fbpx
ಸಾಧನೆ

ಸಿಲ್ಲಿ ಲಲ್ಲಿ ಧಾರಾವಾಹಿಯ ಕಾಂಪೌಂಡರ್ ಗೋಪಾಲ ನಿಜ ಜೀವನದಲ್ಲಿ ಒಬ್ಬ KAS ಆಫೀಸರ್

ಸಂಗಪ್ಪ ಉಪಾಸಿ.. ಈ ಹೆಸರು ಹೇಳಿದರೆ ನಿಮಗೆ ಇವರ ಪರಿಚಯ ಆಗುವುದು ಕಷ್ಟ. ನೀವು ಸಿಲ್ಲಿ ಲಲ್ಲಿ ನೋಡಿರಬೇಕು.. ಎಸ್ ಆ ಧಾರಾವಾಹಿಯಲ್ಲಿ ಕಂಪೌಡರ್ ಆಗಿ ಕಾಣಿಸಿಕೊಂಡವರೇ ಸಂಗಪ್ಪ..
ಕಷ್ಟವನ್ನು ಹಾಸಿಕೊಂಡು.. ಬಡತವನ್ನು ಹೊದ್ದು ಕೊಂಡು.. ಉಪವಾಸ ವಿದ್ದು ಕೊಂಡು.. ದೊಡ್ಡ ಕನಸನ್ನು ಕಂಡು ಏರಿಕೊಂಡು.. ಹಂತ ಹಂತವಾಗಿ ಹತ್ತಿಕೊಂಡು.. ನಟನೆಯನ್ನು ಕಲಿತು ಕೊಂಡು.. ತುತ್ತು ಅನ್ನಕ್ಕಾಗಿ ನಾನಾ ವೇಷ ತೊಟ್ಟು ಕೊಂಡು.. ಜೀವನದ ಮಜಲುಗಳನ್ನು ಏರಿದ ಶ್ರಮ ಜೀವಿ ಸಂಗಪ್ಪ.

ಇವರದ್ದು ಜಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಪುಟ್ಟ ಗ್ರಾಮ ಅಂಜುಟಗಿ. ಈ ಗ್ರಾಮದಲ್ಲಿ ಬಡ ಲಿಂಗಾಯತ ಕುಟುಂಬದಲ್ಲಿ ಜನಿಸಿದ ಇವರ ತಂದೆ-ತಾಯಿ ಅನಕ್ಷರಸ್ತರು. ಮಕ್ಕಳು ತಮ್ಮಂತೆ ಆಗದಿರಲಿ ಎಂದು ಆಶಿಸಿದವರು. ಆದರೆ ವಿಧಿ ಇವರ ಬಾಳಿನಲ್ಲಿ ತುಂಬಾನೆ ಆಟವಾಡಿದೆ. ಇದ್ದ ಊರಿನಲ್ಲಿ ಕುಲಕಸಬು ನೇಕಾರಿಕೆ, ಬಿಟ್ಟು ಬೇರೆ ಊರಿಗೆ ಗೂಳೆ ಹೋಗಲು ತಾಯಾರಾದ್ರು. ಆದರೆ ಇವರು ಕುಟುಂಬಸ್ಥರು ಹೋಟೇಲ್ ಹಾಕಿಕೊಟ್ಟು ಸಹಾಯ ಮಾಡಿದರು. ಅಲ್ಲಿಯೂ ಸಂಗಪ್ಪ ಕುಟುಂಬಕ್ಕೆ ಲಾಭ ಮರಿಚೀಕೆ. ಹೆಗೋ ಜೀವನ ಸಾಗಿಸಿಕೊಂಡ ಇವರು ದಿನಂಪ್ರತಿ 24 ಕಿಲೋ ಮಿಟರ್ ನಡೆದು ಹೋಗಿ ಬಳ್ಳೋಳ್ಳಿಯಲ್ಲಿ ವಿದ್ಯಾಭ್ಯಾಸ ಮಾಡಿದರು. ಇಲ್ಲಿಯೂ ಇವರು ಹೆಚ್ಚು ಅಂಕಗಳನ್ನು ಪಡೆದು ಗಮನ ಸೆಳೆದರು. ಇಲ್ಲಿಂದ 10ನೇ ತರಗತಿಗೆ ಧಾರವಾಡಕ್ಕೆ ಬಂಧರು. ವಿದ್ಯಾಕಾಶಿಯಲ್ಲಿ ಸಾಹಿತ್ಯ, ನಾಟಕ, ಪ್ರೀತಿ ಇವರನ್ನು ಅಪ್ಪಿಕೊಂಡಿತು. ತಮ್ಮ ಮನೆಯವರೆಲ್ಲಾ ಕೂಲಿ ಮಾಡಿ ನನ್ನ ಕಲಿಸುತ್ತಿದ್ದರು ಎಂದಾಗ ಅವರ ಕಣ್ಣಂಚಲಿ ನೀರು ತುಂಬಿತ್ತು.

ಮನೆಯಲ್ಲಿ ಕಿತ್ತು ತಿನ್ನುವ ಬಡತನ.. ಇವರಿಗೆ ಜ್ಞಾನದ ಹಸಿವು.. ಅನರಕ್ಷಸ್ತ ತಂದೆ ತಾಯಿ.. ಇವರು ಅಕ್ಷರಗಳ ಜೊತೆಗೆ ಆಡುವ ಕನಸು.. ಊಟಕ್ಕೂ ಗತಿ ಇಲ್ಲದಾಗಲೂ.. ಓದ ಬೇಕೆಂಬ ಛಲ.. ಹೋಟೇಲ್ ಕೆಲಸ.. ಮುಸುರೆ ತೆಗೆಯುವುದು.. ಪಾತ್ರೆ ತಿಕ್ಕುವುದು.. ಕಸ ಗುಡಿಸುವುದು.. ಇವರ ಜ್ಞಾನದ ಹಸಿವನ್ನು ಕಡಿಮೆ ಮಾಡಲು ಸಾಧ್ಯವೇ ಆಗಲಿಲ್ಲ. ತಾನು ಹಾಕಿಕೊಂಡ ಗುರಿಗೆ ಲಗಾಮು ಹಾಕಿ ಹೊರಟ ಇವರು ಇಂದು ಯುವ ಪೀಳಿಗೆಗೆ ಮಾದರಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲೇ ಫೇಲ್ ಎಂದು ಫಲಿತಾಂಶ ಬಂದಾಗಲೂ ಧೃತಿ ಗೆಡದೆ ಕಾನೂನಾತ್ಮಕ ಹೋರಾಟ ನಡೆಸಿ ಇಂದು ಕೆಎಎಸ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಸಂಗಪ್ಪ ಕಷ್ಟ ಪಟ್ಟು ಬಿಎ ಮುಗಿಸಿ ಬೆಂಗಳೂರಿನತ್ತ ಮುಖ ಮಾಡಿದರು. ರಾಜಧಾನಿಯಲ್ಲಿ ಬಂದಾಗ ಯಾರೂ ಗೊತ್ತಿಲ್ಲ.. ಆಶ್ರಮಗಳಲ್ಲಿ ಆಶ್ರಯ ಪಡೆದು ಇವರು, ನಂತರ ಧಾರವಾಡದ ಹಿತೈಶಿ ನೀಡಿದ ದೂರವಾಣಿಯ ನಂಬರ್ ಸಹಾಯದಿಂದ ಇನ್ನೊಂದು ಹಂತದ ಬದುಕು ಕಟ್ಟಿಕೊಂಡರು. ಅಲ್ಲಿ ಇವರ ಪ್ರತಿಭೆಗೆ ಬೆಲೆ ಸಿಕ್ಕಿತು. ಧಾರಾವಾಹಿಗಳಲ್ಲಿ ನಟನೆಗೆ ಅವಕಾಶ ಸಿಕ್ಕಿತು. ಇವರ ಆ ಪಾತ್ರಕ್ಕೆ ಜೀವ ತುಂಬಿದ ಪರಿಗೆ ಕರ್ನಾಟಕ ಮೆಚ್ಚಿಕೊಂಡಿತು. ‘

ಅಲ್ಲದೆ ಕಷ್ಟದ ನಡುವೆ ಸಂಗಪ್ಪ ಅವರು ಎಂಎ ಶುರುಮಾಡಿದರು. ಆಗ ಅವರಿಗೆ ಬೆಂಗಳೂರಿನಲ್ಲಿ ಉಚಿತವಾಗಿ ವಸತಿ ಹಾಗೂ ಊಟದ ವ್ಯವಸ್ಥೆಯ ಅವಾಕಶ ಸಿಕ್ಕಿತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬ ಹಠ ತೊಟ್ಟು ಕೆಎ ಎಸ್ ಬರೆದರು. ಆದರೆ ಕೆಎ.ಎಸ್. ಇಂಗ್ಲಿಂಷ್ ನಲ್ಲಿ ಫೇಲ್ ಎಂಬ ಫಲಿತಾಂಶ ಬಂದಿತು. ಎದೆಗುಂದದೆ ಇವರು ಕಾನೂನಾತ್ಮಕ ಹೋರಾಟ ನಡೆಸಿ ಜಯ ಸಾಧಿಸಿದರು.
ಬಡ ವಿದ್ಯಾರ್ಥಿಗಳಿಗೆ ಇವರು ನಡೆದು ಬಂದ ದಾರಿ ನಿಜಕ್ಕು ಮಾದರಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment

1 Comment

Leave a Reply

Your email address will not be published. Required fields are marked *

To Top