fbpx
ತಿಂಡಿ ತೀರ್ಥ

ಖಾರವಾದ ರುಚಿಯಾದ ಚಿಕನ್ ಡ್ರಮ್ ಸ್ಟಿಕ್ ಮಾಡೋದು ತುಂಬಾ ಸಿಂಪಲ್

ಖಾರವಾದ ರುಚಿಯಾದ ಚಿಕನ್ ಡ್ರಮ್ ಸ್ಟಿಕ್ ಮಾಡೋದು ತುಂಬಾ ಸಿಂಪಲ್

ಚಿಕನ್ ಡ್ರಮ್ ಸ್ಟಿಕ್ ಮಾಡಲು ಬೇಕಾಗುವ ಸಾಮಾಗ್ರಿಗಳು :

ಚಿಕನ್ ಲೆಗ್ ಪೀಸ್ 10
ಶುಂಠಿ – 1 ಚಮಚ
ಕಡಲೆ ಹಿಟ್ಟು -1 ಬಟ್ಟಲು
ಬ್ರೆಡ್ ಚೂರು- 1 ಬಟ್ಟಲು
ರುಚಿಗೆ ತಕ್ಕಷ್ಟು ಉಪ್ಪು

ಬೆಳ್ಳುಳ್ಳಿ ಪೇಸ್ಟ್ -1 ಚಮಚ
ಖಾರದ ಪುಡಿ -1 ಚಮಚ
ಕರಿ ಮೆಣಸಿನ ಪುಡಿ -1 ಚಮಚ

ಹಸಿ ಮೆಣಸಿನ ಕಾಯಿ ಪೇಸ್ಟ್ 2-3
ವಿನಿಗರ್ -1 ಚಮಚ
ಕೊತ್ತಂಬರಿ ಸೊಪ್ಪು 2 ಚಮಚ

ಮಾಡುವ ವಿಧಾನ:

ಚಿಕನ್ ಅನ್ನು ಸ್ವಲ್ಪ ಉದ್ದದ ತುಂಡುಗಳಾಗಿ ಕತ್ತರಿಸಿ, ತೊಳೆದು ನೀರು ಬಸೆದು ವಿನಿಗರ್ ಸವರಿ 10 ನಿಮಿಷ ಪಕ್ಕಕ್ಕೆ ಇಡೀ.
ಹಸಿ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪಿನ ಪೇಸ್ಟ್ ಮಾಡಿಕೊಳ್ಳಿ.

ನಂತರ ಈ ಪೇಸ್ಟ್ ಗೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಕರಿ ಮೆಣಸಿನ ಪುಡಿ, ಖಾರದ ಪುಡಿ ಹಾಕಿ ಅದಕ್ಕೆ ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣ ಮಾಡಿ,
ಈಗ ಈ ಮಿಶ್ರಣಕ್ಕೆ ಚಿಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಕಲೆಸಿ 1 ಗಂಟೆ ಇಡಿ.

ಕಡಲೆ ಹಿಟ್ಟಿಗೆ ನೀರು ಹಾಕಿ ಸ್ವಲ್ಪ ಗಟ್ಟಿಯಾಗಿ ಕಲೆಸಿಟ್ಟುಕೊಳ್ಳಿ.
ಬಾಣಲೆಗೆ ಅರ್ಧದಷ್ಟು ಎಣ್ಣೆ ಹಾಕಿ ಎಣ್ಣೆ ಕುದಿಯುವಾಗ ಚಿಕನ್ ತುಂಡುಗಳನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ, ಬ್ರೆಡ್ ಚುರುಗಳಲ್ಲಿ ಹೊರಳಾಡಿಸಿ ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೂ ಕರಿದು ನಂತ್ರ ಹೊರಗೆ ತೆಗೆದರೆ

ಚಿಕನ್ ಡ್ರಮ್ ಸ್ಟಿಕ್ ಸವಿಯಲು ಸಿದ್ಧ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top