ಬ್ರಹ್ಮನ ದೇವಾಲಯಗಳು ತೀರಾ ಕಡಿಮೆ ಎಂಬುದು ನಿಮಗೆ ಗೊತ್ತೇ ? ಹಾಗೆಯೇ ಹೆಚ್ಚು ಜನರು ಬ್ರಹ್ಮನನ್ನು ಪೂಜೆ ಮಾಡುವುದಿಲ್ಲ ಎಂಬುದು ನಿಮಗೆ ಗೊತ್ತೇ ?
ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವರುಗಳಿದ್ದು, ಒಂದೊಂದು ದೇವರ ಒಂದೊಂದು ಅವತಾರಗಳಿಗೂ ಭಾರತದ ಉದ್ದಗಲಕ್ಕೂ ದೇವಾಲಯಗಳಿವೆ. ಆದರೆ ಸೃಷ್ಟಿಯ ಮೂಲಕ್ಕೆ ಆಧಾರವಾಗಿರುವ ಬ್ರಹ್ಮನಿಗೆ ಮಾತ್ರ ದೇವಾಲಯಗಲಿಲ್ಲ. ಹಾಗಂತ ಇಲ್ಲವೇ ಇಲ್ಲ ಅಂತಲ್ಲ. ಇಡೀ ವಿಶ್ವದಲ್ಲಿರುವುದು ಒಂದೇ ಒಂದು ದೇವಾಲಯ ಮಾತ್ರ.
ರಾಜಸ್ಥಾನ ಬ್ರಹ್ಮನಿಗೆ ದೇವಾಲಯ ಹೊಂದಿದ್ದು.ಪುಷ್ಕರ ದೇವಾಲಯ ಎಂದೇ ಪ್ರಸಿದ್ದಿ ಪಡೆದಿದೆ.
ಬ್ರಹ್ಮನಿಗೆ ಭೂಲೋಕದಲ್ಲಿ ಪೂಜೆ ತಪ್ಪುವುದಕ್ಕೆ ಹಲವು ಪುರಾಣಗಳಲ್ಲಿ ಹಲವು ರೀತಿಯ ವಿವರಣೆಗಳಿವೆ. ಈ ಪೈಕಿ ಒಂದು ವಿವರಣೆಯ ಪ್ರಕಾರ ವಜ್ರನಾಭ ಎಂಬ ರಾಕ್ಷಸ ಭೂಮಿಯಲ್ಲಿ ಅತ್ಯಂತ ಉಪಟಳ ನೀಡುತ್ತಿದ್ದ.ಬ್ರಹ್ಮನು ಬ್ರಹ್ಮ ಕಮಲದ ಹೂವನ್ನು ಆಯುಧವನ್ನಾಗಿ ಬಳಸಿಕೊಂಡು ಆತನನ್ನು ವಧೆ ಮಾಡುತ್ತಾನೆ.ಈ ಸಂದರ್ಭದಲ್ಲಿ ಕಮಲದ ಹೂವಿನ ಎಸಳುಗಳು ಭೂಮಿಯ ಮೇಲೆ ಮೂರು ಭಾಗಗಳಲ್ಲಿ ಬೀಳುತ್ತವೆ.ಆ ಪ್ರದೇಶಗಳಲ್ಲಿ ಜ್ಯೇಷ್ಠ, ಮಧ್ಯ , ಕನಿಷ್ಠ ಎಂಬ ಮೂರು ಸರೋವರಗಳು ಸೃಷ್ಟಿಯಾಗುತ್ತವೆ. ಬ್ರಹ್ಮನ ಕೈಯಿಂದ ಕಮಲ ಬಿದ್ದಿದರಿಂದಾಗಿ ಅದಕ್ಕೆ ಪುಷ್ಕರ ಎಂಬ ಹೆಸರು ಬಂದಿದೆ ಎಂಬ ನಂಬಿಕೆ ಇದೆ.
ಶಿವನು ಬ್ರಹ್ಮನ ಒಂದು ತಲೆ ಕತ್ತರಿಸಿದ್ದಕ್ಕೂ, ಬ್ರಹ್ಮನಿಗೆ ಪೂಜೆ ನಿಲ್ಲುವುದಕ್ಕೂ ಕಾರಣ ಇದೆ.
ಬ್ರಹ್ಮಾಂಡದ ಸೃಷ್ಟಿಯ ವೇಳೆ ಬ್ರಹ್ಮ ಶತರೂಪಳೆಂಬ ಸುಂದರಿಯಾದ ದೇವತೆಯನ್ನು ಸೃಷ್ಟಿಸಿದ. ತಾನೇ ಸೃಷ್ಟಿಸಿದ ಈ ದೇವತೆಯಿಂದ ಬ್ರಹ್ಮ ಮೋಹಗೊಂಡು ಬ್ರಹ್ಮನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಶತರೂಪ ಶತ ಪ್ರಯತ್ನ ನಡೆಸಿದಳಾದರೂ ಎಲ್ಲಾ ದಿಕ್ಕುಗಳಲ್ಲಿ ಆಕೆಯನ್ನು ಹಿಂಬಾಲಿಸಲು ಬ್ರಹ್ಮ ತಲೆಯೊಂದನ್ನು ರೂಪಿಸಿದ.
ನಾಲ್ಕು ದಿಕ್ಕುಗಳಲ್ಲೂ ನೋಡಲು ನಾಲ್ಕು ತಲೆ ಮತ್ತು ಇವುಗಳ ಮೇಲೊಂದು ಹೀಗೆ ಒಟ್ಟು ಐದು ತಲೆಯನ್ನು ಬ್ರಹ್ಮ ಹೊಂದಿದ್ದ.ಬ್ರಹ್ಮನನ್ನು ನಿಯಂತ್ರಿಸಲು ಶಿವ ಮೇಲಿನ ತಲೆಯನ್ನು ಕತ್ತರಿಸಿ ಹಾಕಿದ. ತಾನು ಸೃಷ್ಟಿಸಿದವಳ ಮೇಲೆ ತಾನೇ ಅವಳನ್ನು ಮೋಹಿಸುವುದು ತಪ್ಪೆಂದು ಶಿವ ಬ್ರಹ್ಮನಿಗೆ ಹೇಳಿದ.ಹಾಗಾಗಿ ಬ್ರಹ್ಮನಿಗೆ ಯಾರು ಪೂಜೆ ಸಲ್ಲಿಸಬಾರದೆಂದು ಶಿವ ಶಾಪ ನೀಡಿದ ಎಂದೂ ಸಹ ಹೇಳಲಾಗುತ್ತದೆ.
ಆದ್ದರಿಂದಲೇ ತ್ರಿಮೂರ್ತಿಗಳಲ್ಲಿ ಇಬ್ಬರಾದ ವಿಷ್ಣು ಮತ್ತು ಶಿವನಿಗೆ ಮಾತ್ರ ಪೂಜೆ ಸಲ್ಲಿಸಲಾಗುತ್ತಿದೆ. ಬ್ರಹ್ಮನಿಗೆ ಒಂದು ಪ್ರದೇಶವನ್ನು ಹೊರತುಪಡಿಸಿ ಬೇರೆ ಎಲ್ಲಿಯೂ ಪೂಜೆ ಸಲ್ಲಿಸುವುದಿಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
