ಕರ್ನಾಟಕದಲ್ಲಿ ಮೆಡಿಕಲ್ ಸೀಟು ನೀಡಿಕೆಯಲ್ಲಿ ಕನ್ನಡಿಗರಿಗೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ..
*ಕರ್ನಾಟಕ ರಾಜ್ಯದಲ್ಲಿ ವೈದ್ಯಕೀಯ ಸೀಟುಗಳಿಗಾಗಿ ಕನ್ನಡಿಗರ ಕಡೆಗಣನೆ*..
*ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಯುವ ವೈದ್ಯರ ಸಂಘ (ಆರ್)* ವತಿಯಿಂದ
ಕನ್ನಡಿಗರ ಹಕ್ಕಿಗಾಗಿ *ಪ್ರತಿಭಟನೆ*…
*ಇದೆ 13ನೇ ಜುಲೈ ಗುರುವಾರ ಬೆಂಗಳೂರಿನ ಮಲ್ಲೆಶ್ವರಂ ಸಂಪಿಗೆ ರಸ್ತೆಯ 18ನೆ ಕ್ರಾಸ್ KEA ಮುಂದೆ ಬೆಳಗ್ಗೆ 10.30ಕ್ಕೆ.*
ವಿದ್ಯಾರ್ಥಿಗಳೆ, ಪೋಷಕರೆ ಹಾಗೂ ಕನ್ನಡ ಪರ ಕಾಳಜಿ ಉಳ್ಳವರೆ ದಯಮಾಡಿ ಬನ್ನಿ ನಮ್ಮ ಹಕ್ಕಿಗಾಗಿ ಹೋರಾಡೋಣ. ಇಲ್ಲವಾದರೆ ನಿಮ್ಮ ಸರಿ ಸುಮಾರು 1500-2000 ಸೀಟು ಬೇರೆ ರಾಜ್ಯದವರ ಪಾಲಾಗಲಿವೆ.
ಆತ್ಮೀಯರೆ, ಎಂ.ಬಿ.ಬಿ.ಎಸ್ ಮತ್ತು ಬಿ.ಡಿ.ಎಸ್ ಕೋರ್ಸ್ಗಳಿಗೆ ನೀಟ್ ಪದವಿಪೂರ್ವ ಕೌನ್ಸಿಲಿಂಗ್ ಕರ್ನಾಟಕ ರಾಜ್ಯ ಹಾಗೂ ಇತರ ರಾಜ್ಯಗಳಲ್ಲೂ ಪ್ರಾರಂಭವಾಗಲಿದೆ ಎಂದು ನಿಮಗೆ ತಿಳಿದಿರಲಿ. ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ಎಂ.ಬಿ.ಬಿ.ಎಸ್/ ಬಿ.ಡಿ.ಎಸ್ ಕೋರ್ಸ್ಗೆ ನೀಟ್ ಅರ್ಹತೆ ಹೊಂದಿದವರು ಭಾರತದಾದ್ಯಂತ ಅರ್ಜಿ ಸಲ್ಲಿಸುವಂತೆ ಕರೆ ನೀಡಿದೆ. ಇಲ್ಲಿನ ಸಮಸ್ಯೆ ಕೆ.ಇ.ಎ ಭಾರತದಾದ್ಯಂತ ಅರ್ಜಿಗೆ ಕರೆ ನೀಡಿದೆ ಆದರೆ ತಮಿಳು ನಾಡು, ಮಹಾರಾಷ್ಟ್ರ, ಎಪಿ, ಎಂಪಿ ಇತರ ರಾಜ್ಯಗಳಲ್ಲಿ ತಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ ಎಂಬಿಬಿಎಸ್ / ಬಿಡಿಎಸ್ ಕೋರ್ಸ್ಗೆ ಅರ್ಜಿ ಸಲ್ಲಿಸುವಂತೆ ಕೇಳಿದೆ. KEA ಯವರ ಪ್ರಕಟಣೆಯ ಫಲಿತಾಂಶವು ಇಂತಿರುತ್ತದೆ.
1, *ಕರ್ನಾಟಕದ ವಿದ್ಯಾರ್ಥಿಗಳು ತಮ್ಮ ರಾಜ್ಯದಲ್ಲಿ ಸಾವಿರಾರು ಎಂಬಿಬಿಎಸ್ / ಬಿಡಿಎಸ್ ಸ್ಥಾನಗಳನ್ನು ಕಳೆದುಕೊಳ್ಳುತ್ತಾರೆ*.
2 *ಎಂಬಿಬಿಎಸ್ / ಬಿಡಿಎಸ್ ಮುಗಿದ ಹೊರಗಿನವರು ಸ್ನಾತಕೋತ್ತರ ಕೋರ್ಸ್ (MD/MS/MDS) ಮತ್ತು DM / M Ch ಕೋರ್ಸ್ಗಳಿಗೆ ಅರ್ಹರಾಗುತ್ತಾರೆ ಇದರ ಕಾರಣವಾಗಿ ಕರ್ನಾಟಕ ವಿದ್ಯಾರ್ಥಿಗಳು ಈಗ ತಮ್ಮ ಅವಕಾಶ ಕಳೆದುಕೊಳ್ಳುತ್ತಾರೆ ಮತ್ತು ಭವಿಷ್ಯದಲ್ಲಿ ಕೂಡ ಇದು ಮುಂದುವರಿಯುತ್ತದೆ*.
3 *ಇದು ಕರ್ನಾಟಕ ರಾಜ್ಯದಲ್ಲಿ ವೈದ್ಯರ ಕೊರತೆಯನ್ನು ಉಂಟುಮಾಡುತ್ತದೆ ಮತ್ತೆ ಕರ್ನಾಟಕದಲ್ಲಿ ವೈದ್ಯರ ಜನಸಂಖ್ಯೆ ಕಡಿಮೆ ಇರುವುದರಿಂದ ಕರ್ನಾಟಕ ಜನರನ್ನು ಆರೋಗ್ಯದಿಂದ ವಂಚಿತಗೊಳಿಸಲಾಗುತ್ತದೆ*.
4 *ವಿದ್ಯಾರ್ಥಿಗಳು ಮತ್ತು ಪಾಲಕರು MBBS / BDS / MD / MS / MDS / DM / Mch ಕೋರ್ಸ್ ಪಡೆಯದಿರುವ ಕಾರಣದಿಂದ ನಿರಾಶೆಗೊಳ್ಳುತ್ತಾರೆ*.
5. *ಅಂತಿಮವಾಗಿ ಕನ್ನಡಿಗರು ತಮ್ಮ ಹಕ್ಕುಗಳು ಮತ್ತು ಪ್ರಯೋಜನಗಳನ್ನು ಕಳೆದುಕೊಳ್ಳುತ್ತಾರೆ*
6 *ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಯುವ ವೈದ್ಯರ ಸಂಘ (ಕೆ.ಎಂ.ಎಸ್ .ವೈ.ಡಿ.ಎ) (ರಿ) ಈ ಒಂದು ವಿನಂತಿಯನ್ನು ಕೆಇಎ ಮತ್ತು ಸರ್ಕಾರ ಖಾಸಗಿ ಕಾಲೇಜಿನಲ್ಲಿ, ಕರ್ನಾಟಕ ರಾಜ್ಯ ಕೋಟಾವನ್ನು ಸಂಪೂರ್ಣವಾಗಿ ಕನ್ನಡಿಗರಿಗೆ ನೀಡಬೇಕು*,
*ಈಗಾಗಲೇ ಕನ್ನಡೇತರರಿಗೆ ಅಖಿಲ ಭಾರತ ಕೋಟಾ, ಮ್ಯಾನೇಜ್ಮೆಂಟ್ ಕೋಟಾ ಮತ್ತು NRI ಕೋಟಾದಲ್ಲಿ ಸ್ಥಾನವನ್ನು ನೀಡಿರುತ್ತಾರೆ*
ಈ ವಿಷಯವನ್ನ ತುರ್ತಾಗಿ ಪರಿಗಣಿಸಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇವೆ. * ಎಲ್ಲಾ ವೈದ್ಯಕೀಯ / ದಂತ ವೈದ್ಯಕೀಯ ಆಕಾಂಕ್ಷೆಯುಳ್ಳ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಕನ್ನಡಪರ ಹೋರಾಟಗಾರರು ನಮ್ಮ ಪ್ರತಿಭಟನೆಗೆ ಬೆಂಬಲವನ್ನು ನೀಡಬೇಕಾಗಿ ವಿನಂತಿಸುತ್ತೇವೆ.
ಈ ಹೋರಾಟಕ್ಕೆ ಯಶಸ್ಸು ಸಿಗುವುದು ಕನ್ನಡದ ಜನತೆ ಬೀದಿಗಿಳಿದಾಗ. ನಮ್ಮಾಗ್ಯಕೆ ಎಂದು ಮನೆಯಲ್ಲೆ ಕುಳಿತರೆ ನಿಮ್ಮ ಮಕ್ಕಳಿಗೆ ಅಥವಾ ನಿಮ್ಮಗೆ ತಿಳದಿರುವ ವಿದ್ಯಾರ್ಥಿಗೆ ಸೀಟು ತಪ್ಪುವ ಸಾದ್ಯತೆ ಸಹ ಇದೆ. ಹಾಗಾಗಿ ಎದ್ದು ಬನ್ನಿ ಕನ್ನಡದ ಶಕ್ತಿಯನ್ನು ತೋರಿಸೋಣ.ಸರ್ಕಾರವನ್ನು ಎಚ್ಚರಿಸೋಣ.ಇದು ನಿಮ್ಮ ಮಕ್ಕಳ ಭವಿಷ್ಯದ ಪ್ರಶ್ನೆ.
*ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಯುವ ವೈದ್ಯರ ಸಂಘ (ಆರ್)*
ಡಾ. ಭರತ್ ಕುಮಾರ್ – 9535177064.(ಅಧ್ಯಕ್ಷರು).
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
