fbpx
ಉಪಯುಕ್ತ ಮಾಹಿತಿ

ಆಧಾರ್ ಕಾರ್ಡ್ ಕಳೆದುಹೋದ್ರೆ ಪುನಃ ಪಡೋಯೋದು ಹೀಗೆ ಅಂತ ತಿಳ್ಕೊಂಡಿರ್ರಿ ಸಮಯಕ್ಕೆ ಬೇಕಾಗುತ್ತೆ…

ಆಧಾರ್ ಕಾರ್ಡ್ ಕಳೆದುಹೋದ್ರೆ ಪುನಃ ಪಡೋಯೋದು ಹೀಗೆ ಅಂತ ತಿಳ್ಕೊಂಡಿರ್ರಿ ಸಮಯಕ್ಕೆ ಬೇಕಾಗುತ್ತೆ…

ನಮ್ಮ ಜೀವನದಲ್ಲಿ ಕೆಲವೊಂದು ಕಾರ್ಡ್ ಗಳು ಅತಿಮುಖ್ಯವಾಗಿ ಬೇಕಾಗಿರುತ್ತವೆ. ಅವುಗಳಲ್ಲಿ ಆಧಾರ್ ಕಾರ್ಡ್ ಪ್ರಮುಖವಾದುದು. ಸರ್ಕಾರದ ಬಹುತೇಕ ಎಲ್ಲಾ ಯೋಜನೆಗಳನ್ನು ಪಡೆಯಲು  ಆಧಾರ್‌ ಕಾರ್ಡ್‌ ಇರಲೇಬೇಕು. ಆಧಾರ್‌ ಕಾರ್ಡ್ ಇಲ್ಲದಿದ್ದರೆ ಸರ್ಕಾರದ ಯಾವ ಕೆಲಸವು ಆಗುವುದಿಲ್ಲ. ಹಾಗಾಗಿ, ಆಧಾರ್‌ ಕಾರ್ಡ್‌ ಅನ್ನು ನಾವು ಜೋಪಾನವಾಗಿಟ್ಟುಕೊಳ್ಳಬೇಕು. ಆದರೆ ಒಂದುವೇಳೆ ಈ ಕಾರ್ಡ್ ಗಳು ಕಳೆದು ಹೋದ್ರೆ ಪುನಃ ಪಡ್ಕೊಳೋದು ಹೇಗೆ ಅಂತ ಎಷ್ಟೋ ಜನಕ್ಕೆ ಗೊತ್ತಿರೋದಿಲ್ಲ, ಅದನ್ನ ಪುನಃ ತಗೋಳೋದು ಹೇಗೆ ಅಂತ ತಿಳ್ಕೊಂಡಿದ್ರೆ ಸಮಯಕ್ಕೆ ಬರುತ್ತದೆ.

ಆಧಾರ್ ಕಾರ್ಡ್ ಕಳೆದುಹೋದರೆ ಮರಳಿ ಪಡಿಯೋದು ಹೇಗೆ ?

ನಿಮ್ಮ ಆಧಾರ್ ಕಾರ್ಡ್ ಕಳೆದು ಹೊದರೆ ಆನ್ ಲೈನ್ ನಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್‌ಅನ್ನು ಮರಳಿ ಪಡೆಯಬಹುದಾಗಿದೆ. ಇದಕ್ಕಾಗಿ ನೀವು ಯಾವುದೇ ಹಣವನ್ನು ಪಾವತಿ ಮಾಡಬೇಕಾಗಿಲ್ಲ ಮತ್ತು ಸಮಯವನ್ನು ವ್ಯರ್ಥ ಮಾಡಬೇಕಾಗಿಲ್ಲ.ಈ ಕೆಳಗೆ ವಿವರಿಸಿರುವ ರೀತಿಯಲ್ಲಿ ಆಧಾರ್ ಕಾರ್ಡನ್ನು ಮತ್ತೆ ಪಡ್ಕೊಬಹುದು.

ಹಂತ 1:

ಮೊದಲಿಗೆ ಆಧಾರ್ ಕಾರ್ಡಿನ ಅಧಿಕೃತ ವೆಬ್ ಸೈಟ್ ಗೆ ಭೇಟಿಕೊಡಿ
https://resident.uidai.gov.in/web/resident/find-uid-eid

ಹಂತ 2.

 

ಆಧಾರ್ ವೈಬ್ ಸೈಟ್ ಓಪನ್ ಆದನಂತರ ಅಲ್ಲಿ ಕೊಟ್ಟಿರುವ ಸ್ಥಳದಲ್ಲಿ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಇಲ್ಲವೇ ಆಧಾರ್ ಎನ್‌ರೋಲ್ ಮೆಂಟ್ ಸಂಖ್ಯೆ ಯ ಆಫ್ಚನ್ ಗೆ ಕ್ಲಿಕ್ ಮಾಡಿ . ನಂತರ ನಿಮ್ಮ ಪೂರ್ಣ ಹೆಸರನ್ನ ನಮೂದಿಸಿ, ಬಳಿಕ ನಿಮ್ಮ ಈ-ಮೇಲ್ ವಿಳಾಸವನ್ನು ಮತ್ತು ಆಧಾರ್ ನೊಂದಿಗೆ ನೀವು ರಿಜಿಸ್ಟರ್ ಮಾಡಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.ನಂತರ ಅಲ್ಲೇ ಕೊಟ್ಟಿರುವ ಕಾಪ್ಚಾಕೋಡ್ ಅನ್ನು ಸೆಕ್ಯೂರಿಟಿ ಕೋಡ್ ಮುಂಭಾಗದಲ್ಲಿ ನಮೂದಿಸಿ.

ಹಂತ 3.

ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ ಪುನಃ ಪರೀಶೀಲಿಸಿಕೊಂಡು. ಅಲ್ಲೇ ಕೊಟ್ಟಿರುವ ‘Get OTP’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ನಂತರದಲ್ಲಿ ನಿಮ್ಮ ಮೊಬೈಲ್‌ ಅಥವಾ ಇ-ಮೇಲ್ ವಿಳಾಸಕ್ಕೆ ಒಟಿಪಿ(one time password)ಯನ್ನು ಕಳುಹಿಸಲಾಗುವುದು. ನೀವು ಸ್ವೀಕರಿಸಿದ OTPಯನ್ನು ವೈಬ್‌ಸೈಟಿನಲ್ಲಿ ಕೊಟ್ಟಿರುವ ಸೂಕ್ತ ಜಾಗದಲ್ಲಿ ನಮೂದಿಸಿ ನಂತರ “Verify OTP’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ .

ಹಂತ 4.

ನೀವು ನಮೂದಿಸಿರುವ ನಿಮ್ಮ OTP ಸರಿಯಾಗಿದ್ದಲ್ಲಿ ಇ-ಆಧಾರ್ ಕಾರನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗುವುದು. ಪಿಡಿಎಫ್ ಫಾರ್ಮಾಟಿನಲ್ಲಿರುವ ಇ-ಆಧಾರ್ ನಿಮ್ಮ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top