ಬೇರೆಯವರ ಮಾತುಗಳನ್ನು ಕೇಳೋರು ಮೊದ್ಲು ಈ ಕತೆಯನ್ನ ಓದಿ.
ಒಂದು ಸಣ್ಣ ಹಳ್ಳಿಯಲ್ಲಿ ಓರ್ವ ಧಾರ್ಮಿಕ ಪಂಡಿತನು ವಾಸಿಸುತ್ತಿದ್ದರು. ಇವನು ತುಂಬಾ ಒಳ್ಳೆ ಮನುಷ್ಯನಾಗಿದ್ದನು ಧಾರ್ಮಿಕ ಆಚರಣೆಗಳನ್ನು ಸರಿಯಾಗಿ ನಿರ್ವಹಿಸುತ್ತಿದ್ದನು.ಒಂದು ದಿನ ಒಬ್ಬ ಶ್ರೀಮಂತ ವ್ಯಕ್ತಿ ಅವನ ಸೇವೆಗಾಗಿ ಮೇಕೆಯನ್ನು ಉಡುಗೊರೆಯಾಗಿ ನೀಡಿದನು. ಅವನು ಸಂತೋಷದಿಂದ ಆ ಮೇಕೆಯನ್ನು ತನ್ನ ಭುಜದ ಮೇಲೆ ಹಾಕಿಕೊಂಡು ತನ್ನ ಮನೆಗೆ ಹೋಗುತ್ತಿದ್ದನು.ಹೀಗೆ ಹೋಗುವಾಗ ಮೂರು ಜನ ಕಳ್ಳರು ಮೇಕೆಯನ್ನ ತನ್ನ ಭುಜದ ಮೇಲೆ ಒಯ್ಯುತ್ತಿರುವ ಪಂಡಿತನನ್ನು ನೋಡಿದರು.
ಅವರು ಆ ಮೇಕೆಯನ್ನು ಆ ಪಂಡಿತನಿಂದ ಹೇಗೆ ಕಸಿಯುವುದು ಎಂದು ತಮ್ಮ ತಮ್ಮಲ್ಲೇ ಯೋಜನೆಯನ್ನು ರೂಪಿಸಿದರು.ನಂತರ ಆ ಮೂವರು ಪಂಡಿತನಿಗೆ ಕಾಣದಹಾಗೆ ಮೂರು ಬೇರೆ ಬೇರೆ ಜಾಗಗಳಲ್ಲಿ ಅಡಗಿಕೊಂಡರು.
ತಕ್ಷಣ, ಪಂಡಿತನು ಜನಗಳೇ ಇಲ್ಲದ ಸ್ಥಳಕ್ಕೆ ಬಂದಾಗ ಒಬ್ಬ ಕಳ್ಳ ತನ್ನ ಅಡಗಿಕೊಂಡಿದ್ದ ಸ್ಥಳದಿಂದ ಹೊರಬಂದು ಆಶ್ಚರ್ಯಕರ ರೀತಿಯಲ್ಲಿ ಪಂಡಿತನನ್ನು”ಸ್ವಾಮಿ, ನೀವು ಏನು ಮಾಡುತ್ತಿದ್ದೀರಿ? ನಿಮ್ಮಂತಹ ಪಂಡಿತರು ಹೆಗಲ ಮೇಲೆ ನಾಯಿಯನ್ನು ಹೊತ್ತಿಕೊಂಡು ಹೋಗುತ್ತಿದ್ದೀರಿರಲ್ಲ, ಏಕೆ ಹೀಗೆ ಮಾಡುತ್ತಿದ್ದೀರಾ ಎಂದು ನನಗೆ ಅರ್ಥವಾಗುತ್ತಿಲ್ಲ.”ಎಂದು ಕೇಳಿದನು. ಆಗ ಪಂಡಿತನು ಆಶ್ಚರ್ಯಚಕಿತರಾದರು.ಆ ಕಳ್ಳನಿಗೆ “ಸರಿಯಾಗಿ ಕಣ್ಣು ಬಿಟ್ಟು ನೋಡು ಇದು ನಾಯಿ ಅಲ್ಲ ಮೇಕೆ . ಮೂರ್ಖ”ಎಂದು ಗದರಿದರು.ಅದಕ್ಕೆ ಕಳ್ಳನು “ನಾನು ನೋಡಿದದನ್ನು ನಿಮಗೆ ಹೇಳಿದೆನು, ನೀವು ಅದನ್ನು ನಂಬದಿದ್ದರೆ ಕ್ಷಮಿಸಿ “ಎಂದು ಹೇಳಿದಾಗ ಪಂಡಿತ ಕೋಪಗೊಂಡು ಅಲ್ಲಿಂದ ಮುಂದೆ ಬಂದು ತನ್ನ ಪ್ರಯಾಣವನ್ನು ಮುಂದುವರಿಸಿದನು.
ಪಂಡಿತನು ಸ್ವಲ್ಪ ದೂರ ನಡೆದನು ಆಗ ಮತ್ತೊಬ್ಬ ಕಳ್ಳ ತನ್ನ ಅಡಗಿಕೊಂಡ ಸ್ಥಳದಿಂದ ಹೊರಬಂದು ಪಂಡಿತನಿಗೆ “ಸ್ವಾಮಿ ನಿಮ್ಮ ಭುಜದ ಮೇಲೆ ಸತ್ತ ಹಸುವಿನಕರುವನ್ನು ಏಕೆ ಸಾಗಿಸುತ್ತೀರಿ? ನೀವು ಬುದ್ಧಿವಂತ ವ್ಯಕ್ತಿಯ ರೀತಿ ಕಾಣಿಸುತ್ತೀರಿ ನೀವು ಇಂತಹ ಕೆಲಸ ಮಾಡುವುದು ದೊಡ್ಡ ಮೂರ್ಖತನ ಎಂದು ಹೇಳುತ್ತಾನೆ. ಇದಕ್ಕೆ ಪಂಡಿತನು ಸ್ವಲ್ಪ ಗಟ್ಟಿಯಾಗಿ “ಜೀವಂತ ಮೇಕೆಯನ್ನು ಸತ್ತ ಕರುಯೆಂದು ಹೇಗೆ ತಿಳ್ಕೊಂಡೆ ನೀನು “ಎಂದು ಕೇಳಿತ್ತಾರೆ.
ಎರಡನೆಯ ಕಳ್ಳ ಉತ್ತರಿಸುತ್ತಾ, “ಸ್ವಾಮಿ,ಈ ವಿಷಯದಲ್ಲಿ ನೀವು ತಪ್ಪಾಗಿ ತಿಳಿದುಕೊಂಡಂತೆ ಕಾಣುತ್ತಿದೆ ಮೇಕೆ ಹೇಗೆ ಕಾಣುತ್ತದೆ ಎಂದು ನಿಮಗೆ ಗೊತ್ತಿರೋದಿಲ್ಲವೇ ಅಥವಾ ನೀವು ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿರುವಿರೆ, ನಾನು ನೋಡಿದ್ದನ್ನು ನಿಮಗೆ ಹೇಳಿದೆ.”ಎಂದು ಹೇಳಿ ನಗುತ್ತ ಅಲ್ಲಿಂದ ಹೊರಟು ಹೋದನು. ಈ ಮಾತುಗಳನ್ನ ಕೇಳಿ ಪಂಡಿತನು ಗೊಂದಲಕ್ಕೊಳಗಾಗುತ್ತಾನೆ. ಹಾಗೆ ತನ್ನ ಪ್ರಯಾಣವನ್ನು ಮುಂದುವರಿಸುತ್ತಾನೆ.
ಸ್ವಲ್ಪ ದೂರ ಹೋಗುತ್ತಿದ್ದಂತೆ ಮೂರನೇ ಕಳ್ಳ ತಾನು ಅಡಗಿಕೊಂಡ ಸ್ಥಳದಿಂದ ಹೊರಬಂದು ಪಂಡಿತನ ಬಳಿ ಬಂದು ಜೋರಾಗಿ ನಗುತ್ತ “ಸ್ವಾಮಿ, ಏಕೆ ನೀವು ನಿಮ್ಮ ಹೆಗಲ ಮೇಲೆ ಕತ್ತೆಯನ್ನ ಸಾಗಿಸುತ್ತಿದ್ದೀರಿ?ನಿಮ್ಮ ತಲೆನಲ್ಲಿ ಬುದ್ಧಿಯಿಲ್ಲವೇ ಎಂದು ನಗುತ್ತ ಕೇಳುತ್ತಾನೆ”ಮೂರನೆಯ ಕಳ್ಳನ ಮಾತುಗಳನ್ನು ಕೇಳಿ, ಪಂಡಿತನು ನಿಜವಾಗಿಯೂ ಆತಂಕಕ್ಕೊಳಗಾಗುತ್ತಾನೆ..ಅವನು”ಇದು ನಿಜವಾಗಿಯೂ ಮೇಕೆ ಅಲ್ಲವೇ? ಹಾಗಾದರೆ ಇದು ಒಂದು ರೀತಿಯ ಪ್ರೇತ(ದೆವ್ವ)ವಾಗಿರಬಹುದೇ”ಎಂದು ಮನಸಿನಲ್ಲೇ ಯೋಚಿಸ ತೊಡಗಿದನು.
ಅವನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿದ್ದ ಪ್ರಾಣಿ ನಿಜವಾಗಿಯೂ ಒಂದು ರೀತಿಯ ಪ್ರೇತ ಎಂದು ಭಾವಿಸುತ್ತಾನೆ.ಏಕೆಂದರೆ ಅದು ಮೇಕೆಯಿಂದ ನಾಯಿಯಾಗಿ ಮಾರ್ಪಾಡಾಗಿದ್ದು, ನಂತರ ನಾಯಿಯಿಂದ ಸತ್ತ ಕರುವಿನ ಮತ್ತು ಸತ್ತ ಕರುವಿನಿಂದ ಕತ್ತೆಗೆ ರೂಪಾಂತರವಾಗಿದೆ ಎಂದು ಭಾವಿಸಿಕೊಳ್ಳುತ್ತಾನೆ, ಪಂಡಿತ ಹೆದರಿಕೊಳ್ಳುತ್ತಾನೆ ಮತ್ತು ರಸ್ತೆಬದಿಯ ಮೇಲೆ ಆ ಮೇಕೆಯನ್ನು ಎಸೆದು ದೂರ ಓಡಿಹೋಗುತ್ತಾನೆ.ಪಂಡಿತನು ಹೆದರಿಕೊಂಡು ಓಡುತ್ತಿರುವುದನ್ನು ನೋಡಿದ ಈ ಮೂರು ಕಳ್ಳರು ನಗುತ್ತ ಆ ಮೇಕೆಯನ್ನು ಎತ್ತಿಕೊಂಡು ಸಂತೋಷದಿಂದ ಹೋಗುತ್ತಾರೆ.
ನೀತಿ: ಇತರರು ಹೇಳುವ ಮಾತುಗಳಕಡೆ ಗಮನ ಕೊಡಬಾರದು. ನಿಮ್ಮಿಂದ ಲಾಭ ಪಡೆಯಲು ಬಯಸುತ್ತಿರುವವರಿಂದ ದೂರವಿರಿ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
