ತನ್ನ ಜೀವನದಲ್ಲಿ ಮಹಿಳೆಯರಿಂದ ದೂರವಾದ ಒಬ್ಬ ವ್ಯಕ್ತಿ ಇಡೀ ಭಾರತದ ಹೆಣ್ಣುಮಕ್ಕಳ ತಿಂಗಳ ಕಷ್ಟವನ್ನು ತಾನೇ ಸ್ವತಃ ಅನುಭವಿಸಿ, ಅರಿತು, ಅದಕ್ಕೊಂದು ಸೂಕ್ಷ್ಮ ಪರಿಹಾರ ಕಂಡುಹಿಡಿದು ಆ ಮೂಲಕ ಅಸಂಖ್ಯಾತ ಹೆಣ್ಣುಮಕ್ಕಳ ಬದುಕು ಸರಾಗಗೊಳಿಸಿದ ವ್ಯಕ್ತಿ ಈತ. ಇದು ಬಡತನದಿಂದ ಬಂದ ಉದ್ಯಮಿಯೊಬ್ಬರ ಸಾಹಸಗಾಥೆ. ತಮಿಳನಾಡು ರಾಜ್ಯದ ಕೊಯಮತ್ತೂರಿನ ಅರುಣಾಚಲಂ ಮುರುಗನಾಥಮ್ ಅವರೇ ಈ ಸಾಧಕ.
‘ಈ ವಿಚಿತ್ರ ವ್ಯಕ್ತಿಯೊಂದಿಗೆ ಜೀವನ ನಡೆಸುವುದು ಅಸಾಧ್ಯ ಎಂದು ಅವನ ಹೆಂಡತಿ, ಅಮ್ಮ, ಸುತ್ತಲಿದ್ದ ಜನ ದೂರ ಸರಿದ್ದಿದ್ದರು. ಅವನು ಯಾರೂ ಊಹಿಸಿಕೊಳ್ಳಲಾಗದ ಮುಜುಗರಪಡುವ ಕೆಲಸದಲ್ಲಿ ತೊಡಗಿದ್ದ! ಹೌದು… ಆತ ಮಹಿಳೆಯರು ಮುಟ್ಟಿನ ಸಮಯಗಳಲ್ಲಿ ಧರಿಸುವ ನ್ಯಾಪ್‌ಕಿನ್ ಅನ್ನು ಧರಿಸುತ್ತಿದ್ದ! ಅವನಿಗೆ ಸ್ತ್ರೀಯರು ತಮ್ಮ ಮುಟ್ಟಿನ ಸಮಯದಲ್ಲಿ ಉಂಟಾಗುವ ರಕ್ತಸ್ರಾವದ ಅನುಭವದ ಬಗ್ಗೆ, ಬಳಸುವ ಬಟ್ಟೆ ಮತ್ತು ಪ್ಯಾಡ್‌ಗಳು ಸ್ರಾವವನ್ನು ಎಷ್ಟು ಕಾಲದವರೆಗೆ ತಡೆದಿಟ್ಟಿರುತ್ತವೆ ಎಂಬುದರ ಬಗ್ಗೆ ಬಗ್ಗೆ ಕಂಪ್ಲೀಟ್ ಮಾಹಿತಿ ನೀಡಲು ಆತನಿಗೆ ಮಹಿಳೆಯರು ಬೇಕಿತ್ತು.
9ನೇ ಕ್ಲಾಸ್ ಓದಿದ್ದ ಮುರುಗನಾಥಮ್ ಕೊಯಮತ್ತೂರಿನ ವರ್ಕ್ ಶಾಪ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ. ಒಂದು ಬಾರಿ ಮನೆಯಲ್ಲಿದ್ದಾಗ ಪತ್ನಿ ಗಲೀಜಿನ ಬಟ್ಟೆಯೊಂದನ್ನು ಮುಚ್ಚಿಕೊಂಡು ತೆಗೆದುಕೊಂಡು ಹೋಗುತ್ತಿದ್ದಳು. ಅದರ ಬಗ್ಗೆ ವಿಚಾರಿಸಿದಾಗ ಅವನ ಹೆಂಡತಿ “ನಿಮಗೆ ಸಂಬಂಧವಿಲ್ಲದ ವಿಷಯ ಇದು”ಎಂದು ಹೇಳಿದ್ದಳು. ಅವನು ಮುಂದೆ ಅಂಗಡಿಯಲ್ಲಿ ದೊರೆಯುವ ನ್ಯಾಪ್ ಕಿನ್ ಯಾಕೆ ಧರಿಸಬಾರದು ಎಂದು ಪ್ರಶ್ನಿಸಿದಾಗ ಅದನ್ನು ಖರೀದಿ ಮಾಡಿದರೆ ನಾವು ಮನೆಗೆ ಹಾಲು ತರೋದು ನಿಲ್ಲಿಸಬೇಕಾಗುತ್ತದೆ ಎಂದಳು. ನಂತರ ಅಂಗಡಿಗೆ ಹೋಗಿ ಅದನ್ನು ನೋಡಿದನು.ಪೈಸೆಗಳಿಗೆ ಒದಗುವ ಹತ್ತಿಯನ್ನು ಬಳಸಿ ತಯಾರಿಸಿದ ಆ ಪ್ಯಾಡ್ ಒಂದಕ್ಕೆ 5ರಿಂದ 8 ರೂಪಾಯಿವರೆಗೂ ಬೆಲೆ ನಿಗದಿ ಪಡಿಸಲಾಗಿತ್ತು . ಆನಂತರ ತಾನೇ ಯಾಕೆ ಈ ರೀತಿಯ ಸ್ಯಾನಿಟರಿ ಪ್ಯಾಡ್ ತಯಾರಿಸಬಾರದು ಎಂದು ಆಲೋಚಿಸಿ ಕೇವಲ 15 ದಿನದಲ್ಲಿ ಅದನ್ನು ತಯಾರಿಸಿ ಹೆಂಡ್ತಿ, ನಂತರ ತಂಗಿಯರಿಗೆ ಕೊಟ್ಟನು.ಆದರೆ ತಮ್ಮ ಅಣ್ಣನ ಹತ್ತಿರ ಈ ವಿಚಾರಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಿದ್ದರು.
ತಾನು ತಯಾರಿಸಿದ ನ್ಯಾಪ್ ಕಿನ್ ನನ್ನು ಪರೀಕ್ಷಿಸಲು ಮೆಡಿಕಲ್ ಕಾಲೇಜೊಂದಕ್ಕೆ ಹೋಗಿ ಹುಡುಗಿಯರಿಗೆ ಕೊಟ್ಟರು. ಅವರು ಕೂಡ ಆ ಬಗ್ಗೆ ಓಪನ್ ಆಗಿ ಮಾತನಾಡಲು ಸಿದ್ದರಿರಲಿಲ್ಲ. ಆದರೂ ಇವರು ತನ್ನ ಪ್ರಯತ್ನ ಕೈಬಿಡಲಿಲ್ಲ ನಂತರ ತಾನೇ ಫುಟ್ಬಾಲ್ ಒಳಗೆ ಇರುವ ಟ್ಯೂಬ್ ನಲ್ಲಿ ಪ್ರಾಣಿಯೊಂದರ ರಕ್ತ ತುಂಬಿ ಅದಕ್ಕೆ ಒಂದು ಸಣ್ಣ ತೂತು ಮಾಡಿ ಪ್ಯಾಂಟ್ ನೊಳಗೆ ಇಟ್ಟುಕೊಂಡು ಸೈಕಲ್, ಸ್ಕೂಟರ್ ,ಬಸ್ ಗಳಲ್ಲಿ ಪ್ರಯಾಣಿಸಿ ಪರೀಕ್ಷೆಯನ್ನ ಮಾಡಿದರು.ಪರೀಕ್ಷಿಸಿದರು. ಈ ಮೂಲಕ ನ್ಯಾಪ್ ಕಿನ್ ಧರಿಸಿದ ಪ್ರಪಂಚದ ಮೊದಲ ಮನುಷ್ಯ ಎಂಬ ಕುಖ್ಯಾತಿಗೂ ಪಾತ್ರರಾದರು.ಈ ಮಧ್ಯೆ ಪತಿಯ ಹುಚ್ಚಿನಿಂದ ಕಂಗೆಟ್ಟಿದ್ದ ಅವನ ಹೆಂಡತಿ ಡೈವೋರ್ಸ್ ತೆಗೆದುಕೊಂಡಿದ್ದಳು.. ಅವನ ತಾಯಿ ಹೆಂಗಸರ ಪ್ಯಾಡ್ ತಯಾರಿಸುವ ಮಗನ ಹುಚ್ಚನ್ನು ಕಂಡು ಅವರೂ ಮನೆಗೆಬರುವುದನ್ನು ನಿಲ್ಲಿಸಿದರು.ಹೀಗೆ ಎಲ್ಲರೊಂದಿಗೆ ದೂರವಾದನು.
ನಂತರ ಮದ್ರಾಸ್ ಐಐಟಿ ಯಲ್ಲಿ ತನ್ನ ನಡೆದ ಹೊಸ ಆವಿಷ್ಕಾರದ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡರು. ಅಲ್ಲಿ ಇವರ ಸಂಶೋಧನೆಗೆ ಮೆಚ್ಚುಗೆ ದೊರೆಯಿತು. ಅನಂತರ ಕೆಲವರು ಉದ್ಯಮ ಸ್ಥಾಪಿಸಿ ಹಣಗಳಿಸುವಂತೆ ಸಲಹೆ ನೀಡಿದರು. ಆದರೆ ತನ್ನ ಗುರಿ ಉದ್ದೇಶದಿಂದ ವಿಚಲಿತನಾಗದ ಮುರುಗನಾಥಂ ವ್ಯವಹಾರ ಮಾಡಿ ಕೋಟ್ಯಾಂತರ ಹಣಗಳಿಸಬಹುದು, ಆದರೆ ಬಡಹೆಣ್ಮಕ್ಕಳ ನೋವಿಗೆ ಸ್ಪಂದಿಸಲು ಸಾಧ್ಯನಾ ಎಂಬಪ್ರಶ್ನಿಸಿದರು.ನಂತರ ಸಣ್ಣಯಂತ್ರವೊಂದನ್ನ ಖರೀದಿಸಿದರು. ಕಡಿಮೆ ಖರ್ಚಿನ ಪ್ಯಾಡ್ ನ್ನು ತಯಾರಿಸಲು ಬಂದ ಸಂಸ್ಥೆಗಳಿಗೆ ಅನುಮತಿ ನೀಡಿ ಬಡ ಹೆಣ್ಮಕ್ಕಳಿಗೆ ನ್ಯಾಪ್ ಕಿನ್ ಕಡಿಮೆ ಬೆಲೆಯಲ್ಲಿ ವಿತರಿಸುವಂತೆ ನೋಡಿಕೊಂಡರು.
ಇದೀಗ ಕೈ ಯಿಂದಲೇ ನಡೆಸುವ ಈ ಯಂತ್ರಗಳಲ್ಲಿ ತಯಾರಿಸುವ ಸ್ಯಾನಿಟರಿ ಪ್ಯಾಡ್ ನ್ನು ದೇಶದ 23 ರಾಜ್ಯದಲ್ಲಿ ಮತ್ತು ನೆರೆಯ, ನೇಪಾಳ, ಬಾಂಗ್ಲಾದೇಶ, ಆಫ್ಘನಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ರಾಷ್ಟ್ರಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.ಆ ಮೂಲಕ ಮಿಲಿಯನ್ಗಟ್ಟಲೇ ಮಂದಿಗೆ ಉದ್ಯೋಗ ಕಲ್ಲಿಸಿದ್ದಾರೆ.ಇಂದು ರಾಜ್ಯ ಸರಕಾರಗಳು ಕೂಡ ಇದೇ ನ್ಯಾಪ್ ಕಿನ್ ಗಳನ್ನು ಸರ್ಕಾರಿ ಶಾಲೆಗಳಲ್ಲಿ ಹೆಣ್ಮಕ್ಕಳಿಗೆ ವಿತರಿಸಿ ಜಾಗೃತಿ ಮೂಡಿಸುತ್ತಿದೆ.
ತನ್ನ ಸಂಶೋಧನೆ ಮೂಲಕ ಹೆಸರು ಮಾಡಿದ ಮುರುಗನಾಥಂ ಹತ್ತಿರ ಈಗ ಎಲ್ಲರೂ ಬರುತ್ತಿದ್ದಾರೆ. ಬಿಟ್ಟುಹೋಗಿದ್ದ ಹೆಂಡತಿ ಮತ್ತು ಅವರ ತಾಯಿ ಕೂಡ ಮರಳಿ ಬಂದಿದ್ದಾರೆ.ಮಹಿಳೆಯರ ಸ್ಯಾನಿಟರಿ ಪ್ಯಾಡ್ ಗಳಂತೆ ಮಕ್ಕಳ ಪ್ಯಾಡ್ , ಹಿರಿಯರಿಗೆ ಇಂತಹದೇ ಪ್ಯಾಡ್ ತಯಾರಿಸುವ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ.ಇವರ ಜೀವನ ಕತೆಯನ್ನಾಧರಿಸಿ “ಫುಲ್ಲು” ಎಂಬ ಸಿನಿಮಾ ಮೂಡಿಬಂದಿದೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ನಟನೆಯಲ್ಲಿ ‘ಪ್ಯಾಡ್ ಮ್ಯಾನ್’ ಎಂಬ ಚಲನಚಿತ್ರವು ಮೂಡಿಬರುತ್ತಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
