂತರು ಹಾಗು ಕೀರ್ತಿವಂತರು ಆಗಿರುತ್ತಾರೆ , ಭವಿಷ್ಯ ಚೆನ್ನಾಗಿ ಇರುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
