ಮನೆಯ ಯಜಮಾನ ಮತ್ತು ಆತನ ಹೆಂಡತಿ, ಯಜಮಾನ ಮತ್ತು ಮನೆಕೆಲಸದವಳ ನಡುವಿನ ಸಂಭಾಷಣೆ ಇಲ್ಲಿದೆ. ತಪ್ಪದೇ ಓದಿ, ನಾಲ್ಕು ಸಾಲಿನ ಸಂಭಾಷೆ ಸಾರುತ್ತೆ ದುಡ್ಡಿನ ಬೆಲೆಯನ್ನು..!
ಹೆಂಡತಿ : ಹೆಚ್ಚು ಬಟ್ಟೆಯನ್ನು ತೊಳೆಯೋಕೆ ಹಾಕ್ಬೇಡಿ
ಗಂಡ : ಏಕೆ..? ಏನಾಯ್ತೇ..?!
ಹೆಂಡತಿ : ಮನೆಕೆಲಸದವಳು ಒಂದೆರಡು ದಿನ ಬರಲ್ಲ ಕಣ್ರೀ..!
ಗಂಡ : ಏಕೆ..?
ಹೆಂಡತಿ : ಗಣಪತಿ ಹಬ್ಬದ ರಜೆಗೆ ಅಂತ ಮೊಮ್ಮೊಕ್ಕಳನ್ನು ನೋಡೋಕೆ ಮಗಳ ಊರಿಗೆ ಹೋಗ್ತಾ ಇದ್ದಾಳೆ..! ಹಾಗಾಗಿ ಅವಳು ಬರಲ್ಲ.
ಗಂಡ : ಸರಿ ಬಿಡು, ತಲೆಲಿ ವಿಷಯನ್ನಾ ಇಟ್ಕೊತ್ತೀನಿ..!
ಹೆಂಡತಿ : ಮರತು ಬಿಟ್ಟಿದ್ದೆ, ಅವಳಿಗೆ ಹೇಗೆ ಹಬ್ಬದ ಬೋನಸ್ ಕೊಡೋಣ..? ಒಂದು 500 ರೂಪಾಯಿ..?!
ಗಂಡ : ಆದರೆ, ಏಕೆ ಕೊಡ್ಬೇಕು..? ಇನ್ನೇನು ದೀಪಾವಳಿ ಬಂತಲ್ಲ ಆಗ್ಲೇ ಅವಳಿಗೆ ಹಣ ಕೊಡೋಣ ಬಿಡು..!
ಹೆಂಡತಿ : ಓಹ್, ನೋ.. ಅವಳು ಬಡವಳು, ತುಂಬಾ ಕಷ್ಟಪಟ್ಟು ಕೆಲಸ ಮಾಡ್ತಾಳೆ, ಅವಳಿಂದ ತುಂಬಾನೇ ಸಹಾಯ ಆಗ್ತಾ ಇದೆ..! ತೀರಾ ಕಡಿಮೆ ಆದಾಯದಲ್ಲೇ ಅವಳು ಅವಳ ಮಗಳನ್ನು ನೋಡೋಕೆ ಹೋಗ್ತಾ ಇದ್ದಾಳೆ. ಆ ಅತ್ಯಲ್ಪ ಆದಾಯದಲ್ಲಿ ಅವಳು ರಜಾದಿನವನ್ನು ಎಂಜಾಯ್ ಮಾಡೋಕೆ ಹೇಗೆ ಸಾಧ್ಯ..?! ತುಂಬಾ ಕಷ್ಟ ಆಗುತ್ತೆ..!
ಗಂಡ : ಆಚೆ ಹೋಗು..! ಮತ್ತೆ ಹೆಚ್ಚು ಸೆಂಟಿಮೆಂಟ್ ಬೇಡ..!
ಹೆಂಡತಿ : ಹಣದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ರಾತ್ರಿ ಪಿಜ್ಜಾ ತಿನ್ನೋಕೆ ಹೋಗೋ ಪ್ಲಾನ್ ಕ್ಯಾನ್ಸಲ್ ಮಾಡೋಣ..! ಹಳಸಿದ ಬ್ರೆಡ್ನ ಎಂಟತ್ತು ಪೀಸ್ಗೆ ದುಡ್ಡು ಹಾಳು ಮಾಡೋದು ಬೇಡ..!
ಗಂಡ : ಗ್ರೇಟ್..! ನಾವೀಗ ಪಿಜ್ಜಾ ತ್ಯಾಗ ಮಾಡಿ ಮನೆಕೆಲಸದವಳಿಗೆ ಬೋನಸ್ ಕೊಡೋದು..?!
ಇಲ್ಲಿಗೆ ಈ ಸಂಭಾಷಣೆ ಮುಗಿಯುತ್ತೆ..! ಮೂರು ದಿನಗಳ ನಂತರ ಮನೆ ಕೆಲಸದಾಕೆ ಬರ್ತಾಳೆ..! ಆಗ..
ಗಂಡ: ಹೇಗಿತ್ತು ನಿಮ್ಮ ರಜೆ..?
ಮನೆ ಕೆಲಸದಾಕೆ : ಅದ್ಭುತವಾಗಿತ್ತು ಸರ್..! ದಿದಿ ಹಬ್ಬದ ಬೋನಸ್ ಅಂತ 500 ರೂಪಾಯಿ ಕೊಟ್ಟಿದ್ದು ಖುಷಿ ಕೊಡ್ತು..!
ಗಂಡ : ನೀವು ನಿಮ್ಮ ಮಗಳ ಊರಿಗೆ ಹೋಗಿದ್ರಂತೆ..? ಮೊಮ್ಮಗಳನ್ನು ಭೇಟಿಯಾದ್ರ..?
ಮನೆ ಕೆಲಸದಾಕೆ : ಹೌದು ಸಾರ್, ನಾನು ಅವರೊಡನೆ ಒಳ್ಳೇ ಸಮಯವನ್ನು ಕಳೆದೆ..! ನಾವು ಕೇವಲ ಎರಡೇ ಎರಡು ದಿನಕ್ಕೆ 500 ರೂಪಾಯಿ ಖಚರ್ು ಮಾಡಿದ್ವಿ..!
ಗಂಡ : ನೀನು ಆ ಹಣದಲ್ಲಿ ಏನನ್ನು ಕೊಂಡುಕೊಂಡೆ..?
ಮನೆ ಕೆಲಸದಾಕೆ : ಮೊಮ್ಮೊಗಳಿಗೆ 150 ರೂಪಾಯಿ ಶರ್ಟ್, 40 ರೂಪಾಯಿ ಗೊಂಬೆ, ಮಗಳಿಗಾಗಿ ಸಿಹಿ ತಿಂಡಿಗಳನ್ನು ತಗೊಂಡೆ. ದೇವಸ್ಥಾನಕ್ಕೆ ಹೋದಾಗ 50 ರೂಪಾಯಿ ಕಾಣಿಕೆ ಹಾಕಿದೆ. ಅಲ್ಲಿ ಬಾಡಿಗೆಗೆ ಅಂತ 60 ರೂಪಾಯಿ ಕೊಟ್ಟೆ. ಮಗಳ ಬಳೆಗೆ 25 ರೂಪಾಯಿ ಆಯ್ತು, ಅಳಿಯನಿಗೊಂದು ಒಳ್ಳೆಯ ಬೆಲ್ಟ್ ಕೊಡಿಸಿದೆ..! ಅದಕ್ಕೆ 50 ರೂಪಾಯಿ ಆಯ್ತು. ಉಳಿದ ಹಣದಲ್ಲಿ ಮೊಮ್ಮಗಳಿಗೆ ನೋಟ್ಬುಕ್ ಮತ್ತಿತರ ವಸ್ತುಗಳನ್ನು ಕೊಡಿಸಿದೆ.
ಗಂಡ : (ಆಶ್ಚರ್ಯದಿಂದ) ಇಷ್ಟೆಲ್ಲಾ 500 ರೂಪಾಯಿಯಲ್ಲಿಯೇ..?
ನಂತರ ಗಂಡ ಯೋಚಿಸ್ತಾನೆ. ನಾವು ಒಂದೊತ್ತು ತಿನ್ನೋ ಪಿಜ್ಜಾಕ್ಕೆ ಕೊಡೋ ದುಡ್ಡಲ್ಲಿ ಮಲೆಕೆಲಸದಾಕೆ ಕುಟುಂಬದೊಂದಿಗೆ ಒಂದು ಹಬ್ಬವನ್ನೇ ಕಳೆದಳಲ್ಲಾ..?! ದುಡ್ಡಿದ್ದವರಿಗೆ ದುಡ್ಡಿನ ಬೆಲೆ ಗೊತ್ತೇ ಆಗಲ್ಲ..!
ಫ್ರೆಂಡ್ಸ್ ಈ ಸಂಭಾಷಣೆ ಓದಿದ ನಿಮಗೇನು ಅನಿಸಿತೆಂದು ತಿಳಿಸ್ತೀರಾ..?! ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
