fbpx
ಸಾಧನೆ

ಲಕ್ಷ ಲಕ್ಷ ಸಂಬಳ , ಸಿಟಿ ಜೀವನ ಬಿಟ್ಟು ಆ ನಟನ ಕುಟುಂಬ ಮಾಡಿದ್ದು ವ್ಯವಸಾಯ..

ನಿಜ ಜೀವನದಲ್ಲೂ ಹೀರೋ ಆದವ್ರ ಕಥೆ 

ಖ್ಯಾತ ನಟ ,ಸಹ ಕಲಾವಿದ ಹುಲಿ ಕಿಶೋರ್ ಯಾರಿಗೆ ಗೊತ್ತಿಲ್ಲ ಹೇಳಿ ?

ಉತ್ತಮ ರಂಗ ಕರ್ಮಿಯಾಗಿ ,ಖ್ಯಾತ ಚಲನಚಿತ್ರ ನಟನಾಗಿ ಜಟ್ಟ , ಉಳಿದವರು ಕಂಡಂತೆ ,ವೀರಪ್ಪನ್ ಹೀಗೆ ಅನೇಕ ಒಳ್ಳೆ ಒಳ್ಳೆ ಚಿತ್ರಗಳನ್ನು ಕನ್ನಡ ಪ್ರೇಕ್ಷಕರಿಗೆ ಕೊಟ್ಟ ಖ್ಯಾತಿ ಇವರದ್ದು

ಕಿಶೋರ್ ಹಾಗು ಕುಟುಂಬ

ಕಿಶೋರ್ ಕುಮಾರ್ ನಗರದ ಶಾರದಾ ಕಾಲೇಜಿನಲ್ಲಿ ಕನ್ನಡ ಸಾಹಿತ್ಯವನ್ನು ಕಲಿಸುತ್ತಿದ್ದರು ಮತ್ತವರ ಪತ್ನಿ ಶ್ರೀಮತಿ ವಿಶಾಲಾಕ್ಷಿ ಪದ್ಮನಾಭನ್ ಚಾರ್ಲ್ಸ್ಡ್ ಅಕೌಂಟೆಂಟ್ ಆಗಿ ಪ್ರಮುಖ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಅದ್ಯಾಕೋ ಕೃಷಿಯ ಗೀಳನ್ನು ಅಂಟಿಸಿಕೊಂಡು ಬಿಟ್ಟಿದ್ದರು .
ಮಕ್ಕಳಿಗೆ ಮಾಮೂಲಿ ಶಾಲೆಯ ಶಿಕ್ಷಣಕ್ಕಿಂತ ಹಳ್ಳಿ ಜೀವನ , ಪರಿಸರ ಮತ್ತು ಮನೆ ಪಾಠಗಳಿಂದ ಹೆಚ್ಚು ಕಳಿಸಬಹುದು ಅಂದುಕೊಂಡರು.

ಕಿಶೋರ್ ಕುಟುಂಬದ ಕೃಷಿ ಜೀವನ :

ಹೀಗಿರುವಾಗ 2008 ರಲ್ಲಿ ವಿಶಾಲಾಕ್ಷಿ ಪದ್ಮನಾಭನ್ ತಮ್ಮ ವರ್ಷಕ್ಕೆ ₹ 20 ಲಕ್ಷ ನೀಡುತ್ತಿದ್ದ ನೌಕರಿಯನ್ನು ಬಿಟ್ಟು ದಂಪತಿಗಳು ಹಾಗು ಅವರ ಇಬ್ಬರು ಮಕ್ಕಳು ನಗರದ ಜೀವನ ಸಾಕೆಂದು ಬೆಂಗಳೂರಿನಿಂದ ಕೇವಲ 30 ಕಿ.ಮೀ. ದೂರವಿರುವ ಕೇವಲ 14 ಕುಟುಂಬಗಳು ವಾಸವಿರುವ , ಬನ್ನೇರುಘಟ್ಟಕ್ಕೆ ಹೊಂದಿಕೊಂಡಂತೆ ಇರುವ ಕರಿಯಪ್ಪನ ದೊಡ್ಡಿ ಗ್ರಾಮದಲ್ಲಿ  1.5 ಎಕರೆ ಭೂಮಿಯನ್ನು ಖರೀದಿಸಿ ಅಲ್ಲಿಯೇ ಮನೆ ಕಟ್ಟಿ ತಮ್ಮ ಕುಟುಂಬಕ್ಕಾಗಿ ಆಹಾರ ಬೆಳೆಸಲು ಸಣ್ಣ ತೋಟ ಒಂದನ್ನು ಮಾಡಿದರು .

ಆಗಲೇ ಅವರಿಗೆ ತಿಳಿದದ್ದು ವ್ಯವಸಾಯದ ಕಷ್ಟಗಳು .

ಕಷ್ಟಗಳು ಒಂದಾದಮೇಲೊಂದಂತೆ ಬಂದವು ಬನ್ನೇರುಘಟ್ಟದ ​​ಬರಗಾಲ , ಸಮುದಾಯದ ಅಡಚಣೆಗಳು , ಆಗಾಗ್ಗೆ ಬನ್ನೇರುಘಟ್ಟದ ಆನೆಗಳ ದಾಳಿಗಳಿಂದ ಕಂಗಾಲಾಗಿದ್ದ ಕುಟುಂಬ
ಮೂರು ವರ್ಷಗಳ ಕಾಲ ಅವರು ಕಲಿಯಬೇಕಾಗಿರುವುದನ್ನು ಅರಿತುಕೊಳ್ಳುವ ಮೊದಲು ಹೆಣಗಾಡಿದರು.
ಭಾರತದಾದ್ಯಂತ ಪ್ರಯಾಣಿಸಿ ಸಾಧ್ಯವಿರುವ ಎಲ್ಲಾ ರಾಜ್ಯಗಳಿಂದ ರೈತರನ್ನು ಭೇಟಿ ಮಾಡಿ ಅವರಿಂದ ಕೃಷಿ ಬಗೆಗಿನ ಜ್ಞಾನವನ್ನು ಅರಿಯುತ್ತಾ ಬಂದರು .

ಕಿಶೋರ್ ದಂಪತಿಗಳ ಪ್ರಕಾರ ಕೃಷಿ ಸಮುದಾಯದ ಅತಿದೊಡ್ಡ ಅಡೆತಡೆಗಳೆಂದರೆ ಜ್ಞಾನದ ಹಂಚಿಕೆಯ ಕೊರತೆ ಎಂಬುದು .
ಹಳ್ಳಿಯ ಜನರಿಗೆ ತಮಗೆ ತಿಳಿದ ಜ್ಞಾನದ ಮೂಲಕ ಸಹಾಯ ಮಾಡುತ್ತಾ ಹಳ್ಳಿಯವರ ನಂಬಿಕೆ ಸಂಪಾದನೆ ಮಾಡಿದರು .

ಹಳ್ಳಿಯ ಜನರ ಸಾಮಾನ್ಯ ಸಮಸ್ಯೆಗಳಾದ ಕೀಟ ನಾಶಕಗಳ , ಬೀಜದ ಬಗೆಗಿನ ಜ್ಞಾನ ಕಡಿಮೆಯಿದ್ದು ಹತ್ತಿರದ ಅಂಗಡಿಗಳಲ್ಲಿ ದೊರಕುವ ಕೀಟ ನಾಶಕ , ರಸ ಗೊಬ್ಬರ , ಬೀಜಗಳನ್ನ ತಂದು ಕೃಷಿಗೆ ಉಪಯೋಗಿಸುತ್ತಿದ್ದರು , ಕಿಶೋರ್ ದಂಪತಿಗಳು ತಮಗಿದ್ದ ಜ್ಞಾನದಲ್ಲಿ ಇಂತವರಿಗೆ ಸಹಾಯ ಮಾಡಲು ಮುಂದಾದರು .
ಅಷ್ಟೇ ಅಲ್ಲದೆ ನೀರಾವರಿ ಕೊರತೆಯನ್ನು ನೀಗಿಸಲು ಕೆರೆಯಲ್ಲಿನ ನೀರನ್ನು ಎಲ್ಲರು ಹಂಚುವ ಬಗ್ಗೆ ಮಾಹಿತಿ ನೀಡಿ ,ಎಲ್ಲರ ಮನೆಯಲ್ಲಿ ಕೊಳವೆ ಬಾವಿಯ ಮೂಲಕ ನೀರಿನ ವ್ಯವಸ್ಥೆಯಾಗಲು ಸಹಾಯ ಮಾಡಿದರು .


ಮತ್ತು ತಮಗಿದ್ದ ಹೆಚ್ಚುವರಿ ಜಾಗದಲ್ಲಿ ಕೃಷಿ ಉತ್ಪನ್ನಗಳ ಸಂಗ್ರಹಗಾರ ನಿರ್ಮಿಸಿ ಎಲ್ಲ ರೈತರು ಉಚಿತವಾಗಿ ಈ ಸೌಲಭ್ಯವನ್ನು ಬಳಸುವಂತೆ ಪ್ರೇರೇಪಿಸಿದರು .

ಸಾವಯವ ಕೃಷಿ

ಕಿಶೋರ್ ದಂಪತಿಗಳು ನಂತರ ತಾವು ಬೆಳೆದ ಬೆಳೆಗಳನ್ನು ಮಾರಾಟಮಾಡಬೇಕು ಹಾಗು ಯಾವುದೇ ಮಧ್ಯವರ್ತಿಗಳಿಲ್ಲದೆಯೇ ಮಾಡಬೇಕೆಂಬ ಉದ್ದೇಶ ಹೊಂದಿ
ತಮ್ಮದೇ ಸಾವಯವ ಕೃಷಿ ಉತ್ಪನ್ನ ಮಳಿಗೆ ಶುರು ಮಾಡಿದರು ಅದರ ಹೆಸರು “BUFFALO BACK” ಅಂತ .
ಅಷ್ಟೇ ಅಲ್ಲದೆ ಹಳೆಯ ರಾಗಿ ,ಅಕ್ಕಿ ಮಾಟುವ ಯಂತ್ರಗಳಿಗೆ ಮರು ಜೀವ ಕೊಟ್ಟರು .

ಹಳೆಯ ಕಾಲದಲ್ಲಿ ಬಳಸುತ್ತಿದ್ದ ನವಣೆ ,ಧಾನ್ಯಗಳಿಗೆ ಮರು ಸೃಷ್ಟಿ ನೀಡಿದರು , ಕಡಿಮೆ ನೀರಿನಲ್ಲೂ ಬೆಳೆಯುವ ಬೆಳೆಗಳನ್ನು ಮತ್ತೆ ಬೆಳೆದು ತಮ್ಮ ಮಳಿಗೆಯ ಗ್ರಾಹಕರಿಗೆ ಪರಿಚಯ ಮಾಡಿಕೊಟ್ಟರು .


ಕಪ್ಪಕ್ಕಿ ,ನವಣೆ , ನುಚ್ಚಕ್ಕಿ , ಮಲ್ಲಿಗೆ ಅಕ್ಕಿ , ದೊಡ್ಡವಲಕ್ಕಿ ಹೀಗೆ ಅನೇಕ ಉತ್ಪನ್ನಗಳು ಮತ್ತೆ ಜೀವ ಪಡೆದುಕೊಂಡವು .

ತಾವಷ್ಟೇ ಬೆಳೆಯದೆ ತಮ್ಮ ಸುತ್ತ ಮುತ್ತಲಿನ ಸಮುದಾಯಕ್ಕೂ ಸಹಾಯ ಮಾಡುತ್ತಿರುವ ಕಿಶೋರ್ ಹಾಗು ಅವರ ಕುಟುಂಬಕ್ಕೆ ಅಭಿನಂದನೆಗಳು .

ಇವರ ಮಳಿಗೆಗಳು ಬೆಂಗಳೂರಿನ ಜಯನಗರ , ಯಲಹಂಕ , ಜೆಪಿ ನಗರದಲ್ಲಿದೆ ಆಸಕ್ತರು ಉತ್ಪನ್ನಗಳನ್ನು ಖರೀದಿ ಮಾಡಬಹುದು .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

4 Comments

4 Comments

Leave a Reply

Your email address will not be published. Required fields are marked *

To Top