ಗೊರಕೆ ಪ್ರಾಬ್ಲಮ್ ಇಂದ ಬೇಸತ್ತು ಹೋಗಿರೋರು ಈ ಸಲಹೆಗಳನ್ನೊಮ್ಮೆ ಟ್ರೈ ಮಾಡಿ…
ಗೊರಕೆ ಎಂಬುದು ನಮಗರಿವಿಲ್ಲದಾಗೆ ಇತರರಿಗೆ ಕೊಡುವ ಕಾಟವಾಗಿದೆ.ಎಂಥಾ ಸಂಗೀತಪ್ರಿಯರೇ ಆದರೂ ಪಕ್ಕದಲ್ಲಿರೋರು ಗೊರಕೆ ಹೊಡಿಯೋದನ್ನ ಇಷ್ಟ ಪಡಲ್ಲ.ಪಕ್ಕದಲ್ಲಿರುವವರು ಗೊರಕೆ ಹೊಡೆಯುತ್ತಿದ್ದರೆ ನಿದ್ದೆ ದೂರ ಹೋಡೋಗಿ ಕಿರಿ ಕಿರಿ ಉಂಟಾಗುತ್ತದೆ. ವಯಸ್ಸಾದ ಮೇಲೆ ಗೊರಕೆ ಹೊಡಿಯೋದು ಸಹಜ ಆದ್ರೆ ವಯಸ್ಸಾಗುವುದೇ ಇದಕ್ಕೆ ಮೂಲ ಕಾರಣ ಅಲ್ಲ. ಗೊರೆಕೆ ಬರಲು ಇನ್ನು ಕೆಲವು ಕಾರಣಗಳಿವೆ ಅವು ಯಾವು ಎಂದು ಇಲ್ಲಿ ಓದಿ ತಿಳ್ಕೊಳಿ.
ತೂಕ ಹೆಚ್ಚಳವೂ ಗೊರಕೆಗೆ ಸಾಮಾನ್ಯ ಕಾರಣ. ಕೆಲವು ಬಾರಿ ಕುತ್ತಿಗೆಯಲ್ಲಿ ಸೇರಿಕೊಳ್ಳುವ ಕೊಬ್ಬು, ಗಂಟಲಿನ ಎಲುಬನ್ನು ಕಿರಿದಾಗಿಸಿ ಗೊರಕೆ ಉಂಟುಮಾಡುತ್ತದೆ. ಇದನ್ನು ಹಾಗೇ ಬಿಟ್ಟರೆ ಉಸಿರಾಟದ ತೊಂದರೆಯೂ ಬರುತ್ತದೆ. ಆದ್ದರಿಂದ ಅನವಶ್ಯಕ ತೂಕವನ್ನು ಕಡಿಮೆಮಾಡಿಕೊಳ್ಳುವುದು ತುಂಬಾ ಮುಖ್ಯ..ಅತಿಯಾದ ಮದ್ಯಪಾನ ಧೂಮಪಾನವೂ ಗೊರಕೆಗೆ ಕಾರಣವಾಗುತ್ತದೆ.
.ತಜ್ಞರು ಗೋರಕೆಯನ್ನು ಹೋಗಲಾಡಿಸಲು ಕೆಲವು ಉಪಾಯಗಳನ್ನು ನೀಡಿದ್ದಾರೆ ನೀವು ಗೋರಕೆಯ ಸಮಸ್ಯೆ ಇಂದ ಬಳಲುತ್ತಿದ್ದರೆ ಉಪಯೋಗಿಸಿಕೊಳ್ಳಿ
1.ದಿಂಬನ್ನು ಎತ್ತರವಾಗಿ ಹಾಕೋಳಿ:
ನೀವು ಮಲಗೋ ತಲೆದಿಂಬು ಸ್ವಲ್ಪ ಎತ್ತರವಾಗಿ ಹಾಕೊಂಡು ಮಲಿಕೊಂಡ್ರೆ ಗೊರಕೆ ಬರವ ಸಾಧ್ಯತೆ ಇರುವುದಿಲ್ಲ.ಸಾಧ್ಯವಾದ್ರೆ 2-3 ದಿಂಬುಗಳನ್ನ ಹಾಕೊಂಡು ಮಲ್ಕೊಳಿ.
2.ಮಲಗುವ ಭಂಗಿಯಲ್ಲಿ ಬದಲಾವಣೆ:
ಬೆನ್ನನ್ನು ನೆಲಕ್ಕೆ ತಾಗಿ ನೆಟ್ಟಗೆ ಮಲಗುವುದರಿಂದ ಗಂಟಲು ಮತ್ತು ಅದರ ಮೃದು ಅಂಗಗಳು ಗಾಳಿ ವಿರುದ್ಧ ದಿಕ್ಕಿನಲ್ಲಿ ಚಲಿಸುವಂತೆ ಮಾಡಿ ಗೊರಕೆಗೆ ಕಾರಣವಾಗುತ್ತದೆ. ಆದ್ದರಿಂದ ಮಲಗುವ ಭಂಗಿಯನ್ನು ಬದಲಿಸಿಕೊಂಡರೆ ಗೊರಕೆಯಿಂದ ಮುಕ್ತಿ ಪಡೆಯಬಹುದು.
3.ಮೂಗಿನ ಪಟ್ಟಿಯನ್ನು ಹಾಕಿಕೊಂಡು ಮಲ್ಕೊಳ್ಳಿ:
ಗೋರಿಕೆಯನ್ನು ಕಡಿಮೆ ಮಾಡುವ ಮೂಗಿನ ಪಟ್ಟಿಯು ಪ್ರಮುಖ ಮೆಡಿಕಲ್ಸ್ ಗಳಲ್ಲಿ ದೊರಕುತ್ತದೆ ಇದನ್ನು ಬಳಸಿಕೊಂಡು ನಿಮ್ಮ ಗೊರಕೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರವನ್ನು ಕಂಡುಕೊಳ್ಳಬಹುದು.
4. ಗದ್ದ ಪಟ್ಟಿಯನ್ನು ಉಪಯೋಗಿಸಿ :
ನಿಮ್ಮ ಗೊರಕೆಯಿಂದ ಇತರರ ನಿದ್ದೆ ಹಾಳಾಗದಂತೆ ಮತ್ತು ನೀವೂ ಆರಾಮವಾಗಿ ನಿದ್ದೆ ಮಾಡಲು ಗದ್ದಪಟ್ಟಿಯು(chin ಸ್ಟ್ರಾಪ್) ಸಹಕಾರಿಯಾಗಿದ್ದು ಇದನ್ನು ಗೊರಕೆ ಸಮಸ್ಯೆ ಇರುವವರು ಬಳಸಬಹುದು.
5.ಅತಿಯಾಗಿ ಮಾತ್ರೆ ನುಂಗುವುದನ್ನು ನಿಲ್ಲಿಸಿ:
ನೀವು ಅತಿಯಾಗಿ ಮಾತ್ರೆಗಳನ್ನು ನುಂಗುತ್ತಿದ್ದರೆ ನಿಮಗೆ ಗೊರಕೆ ಸಮಸ್ಯೆ ಬರುತ್ತದೆ. ಆದ್ದರಿಂದ ಮಾತ್ರಗಳನ್ನು ಹೆಚ್ಚಾಗಿ ನುಂಗುವುದನ್ನು ನಿಲ್ಲಿಸಿ.
6.ಹಗಲು ಹೊತ್ತು ನಿದ್ದೆ ಮಾಡುವುದನ್ನು ನಿಲ್ಲಿಸಿ:
ಹಗಲು ಹೊತ್ತು ನಿದ್ರಿಸುವುದನ್ನು ಕಡಿಮೆ ಮಾಡಿ, ಯೋಗ, ಧ್ಯಾನ, ಪ್ರಾಣಾಯಾಮ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಲ್ಲಿ ಈ ಸಮಸ್ಯೆಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು.
7.ವೈದ್ಯರನ್ನು ಭೇಟಿಮಾಡುವುದು ಒಳಿತು :
ಗೊರಕೆ ಹೊಡೆಯುವವರಿಗೆ ಉಸಿರಾಡಲು ಕಷ್ಟವಾಗುವುದರಿಂದ ಅವರು ಆಗಾಗ ಎಚ್ಚರಗೊಳ್ಳುತ್ತಾರೆ. ಈ
ಸಮಸ್ಯೆ ಕಾಣಿಸಿಕೊಂಡರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ.ಇಲ್ಲವಾದರೆ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ.
8.ಪುದೀನಾ ರಸದಿಂದ ಬಾಯಿ ಮುಕ್ಕಳಿಸಿ:
ಪುದೀನಾ ವನ್ನು ನೀರಿನಲ್ಲಿ ರುಬ್ಬಿಕೊಂಡು ಮಲಗುವ ಮುನ್ನ 2-3 ಭಾರಿ ಬಾಯಿ ಮುಕ್ಕಳಿಸಿ ಉಗಿಯುವುತ್ತಿದ್ದರೆ ಗೊರಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
