ನಾವು ಅಖಂಡ ವಿಜಯ ಪಡೆಯಬೇಕೆಂದರೆ ಬೆಳಗಿನ ಜಾವ ಎದ್ದ ತಕ್ಷಣ ಪಠಿಸಬೇಕಾದ ಮಂತ್ರ.
ನಾವು ಎಷ್ಟೇ ಕಷ್ಟ ಪಟ್ಟು ಕೆಲಸ ಮಾಡಿದರೂ ಅದೃಷ್ಟ ಎನ್ನುವುದು ನಮ್ಮ ಹಿಂದೆ ಇಲ್ಲವೆಂದರೆ ನಾವು ಏನನ್ನು ಸಾಧಿಸಲು ಸಾಧ್ಯವಿಲ್ಲ. ಹಾಗಾದರೆ ಆ ಅದೃಷ್ಟವನ್ನು ಪಡೆಯಬೇಕೆಂದರೆ ನಾವು ಕಷ್ಟಪಟ್ಟು ಕೆಲಸ ಮಾಡುವುದರ ಜೊತೆಗೆ ಆಧ್ಯಾತ್ಮಿಕ ಅಭ್ಯಾಸವನ್ನು ಸಹ ಮಾಡಬೇಕು.
ಈ ಆಧ್ಯಾತ್ಮಿಕ ಅಭ್ಯಾಸವನ್ನು ಅನುಸರಿಸುವುದರಿಂದ ಬ್ರಹ್ಮ ಬರೆದ ಹಣೆ ಬರಹವನ್ನು ಸಹ ಬದಲಾಯಿಸಿ ವಿಜಯದ ಲಕ್ಷ್ಯವನ್ನು ನಾವು ಸೇರಬಹುದು.ದೇವರ ಜಪ, ತಪವನ್ನು, ಕ್ರಮ ಬದ್ಧವಾಗಿ ತಪ್ಪದೇ ಮಾಡುವುದರಿಂದ ಆದಷ್ಟು ಅದೃಷ್ಟವನ್ನು ಮತ್ತು ತೇಜಸ್ಸಿನಿಂದ ಕೂಡಿದ ವಿಜಯವನ್ನು ಸಂಕಲ್ಪದಿಂದ ಸಾಧಿಸಿಕೊಳ್ಳಬಹುದು.
ಬೆಳಗಿನ ಜಾವ ಈಗ ನಾವು ಹೇಳುವಂತೆ ಮಾಡಿದರೆ ದಿನ ಪೂರ್ತಿ ಯಾವ ಕೆಲಸ ಮಾಡಿದರೂ ವಿಜಯವನ್ನು ಸಾಧಿಸಬಹುದು.
ವಿಜಯ ಸಾಧಿಸಬೇಕೆಂದರೆ.
ನಾವು ಬೆಳಗಿನ ಜಾವ ನಿದ್ರೆಯಿಂದ ಎದ್ದ ಸಮಯದಲ್ಲಿ
“ ಓಂ ನಮೋ ನಾರಾಯಣಾಯ ನಮಃ”
ಎನ್ನುವ ಮಂತ್ರವನ್ನು ಮೂರು ಬಾರಿ ಉಚ್ಚಾರಿಸಿ ನಿಮ್ಮ ದಿನವನ್ನು ಆರಂಭಿಸಿದರೆ.ಆ ದಿನ ಯಾವ ಕೆಲಸವನ್ನು ಮಾಡಿದರು ಸಹ ಅದೃಷ್ಟ ನಿಮ್ಮದಾಗುತ್ತದೆ.
ಧನ ಮತ್ತು ಲಾಭಕ್ಕೋಸ್ಕರ.
ನಿದ್ರೆಯಿಂದ ಎದ್ದ ಮೇಲೆ
“ಓಂ ನಮೋ ಲಕ್ಷ್ಮೀ ನಾರಾಯಣಾಯ ನಮಃ”
ಎನ್ನುವ ಮಂತ್ರವನ್ನು ಮೂರು ಬಾರಿ ಪಠಿಸಬೇಕು.ಹಾಗೆ ಪಠಿಸುವುದರಿಂದ ನಿಮಗೆ ಇರುವ ಸಾಲದ ಭಾದೆಯು ಸಹ ಕಡಿಮೆಯಾಗಿ ಧನ ಮತ್ತು ಭೂ ಲಾಭ ನಿಮ್ಮದಾಗುತ್ತದೆ.
ಕುಟುಂಬದ ಆರೋಗ್ಯಕ್ಕೋಸ್ಕರ. ನಿಮ್ಮ ಮನೆಯಲ್ಲಿ ಹೆಚ್ಚು ಆರೋಗ್ಯ ಸಮಸ್ಯೆ ಮತ್ತು ಹಣದ ಸಮಸ್ಯೆಯೂ ಹೆಚ್ಚಾಗಿದ್ದರೆ.ನಿದ್ರೆಯಿಂದ ಎದ್ದ ಮೇಲೆ ಈ ಮಂತ್ರವನ್ನು ಮೂರು ಬಾರಿ ಜಪಿಸಿದರೆ ಕಷ್ಟಗಳು ದೂರವಾಗುತ್ತವೆ. ಎಲ್ಲ ರೀತಿಯಲ್ಲೂ ಒಳ್ಳೆಯದಾಗುತ್ತದೆ.ಇದನ್ನು ಅದೃಷ್ಟ ತಂದುಕೊಡುವ ಮಂತ್ರವೆಂದೂ ಸಹ ಕರೆಯಲಾಗುತ್ತದೆ.
“ಹರೇ ರಾಮ ಹರೇ ರಾಮ ,ರಾಮ ರಾಮ ಹರೇ ಹರೇ,ಹರೇ ಕೃಷ್ಣ, ಹರೇ ಕೃಷ್ಣ ,ಕೃಷ್ಣ ಕೃಷ್ಣ ಹರೇ ಹರೇ”
ಈ ಮಂತ್ರವನ್ನು ಜಪಿಸುತ್ತಾ ಪ್ರತಿದಿನ ಆರಂಭಿಸುವುದರಿಂದ ಮನಸ್ಸಿನ ಧೈರ್ಯ ಹೆಚ್ಚಾಗಿ ಯಾವ ಕೆಲಸ ಆರಂಭಿಸಿದರು ದೇವರ ಅನುಗ್ರಹ ನಮ್ಮ ಜೊತೆಗಿದ್ದು ವಿಜಯ ನಮ್ಮದಾಗುತ್ತದೆ.
“ಸರ್ವೇ ಜನ ಸುಖಿನೋ ಭವಂತು, ಸನ್ಮಗಳಾನಿ ಭವಂತು”.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
