ಮನೆಯ ದೇವರ ಕೋಣೆ ಹೀಗಿದ್ದರೆ ಅದೃಷ್ಟ ಒಲಿಯುವುದು.
“ಮನೆಯೇ ಮಂತ್ರಾಲಯ ,ಮನಸ್ಸೇ ದೇವಾಲಯ” ಎನ್ನುವ ಹಾಡು ಈಗಲೂ ನಮ್ಮನೆನಪಿನಲ್ಲಿದೆ.ಮನೆಯೆಂದರೆ ದೇವಾಲಯದಂತೆ ಎನ್ನುವ ಮಾತಿದೆ.ಯಾವುದೇ ಧರ್ಮವಾಗಲಿ,ಜಾತಿಯಾಗಲಿ ಅಲ್ಲಿ ದೇವರ ಪ್ರಾರ್ಥನೆಗೆಂದೇ ಒಂದು ಜಾಗವಿರುತ್ತದೆ.ಅದರಲ್ಲೂ ಹಿಂದೂ ಧರ್ಮದಲ್ಲಿ ಮನೆಯಲ್ಲಿ ಒಂದು ಸಣ್ಣ ಕೋಣೆಯನ್ನು ದೇವರ ಪೂಜಾ ಸ್ಥಳವಾಗಿ ನಿರ್ಮಿಸಿರುತ್ತಾರೆ.
ಈ ಕೋಣೆಯಲ್ಲಿ ಕುಳಿತುಕೊಂಡು ದೇವರನ್ನು ಸ್ಮರಿಸಿದರೆ ಆಗ ಮನಸ್ಸಿನಲ್ಲಿರುವ ನೋವು ಕಡಿಮೆಯಾಗಿ ಮನಸ್ಸಿಗೆ ಶಾಂತಿ ಸಿಗುವುದು.ಮನೆಯಲ್ಲಿರುವ ನಕಾರಾತ್ಮಕ ಅಂಶವನ್ನು ದೂರ ಮಾಡಿ ಧನಾತ್ಮಕ ಅಂಶ ಬರುವಂತೆ ಮಾಡಲು ಮನೆಯ ಮಂದಿರ ಅತೀ ಮುಖ್ಯವಾಗಿದೆ. ಮನೆಯಲ್ಲಿ ಮಂದಿರವನ್ನು ಹೇಗೆ ಇಟ್ಟುಕೊಳ್ಳಬೇಕು,ಅಲ್ಲಿ ಏನು ಇಡಬೇಕು ಮತ್ತು ಏನನ್ನು ಇಡಬಾರದು ಮೊದಲಾದ ಸುವಿಚಾರಗಳನ್ನು ತಿಳಿದುಕೊಳ್ಳುವುದು ಉತ್ತಮ.
ಮನೆಯಲ್ಲಿರುವ ಮಂದಿರದಲ್ಲಿ ಯಾವುದೇ ಮೂರ್ತಿಯು ನಿಮಗೆ ಬೆನ್ನು ತೋರಿಸುತ್ತಿರಬಾರದು. ಯಾವುದೇ ಮೂರ್ತಿಯ ಬೆನ್ನನ್ನು ಇನ್ನೊಂದು ಮೂರ್ತಿ ನೋಡುತ್ತಿರಬಾರದು. ಹೀಗಿದ್ದರೆ ಮೂರ್ತಿಯ ಹಿಂಭಾಗವನ್ನು ಮುಚ್ಚಿಬಿಡಿ ಯಾವುದೇ ದಿಕ್ಕಿನಿಂದ ಹಿಂಭಾಗ ಕಾಣಬಾರದು.
ನಕಲು.
ಮಂದಿರದಲ್ಲಿ ಒಂದೇ ದೇವರ ಎರಡು ಮೂರ್ತಿಗಳು ಇರಬಾರದು.ಅವುಗಳು ಸ್ವಲ್ಪ ಭಿನ್ನವಾಗಿ ಕಾಣಿಸುತ್ತವೆ ಎಂದು ನಿಮಗನಿಸಿದರೂ ಇದನ್ನು ಇಡಬಾರದು.ನಿಮಗೆ ಬೇಕೇ ಬೇಕು ಎಂದಾದರೆ ಒಂದು ಮೂರ್ತಿ ಮತ್ತು ಇನ್ನೊಂದು ಫೋಟೋ ಇಡಿ. ಆದರೆ ಎರಡು ಮೂರ್ತಿಗಳನ್ನು ಇಡಲೇಬೇಡಿ.
ಚಿತ್ರಿಸಿದ ಮೂರ್ತಿ.
ಚಿತ್ರಿಸಿದ ಮೂರ್ತಿ ಎಷ್ಟೇ ಪ್ರಮುಖವಾಗಿದ್ದರೂ ಮತ್ತು ಹಳೆಯದಾಗಿದ್ದರೂ ಅದನ್ನು ಮನೆಯ ಮಂದಿರದಲ್ಲಿ ಇಡಲೇಬೇಡಿ. ಇದನ್ನು ಮಂದಿರದ ಹೊರಗಿಟ್ಟು ಅದಕ್ಕೆ ತೀರ್ಥ ಸ್ನಾನ ಮಾಡಿಸಬಹುದು.ಅರಳಿ ಮರದ ಕೆಳಗಡೆ ಚಿತ್ರಿಸಿದ ಮೂರ್ತಿ ಇಡಬಹುದು.
ಪೂರ್ವಕ್ಕೆ ಮುಖ.
ಪ್ರಾರ್ಥನೆ ಮಾಡುವಾಗ ಮುಖವು ಪೂರ್ವಕ್ಕೆ ಇರಬೇಕು ಎನ್ನುವುದು ನೆನಪಿರಲಿ.ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಪ್ರಾರ್ಥನೆಗಳು ನೇರವಾಗಿ ದೇವರನ್ನು ತಲುಪುವುದು.ಮಂದಿರದ ಪಶ್ಚಿಮ ಭಾಗದಲ್ಲಿ ನಿಂತುಕೊಂಡು ಪ್ರಾರ್ಥಿಸಬಹುದು.
ಬೆಳಕಿನ ಕೊರತೆ.
ಮಂದಿರದಲ್ಲಿ ಯಾವಾಗಲೂ ದೀಪಗಳನ್ನು ಉರಿಸುತ್ತಿರುವಿರಿ ಅಂದರೆ.ಅದನ್ನು ಆಗ್ನೇಯ ಭಾಗದಲ್ಲಿಡಿ.ಇದು ಮನೆಗೆ ಧನಾತ್ಮಕತೆ ಉಂಟುಮಾಡುತ್ತದೆ. ಸಮೃದ್ಧಿಯನ್ನು ತರಲಿದೆ. ಗಾಢ ಬಣ್ಣದ ದೀಪಗಳನ್ನು ಮಂದಿರದಲ್ಲಿ ಹಚ್ಚಿ.
ಹರಳುಗಳು.
ಮನೆಯ ಮಂದಿರದಲ್ಲಿ ಹರಳುಗಳು ತುಂಬಾ ಪ್ರಾಮುಖ್ಯತೆ ಪಡೆಯುತ್ತವೆ.ಹರಳಿನ ಕಲಶ ಮತ್ತು ಹರಳಿನ ಶಂಖ ಮನೆಯ ಮಂದಿರದಲ್ಲಿ ಇಟ್ಟರೆ ತುಂಬಾ ಒಳ್ಳೆಯದು.ನೀವು ಯಾವಾಗಲೂ ಬಳಸುವ ಶಂಖವನ್ನು ಮಂದಿರದಲ್ಲೇ ಇಟ್ಟು ಬಿಡಿ.ಪ್ರತೀ ದಿನ ಪ್ರಾರ್ಥನೆ ಬಳಿಕ ಇದನ್ನು ಊದಿ.
ಪ್ರಾರ್ಥನೆ ಮಂತ್ರ.
ಮನೆಯ ಮಂದಿರವನ್ನು ಕೇವಲ ಪ್ರಾರ್ಥನೆಗೆ ಮಾತ್ರ ಬಳಸಬೇಕು.ಸ್ಥಳದ ಅಭಾವವಿದ್ದರೆ ಬೇರೆ ಕೋಣೆಯಲ್ಲಿ ಮಂದಿರ ಇದೆಯೆಂದಾದರೆ ನೀವು ಯಾವುದಾದರೂ ಬಟ್ಟೆಯಿಂದ ಮಂದಿರವನ್ನು ಮುಚ್ಚಿಡಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
